BBK 10: ತುಕಾಲಿ ಸಂತು ಅಂಡರ್ 16ನಲ್ಲೇ ಭವಿಷ್ಯ ಹೇಳುತ್ತಾ ಇದ್ದರಂತೆ..!

By ಎಸ್ ಸುಮಂತ್

ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ಅಂತ ಸಿಗುತ್ತಾ ಇರುವುದು ತುಕಾಲಿಯಿಂದಾಗಿ. ಆಗೊಮ್ಮೆ ಹೀಗೊಮ್ಮೆ‌ ಕಾಮಿಡಿ ಮಾಡುತ್ತಾ, ಎಲ್ಲರನ್ನು ನಗಿಸುತ್ತಾ ಇದ್ದರು. ಆ ನಗುವೆ ದಿನಕಳೆದಂತೆ ಕೆಲವೊಬ್ಬರ ನೋವಿಗೆ ಕಾರಣವಾಗಿತ್ತು. ಹೀಗಾಗಿ ಸಂತೋಷ್‌ಗೆ ನಾಮಿನೇಷನ್ ಸಮಯದಲ್ಲಿಯೇ ಎಲ್ಲರೂ ಕ್ಲಾಸ್ ತೆಗೆದುಕೊಂಡಿದ್ದರು.

ಇತ್ತೀಚೆಗೆ ಸುದೀಪ್ ಪಂಚಾಯತಿಯಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಮನೆಯವರ ಅಭಿಪ್ರಾಯ, ಕಿಚ್ಚನ ಸಲಹೆ ಈ ಎಲ್ಲದರಿಂದ ಸಂತೋಷ್ ಕೊಂಚ ಸೀರಿಯಸ್ ಆಗಿದ್ದರು ಎನಿಸುವಂತೆ ಕಾಣುತ್ತಿದೆ. ಅದು ನಾವೂ ನೋಡು ರಾತ್ರಿಯ ಎಪಿಸೋಡ್‌ನಲ್ಲಿ ತಿಳಿಯುತ್ತಿದೆ. ಆದರೆ, ಲೈವ್ ವೀಕ್ಷಿಸುವವರಿಗೆ ಸಂತೋಷ್ ಕಾಮಿಡಿ ಎಲ್ಲಿಯೂ ಮಿಸ್ ಆಗುತ್ತಿಲ್ಲ. ಮಾಮೂಲಿಯಂತೆ ಹಲವರ ಜೊತೆಗೆ ಕಾಮಿಡಿ ಮಾಡುತ್ತಾ ಕೂತಿದ್ದಾರೆ.

bbk-10-tukali-santhu

ಮತ್ತೆ ಪ್ರತಾಪನ ಜೊತೆ ಸೇರಿದ ಸಂತು

ತುಕಾಲಿ ಸಂತು ಮನೆಗೆ ಬಂದ ಮೊದಲಿಗೆ ಹೆಚ್ಚು ಆತ್ಮೀಯತೆ ಬೆಳೆಸಿಕೊಂಡಿದ್ದೇ ಡ್ರೋನ್ ಪ್ರತಾಪನ ಜೊತೆಯಲ್ಲಿ. ಅದು ನೀನು ಓಪನ್ ಅಪ್ ಆಗಬೇಕು ಎನ್ನುತ್ತಿದ್ದ ತುಕಾಲಿ, ಆಮೇಲೆ ಮುಂದೆ ಬಿಟ್ಟು ಹಿಂದೆ ಅವರ‌ ಬಗ್ಗೆಯೇ ಕೆಟ್ಟದಾಗಿ ಹೇಳುತ್ತಿದ್ದರು. ಮನಸ್ಸಿಗೆ ತುಂಬಾ ನೋವಾದಾಗ ಕಣ್ಣೀರನ್ನು ಹಾಕಿದ್ದಾರೆ. ಅದಾದ ಮೇಲೆ ಸಂತು ಬದಲಾಗಿದ್ದರು. ಇದೀಗ ಮತ್ತೆ ಡ್ರೋನ್ ಪ್ರತಾಪ್‌, ತುಕಾಲಿ ಸಂತೋಷ್, ಸ್ನೇಹಿತ್, ವರ್ತೂರು ಸಂತೋಷ್ ಮತ್ತು ಬುಲೆಟ್ ರಕ್ಷಕ್ ಒಂದೇ ಕಡೆ ಕೂತು, ಹರಟೆಯಲ್ಲಿ ಮುಳುಗಿದ್ದರು. ಮಾತಿನ ನಡುವೆ ತುಕಾಲಿ ಅವರು ವರ್ತೂರ್ ಸಂತೋಷ್‌ಗೆ "ಒಂದೇ ಬೆಡ್‌ನಲ್ಲಿ ಮಲೀಕಂಡು ಜಾತಕ ಹೇಳೋ ಲೇವಲ್ಲಿಗೆ ತಂದ್ಬಿಟ್ಯಲ್ಲಣ್ಣಾ ನೀನು" ಎಂದು ತಮಾಷೆ ಮಾಡಿದ್ದರೆ. ಇದೇ ಮಾತನ್ನು ಹಿಡಿದುಕೊಂಡು ಸ್ನೇಹಿತ್, "ನಮ್ಮೆಲ್ಲರ ಜಾತಕ ಹೇಳಿ" ಎಂದಿದ್ದಾರೆ.

