BBK10: ವರ್ತೂರು ಸಂತೋಷ್ ನಿಜಕ್ಕೂ ಓದಿರುವುದು ಏನು ? ತಮ್ಮ ವಿದ್ಯಾಭ್ಯಾಸದ ಬಗ್ಗೆ ಬಾಯ್ಬಿಟ್ಟ ಹಳ್ಳಿಕಾರ್..!
ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಕೂಡ ಒಳ್ಳೆ ಸ್ಪರ್ಧಿಯೇ ಆಗಿದ್ದಾರೆ. ಆಟ ಅಂತ ನಿಂತರೆ ಎದುರಾಳಿಗೆ ಒಳ್ಳೆಯ ಸ್ಪರ್ಧೆಯನ್ನೇ ಒಡ್ಡುತ್ತಾರೆ. ಆದರೆ ಮನಸ್ಸು ಒಪ್ಪದೆ ಹೋದರೆ ಸುಮ್ಮನೆ ಕುಳಿತು ಬಿಡುತ್ತಾರೆ. ಹಳ್ಳಿಕಾರ್ ಹಸುಗಳನ್ನು ಸಾಕುವ ಮೂಲಕ, ವರ್ತೂರು ಸುತ್ತಮುತ್ತ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವರು ಈ ಹಳ್ಖಿಕಾರ್ ಒಡೆಯ. ಬಿಗ್ ಬಾಸ್ ಬರುವುದಕ್ಕೂ ಮುನ್ನವೇ ಅದೆಷ್ಟೋ ಸಂದರ್ಶನಗಳನ್ನು ನೀಡಿದ್ದಾರೆ.
ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಆಗುತ್ತಲೆ ಇದ್ದಾರೆ. ಆರಂಭದಲ್ಲಿಯೇ ಹುಲಿ ಉಗುರು ಪ್ರಕರಣದಲ್ಲಿ ಲಾಕ್ ಆಗಿದ್ದರು. ಆ ವಿಚಾರ ತಣ್ಣಗಾಗಿ, ಇನ್ನೇನು ಬಿಗ್ ಬಾಸ್ ಆಟ ಶುರು ಮಾಡಬೇಕು ಎನ್ನುವಷ್ಟರಲ್ಲಿ ಮದುವೆ ವಿಚಾರ ಚಾಲ್ತಿಗೆ ಬಂದಿತ್ತು. ಅವರ ಮಾವ ಎಂದು ಹೇಳಿಕೊಂಡ ವ್ಯಕ್ತಿ ವರ್ತೂರು ಸಂತೋಷ್ ಪದವೀಧರನೇ ಅಲ್ಲ ಎಂದಿದ್ದರು ಹಾಗಾದರೆ ವರ್ತೂರು ಸಂತೋಷ್ ಓದಿರುವುದು ಏನು..? ಎಲ್ಲಿ ಶಿಕ್ಷಣ ಮುಗಿಸಿದರು ಎಂಬ ಮಾಹಿತಿ ಇಲ್ಲಿದೆ.

ಆಂಗ್ಲ ಮಾಧ್ಯಮದಲ್ಲಿಯೇ ವಿದ್ಯಾಭ್ಯಾಸ
ವರ್ತೂರು ಸಂತೋಷ್ ಅವರ ಮಾತು, ಆ ಮುಗ್ಧತೆಯ ನಡೆ ನೋಡುತ್ತಿದ್ದರೆ ಪಕ್ಕಾ ಹಳ್ಳಿ ಹೈದ ಅನಿಸದೆ ಇರುವುದಿಲ್ಲ. ಅದು ಸತ್ಯವೇ ಸರಿ. ಪಕ್ಕಾ ಹಳ್ಳಿಯಲ್ಲಿಯೇ ಇರುವ ಕೃಷಿಕ ಕೂಡ. ಆದರೆ ಓದುವುದರಲ್ಲೂ ಹಿಂದೆ ಬಿದ್ದಿಲ್ಲ. ಎಲ್ ಕೆ ಜಿಯಿಂದಾನೇ ಆಂಗ್ಲ ಮಾಧ್ಯಮದಲ್ಲಿ ಓದಿರುವ ವರ್ತೂರು ಸಂತೋಷ್ ಎಲ್ಲೂ ಹಮ್ಮು ಬಿಮ್ಮು ತೋರದೆ, ಹಳ್ಳಿ ಹೈದನಾಗಿ ಆ ಮುಗ್ಧತೆಯನ್ನು ಕಾಪಾಡಿಕೊಂಡಿದ್ದಾರೆ. ತನ್ನ ಬಾಲ್ಯದ ಶಿಕ್ಷಣವನ್ನು ವರ್ತೂರಿನಲ್ಲಿಯೇ ಕಳೆದಿದ್ದಾರೆ.
