ಮಾವುತ ಎಂದುಕೊಂಡು ಬಂದು ಕಾಮಿಡಿ ಪೀಸ್ ಆದ ಅವಿನಾಶ್ ಶೆಟ್ಟಿ: 'ವೀರನಾಗು' ಎಂದು ವರ್ತೂರ್ ಕಿವಿಮಾತು!
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಅವಿನಾಶ್ ಶೆಟ್ಟಿ ಎಂಟ್ರಿಯನ್ನು ಕೊಟ್ಟರು. ನಾನು ಮಾವುತ ಆನೆಯನ್ನ ಪಳಗಿಸಲು ಬಂದಿದ್ದೇನೆ ಎಂಬ ಮಾತನ್ನು ಹೇಳಿದರು. ಆನೆಯನ್ನು ಹೊಡೆಯುವುದು ನಾನೇ ಎಂದು ಹೇಳಿದ್ದರು. ಆದರೆ ಈಗ ಗಂಧರ್ವರು-ರಾಕ್ಷಸರು ಎಂಬ ಟಾಸ್ಕ್ ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದ್ದು, ರಾಕ್ಷಸರಾಗಿರುವ ವಿನಯ್ ಅವಿನಾಶ್ ಶೆಟ್ಟಿಯನ್ನು ಕುರಿಯಂತೆ ಮಾಡಿಕೊಂಡು ಆಟವಾಡಿಸುತ್ತಾ ಇದ್ದಾರೆ. ಈಗ ಮತ್ತೆ ಮಾವುತ ಎಂಬ ಮಾತು ಮುನ್ನೆಲೆಗೆ ಬಂದಿದೆ. ಮಾವುತಾ ಎಂದರೆ ಯಾರು ಗೊತ್ತಾ ಎಂದು ವರ್ತೂರು ಸಂತೋಷ್ ಅವಿನಾಶ್ ಬಳಿ ಕೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಮಾವುತಾ ಎಂದರೆ ಹುಲ್ಲು ಮೇಯಿಸುವವನು ಎಂದು ಕಾಮಿಡಿ ಮಾಡಿದ್ದಾರೆ. ಆದರೆ ಅವಿನಾಶ್ ಇವರಿಬ್ಬರ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ.
ಯಾಕೆಂದರೆ ಗಂಧರ್ವರು ಹಾಗೂ ರಾಕ್ಷಸರು ಎಂಬ ಟಾಸ್ಕ್ ನಲ್ಲಿ ರಾಕ್ಷಸರು ಹೇಳಿದಂತೆ ಗಂಧರ್ವರು ಕೇಳಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿ ಆ ಎದುರಾಳಿ ತಂಡದವರು ಏನೇ ಅಂದರೂ ಕೂಡ ಅವಿನಾಶ್ ತಾಳ್ಮೆಯಿಂದಲೇ ಕೇಳುತ್ತಿದ್ದಾರೆ. ಆದರೆ ಇಲ್ಲಿ ತುಕಾಲಿ ಸಂತೋಷ್ ಹೇಳಿದ ಮಾತಿಗೆ ಅವಿನಾಶ್ ಕಾರ್ತಿಕ್‌ರಂತೆ ಸಿಡಿದು ಬೀಳಬಹುದಾಗಿತ್ತು.

ಆದರೆ ಅವಿನಾಶ್ ಯಾಕೋ ಆ ರೀತಿ ಮಾಡಲು ಆಸಕ್ತಿಯನ್ನೇ ತೋರಿಸುತ್ತಿಲ್ಲ. ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ಸೈಲೆಂಟಾಗಿ ಇದ್ದಾರೆ. ಎರಡು ವಾರವಾದರೂ ಕೂಡ ತಮ್ಮ ಆಟವನ್ನು ತೋರಿಸಿಲ್ಲ ಈ ಬಾರಿ ನಾಮಿನೇಟ್ ಸಹ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಬಂದವರು ಒಂದೇ ವಾರದಲ್ಲಿ ತಮ್ಮ ಟ್ಯಾಲೆಂಟ್ ಏನು ತಮ್ಮ ಮಾತು ಏನು ಎಂಬುದನ್ನು ತೋರಿಸುತ್ತಾರೆ. ಇಲ್ಲಿ ಅವಿನಾಶ್ ಶೆಟ್ಟಿ ಇನ್ನೂ ಕೂಡ ಸಾಫ್ಟ್ ಆಗಿದ್ದಾರೆ ಎಂದು ಅನಿಸುತ್ತಿದೆ.
