BBK10: ಬೆಂಕಿ ಇಲ್ಲದೆ ಬೆಂದೋಗಿದ್ದ ವರ್ತೂರು ಸಂತೋಷ್.. ಕಿಚ್ಚನ ಪಂಚಾಯ್ತಿಯಲ್ಲಿ ನಾಚಿ ನೀರಾದ ಹಳ್ಳಿಕಾರ್!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ನಡುವೆ ಏನೋ ಒಂದು ಶುರುವಾಗುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಾದ ವಿಚಾರ. ತನಿಷಾ ಇಲ್ಲ ಅಂದ್ರೆ ವರ್ತೂರು ಸಂತೋಷ್ ಸೈಲೆಂಟ್ ಆಗಿ ಬಿಡುತ್ತಿದ್ದಾರೆ. ಈಗಾಗಲೇ ಅದು ಬಿಗ್ ಬಾಸ್ ಮನೆ ಮಂದಿಗೆ ಗೊತ್ತಾಗಿದೆ.

ಬಿಗ್ ಬಾಸ್ ಇತ್ತೀಚೆಗೆ ಮನೆ ಮಂದಿಯನ್ನೆಲ್ಲಾ ಸೇರಿಸಿಕೊಂಡು ಸಿನಿಮಾ ಪೋಸ್ಟರ್ ರಿಲೀಸ್ ಮಾಡಿತ್ತು. ಅದರಲ್ಲಿ ತನಿಷಾ ಹಾಗೂ ವರ್ತೂರು ಸಂತೋಷ್ ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿತ್ತು. ಅದುವೇ ಬೆಂಕಿ. ಅಂದಿನಿಂದ ವರ್ತೂರು ಸಂತೋಷ್ ಬೆಂಕಿಗಾಗಿ ಫಿಕ್ಸ್ ಆದವರಂತೆ ಕಾಣುತ್ತಿದ್ದಾರೆ. ಮನೆಯವರೆಲ್ಲಾ ಜೊತೆಗೆ ಇದ್ದರೂ ಬೆಂಕಿ ಬಂದರೆ ಸಾಕು, ಮುಖದಲ್ಲಿ ನಗುವಿನ ಕಳೆ ಜೋರಾಗಿರುತ್ತದೆ.

Bigg Boss Kannada Season 10 Varthur Santhosh is shy

ತನಿಷಾ ಕಾಣದೆ ವರ್ತೂರು ಸಂತೋಷ್ ಕಂಗಾಲು

ಈ ವಾರ ಬಿಗ್ ಬಾಸ್ ಮನೆಯಲ್ಲಿ ಫಿಸಿಕಲ್ ಟಸ್ಕ್‌ಗಳನ್ನೇ ಹೆಚ್ಚು ನೀಡಲಾಗಿತ್ತು. ಆದರೆ, ಫಿಸಿಕಲ್ ಟಾಸ್ಕ್ ಆಡುವ ಬರದಲ್ಲಿ ಸ್ಪರ್ಧಿಗಳು ಮಾನವೀಯತೆಯನ್ನೇ ಮರೆತಿದ್ದರು. ಆಟದ ರೂಲ್ಸ್ ಬ್ರೇಕ್ ಮಾಡಿದರೂ ಚಿಂತೆಯಿಲ್ಲ. ಎದುರಿಗೆ ಇದ್ದವರಿಗೆ ನೋವಾದರೂ ಚಿಂತೆಯಿಲ್ಲ, ಮೊದಲು ಟಾಸ್ಕ್ ಗೆಲ್ಲುವುದಷ್ಟೇ ಮುಖ್ಯವಾಗಿತ್ತು. ಅಂತಹ ಟಾಸ್ಕ್ ಒಂದರ ಸಮಯದಲ್ಲಿ ತನಿಷಾ ಕಾಲಿಗೆ ಪೆಟ್ಟಾಗಿತ್ತು. ಆಗ ಎರಡು ದಿನಗಳ ಕಾಲ ತನಿಷಾ ಹೊರಗೆ ಉಳಿದಿದ್ದರು. ಈ ಸಮಯದಲ್ಲಿ ವರ್ತೂರು ಸಂತೋಷ್ ಕುಂತರೆ ನಿಂತರೆ ತನಿಷಾ ಬಗ್ಗೆಯೇ ಮಾತನಾಡುತ್ತಿದ್ದರು.

