ಸಂತು ಪಂತು ತ್ಯಾಗ ಕಂಡು ಬೆರಗಾದ ಕಿಚ್ಚ ಸುದೀಪ..! ಮನೆಯಿಂದ ಹೊರಗೆ ಹೋಗೋದು ತುಕಾಲಿನಾ.. ವರ್ತೂರಾ..!?
ಬಿಗ್ ಬಾಸ್ ಸೀಸನ್ 10ರ ಸೆಮಿಫೈನಲ್‌ಗೆ ಇನ್ನೂ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಇಂದು ಎಲಿಮಿನೇಷನ್ ಭೂತ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಇಬ್ಬರನ್ನು ಕೂಡ ಕಾಡುತ್ತಿದೆ. ಯಾಕೆಂದರೆ ಇಬ್ಬರಲ್ಲಿ ಒಬ್ಬರು ಇಂದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ. ಎಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಜಗಳವಾಡದೇ ಇಬ್ಬರೂ ಕೂಡ ತುಂಬಾ ಅನ್ಯೂನ್ಯವಾಗಿದ್ದರು. ಸ್ನೇಹಕ್ಕೆ ಒಂದು ಅರ್ಥವನ್ನು ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಕೊಟ್ಟಿದ್ದರು. ಇದೇ ಮಾತನ್ನು ಇಂದು ಕಿಚ್ಚ ಸುದೀಪ್ ಅವರು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನಿಮ್ಮಷ್ಟು ಕ್ಲೋಸ್ ಆಗಿ ಇಷ್ಟು ದಿನ ಇದ್ದವರನ್ನು ನಾನು ನೋಡಿರಲಿಲ್ಲ ಎಂಬ ಮಾತನ್ನು ಕೂಡ ಆಡಿದ್ದಾರೆ.
ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ಹುಲಿ ಉಗುರು ಪ್ರಕರಣದಲ್ಲಿ ಹೋಗಿ ವಾಪಸ್ ಬಂದಾಗ, ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್ ಜೊತೆಗೆ ಸೇರಿಕೊಂಡು ಅಲ್ಲಿಂದಲೂ ಕೂಡ ಇಲ್ಲಿಯ ತನಕ ಸಪೋರ್ಟ್ ಮಾಡಿಕೊಂಡೆ ಬಂದಿದ್ದರು. ವರ್ತೂರು ಸಂತೋಷ್ ತಮ್ಮ ನೇರ ಮಾತುಗಳಿಂದಲೇ ಬಿಗ್ ಬಾಸ್ ಮನೆಯಲ್ಲಿ ಹೆಸರುವಾಸಿಯಾಗಿದ್ದರು. ಕೆಲವರು ಇವರಿಬ್ಬರ ಸ್ನೇಹ ದೂರಾಗಲಿ ಎಂದು ಕೂಡ ಅಂದುಕೊಂಡಿದ್ದರು. ಆದರೆ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಇಬ್ಬರು ಕೂಡ ಒಮ್ಮೆ ಮಾತ್ರ ಜಗಳವನ್ನ ಮಾಡಿಕೊಂಡಿದ್ದರು. ಅದು ಕೂಡ ತಮಾಷೆ ಆಗಿದ್ದು ವರ್ತೂರು ಸಂತೋಷ್ ಬಳಿ ಹೋಗಿ ತುಕಾಲಿ ಕ್ಷಮೆಯನ್ನು ಕೇಳಿ ಸರಿಯಾಗಿದ್ದರು.

