BBK10: ತುಕಾಲಿ ಸಂತೂ ಲೆಕ್ಕಾಚಾರದಲ್ಲಿ ಡ್ರೋನ್ ಪ್ರತಾಪ್ ಗ್ರೇಟ್ ಆಗ್ಬಿಟ್ರಲ್ಲ; ಏನಿದು ಲೆಕ್ಕಾಚಾರ?
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಅಸಮರ್ಥರಾಗಿ ಡ್ರೋನ್ ಪ್ರತಾಪ್ ಬಂದಿದ್ದರು. ಸಮರ್ಥರ ತಂಡದಲ್ಲಿ ತುಕಾಲಿ ಸಂತೋಷ್ ಇದ್ದರು. ಡ್ರೋನ್ ಪ್ರತಾಪ್ ಬಗೆಗಿನ ನೆಗೆಟಿವ್ ಸುದ್ದಿಗಳನ್ನು ಓದಿದ್ದ ಮನೆಯಲ್ಲಿನ ಹಲವರು, ಎಷ್ಟು ಕಾಡಿಸಬೇಕೋ ಅಷ್ಟು ಕಾಡಿಸುವುದಕ್ಕೆ ಶುರು ಮಾಡಿದ್ದರು. ತುಕಾಲಿ ಸಂತೋಷ್ ಅಂತು ಕಣ್ಣಲ್ಲಿ ನೀರು ಹಾಕಿಸಿದ್ದರು. ಡ್ರೋನ್ ಪ್ರತಾಪ್ ಆರಂಭದಲ್ಲಿ ಮೊದಲೇ ಮಾತನಾಡುವ ಗೋಜಿಗೆ ಹೋಗುತ್ತಿರಲಿಲ್ಲ. ಎದುರಾಳಿಗಳು ಹೇಳಿದ ಮಾತುಗಳನ್ನೆಲ್ಲ ಕೇಳಿಸಿಕೊಂಡು, ಒಂದು ಮೂಲೆಯಲ್ಲಿ ಕೂತು ಕಣ್ಣೀರು ಹಾಕುವ ಮೂಲಕ, ಆ ನೋವನ್ನ ಕಡಿಮೆ ಮಾಡಿಕೊಳ್ಳುತ್ತಿದ್ದರು.
ದಿನಗಳು ಕಳೆದಂತೆ ತುಕಾಲಿ ಸಂತೋಷ್ ಮನ:ಸ್ಥಿತಿ ಮಾತ್ರ ಬದಲಾಗಲೇ ಇಲ್ಲ. ಡ್ರೋನ್‌ನನ್ನು ಎಷ್ಟರಮಟ್ಟಿಗೆ ವೀಕ್ ಮಾಡಬೇಕೋ ಅಷ್ಟು ವೀಕ್ ಮಾಡುತ್ತಿದ್ದರು. ಆದರೆ, ಸುದೀಪ್ ಹೇಳಿದ ಒಂದು ಮಾತಿನ ಬಳಿಕ ಮನೆಯಲ್ಲಿ ಡ್ರೋನ್ ಪ್ರತಾಪ್ ಫುಲ್ ಎನರ್ಜಿ ವ್ಯಕ್ತಿಯಾಗಿ ಬದಲಾದರು. ಆದರೆ ಎಂದಿಗೂ ಬದಲಾಗದೆ ಇರುವ ತುಕಾಲಿ ಸಂತೋಷ್ ಕೂಡ ಇದ್ದಕ್ಕಿದ್ದ ಹಾಗೆ ಬದಲಾಗಿದ್ದಾರೆ.

