ಪದೇ-ಪದೇ ತುಕಾಲಿ ಸಂತೋಷ್ - ಸಂಗೀತಾ ಜಗಳ : ನನ್ನ ವಿಷಯಕ್ಕೆ ಬರಬೇಡ ಎಂದು 'ಸತಿ'ಗೆ 'ತುಕಾಲಿ' ವಾರ್ನಿಂಗ್!

By Shruthi Harishgowda

ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ತುಕಾಲಿ ಸಂತೋಷ್ ಸಂಗೀತಾ ಬಳಿಯಲ್ಲಿ ಅಷ್ಟೇನೂ ಮಾತನಾಡುತ್ತಾ ಇರಲಿಲ್ಲ. ಯಾಕೆಂದರೆ ಸಂಗೀತಾ ಮಾತನಾಡುವ ಯಾವ ಮಾತುಗಳು ಕೂಡ ತುಕಾಲಿ ಸಂತೋಷ್‌ಗೆ ಇಷ್ಟವಾಗುತ್ತಿರಲಿಲ್ಲ. ಇದಕ್ಕಾಗಿಯೇ ತುಕಾಲಿ ಸಂತೋಷ್ ಹಾಗೂ ಸಂಗೀತಾ ನಡುವೆ ಸಾಕಷ್ಟು ಕಥೆಗಳು ನಡೆದು ಜಗಳವು ಆಗಿದೆ. ಆದರೆ ಬರು ಬರುತ್ತಾ ತುಕಾಲಿ ಸಂತೋಷ್ ಹೇಳುವ ಎಲ್ಲಾ ಮಾತುಗಳಿಗೂ ಕೂಡ ರಿಯಾಕ್ಟ್ ಮಾಡುತ್ತಿದ್ದಾರೆ. ತಮಾಷೆಯಾಗಿ ಹೇಳಿದ್ದನ್ನು ಕೂಡ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಸಂಗೀತಾ ಮುಂದಿನ ವಾರ ತುಕಾಲಿ ಸಂತೋಷ್ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ ಮಾತು ಈಗ ಜಗಳಕ್ಕೆ ಕಾರಣವಾಗಿದೆ.

ಇನ್ನೂ ಇದಕ್ಕೂ ಮೊದಲು ಸಂಗೀತಾ ತುಕಾಲಿ ಸಂತೋಷ್ ಅಲ್ಲೊಂದು ಇಲ್ಲೊಂದು ಮಾತನಾಡುತ್ತಾರೆ ಅದು ನನಗೆ ಇಷ್ಟವಾಗುತ್ತಿಲ್ಲ ಎಂದು ಕಾರ್ತಿಕ್ ಬಳಿಯಲ್ಲಿ ಹೇಳಿದ್ದರೂ, ಆ ಮಾತನ್ನು ಕೇಳಿಸಿಕೊಂಡ ತುಕಾಲಿ ಸಂತೋಷ್ ಗೆ ಬೇಸರವಾಗಿದೆ. ನಾನು ಅಲ್ಲೊಂದು ಇನ್ನೊಂದು ಹೇಳೋದಿಲ್ಲ ಎಂದು ಡೈರೆಕ್ಟ್ ಆಗಿ ಜಗಳ ಮಾಡಿಕೊಂಡಿದ್ದರು. ನಂತರ ಸಂಗೀತಾ ವಿಷಯಕ್ಕೆ ತುಕಾಲಿ ಸಂತೋಷ್ ಹೋಗುತ್ತಲೇ ಇರಲಿಲ್ಲ. ಆದರೆ ಈಗ ಸಂಗೀತಾ ಇದ್ದಕ್ಕಿದ್ದಂತೆ ಈ ವಾರ ಪ್ರತಾಪ್ ಜೈಲಿಗೆ ಹೋಗಿದ್ದಾರೆ. ಮುಂದಿನ ವಾರ ಹೋಗೋದು ತುಕಾಲಿ ಸಂತೋಷ್ ಇರಬಹುದು ಅಂದ ಒಂದೇ ಒಂದು ಮಾತು ತುಕಾಲಿ ಸಂತೋಷ್‌ರನ್ನು ಕೆರಳಿಸಿದೆ.

