ಟಾರ್ಚರ್ ಕೊಡುತ್ತಿದ್ದ ತುಕಾಲಿ ಸಂತೋಷ್‌ಗೆ ಟಾರ್ಚರ್ ಕೊಟ್ಟ ಮನೆ ಮಂದಿ..! ಕಾರ್ತಿಕ್‌ಗೆ ಸಿಕ್ತು ತುಕಾಲಿ ಕಿಸ್!
ಬಿಗ್ ಬಾಸ್ ಸೀಸನ್ 10 ಹಲವಾರು ವೈಶಿಷ್ಟ್ಯಗಳಿಂದ ಕೂಡಿದ್ದು ಪ್ರತಿದಿನವೂ ಕೂಡ ಸ್ಪರ್ಧಿಗಳು ಹೊಸತನವನ್ನು ಕಲಿಯುತ್ತಾ ಇದ್ದಾರೆ. ಇಷ್ಟು ದಿನ ಜಗಳ, ಚೀರಾಟ, ಕೂಗಾಟದಲ್ಲಿ ಕಾಲ ಕಳೆದಿದ್ದ ಸ್ಪರ್ಧಿಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇರಲು ನೋಡುತ್ತಾ ಇದ್ದಾರೆ. ನಿನ್ನೆ ಸುದೀಪ್ ಅವರು ನೆನೆಸಿಕೊಟ್ಟ ಕಾರ್ಯಕ್ರಮದಲ್ಲಿ ತುಕಾಲಿ ಸಂತೋಷ್ ಹಾಗೂ ವಿನಯ್ ಇಬ್ಬರು ಕೂಡ ಸೇಫ್ ಆಗಿದ್ದು, ಇನ್ನೂ ಆರು ಮಂದಿ ಸದಸ್ಯರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಇನ್ನು ಆರು ಮಂದಿ ಸದಸ್ಯರ ಎದೆಯಲ್ಲಿ ಎಲಿಮಿನೇಷನ್ ಭೂತ ಕಾಡುತ್ತಿದೆ.
ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಕೂಡ ವಿನಯ್ ಟೀಂ ಜೊತೆಗೆ ಇದ್ದು ಆಟವಾಡುತ್ತಾ ಇದ್ದರು. ನಂತರದ ದಿನಗಳಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ಇಬ್ಬರೇ ಇರುತ್ತಿದ್ದರು. ಇನ್ನೂ ಈ ಬಗೆಯು ಕೂಡ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಎದ್ದಿದೆ. ನಿಜವಾಗಿಯೂ ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್ ರವರ ಜೊತೆ ಸ್ನೇಹದಿಂದ ಇದ್ದಾರಾ ಎಂಬುದನ್ನು ಕೂಡ ವಿನಯ್, ಮೈಕಲ್, ನಮ್ರತಾ ಚರ್ಚಿಸಿದ್ದಾರೆ. ಮನೆಯವರು ಸಂತೋಷ್ ವರ್ತೂರು ಜೊತೆಗೆ ಆರಾಮಾಗಿ ಇದ್ದಾರೆ.