ಡ್ರೋನ್ ಪ್ರತಾಪ್ ಹೊಗಳಿದ ತುಕಾಲಿ
ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ತುಕಾಲಿ ಸಂತೂ ಡ್ರೋನ್ ಬಗ್ಗೆಯೇ ಆಡಿಕೊಳ್ಳುತ್ತಾರೆ. ಡ್ರೋನ್ ಮಾಡಿರುವುದೇ ಸುಳ್ಳು ಎಂಬಂತೆ ನೋವು ನೀಡುತ್ತಿದ್ದರು. ಕ್ಯಾಪ್ಟನ್ ಟಾಸ್ಕ್ ವಿಚಾರಕ್ಕೂ ಪ್ರತಾಪ್ ಹೆಸರನ್ನು ರಿಜೆಕ್ಟ್ ಮಾಡಿದ್ದರು. ಆದರೆ ಈಗ ಮೊದಲ ಬಾರಿಗೆ ತುಕಾಲಿ ಸಂತೋಷ್, ಪ್ರತಾಪ್ ಅವರನ್ನು ಹೊಗಳಿದ್ದಾರೆ. ಡ್ರೋನ್ ಮಾಡುವುದು ಸುಮ್ಮನೆ ಅಲ್ಲ, ಗ್ರೇಟ್ ಎಂದಿದ್ದಾರೆ.
ತುಕಾಲಿ ಮಾತು ಕೇಳಿ ವರ್ತೂರು ಶಾಕ್
ವರ್ತೂರು ಸಂತೋಷ್ ಮೊದಲೇ ಜೈಲಿನಲ್ಲಿ ಇದ್ದಾರೆ. ಇಷ್ಟವಿಲ್ಲದೆ ಕಳಪೆ ಹೊತ್ತು ಮಲಗಿದ್ದಾರೆ. ಈ ವೇಳೆ ತುಕಾಲಿ ಸಂತೋಷ್ ಇದ್ದಕ್ಕಿದ್ದ ಹಾಗೇ ಡ್ರೋನ್ ಪ್ರತಾಪ್ ಅವರನ್ನು ಹೊಗಳಿದ್ದು ಆಶ್ಚರ್ಯ ಎನಿಸಿ, 'ಯಾವಾಗ, ಯಾರ ಬಗ್ಗೆ, ಏನು ಮಾತನಾಡುತ್ತೀಯಾ ಅನ್ನೋದೆ ಗೊತ್ತಾಗಲ್ವಲ್ಲ ಅಣ್ಣ. ಬೇರೆ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಮ್ಮ ಬಗ್ಗೆಯೇ ನಾವೂ ಮಾತನಾಡಿದರೆ, ನಮ್ಮ ಸಪೋರ್ಟ್ ಮಾಡುವವರಿಗಾದರೂ ಖುಷಿ ಆಗುತ್ತೆ ಅಂತ ತುಕಾಲಿ ಮಾತಿಗೆ ಸಂತೋಷ್ ಬುದ್ದಿ ಹೇಳಿದ್ದಾರೆ.

ತುಕಾಲಿ ಬಗ್ಗೆ ವಿನಯ್ ಹೇಳಿದ್ದೇನು..?
ವರ್ತೂರು ಸಂತೋಷ್ ಜೊತೆಗೆ ತುಕಾಲಿ ಸಂತೋಷ್ ಇರುತ್ತಾರೆ. ಜೊತೆಯಾಗಿಯೇ ಕುಳಿತುಕೊಳ್ಳುತ್ತಾರೆ, ಮಾತನಾಡುತ್ತಾರೆ. ಇದನ್ನು ಕಂಡ ವಿನಯ್ ಗೆ ಅನುಮಾನ ಮೂಡಿದೆ. ನಿಜಕ್ಕೂ ಸಂತು-ಪಂತುದು ಜೆನ್ಯೂನ್ ಫ್ರೆಂಡ್ಶಿಪ್ ಇರಬಹುದಾ ಅಂತ ಮೈಕಲ್ ಬಳಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮೈಕಲ್, ನನಗೇಕೋ ಜೆನ್ಯೂನ್ ಅಂತ ಅನ್ನಿಸುತ್ತಿಲ್ಲ. ವೋಟ್ ಜಾಸ್ತಿ ಬರುತ್ತೆ ಅಂತ ಆ ರೀತಿ ಇದ್ದಾರೆ. ಹೊರಗೆ ಹೋದ ಮೇಲೆ ಜೊತೆಗೆ ಇರಲ್ಲ ನೋಡಿ ಎಂದಿದ್ದಾರೆ. ಆದರೆ ವಿನಯ್, ವರ್ತೂರ್ ಸಂತೋಷ್ ಜೆನ್ಯೂನ್ ಎಂದು ಒಪ್ಪಿಕೊಂಡಿದ್ದಾರೆ.
ನಮ್ರತಾಗೆ ತುಕಾಲಿ ಮೇಲೆ ಅನುಮಾನ
ಮೈಕಲ್ ಉತ್ತರ ಕೊಟ್ಟ ಬಳಿಕ ವಿನಯ್ ನಮ್ರತಾ ಬಳಿ ಕೇಳಿದ್ದಾರೆ. ಹಾಗೇ ಕೇಳುತ್ತಿದ್ದಂತೆ ನಮ್ರತಾ ಕೋಪಗೊಂಡಿದ್ದಾರೆ. ಅಲ್ಲ ಅವರು ಇಷ್ಟು ದೂರ ಬಂದಿರುವುದೇ ಹೆಚ್ಚು. ಬರೀ ಬೀನ್ ಬ್ಯಾಗ್ ಮೇಲೆ ಕೂತು ಹರಟೆ ಹೊಡೆಯುತ್ತಾರೆ, ಒಬ್ಬರು ನಿದ್ದೆ ಹೊಡೆಯುತ್ತಾರೆ. ನಾವೂ ಹೊರಗೆ ಹೇಗಿದ್ದೀವೋ ಅದೇ ರೀತಿ ಇರುವುದಕ್ಕೆ ಉಳಿದಿದ್ದೀವಿ ಅಂತಾರೆ. ಹೊರಗೆ ಇದ್ದರೆ ಹೀಗೆ ನಿದ್ದೆ ಮಾಡುತ್ತಾರಾ..? ಅಂತ ಪ್ರಶ್ನಿಸಿದ್ದಾರೆ.


Click it and Unblock the Notifications