Bigg boss Kannada season 10: Tukali Santosh warns Sangeetha Sringeri

ಇನ್ನು ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಹಾಗೂ ಸ್ನೇಹಿತ್ ನಾಲ್ವರು ಒಂದು ಕಡೆ ಕುಳಿತುಕೊಂಡಿದ್ದಾಗ, ತುಕಾಲಿ ಸಂತೋಷ್ ತಮಾಷೆಗಾಗಿ ನಾನು ಈಗ ಬ್ರಹ್ಮಾಂಡ ಗುರೂಜಿಯಾಗಿದ್ದೇನೆ ಎಂದು ಬ್ರಹ್ಮಾಂಡ ಗುರೂಜಿಯ ರೀತಿಯಲ್ಲಿಯೇ ಮಾತನಾಡುತ್ತಾ ಇದ್ದರು. ಇದೇ ವೇಳೆ ಸ್ನೇಹಿತ್ ಗುರೂಜಿ ಅವರೇ ಸಂಗೀತಾ ಬಗ್ಗೆ ಏನಾದರೂ ಹೇಳಿ ಎಂದು ಕಾಲೆಳೆದಿದ್ದರು ಇದಕ್ಕೆ ತುಕಾಲಿ ಸಂತೋಷ್ ನಾನಂತೂ ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಬಗ್ಗೆ ನಾನೊಂದು ಅನ್ನೋದು ಅದು ಸಂಗೀತಾ ಕಿವಿಗೆ ಬಿದ್ದು ಅವರು ಇನ್ನೊಂದು ರೀತಿ ಅರ್ಥ ಮಾಡಿಕೊಳ್ಳೋದು. ಆದರೆ ತದನಂತರ ಮನೆಯವರ ಮುಂದೆ ಹೇಳೋದು ಇದ್ಯಾವುದೂ ಕೂಡ ನನಗೆ ಬೇಡ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.

ತುಕಾಲಿ ಸಂತೋಷ್-ಸಂಗೀತಾ ನಡುವೆ ಜಗಳ

ತುಕಾಲಿ ಸಂತೋಷ್ ವಿನಯ್ ಟೀಮ್ ಬಿಟ್ಟು ಬಂದ ಮೇಲೆ ತಮ್ಮ ಮೇಲೆ ಯಾರಾದರೂ ಎಗರಾಡಿದರೆ ಸುಮ್ಮನೆ ಬಿಡುವುದಿಲ್ಲ. ನಾನು ಯಾವುದನ್ನು ಸಹಿಸುವುದಿಲ್ಲ ಎಂಬುದನ್ನು ತೋರಿಸುತ್ತಲೇ ಇದ್ದಾರೆ. ಈಗಾಗಲೇ ವಿನಯ್ ಮೇಲೆ ಹಾಗೂ ಸ್ನೇಹಿತ್ ಮೇಲೆ ತಾವು ಏನು ಎಂಬುದನ್ನು ತೋರಿಸಿದರು. ನಂತರ ಕಾರ್ತಿಕ್ ಜೊತೆಗೂ ಕೂಡ ಜಗಳವಾಡಿದರು. ಈಗ ಸಂಗೀತಾ ಸರದಿ ಬಂದಿದೆ. ಎಲ್ಲರೂ ಕುಳಿತುಕೊಂಡಿದ್ದಾಗ ಈ ವಾರ ಕಳೆಪೆ ಪ್ರದರ್ಶನ ನೀಡಿ ಪ್ರತಾಪ್ ಜೈಲಿಗೆ ಹೋಗಿದ್ದಾರೆ ನಂತರದ ದಿನಗಳಲ್ಲಿ ತುಕಾಲಿ ಸಂತೋಷ್ ಹೋಗಬಹುದು ಎಂದು ಸಂಗೀತಾ ಹೇಳಿದ್ದಾರೆ.