ತುಕಾಲಿ ಸಂತೋಷ್ ವರ್ತೂರು ಸಂತೋಷ್ ಅವರ ಜೊತೆಗೆ ಇರುವುದು ವರ್ತೂರು ಸಂತೋಷ್ ಅವರಿಗೆ ಅತಿ ಹೆಚ್ಚು ಅಭಿಮಾನಿಗಳು ಇದ್ದಾರೆ. ಅವರು ನನಗೂ ಕೂಡ ವೋಟ್ ಹಾಕುತ್ತಾರೆ ಎಂಬ ಕಾರಣಕ್ಕೆ ಎಂದು ಮನೆಯ ಇತರ ಸದಸ್ಯರು ತಿಳಿದುಕೊಂಡಿದ್ದರು. ಆದರೆ ವರ್ತೂರು ಸಂತೋಷ್ ಅವರು ತುಕಾಲಿ ಜೊತೆ ಇದ್ದಷ್ಟು ಕಂಫರ್ಟ್ ಆಗಿ ಬೇರೆ ಇತರ ಸ್ಪರ್ಧಿಗಳ ಜೊತೆಯಲ್ಲಿ ಇರಲಿಲ್ಲ. ತುಕಾಲಿಯನ್ನು ಪ್ರತಾಪ್ ಜೈಲಿಗೆ ಹೋಗಲಿ ಎಂದಾಗಲು ಕೂಡ ವರ್ತೂರು ಅವರು ಪ್ರತಾಪ್ ಜೊತೆಗೆ ಜಗಳವನ್ನ ಮಾಡಿದರು. ಸ್ನೇಹಿತ ಜೈಲಿಗೆ ಹೋಗಿದ್ದನ್ನು ಕೂಡ ವರ್ತೂರು ಸಂತೋಷ್ ಸಹಿಸಿರಲಿಲ್ಲ.
ಬಂದೆ ಬಿಡ್ತು ಸಂತು ಪಂತು ದೂರಾಗುವ ದಿನ
ಬಿಗ್ ಬಾಸ್ ಮನೆಯಲ್ಲಿ ಇಂದು ತುಕಾಲಿ ಸಂತೋಷ್ ಅಥವಾ ವರ್ತೂರು ಸಂತೋಷ್ ಮನೆಯಿಂದ ಹೊರ ಬರುವ ಎಲ್ಲಾ ಲಕ್ಷಣಗಳು ಕೂಡ ಬಹುತೇಕ ಖಚಿತವಾಗಿದೆ. ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್ ಅವರು ಇಂದು ಸಂತು ಪಂತು ಇಬ್ಬರಲ್ಲಿ ಒಬ್ಬರಿಗೆ ದೊಡ್ಡಮನೆಯ ಜರ್ನಿ ಮುಗಿಯಲಿದೆ ಎಂದು ತಿಳಿಸಿದ್ದಾರೆ. ಈ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂದು ಕೇಳಿದಾಗ ವರ್ತೂರು ಸಂತೋಷ್ ರವರು ತುಕಾಲಿ ಸಂತೋಷ್ ಇನ್ನಷ್ಟು ದಿನ ಮನೆಯಲ್ಲಿ ಇರಲಿ ಫೈನಲ್‌ನಲ್ಲಿ ಅವರು ಬರಬೇಕು ಎಂಬ ಆಸೆ ನನಗಿದೆ ಎಂದು ಹೇಳಿದ್ದಾರೆ. ಇನ್ನು ತುಕಾಲಿ ಸಂತೋಷ್ ಕೂಡ ವರ್ತೂರು ಸಂತೋಷ್ ಈ ಮನೆಯಲ್ಲಿ ಇರಲಿ ನಾನು ಬೇಕಾದರೆ ಹೊರಗೆ ಹೋಗುತ್ತೇನೆ ಎಂದಿದ್ದಾರೆ.

ಈ ಮಾತನ್ನು ಕೇಳಿದ ಕಿಚ್ಚ ಸುದೀಪ್‌ಗೆ ಇಬ್ಬರ ಸ್ನೇಹವನ್ನು ಕಂಡು ಖುಷಿಯಾಗಿದೆ. ಇಷ್ಟು ದಿನ ನಾನು ನೋಡಿದವರಲ್ಲಿ ನಿಮ್ಮಿಬ್ಬರ ಸ್ನೇಹ ತುಂಬಾ ಎತ್ತರಕ್ಕೆ ಹೋಗಿ ನಿಲ್ಲುತ್ತದೆ ಎಂದಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ ಆದರೆ ಇಂದಿಗೆ ಇಬ್ಬರಲ್ಲಿ ಒಬ್ಬರಿಗೆ ದೊಡ್ಡ ಮನೆಯ ಜರ್ನಿ ಮುಗಿಯುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ನಮ್ರತಾ ನನಗೆ ಕೆಲವೊಮ್ಮೆ ಅನಿಸುವುದು ಇವರಿಬ್ಬರೂ ಯಾವಾಗ ದೂರವಾಗುತ್ತಾರೆ ಎಂದು ಆದರೆ ಈಗ ತುಂಬಾ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ. ಸಂಗೀತಾ ಕೂಡ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ.
ಮನೆಯಿಂದ ಹೊರಗೆ ಹೋಗೋದು ವರ್ತೂರಾ- ತುಕಾಲಿನಾ
ಸದ್ಯಕ್ಕೆ ಕಲರ್ಸ್ ಕನ್ನಡದಲ್ಲಿ ಬಿಟ್ಟಿರುವ ಪ್ರೋಮೋದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಾರೆ ಎಂಬುದನ್ನು ಅಷ್ಟೇ ತೋರಿಸಿದ್ದಾರೆ. ಆದರೆ ಈ ವಾರದ ಜರ್ನಿಯನ್ನು ಮುಗಿಸಿರುವವರು ಯಾರು ಎಂಬುದನ್ನು ಕುತೂಹಲ ಹಾಗಿ ಉಳಿಸಲಾಗಿದೆ. ಕೆಲವೊಂದಷ್ಟು ವೀಕ್ಷಕರು ವರ್ತೂರು ಸಂತೋಷ್ ಹೊರಗೆ ಬಂದಿದ್ದಾರೆ ಎಂದು ಹೇಳಿದರೆ. ಮತ್ತೆ ಕೆಲವೊಂದಿಷ್ಟು ವೀಕ್ಷಕರು ತುಕಾಲಿ ಸಂತೋಷ್ ಮನೆಯಿಂದ ಹೊರಗಡೆ ಬಂದಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆಲ್ಲ ಉತ್ತರ ಸೂಪರ್ ಸಂಡೇ ವಿಥ್ ಸುದೀಪ ಕಾರ್ಯಕ್ರಮದಲ್ಲಿ ಸಿಗಲಿದೆ.


Click it and Unblock the Notifications