ತುಕಾಲಿಯ ಭವಿಷ್ಯ ಹೇಗಿರುತ್ತೆ ಗೊತ್ತಾ..?

ಹೀಗೆ ಮೂವರ ಸಂಭಾಷಣೆಯಲ್ಲಿ, ಸಂತೋಷ್ ಹೇಳಿದ್ದಾರೆ. ನಾನು ಅಂಡರ್ 16ನಲ್ಲಿ ಒಳ್ಳೆಯ ಭವಿಷ್ಯ ಹೇಳುತ್ತಿದ್ದೆ ಎಂದಿದ್ದಾರೆ. ಅದಕ್ಕೆ ಸ್ನೇಹಿತ್ "ಅಂಡರ್‍‌ 16 ಆಸ್ಟ್ರಲಜರ್ ಕೇಳಿದೀರಾ?" ಎಂದು ವ್ಯಂಗ್ಯ ಮಾಡಿದ್ದಾರೆ. ಆಗ ಸಂತೋಷ್, ನೀವು ನಂಬಲ್ಲ ಅಂದ್ರೆ, ಸ್ನೇಹಿತ್, ಬಿಗ್‌ಬಾಸ್‌ ನೀವೂ ನಂಬಲ್ಲ ಅಲ್ವಾ? ಎಂದಿದ್ದಾರೆ. ಪ್ರತಾಪ್ ನೀವು ನಂಬಲ್ಲ, ನಂಗೆ ಸಂಖ್ಯಾಶಾಸ್ತ್ರ ಎಲ್ಲ ಬರುತ್ತೆ ಎಂದು ಸಂತೋಷ್ ತಮಗೆ ತಾವೇ ಹೊಗಳಿಕೊಂಡಿದ್ದಾರೆ.

ಸಂತೋಷ್ ಆ ವಯಸ್ಸಿನ ಅನುಭವ ಹೇಳಿದ್ದು ಹೀಗೆ

ಹೀಗೆ ತುಕಾಲಿ ಸಂತೋಷ್ ತಮ್ಮ‌ ಮಾತುಗಳನ್ನು ಮುಂದುವರೆಸಿ, ಅಂಡರ್‍‌ 16ನಲ್ಲಿ ಟೀವಿ ನೋಡ್ತಿದ್ದಾಗ ಅನ್ನಿಸಿಬಿಡ್ತು ಕ್ರಿಕೆಟ್ ಆಡ್ಬೇಕ ಅಂತ. ಆಮೇಲೆ ತೆಂಗಿನ ಮರದ ಹೆಡೆಯನ್ನು ನೀಟ್‌ ಆಗಿ ಕಟ್ ಮಾಡಿ ಬ್ಯಾಟ್ ಮಾಡಿಕೊಂಡೆ ಬಾಲ್ ಬೇಕಲ್ಲ. ಆದರೆ ಬಾಲ್ ತೆಗೆದು ಕೊಳ್ಳುವುದಕ್ಕೆ ದುಡ್ಡಿಲ್ಲ ನನ್ನತ್ರ. ಆ ಬಾಲ್ ಬೇಕಲಾ, ಆಗ ಒಂದು ನಿಂಬೆಹಣ್ಣು ತಗೊಂಡೆ ಎಂದಿದ್ದಾರೆ.

ಸಂತೋಷ್ ಮಾತಿಗೆ ಕಾಡಿಸಿದ ರಕ್ಷಕ್

ಹೀಗೆ ಸಂತೋಷ್ ಹೇಗೆಲ್ಲಾ ಬ್ಯಾಟ್ ಮಾಡಿದೆ, ಯಾವುದರಲ್ಲಿ ಬಾಲ್ ಹಾಕಿದೆ ಎಂಬುದನ್ನೆಲ್ಲಾ ಮಾತನಾಡುವಾಗ, ರಕ್ಷಕ್ ಮಧ್ಯಪ್ರವೇಶ ಮಾಡಿದ್ದಾರೆ. ಅದಾ, ಅದು ಹಾಕಿ ಬಾಲ್ ಇದ್ದಂಗಿರ್ತದೆ ಎಂದಿದ್ದಾರೆ. ಆಗ ಸಂತೋಷ್, ಅದ್ರಲ್ಲೇ ಟಚ್ ಮಾಡಿ ಮಾಡಿ ಪ್ರಾಕ್ಟೀಸ್ ಮಾಡ್ತಿದ್ದೆ ಎಂದು ಮಾತುಕತೆ ಮುಂದುವರೆಸಿದ್ದಾರೆ. ತುಕಾಲಿ ಅವರ ಬುರುಡೆ ಮಾತುಗಳನ್ನು ಉಳಿದವರು ಎಂಜಾಯ್ ಮಾಡಿ ನಗುತ್ತಿದ್ದಾರೆ.

More from Filmibeat

English summary
Bigg Boss Kannada season 10 Tukali Santhosh say at the age 16 he know astrology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X