Bigg boss Kannada season 10: Tukali Santosh warns Sangeetha Sringeri

ಆದರೆ ಸಂಗೀತಾ ಈ ರೀತಿ ಮಾತನಾಡಿದ್ದು ತುಕಾಲಿ ಸಂತೋಷ್‌ಗೆ ಯಾಕೋ ಇಷ್ಟವಾಗಲಿಲ್ಲ ಇದೇ ವೇಳೆ ಸಂಗೀತಾ ಮೇಲೆ ಕೋಪ ಮಾಡಿಕೊಂಡಿದ್ದಾರೆ. ನೀವು ಏಕೆ ಆ ರೀತಿ ಎಲ್ಲಾ ಮಾತನಾಡುವುದು ನನ್ನ ಬಗ್ಗೆ ಮಾತನಾಡಿದರೆ ನನಗೆ ಇಷ್ಟವಾಗುವುದಿಲ್ಲ. ನಿಮ್ಮದು ಎಷ್ಟಿದೆಯೋ ಅಷ್ಟನ್ನ ಮಾತ್ರ ನೋಡಿಕೊಳ್ಳಿ ನನ್ನ ವಿಷಯಕ್ಕೆ ಬರಬೇಡಿ ಎಂದೆಲ್ಲಾ ಹೇಳಿದ್ದಾರೆ. ಸಂಗೀತಾ ನಾನು ತಮಾಷೆಯಾಗಿ ಹೇಳಿದ್ದು ಎಂದಾಗಲು ಕೂಡ ಅದನ್ನು ಕೇಳುವ ತಾಳ್ಮೆ ತುಕಾಲಿ ಸಂತೋಷ್ ಬಳಿಯಲ್ಲಿ ಇರಲಿಲ್ಲ. ನನಗೆ ನೀವು ಆಡಿದ ಮಾತು ತಮಾಷೆಯಾಗಿ ಕಾಣಿಸಲಿಲ್ಲ ಎಂದು ತುಕಾಲಿ ಸಂತೋಷ್ ಸಂಗೀತಾಗೆ ಹೇಳಿದ್ದಾರೆ.

ನಾನು ನನಗೋಸ್ಕರ ಬಂದಿದ್ದು ಎಂದ ತುಕಾಲಿ

ಸಂಗೀತಾ ತುಕಾಲಿ ಸಂತೋಷ್ ಜೈಲಿಗೆ ಹೋಗಲಿ ಎಂಬ ಅರ್ಥದಲ್ಲಿ ಹೇಳಿಲ್ಲ ಎಂದಿದ್ದಾರೆ. ನಾನು ಇಲ್ಲಿ ನನಗೋಸ್ಕರ ಆಟವಾಡಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಸಂಗೀತಾ ನಾನು ಆ ರೀತಿ ಏನಾದರೂ ಹೇಳಿದ್ನಾ ಎಂದು ಹೇಳಿದ್ದಾರೆ.. ನಾನು ಒಬ್ಬರನ್ನ ಇಗ್ನೋರ್ ಮಾಡಿದ ಮೇಲೆ ಇಗ್ನೋರ್ ಮಾಡಿದಂತೆಯೇ ನನ್ನನ್ನ ಕೆಣಕಲು ಬರಬೇಡ ಎಂದು ಸಂಗೀತಾಗೆ ತುಕಾಲಿ ಸಂತೋಷ್ ವಾರ್ನಿಂಗ್ ಕೊಟ್ಟಿದ್ದಾರೆ. ತುಕಾಲಿ ಸಂತೋಷ್ ಹಾಗೂ ಸಂಗೀತಾ ನಡುವಿನ ಮನಸ್ತಾಪ ಈಗ ಜಗಳವಾಗಿ ಮಾರ್ಪಟ್ಟಿದೆ.

More from Filmibeat

English summary
Bigg boss: Tukali Santosh warns Sangeetha Sringeri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X