ನಮ್ರತಾ-ಕಾರ್ತಿಕ್‌ಗೆ ಆಟ, ಚಡ್ಡಿ ಉದುರಿದ ತುಕಾಲಿ ಸಂತೋಷ್‌ಗೆ ಪ್ರಾಣ ಸಂಕಟ..!

By Shruthi Harishgowda

ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ 65 ದಿನಗಳು ಕಳೆದ ಮೇಲೆ ತಮ್ಮ ಆಟವನ್ನ ಶುರು ಮಾಡಿದಂತೆ ಕಾಣಿಸುತ್ತಾ ಇದೆ. ಮೊದ ಮೊದಲು ವಿನಯ್ ಟೀಂನಲ್ಲಿ ಗುರುತಿಸಿಕೊಂಡಿದ್ದ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಮನೆಯಿಂದ ಹೊರಗೆ ಹೋಗಿ ಬಂದ ಮೇಲೆ ಸಂಪೂರ್ಣವಾಗಿ ವರ್ತೂರ್ ಜೊತೆಗೆ ಉಳಿದುಕೊಂಡಿದ್ದರು. ಈಗ ಮನೆಯಲ್ಲಿರುವ ಎಲ್ಲರ ಜೊತೆಗೂ ಹೊಂದಿಕೊಂಡು ಹೋಗಲು ಪ್ರಯತ್ನಿಸುತ್ತಾ ಇದ್ದಾರೆ ಎಲ್ಲರನ್ನೂ ನಗಿಸುವ ಕೆಲಸ ಮಾಡುತ್ತಿದ್ದಾರೆ.

ಈಗ ಮತ್ತೊಮ್ಮೆ ತುಕಾಲಿ ಸಂತೋಷ್ , ವರ್ತೂರು ಸಂತೋಷ್ ಮತ್ತು ವಿನಯ್ ಮೂವರು ಸೇರಿಕೊಂಡು ಟಾಸ್ಕ್ ಆಡಿದ್ದರು. ಇದಾದ ಮೇಲೆ ಬಿಗ್ ಬಾಸ್ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಕಾನ್ಸೆಪ್ಟ್ ಬಂದಿತ್ತು. ಸದ್ಯಕ್ಕೆ ಈ ವಾರ ಯಾವುದೇ ರೀತಿಯಲ್ಲಿ ಜಗಳಗಳು ಆಗಿಲ್ಲ ಆದರೂ ಕೂಡ ತುಕಾಲಿ ಸಂತೋಷ್ ತಮ್ಮ ಮನಸ್ಸಿನಲ್ಲಿದ್ದ ಮಾತನ್ನು ಹೊರಗಡೆ ಹಾಕಿದ್ದಾರೆ. ದಿನದಿಂದ ದಿನಕ್ಕೆ ಮನೆಯಲ್ಲಿ ಉತ್ತಮವಾಗಿ ನಗಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ.

Bigg Boss Kannada Season 10: Tukali Santoshs Entertainment in Bigg Boss House

ಮೊದ ಮೊದಲು ತುಕಾಲಿ ಸಂತೋಷ್ ಅವರನ್ನು ನಮ್ರತಾ ಕೂಡ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಂದಿಡುವ ಕೆಲಸವನ್ನು ಮಾಡುತ್ತಾರೆ ಎಂದಿದ್ದರು. ಆದರೆ ಇಂದು ತುಕಾಲಿ ಸಂತೋಷ್ ಜೊತೆಯಲ್ಲಿ ನಮ್ರತ ನಕ್ಕು ನಲಿದಿದ್ದಾರೆ ಅದು ಕೂಡ ಬಿಗ್ ಬಾಸ್ ಹೇಳಿರುವುದಕ್ಕೆ ಎಂದು ಅನಿಸುತ್ತಿದೆ. ಕಾರ್ತಿಕ್ ಕೂಡ ತುಕಾಲಿ ಸಂತೋಷ್ ಜೊತೆಯಲ್ಲಿ ಉತ್ತಮವಾಗಿ ಒಡನಾಟ ಇಟ್ಟುಕೊಂಡಿದ್ದಾರೆ. ಮೊದಲಿಂದಲೂ ಕೂಡ ಕಾರ್ತಿಕ್ ತುಕಾಲಿ ಸಂತೋಷ್ ಜೊತೆಯಲ್ಲಿ ಚೆನ್ನಾಗಿ ಇದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷಕ್ಕೆ ಪ್ರಾಣ ಸಂಕಟ ಎದುರಾಗಿದೆ. ಕಾರ್ತಿಕ್ ಹಾಗೂ ನಮ್ರತಾ ಇಬ್ಬರೂ ಕೂಡ ತುಕಾಲಿ ಸಂತೋಷ್ ಅವರನ್ನ ಪ್ರಾಣ ಸಂಕಟಕ್ಕೆ ದೂಡಿದ್ದಾರೆ.