ಕಿಚ್ಚನ ವೇದಿಕೆಯಲ್ಲಿ ಕೀಟಲೆ

ವರ್ತೂರು ಸಂತೋಷ್ ಹಾಗೂ ತನಿಷಾ ಬಗ್ಗೆ ಕಿಚ್ಚ ಸುದೀಪ್ ಆಗಾ ಕಾಮಿಡಿ ಮಾಡುತ್ತಾ ಇದ್ದರು. ಇವತ್ತು 'ಸೂಪರ್ ಸಂಡೇ ವಿತ್ ಸುದೀಪ' ಪಂಚಾಯ್ತಿಯಲ್ಲೂ ಮತ್ತೆ ವರ್ತೂರು ಸಂತೋಷ್ ಹಾಗೂ ತನಿಷಾ ಬಗ್ಗೆ ಮಾತನಾಡಿದ್ದಾರೆ. ಟಾಸ್ಕ್ ವಿಚಾರ ಬಂದಾಗ ತಾನೇ ಬೀಳಿಸಿದ್ದು ಎಂದು ಆಗಾಗ ವರ್ತೂರು ಸಂತೋಷ್ ಬೇಸರ ಮಾಡಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಕಿಚ್ಚ ಕಾಲೆಳೆದಿದ್ದಾರೆ.

Bigg Boss Kannada Season 10 Varthur Santhosh is shy

ಕಿಚ್ಚನ ಮುಂದೆ ಸತ್ಯ ಒಪ್ಪಿಕೊಂಡ ವರ್ತೂರು

ಬೆಂಕಿ ಇಲ್ಲದೆ ಇದ್ದಾಗ ವರ್ತೂರು ಅವರು ಬೆಂಕಿಯ ನೆನಪಲ್ಲಿಯೇ ಬೇಯುತ್ತಿದ್ದರು ಎಂದು ಕಿಚ್ಚ ಸುದೀಪ್ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಮನೆಯಲ್ಲಿ ಎಲ್ಲರೂ ಎಸ್ ಎಂಬ ಬೋರ್ಡ್ ಅನ್ನೇ ತೋರಿಸಿದರು. ಆಗ ವರ್ತೂರು ಸಂತೋಷ್, "ನನ್ನಿಂದಾನೆ ಬಿದ್ದಿದ್ದು ಅಲ್ವಾ ಅಣ್ಣ. ಅದಕ್ಕೆ ಏನಾಯ್ತೋ ಏನೋ ಎಂಬ ಟೆನ್ಶನ್ ಅಷ್ಟೆ" ಎಂದಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ "ಓ ಹಾಗಾದ್ರೆ ನಿಮ್ಮಿಂದ ಬಿದ್ದರು ಎಂಬ ಸಿಂಪತಿ ಅಷ್ಟೇನಾ?" ಎಂದು ಮತ್ತೆ ರೇಗಿಸಿದ್ದಾರೆ. ಅದಕ್ಕೆ ವರ್ತೂರು ಸಂತೋಷ್, ಫ್ರೆಂಡ್‌ಶಿಪ್ ಅಣ್ಣ ಎಂದು ನಾಚಿ ನೀರಾಗಿದ್ದಾರೆ. ಇದನ್ನು ಕೇಳಿದ ತನಿಷಾ ಕೂಡ ನಾಚಿ ನೀರಾಗಿದ್ದಾರೆ.

ಎಲ್ಲರ ಭವಿಷ್ಯ ಹೇಳಿದ ತುಕಾಲಿ

ತುಕಾಲಿ ಸಂತೂ ಮಿಮಿಕ್ರಿ ಮಾಡುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೂ ಮನರಂಜನೆಗಾಗಿ ಸಾಕಷ್ಟು ಕಾಮಿಡಿ ಮಾಡುತ್ತಾ ಇರುತ್ತಾರೆ. ಅದರಲ್ಲೂ ವೀಕೆಂಡ್ ಬಂತು ಎಂದರೆ ಕಿಚ್ಚ ಸುದೀಪ್ ಕೂಡ ತುಕಾಲಿಯನ್ನೇ ಕಾಲೆಳೆಯುತ್ತಾರೆ. ಇದೀಗ ಬಿಗ್ ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಬಂದು ಹೋದ ಮೇಲೆ ಅವರಂತೆ ಆಡುವುದಕ್ಕೆ ಶುರು ಮಾಡಿದ್ದಾರೆ. ಇವತ್ತಿನ ಪಂಚಾಯ್ತಿಯಲ್ಲೂ ಅಷ್ಟೇ, ಬ್ರಹ್ಮಾಂಡ ಗುರೂಜಿ ಸ್ಟೈಲ್‌ನಲ್ಲಿಯೇ ಎಲ್ಲರ ಭವಿಷ್ಯ ಹೇಳಿದ್ದಾರೆ.

More from Filmibeat

English summary
BBK 10 December 2nd episode about Varthur Santhosh is shy:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X