BBK10: ಬಿಗ್ ಬಾಸ್ ಮನೆಯಲ್ಲಿ ಮದುವೆ ಕಥೆ ಬಿಚ್ಚಿಟ್ಟ ವರ್ತೂರು ಸಂತೋಷ್.. ಸಂಬಂಧ ಮುರಿಯಲು ಇದೇ ಕಾರಣನಾ?
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಕೃಷಿ ಕ್ಷೇತ್ರದಿಂದ ವರ್ತೂರು ಸಂತೋಷ್ ಸ್ಪರ್ಧಿಯಾಗಿ ಕರೆಸಲಾಗಿದೆ. ಹಳ್ಳಿಕಾರ್ ತಳಿ ಮೂಲಕ ಸಂತೋಷ್ ಫೇಮಸ್ ಆಗಿದ್ದರು. ಬೆಂಬಲಿಗರು ಕೂಡ ಸಿಕ್ಕಾಪಟ್ಟೆ ಇದ್ದಾರೆ. ವರ್ತೂರು ಸಂತೋಷ್‌ಗೆ ಬೆಂಬಲ ನೀಡುವುದಕ್ಕೆ ಎಷ್ಟು ಲಕ್ಷ ಜನ ಕಾದು ಕುಳಿತಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಅದನ್ನು ಕಿಚ್ಚ ಸುದೀಪ್ ಅವರೇ ಗೊತ್ತು ಮಾಡಿದ್ದಾರೆ.
ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಒಂದಲ್ಲ ಒಂದು ವಿವಾದಗಳಲ್ಲಿ ಸಿಕ್ಕಿಕೊಳ್ಳುತ್ತಲೇ ಇದ್ದಾರೆ. ಹುಲಿ ಉಗುರುನಿಂದಾಗಿ ಜೈಲಿಗೆ ಹೋಗಿ ಕೂಡ ಬಂದರು. ಮೈ ಮೇಲೆ ಚಿನ್ನ ತುಂಬಿ ಕೊಂಡು ಬಂದಿದ್ದ ವರ್ತೂರು ಸಂತೋಷ್ ಈಗ ಅವನ್ನೆಲ್ಲ ಧರಿಸುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವಿವಾದಕ್ಕೆ ಸಿಲುಕಿದ್ದ ತಮ್ಮ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಮದುವೆ, ಮಗು, ಮೋಸದ ಬಗ್ಗೆ ಸುದ್ದಿ
ವರ್ತೂರು ಸಂತೋಷ್ ಅದ್ಯಾವಾಗ ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರಿ ಬಂದರೋ, ಬಳಿಕ ಮತ್ತೊಂದು ವಿಚಾರ ವೈರಲ್ ಆಗಿತ್ತು. ವರ್ತೂರು ಸಂತೋಷ್ ಜೈಲಿಂದ ಮನೆಯೊಳಗೆ ಹೋದ ಕೂಡಲೇ ವರ್ತೂರು ಸಂತೋಷ್ ಮಾವ ಮದುವೆ, ಕಿರುಕುಳ, ಮಗು, ಮೋಸದ ಚಕಾರವೆತ್ತಿದ್ದರು. ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು. ಇದಕ್ಕೆ ವರ್ತೂರು ಸಂತೋಷ್ ಅವರಿಂದಾನೇ ಉತ್ತರ ಸಿಗಬೇಕಿತ್ತು.
ಬಿಗ್ ಬಾಸ್ ಮನೆಯಲ್ಲಿ ಕ್ಲಾರಿಟಿ
ವರ್ತೂರು ಸಂತೋಷ್‌ಗೆ ಮದುವೆಯಾಗಿದೆ ಎಂಬುದಕ್ಕೆ ವಿಡಿಯೋ ಸಮೇತ ಸಾಕ್ಷಿಗಳು ಹರಿದಾಡಿದ್ದವು. ಇದೀಗ ಮದುವೆ ಬಗ್ಗೆ ಬಿಗ್ ಬಾಸ್ ಮನೆಯಲ್ಲಿಯೇ ವರ್ತೂರು ಸಂತೋಷ್ ಕ್ಲಾರಿಟಿ ಕೊಟ್ಟಿದ್ದಾರೆ. "ವರ್ತೂರು ಸಂತೋಷ್ ಒಳಗಡೆ ಏನಿದೆ ಎಂಬುದಕ್ಕೆ ಹೇಳುತ್ತಾ ಇದ್ದೀನಿ. ದೊಡ್ಡಪ್ಪ ಇಂಥಹವರಿಗೆ ತಾಳಿ ಕಟ್ಟು ಅಂದರೆ ನಾನು ಕಟ್ಟುತ್ತೀನಿ ಎಂದಿದ್ದೆ. ಅದರಂತೆ ಒಪ್ಪಿಕೊಂಡೆ. ಬರ್ತಾ ಬರ್ತಾ ಅಮ್ಮನನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಶುರು ಮಾಡಿದರು. ನಾನು ಸಂಪಾದಿಸಿರುವ ಜನರನ್ನು ತೊರೆದು ಇವರ ಹಿಂದೆ ಹೋಗುವುದಕ್ಕೆ ಸಾಧ್ಯವಿಲ್ಲ. ಅವರ ಮನೆ ಹತ್ತಿರ ಹೋಗುತ್ತೀನಿ. ನನ್ನ ಮಾತಿನ ಪ್ರಕಾರ ಬಂದರೆ, ಇವತ್ತು ನೀನು ರಾಣಿನೇ" ಎಂದಿದ್ದಾರೆ.