ನಮ್ರತಾ- ಕಾರ್ತಿಕ್‌ಗೆ ಆಟ, ತುಕಾಲಿಗೆ ಪ್ರಾಣ ಸಂಕಟ

ಬಿಗ್ ಬಾಸ್ ಮನೆಯಲ್ಲಿ ಯಾವಾಗಲು ಸಹ ಸರಿಯಾದ ರೀತಿಯಲ್ಲಿ ತುಕಾಲಿ ಸಂತೋಷ್ ಮೈಕ್ ಸರಿಯಾಗಿ ಧರಿಸಿ ಎಂಬ ಮಾತನ್ನು ಹೇಳಿಸಿಕೊಳ್ಳುತ್ತಲೇ ಇರುತ್ತಾರೆ. ಇದಕ್ಕೆ ಬಿಗ್ ಬಾಸ್ ಒಂದು ಶಿಕ್ಷೆಯನ್ನ ಕೊಟ್ಟಂತೆ ಕಾಣುತ್ತಿದೆ. ಕಲರ್ಸ್ ಕನ್ನಡದಲ್ಲಿ ಬಿಟ್ಟಿರುವ ಪ್ರೊಮೋದಲ್ಲಿ ತುಕಾಲಿ ಸಂತೋಷ್ ಅವರ ಚಡ್ಡಿಯನ್ನು ನಮ್ರತಾ ಹಾಗೂ ಕಾರ್ತಿಕ್ ಎಳೆದಂತೆ ತೋರಿಸಲಾಗಿದೆ ಇದರಲ್ಲಿ ಮೊದಲು ತುಕಾಲಿ ಸಂತೋಷ್ ಇನ್ಮುಂದೆ ನಾನು ಬಿಗ್ ಬಾಸ್ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಮೈಕ್ ಧರಿಸುತ್ತೇನೆ ಎಂದು ಹೇಳಿದ್ದಾರೆ.

Bigg Boss Kannada Season 10: Tukali Santoshs Entertainment in Bigg Boss House

ಇದೇ ವೇಳೆ ಇಂಗ್ಲಿಷ್‌ನಲ್ಲಿ ಬ್ಯೂಟಿಫುಲ್ ಲೇಡಿ ಇನ್ ರೈಟ್ ಸೈಡ್ ಬೆಡ್ ಬಾಯ್ ಇನ್ ಲೆಫ್ಟ್ ಸೈಡ್ ಎಂದು ಹೇಳಿ ಮನೆಯವರ ನಗುವಿಗೆ ಕಾರಣರಾಗಿದ್ದಾರೆ. ನಮ್ಮ ಬಗ್ಗೆ ತಾವೇ ಒಂದಷ್ಟು ಮಾತುಗಳನ್ನ ಇಂಗ್ಲಿಷ್ನಲ್ಲಿ ಹೇಳಿಕೊಂಡಿದ್ದು ಮನೆಯವರೆಲ್ಲರೂ ತುಕಾಲಿ ಅವರ ಮಾತಿಗೆ ಫುಲ್ ಖುಷಿಯಾಗಿ ನಕ್ಕಿದ್ದಾರೆ. ಇನ್ನು ಇದೆ ವೇಳೆ ನಮ್ರತಾ ಹಾಗೂ ಕಾರ್ತಿಕ್ ಇಬ್ಬರು ಸೇರಿ ತುಕಾಲಿ ಸಂತೋಷ್ ಅವರ ಚಡ್ಡಿಯನ್ನು ಜೋರಾಗಿ ಏಳೆಯಬೇಕಾಗಿರುತ್ತದೆ. ಆದರೆ, ಇಲ್ಲಿ ಜಸ್ಟ್ ಮಿಸ್ ಆಗಿದ್ದರಿಂದ ಮನೆಯವರು ಇಬ್ಬರಿಗೂ ಕೂಡ ಅಯ್ಯೋ ಎಂದು ಅಂದಿದ್ದಾರೆ. ಆದರೆ ತುಕಾಲಿ ಸಂತೋಷ ಅವರಿಗೆ ಇದು ಪೀಕಲಾಟವನ್ನು ತಂದಿದೆ.

ಚಡ್ಡಿ ಎಳೆಯುವಲ್ಲಿ ಸೋತ ನಮ್ರತಾ- ಕಾರ್ತಿಕ್

ತುಕಾಲಿ ಸಂತೋಷ್ ಮಾತನಾಡುತ್ತಿರುವ ವೇಳೆ ಅವರ ಅರಿವಿಗೆ ಬಾರದಂತೆ ನಮ್ರತ ಹಾಗೂ ಕಾರ್ತಿಕ್ ಇಬ್ಬರು ಕೂಡ ಚಡ್ಡಿಯನ್ನ ಎಳೆಯಬೇಕಾಗಿರುತ್ತದೆ. ತುಕಾಲಿ ಸಂತೋಷ್ ಕಣ್ಣು ಮುಚ್ಚಿಕೊಂಡು ಬ್ರಿತ್ ಇನ್ ಬ್ರಿತ್ ಔಟ್ ಎಂದು ಹೇಳುವ ವೇಳೆ ನಮ್ರತಾ ಹಾಗೂ ಕಾರ್ತಿಕ್ ಇಬ್ಬರು ಸಹ ತುಕಾಲಿ ಸಂತೋಷ ಅವರ ಚಡ್ಡಿಯನ್ನ ಎಳೆದಿದ್ದಾರೆ. ಈ ವೇಳೆ ಸರಿಯಾದ ರೀತಿ ಚಡ್ಡಿ ಎಳೆಯದೆ ಇರುವುದಕ್ಕೆ ನಮ್ರತಾ ಹಾಗೂ ಕಾರ್ತಿಕ್ ಬಿದ್ದು ಬಿದ್ದು ನಕ್ಕಿದ್ದಾರೆ. ತುಕಾಲಿ ಸಂತೋಷ್ ಚಡ್ಡಿ ಜಾರಿದ ಕೂಡಲೇ ಕೈಯಿಂದ ಹಿಡಿದುಕೊಂಡಿದ್ದಾರೆ. ಇನ್ನು ತುಕಾಲಿ ಸಂತೋಷ್ ಅವರು ಎಂದ ಕೂಡಲೇ ಕಾರ್ತಿಕ್ ಹಾಗೂ ನಮ್ರತಾ ಅಲ್ಲಿಂದ ತೆರಳಿದ್ದು ಬಿದ್ದು ಬಿದ್ದು ನಕ್ಕಿದ್ದಾರೆ.

More from Filmibeat

English summary
Tukali santhosh's entertainment in Bigg Boss Kannada house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X