ಮನೆಗೆ ಪೋಷಕರು ಬರುವಾಗ ಬಿಗ್ ಬಾಸ್ ಪ್ಲೇ -ಪಾಸ್ ನೀಡುತ್ತಿದ್ದರು. ಈ ವೇಳೆ ಮನೆಯ ಎಲ್ಲಾ ಸದಸ್ಯರಿಗೂ ಕೂಡ ತುಕಾಲಿ ಸಂತೋಷ್ ಟಾರ್ಚರ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುದೀಪ್ ಅವರು ತುಕಾಲಿ ಸಂತೋಷ್ ಗೆ ಮನೆಯ ಸದಸ್ಯರು ಏನಾದರೂ ಒಂದು ಶಿಕ್ಷೆ ಕೊಡಬೇಕು ಎಂದು ಹೇಳಿದ್ದಾರೆ. ಸುದೀಪ್ ಅವರು ಈ ಮಾತು ಹೇಳಿದ್ದೆ ತಡ ಮನೆಯ ಇತರ ಸದಸ್ಯರಿಗೆ ತುಂಬಾನೇ ಖುಷಿಯಾಗಿದೆ. ನಮ್ರತಾ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ತುಕಾಲಿ ಸಂತೋಷ್ ಅವರ ಕಾಲಿಗೆ ವ್ಯಾಕ್ಸ್ ಮಾಡೋಣ ಎಂಬ ಉಪಾಯವನ್ನು ಕೊಟ್ಟಿದ್ದಾರೆ. ನಮೃತಾ ಮಾತು ಕೇಳಿದ ತುಕಾಲಿ ಸಂತೋಷ್ ಬೇಡ ಎಂದು ಉದ್ಘಾರ ತೆಗೆದಿದ್ದಾರೆ.
ಸಂತೋಷ್‌ಗೆ ಫುಲ್ ಟಾರ್ಚರ್ ನೀಡಿದ ಮನೆಯವರು
ಬಿಗ್ ಬಾಸ್ ಮನೆಗೆ ತುಕಾಲಿ ಸಂತೋಷ್ ಬಂದ ದಿನದಿಂದಲೂ ಕಾಮಿಡಿ ಮಾಡುತ್ತಾ ಜನರ ಮನಸ್ಸನ್ನು ಗೆದ್ದು ಇಲ್ಲಿಯ ತನಕ ಉಳಿದುಕೊಂಡಿದ್ದಾರೆ. ಸದ್ಯಕ್ಕೆ ತುಕಾಲಿ ಸಂತೋಷ್ ಅವರಿಗೆ ಟಾರ್ಚರ್ ನೀಡುವ ಅಧಿಕಾರವನ್ನು ಸುದೀಪ್ ಅವರು ಮರೆಯ ಸದಸ್ಯರಿಗೆ ನೀಡಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಹೋಗಿ ಬಂದು ಎಲ್ಲರಿಗೂ ನನ್ನ ಕೂದಲ ಮೇಲೆ ಕಣ್ಣು ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ತುಕಾಲಿ ಸಂತೋಷ್ ಪಾಸಾದಾಗ ಫಿಕ್ಸ್ ಪ್ಯಾಕ್‌ನ್ನು ಕಾರ್ತಿಕ್ ಟ್ರಿಮ್ಮರ್ ಮೂಲಕ ಮಾಡಿದ್ದರು. ಅದೆಲ್ಲವನ್ನು ನೆನಪಿಸಿಕೊಂಡಿರುವ ತುಕಾಲಿ ಎಲ್ಲರಿಗೂ ಕೂಡ ನನ್ನ ಕೂದಲ ಮೇಲೆ ಕಣ್ಣು ಎಂದಿದ್ದಾರೆ.