ಬಿಗ್ ಬಾಸ್‌ನಲ್ಲಿ ಮದುವೆ ವಿಷ್ಯ ಬಂದಿದ್ದೇಗೆ?
ಬಿಗ್ ಬಾಸ್ ಮನೆಯಲ್ಲಿ ಇರುವ ಸದಸ್ಯರಿಗೆ ಹೊರಗಿನ ಯಾವ ವಿಚಾರವೂ ತಿಳಿಯುವುದಿಲ್ಲ, ಹೊರಗಿನ ಸಂಪರ್ಕವೇ ಇರುವುದಿಲ್ಲ, ಎಲ್ಲವನ್ನು ತೊರೆದು ಹೇಗೆ ಜಯ ಸಾಧಿಸುತ್ತಾರೆ ಎಂಬುದೇ ಬಿಗ್ ಬಾಸ್‌ನ ಬಿಗ್ ಟಾಸ್ಕ್ ಎಂದೇ ಜನ ನಂಬಿದ್ದಾರೆ. ಆದರೆ, ಹೊರಗೆ ನಡೆದ ವಿಚಾರಕ್ಕೆ ವರ್ತೂರು ಸಂತೋಷ್ ಕ್ಲಾರಿಟಿ ಕೊಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮನದಾಳದ ಮಾತುಗಳನ್ನು ಹೇಳುವ ಟಾಸ್ಕ್ ರೀತಿ ಈ ಪ್ರೋಮೋ ಕಾಣುತ್ತಿದೆ. ಬಿಗ್ ಬಾಸ್‌ನಿಂದ ಮನೆಯ ಹೊರಗೆ ಬಂದವರನ್ನು ಕೇಳಿದಾಗಲೂ, ವರ್ತೂರು ಸಂತೋಷ್ ಅರೆಸ್ಟ್ ಆಗಿರುವುದು ಎಲ್ಲರಿಗೂ ಗೊತ್ತಿತ್ತು ಎಂದೇ ಉತ್ತರಿಸಿದ್ದಾರೆ. ಎಂದರೆ ಎಲ್ಲವೂ ಮನೆ ಮಂದಿಗೆ ತಿಳಿಯುತ್ತಾ ಇದೆಯಾ ಅಂತ.

ತನಿಷಾ ಮೇಲೆ ಸಂತೋಷ್‌ಗೆ ಮನಸ್ಸಾಗಿದೆಯಾ?
ಬಿಗ್ ಬಾಸ್ ಮನೆಯಲ್ಲಿ ಜೋಡಿ ಹಕ್ಕಿಗಳ ವಿಚಾರದಲ್ಲಿ ತನಿಷಾ ಮೇಲೆ ವರ್ತೂರು ಸಂತೋಷ್ ಲವ್ವಾಗುತ್ತಿದೆ ಎಂಬಂತೆ ಕಾಣುತ್ತಿದೆ. ಹಾಗಂತ ಸದಾ ತನಿಷಾ ಹಿಂದೆಯೇ ಸುತ್ತುವುದಿಲ್ಲ. ಬದಲಿಗೆ ಅವರು ಇಲ್ಲ ಎಂದರೆ ತುಂಬಾ ಮಿಸ್ ಮಾಡಿಕೊಂಡವರಂತೆ ನಡೆದುಕೊಳ್ಳುತ್ತಿದ್ದಾರೆ. ಈಗ ಪೆಟ್ಟಾಗಿರುವ ತನಿಷಾ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಹೀಗಾಗಿ ಅವರ ಬಗ್ಗೆ ಬಿಗ್ ಬಾಸ್ ಬಳಿ ಕೇಳುತ್ತಿದ್ದಾರೆ.


Click it and Unblock the Notifications











