ಬಿಗ್‌ ಬಾಸ್‌: ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಮೇಲೆ ಹೆಚ್ಚುತ್ತಲೇ ಇದೆ ಕನ್ನಡಿಗರ ಪ್ರೀತಿ! ಸಾಕ್ಷಿ ಇಲ್ಲಿದೆ

ಕಲರ್ಸ್ ಕನ್ನಡದ ಬಿಗ್​ಬಾಸ್ ಕನ್ನಡ ಸೀಸನ್ 10 ಮತ್ತೊಂದು ವಾರ ಮುಗಿಸಿದೆ. ಕಿಚ್ಚ ಸುದೀಪ್ ಅವರ ಕಿಚ್ಚನ ಪಂಚಾಯಿತಿ, ಸೂಪರ್ ಸಂಡೇ ವಿತ್ ಸುದೀಪ ಸಂಚಿಕೆಗಳು ಪ್ರಚಾರವಾಗುತ್ತಿವೆ. ವಾರ ಪೂರ್ತಿ ಮನೆಯ ಸದಸ್ಯರು ನಡೆದುಕೊಂಡ ರೀತಿ, ಆಟವಾಡಿದ್ದು ಸೇರಿದಂತೆ ಹಲವು ವಿಷಯಗಳನ್ನು ಚರ್ಚೆ ಮಾಡಲಾಗುತ್ತಿದೆ.

ಇದೆ ಜೊತೆಗೆ ದೊಡ್ಮನೆಯಲ್ಲಿ ಈ ವಾರ ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದರು. ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಮೈಕಲ್ ಅಜಯ್, ವಿನಯ್ ಗೌಡ, ನಮ್ರತಾ ಗೌಡ, ತನಿಷಾ ಕುಪ್ಪಂಡ, ಸ್ನೇಹಿತ್ ಗೌಡ ನಾಮಿನೇಟ್ ಆಗಿದ್ದರು,. ಇದರಲ್ಲಿ ಒಬ್ಬರು ಮನೆ ಬಿಟ್ಟು ಹೋಗಲಿದ್ದಾರೆ. ಆದರೆ, ಈಗಾಗಲೇ ಶನಿವಾರ ವರ್ತೂರ್ ಸಂತೋಷ್ ನಾಮಿನೇಟ್‌ನಿಂದ ಸೇಫ್ ಆಗಿದ್ದಾರೆ.

Bigg boss kannada season 10: Varthur santhosh gets highest votes from audience in 8th week

ವರ್ತೂರ್ ಸಂತೋಷ್ ಮೇಲೆ ಕನ್ನಡಿಗರ ಪ್ರೀತಿ!

ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ವರ್ತೂರ್ ಸಂತೋಷ್ ಸೇಫ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಅದು ಕೂಡ ಅವರು ಪಡೆದ ಓಟುಗಳ ಆಧಾರದಲ್ಲಿ. ಎಸ್... ಈ ಬಾರಿ ನಾಮಿನೇಷನ್‌ನಿಂದ ಸೇಫ್ ಆಗಿರುವವರನ್ನು ಕಿಚ್ಚ ಸುದೀಪ್ ಅವರು ಪಡೆದ ಮತಗಳ ಆಧಾರದಲ್ಲಿ ಘೋಷಿಸಿದ್ದಾರೆ. ಅದರಲ್ಲಿ ಮೊದಲ ಸಾಲಿನಲ್ಲಿ ವರ್ತೂರ್ ಸಂತೋಷ್ ಇದ್ದಾರೆ. ಅಂದರೆ ಕನ್ನಡಿಗರು ಹೆಚ್ಚು ಮತ ನೀಡಿರುವುದು ವರ್ತೂರ್ ಸಂತೋಷ್ ಅವರಿಗೆ.

ಕಳೆದ ವಾರ ಡ್ರೋನ್ ಪ್ರತಾಪ್‌ಗೆ ಅತೀ ಹೆಚ್ಚಿನ ವೋಟ್ ಬಂದಿದ್ದು ಮನೆಯ ಸದಸ್ಯರನ್ನು ಅಚ್ಚರಿಗೆ ತಳ್ಳಿತ್ತು. ಆದರೆ, ಈ ಬಾರಿ ಮತ್ತೆ ವರ್ತೂರ್ ಸಂತೋಷ್ ಆ ಸ್ಥಾನ ಪಡೆದಿದ್ದಾರೆ. ಮನೆಯಲ್ಲಿ ವಿನಯ್ ಗೌಡ, ತನಿಷಾ ಕುಪ್ಪಂಡ, ಸಂಗೀತಾ, ಮೈಕಲ್, ಕಾರ್ತಿಕ್ ಅವರಂತಹ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದರೂ ಕೂಡ ಜನ ಮಣೆ ಹಾಕಿರುವುದು ಹಳ್ಳಿಕಾರ್ ಒಡೆಯನಿಗೆ. ಹೀಗಾಗಿ ಹೆಚ್ಚು ವೋಟ್ ಪಡೆದು ಮೊದಲ ಸ್ಥಾನದಲ್ಲಿದ್ದು, ಸೇಫ್ ಆಗಿದ್ದಾರೆ ಮಾಡ್ರನ್ ರೈತ!.