ಯಾವುದೇ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುತ್ತಾ ಇಲ್ಲ. ಈಗ ಗಂಧರ್ವರು ಹಾಗೂ ರಾಕ್ಷಸರ ನಡುವೆ ಮಾತಿನ ವಾಗ್ಯುದ್ಧ ದೊಡ್ಡದಾಗಿಯೇ ನಡೆಯುತ್ತಿದೆ. ಇನ್ನು ವಿನಯ್‌ಗಂತು ಗಂಧರ್ವರ ಟೀಮ್ ಮೇಲೆ ಸೇಡನ್ನು ತೀರಿಸಿಕೊಳ್ಳಬೇಕು ಎಂಬುದು ದುಪ್ಪಟ್ಟಾಗಿದ್ದು. ತನ್ನನ್ನೇ ಪಳಗಿಸುತ್ತೇನೆ ಎಂದ ಅವಿನಾಶ್‌ನನ್ನು ಕುರಿಯಂತೆ ಮಾಡಿಕೊಂಡು ಆಟವಾಡಿಸುತ್ತಾ ಇದ್ದಾರೆ. ವಿನಯ್ ಕುರಿ ಎಂದ ತಕ್ಷಣವೇ ಅವಿನಾಶ್ ಕುರಿಯಂತೆ ಕೂಗುತ್ತಾ ನಡೆದುಕೊಂಡು ವಿನಯ್ ಹಿಂದೆ ಹೋಗುತ್ತಿದ್ದಾರೆ. ಮಾವುತಾ ಎಂದರೆ ಆನೆಗೆ ಅಂಕುಶ ಹಾಕುವವನು ಎಂದರ್ಥ. ಆದರೆ ಆ ಮಾತನ್ನು ಆಡಿದ ಅವಿನಾಶ್ ಎಂದಿಗೂ ಕೂಡ ಬಿಗ್ ಬಾಸ್ ಮನೆಯಲ್ಲಿ ಆ ರೀತಿ ನಡೆದುಕೊಳ್ಳಲೇ ಇಲ್ಲ.
ವೀರನಾಗು ಎಂದ ವರ್ತೂರು ಸಂತೋಷ್
ಅವಿನಾಶ್ ಅದನ್ನು ಯಾವ ರೀತಿ ಅರ್ಥ ಮಾಡ್ಕೊಂಡ್ರು..?
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರ ನಡುವೆ ಮಾತಿನ ನಾನು ಚಕಮಕಿ ನಡೆಯುತ್ತಲೇ ಇರುತ್ತದೆ. ಈ ನಡುವೆ ರಾಕ್ಷಸರ ದೊರೆಯಾದ ವರ್ತೂರು ಸಂತೋಷ್ ಅವಿನಾಶ್ ಶೆಟ್ಟಿ ಅವರನ್ನ ತಮ್ಮ ಬಳಿ ಕರೆದು ನೀನು ವೀರನಾಗು ಎಂಬ ಮಾತನ್ನು ಹೇಳಿದ್ದಾರೆ. ಇದಕ್ಕೆ ಅವಿನಾಶ್ ಶೆಟ್ಟಿ ವೀರನ, ಶೂರನ ಎಂಬ ಹಾಡನ್ನು ಹಾಡಿದ್ದಾರೆ. ಇದಾದ ಮೇಲೆ ಮಾವುತಾ ಎಂದರೆ ಯಾರು ಎಂದು ಕೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಮಾವುತಾ ಎಂದರೆ ಹುಲ್ಲು ಹಾಕುವವನು ಎಂಬ ಮಾತನ್ನು ಹೇಳಿದ್ದಾರೆ.