ನಮ್ರತಾ ಹಾಗೂ ಸಿರಿ ಇಬ್ಬರೂ ಕೂಡ ತುಕಾಲಿ ಸಂತೋಷ್ ಅವರ ಎರಡು ಕಾಲಿಗೂ ಕೂಡ ವಾಕ್ಸ್ ಶೀಟ್ ಅಂಟಿಸಿ ಜೋರಾಗಿ ಎಳೆದಿದ್ದಾರೆ. ಇನ್ನು ವ್ಯಾಕ್ಸಿನಿಂದ ಕೂದಲು ಕಿತ್ತು ಬಂದ ರಭಸಕ್ಕೆ ತುಕಾಲಿ ಸಂತೋಷ್ ಅವರು ಬೇಡ ಎಂದು ಹೇಳಿದ್ದಾರೆ. ಈ ಐಡಿಯಾವನ್ನು ಸುದೀಪ್ ಅವರ ಮುಂದೆ ನಮ್ರತಾ ಅವರೇ ಹೇಳಿದ್ದು ತುಕಾಲಿ ಸಂತೋಷ್ ಅವರ ಕಾಲಿಗೆ ವ್ಯಾಕ್ಸ್ ಮಾಡೋಣ ಎಂದಿದ್ದಾರೆ. ಮನೆಯ ಸದಸ್ಯರು ಇದಕ್ಕೆ ಸಮ್ಮತಿಯನ್ನ ಸೂಚಿಸಿದ್ದಾರೆ. ಆದರೆ ತುಕಾಲಿ ಸಂತೋಷ್ ಅವರಿಗೆ ಟಾರ್ಚರ್ ಕೊಡುವುದು ಮಾತ್ರ ಇಷ್ಟ, ಟಾರ್ಚರ್ ತೆಗೆದುಕೊಳ್ಳುವುದು ಇಷ್ಟವಾಗುತ್ತಿಲ್ಲ. ಇದಕ್ಕಾಗಿ ಸುದೀಪ್ ಅವರ ಬಳಿ ಸಾರ್ ಬೇಡ ಎಂದು ಮನವಿ ಕೂಡ ಮಾಡಿಕೊಂಡಿದ್ದರು.
ಕಾರ್ತಿಕ್‌ಗೆ ಮುತ್ತು ಕೊಟ್ಟ ತುಕಾಲಿ, ಜೋರಾಗಿ ನಕ್ಕು ನಲಿದ ಮನೆ ಮಂದಿ
ಕಾರ್ತಿಕ್ ಅವರು ತುಕಾಲಿ ಸಂತೋಷ್ ಅವರ ಕಾಲಿಗೆ ಅಂಟಿಸಿದ್ದ ವ್ಯಾಕ್ಸ್ ಎಳೆಯಲು ಹೋದಾಗ ತುಕಾಲಿ ಸಂತೋಷ್ ಸುಮ್ಮನೆ ಇರು ಇಲ್ಲದಿದ್ದರೇ ನಿನಗೆ ಮುತ್ತು ಕೊಡುತ್ತೇನೆ ಎಂಬ ಮಾತು ಆಡಿದ್ದಾರೆ. ಈ ವೇಳೆ ಕಾರ್ತಿಕ್ ಸುದೀಪ್ ಅವರಿಗೆ ತುಕಾಲಿಗೆ ಪಾಸ್ ಹೇಳಿ ಸರ್ ಎಂದು ಕೇಳಿಕೊಂಡಿದ್ದಾರೆ. ಆದರೆ ಸುದೀಪ್ ಅವರು ತುಕಾಲಿ ಅವರಿಗೆ ಪ್ಲೇ ಎಂದು ಹೇಳಿ ಕಾರ್ತಿಕ್ ಗೆ ಪಾಸ್ ಎಂದಿದ್ದಾರೆ.
ತುಕಾಲಿ ಸಂತೋಷ್ ಕಾರ್ತಿಕ್ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದಕ್ಕೆ ಮನೆಯ ಎಲ್ಲಾ ಸದಸ್ಯರು ಕೂಡ ನಕ್ಕು ನಲಿದಿದ್ದಾರೆ. ಸೂಪರ್ ಸಂಡೆ ಈ ವಾರ ಎಲ್ಲರ ಪಾಲಿಗೆ ನಗೆಯ ಕಡಲಲ್ಲಿ ತೇಲುವಂತೆ ಮಾಡಿದೆ. ಆದರೆ ಎಲಿಮಿನೇಷನ್ ಎಂಬ ಭೂತ ಯಾರ ಪಾಲಿಗೆ ದೊಡ್ಮನೆ ಜರ್ನಿ ಮುಗಿಸುತ್ತದೆ ಎಂಬುದು ಕುತೂಹಲವಾಗಿದೆ.


Click it and Unblock the Notifications