Bigg boss kannada season 10: Varthur santhosh gets highest votes from audience in 8th week

ಈ ಹಿಂದೆಯೂ ವರ್ತೂರ್ ಪರ ನಿಂತ ಕನ್ನಡಿಗರು!

ಹಳ್ಳಿಕಾರ್ ತಳಿಯ ಸಂರಕ್ಷಣೆ ಮಾಡುವ ಕೆಲಸದಲ್ಲಿರುವ ಮಾಡ್ರನ್ ರೈತ ಎಂದು ಗುರುತಿಸಿಕೊಂಡಿರುವ ವರ್ತೂರ್ ಸಂರೋಷ್, ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರಗಳನ್ನು ಬಿಟ್ಟು ಬೇರೆಲ್ಲಾ ವಿಷಯಗಳಿಗೆ ಚರ್ಚೆಯಾಗುತ್ತಾರೆ. ಮನೆಯ ಒಳಗಿರುವವರಿಗೆ ಅದು ತಿಳಿಯದಿದ್ದರೂ ಶೋ ನೋಡುವ ವೀಕ್ಷಕರಿಗೆ ವರ್ತೂರ್ ಅವರ ಖಾಸಗಿ ಜೀವನ ಮತ್ತು ವೈಯಕ್ತಿಕ ವಿಷಯಗಳು ಹೆಚ್ಚು ಮನರಂಜನೆ ನೀಡುತ್ತಿವೆ., ಜೊತೆಗೆ ರೈತ ಎಂಬ ಹೆಸರು ಅವರಿಗಿದ್ದು, ಜನ ಅವರನ್ನು ಮತ್ತಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ.

ಈ ಹಿಂದೆ ವರ್ತೂರು ಸಂತೋಷ್ ತಾವು ಬಿಗ್ ಬಾಸ್ ಮನೆಯಿಂದ ಹರ ಹೋಗುವುದಾಗಿ ಹಠ ಹಿಡಿದ್ದಿದ್ದರು. ಆಗ ನಟ ಸುದೀಪ್ ಅವರಿಗೆ ಬಂದಿರುವ ಮತಗಳನ್ನು ಹೇಳಿ ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದ್ದರು. ಆ ವೇಳೆ ವರ್ತೂರು ಸಂತೋಷ್​ ಅವರಿಗೆ 34 ಲಕ್ಷದ 15 ಸಾವಿರದ 475 ಮಂದಿ ವೋಟ್​ ಮಾಡಿದ್ದರು. ಇದನ್ನು ಕೇಳಿ ಮನೆಯ ಇತರೆ ಸ್ಪರ್ಧಿಗಳು ಶಾಕ್ ಆಗಿದ್ದರು. ಹೀಗಾಗಿ ವರ್ತೂರ್ ಅವರ ಫ್ಯಾನ್ ಬೇಸ್ ದಿನ ದಿನಕ್ಕೂ ಜಾಸ್ತಿ ಆಗುತ್ತಿದೆ.

ಇನ್ನು, ಈ ವಾರ ಹೆಚ್ಚು ವೋಟ್ ಪಡೆದು ಎರಡನೇ ಸ್ಥಾನದಲ್ಲಿ ನಮ್ರತಾ ಗೌಡ, ಮೂರನೇ ಸ್ಥಾನದಲ್ಲಿ ಡ್ರೋನ್ ಪ್ರತಾಪ್ ಇದ್ದು ಇಬ್ಬರೂ ಸೇಫ್ ಆಗಿದ್ದಾರೆ. ವಿನಯ್ ಗೌಡ, ಮೈಕಲ್, ಸ್ನೇಹಿತ್, ತನಿಶಾ, ಸಂಗೀತಾ ಇನ್ನು ನಾಮಿನೇಷನ್‌ನಿಂದ ಸೇಫ್ ಆಗಿಲ್ಲ. ಆದರೆ, ಇವರಲ್ಲಿ ಈ ಬಾರಿ ಸ್ನೇಹಿತ್ ಗೌಡ ಮನೆಯಿಂದ ಹೋಗುವ ಸಾಧ್ಯತೆಯಿದೆ.

More from Filmibeat

English summary
Bigg boss kannada: Varthur santhosh gets highest votes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X