ನೀನು ಮಾವುತನ ಅಥವಾ ಮೇಕೆನಾ ಎಂದು ವರ್ತೂರು ಸಂತೋಷ್ ಕೇಳಿದ ವೇಳೆಗೆ ಅವಿನಾಶ್ ಶೆಟ್ಟಿ ನಾನು ಮೇಕೆ ಆಗಲಾರೆ ಎಂದಿದ್ದಾರೆ. ಆಗ ವಿನಯ್ ಮೇಕೆ ಬಾ ಇಲ್ಲಿ ಎಂದು ಕರೆದುಕೊಂಡು ಹೋಗಿದ್ದಾರೆ.ಇದೇ ವೇಳೆ ಅವಿನಾಶ್ ವಿನಯ್ ಹಿಂದೆ ಮೇಕೆ ಆ ರೀತಿ ಸೌಂಡ್ ಮಾಡಿಕೊಂಡು ಹೋಗಿದ್ದಾರೆ. ವಿನಯ್ ಅವಿನಾಶ್ ಶೆಟ್ಟಿಯನ್ನು ಸಾಕಷ್ಟು ಗೋಳಾಡಿಸುತ್ತಾ ಇದ್ದಾರೆ. ನನ್ನ ಎದುರೇ ನನ್ನನ್ನೇ ಪಳಗಿಸುತ್ತೇನೆ ಅಂದಿದ್ದಕ್ಕೆ ಇದು ಶಿಕ್ಷೆ ಏನೋ ಎಂದು ವೀಕ್ಷಕರಿಗೆ ಅನಿಸುತ್ತಿದೆ. ಆದರೂ ಕೂಡ ಅವಿನಾಶ್ ಶೆಟ್ಟಿ ಎಲ್ಲರಂತೆ ಓಪನ್ ಆಪ್ ಆಗಿ ತಮ್ಮ ಟ್ಯಾಲೆಂಟ್ ಏನಿದೆ ಎಂಬುದನ್ನು ತೋರಿಸಬಹುದಾಗಿತ್ತು. ಇನ್ನೂ ಸೈಲೆಂಟಾಗಿರುವುದು ಯಾಕೋ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಲಕ್ಷಣದಂತಿದೆ.
ಅವಿನಾಶ್ ಶೆಟ್ಟಿ ಕಾಮಿಡಿ ಪೀಸ್ ಎಂದ ವರ್ತೂರು
ಅವಿನಾಶ್ ಶೆಟ್ಟಿ ಈಗ ವಿನಯ್ ಹೇಳಿದಂತೆ ಕೇಳುತ್ತಿದ್ದಾರೆ, ವಿನಯ್ ಅವಿನಾಶ್ ಶೆಟ್ಟಿಯನ್ನು ಡ್ಯಾನ್ಸ್ ಮಾಡುವಂತೆ ಕೇಳಿದ್ದಾರೆ. ಇದನ್ನು ನೋಡಿದ ವರ್ತೂರು ಸಂತೋಷ್ ನೀನು ನನಗೆ ವೀರನಂತೆಯೂ ಕಾಣುತ್ತಿಲ್ಲ ಮಾವುತಾನಂತೆ ಮೊದಲೇ ಕಾಣುತ್ತಿಲ್ಲ ಕಾಮಿಡಿ ಪೀಸ್ ಅಂತೆ ಕಾಣುತ್ತಾ ಇದ್ದೀಯ ಎಂಬ ಮಾತನ್ನು ಹೇಳಿದ್ದಾರೆ.
ಈ ಮಾತನ್ನಾದರೂ ಅರ್ಥ ಮಾಡಿಕೊಂಡು ಅವಿನಾಶ್ ಶೆಟ್ಟಿ ತಮ್ಮ ಆಟವನ್ನು ಆಡಬೇಕಾಗಿದೆ. ಇಲ್ಲದೆ ಹೋದರೆ ಬಿಗ್ ಬಾಸ್ ಮನೆಯಿಂದ ಗಂಟು ಮೂಟೆ ಕಟ್ಟಿಕೊಂಡು ವಾಪಸ್ ಹೋಗಬೇಕಾಗುತ್ತದೆ. ಬಿಗ್ ಬಾಸ್ ಮನೆಗೆ ಬಂದವರು ಬಹಳ ಸೀರಿಯಸ್ ಆಗಿ ಆಟವಾಡುತ್ತಾರೆ. ಇಲ್ಲಿ ಅವಿನಾಶ್ ಶೆಟ್ಟಿ ಎರಡು ವಾರವಾದರೂ ಕೂಡ ಯಾವುದೇ ಪ್ರದರ್ಶನ ತೋರಿಲ್ಲ.


Click it and Unblock the Notifications