ಪದವೀಧರನಾದರೂ ಹಳ್ಳಿಹೈದನಂತೆ ಇರೋದೇಕೆ?
ವರ್ತೂರು ಸಂತೋಷ್‌ಗೆ ಪದವಿಗೆ ಬಂದ ಮೇಲೆ ಹಣ ಬೆಲೆ ಏನು ಎಂಬುದರ ಅರಿವಾಗಿತ್ತಂತೆ. ವರ್ತೂರಿನಲ್ಲಿಯೇ ಓದಿದ್ದ ಸಂತೋಷ್ ಡಿಗ್ರಿ ಪದವಿಗೆ, 75 ಸಾವಿರ ಶುಲ್ಕ ಕಟ್ಟಿ ಸೇರಿಸಿದ್ದರಂತೆ. ಆ ವೇಷಭೂಷಣ ಕಂಡು ಹೆದರಿದ್ದರಂತೆ. "ನಾವಿಲ್ಲಿ ಶ್ರೀಮಂತನಾಗಿಯೇ ಬದುಕಿದ್ದರು ಸಹ ನಮಗೆ ಆ ವೆಸ್ಟ್ರನ್ ಕಲ್ಚರ್ ನಮಗೆ ಗೊತ್ತಿರಲಿಲ್ಲ. ಅಲ್ಲಿನ ಹಾಸ್ಟೆಲ್ ಹುಡುಗರು, ಹುಡುಗಿಯರು ನೆಕ್ಸ್ಟ್ ಲೆವೆಲ್ ಎಂಜಾಯ್ಮೆಂಟ್ ಮಾಡುತ್ತಾ ಇದ್ದರು" ಎಂದಿದ್ದಾರೆ.

ಎಂಬಿಎ ಅರ್ಧಕ್ಕೆ ಬಿಡಲು ಕಾರಣವೇನು..?
ವರ್ತೂರು ಸಂತೋಷ್ ಡಿಗ್ರಿ ಮಾಡುವಾಗ ಕದ್ದು ಸಿನಿಮಾವನ್ನು ನೋಡಿದ್ದಾರಂತೆ. ಆದರೆ ಬೇರೆ ಹುಡುಗರ ರೀತಿ ಅಲ್ಲ, ಮೂರು ವರ್ಷದ ಡಿಗ್ರಿಯಲ್ಲಿ ಎರಡೇ ಸಿನಿಮಾವಂತೆ. ಬಳಿಕ ತಮ್ಮ ಎಂಬಿಎ ಬಗ್ಗೆ ಮಾತನಾಡಿರುವ ವರ್ತೂರು ಸಂತೋಷ್, "ಅದೇ ಕಾಲೇಜಿನಲ್ಲಿ ನಾನು ಎಂಬಿಎ ಸೇರಿಕೊಂಡೆ. ಆದರೆ ಎಂಬಿಎ ಪೂರ್ತಿ ಮಾಡಲಿಲ್ಲ. ಅರ್ಧಕ್ಕೆ ಬಿಟ್ಟೆ. ಒಂದು ವರ್ಷ ಅಷ್ಟೇ ಎಂಬಿಎ ಮಾಡಿದ್ದು" ಎಂದು ಹೇಳಿಕೊಂಡಿದ್ದಾರೆ.
ಜನವರಿ ಅಂದ್ರೆ ಗೋವಾ ನೆನಪು
ವರ್ತೂರು ಸಂತೋಷ್‌ಗೆ ಪ್ರವಾಸದ ಕ್ರೇಜ್ ಅಷ್ಟಾಗಿ ಇಲ್ಲದೆ ಹೋದರೂ, ಗೋವಾ ಅಂದ್ರೆ ಬಲು ಇಷ್ಟ ಅಂತೆ. ಕಾಲೇಜಿನಲ್ಲಿ ಇದ್ದಾಗಲೂ ಫ್ರೆಂಡ್ಸ್ ಅಲ್ಲಿ ಇಲ್ಲಿ ಕರೆದಾಗಲೂ ಹೋಗದೆ ಹಸು, ಕರುಗಳನ್ನು ನೋಡಿಕೊಳ್ಳುತ್ತಿದ್ದ ವರ್ತೂರು ಸಂತೋಷ್, ನಂದಿಬೆಟ್ಟಕ್ಕೆ ಒಂದೆರಡು ಸಲ ಹೋಗಿದ್ದಾರಂತೆ. ಅದನ್ನು ಬಿಟ್ಟರೆ ಜನವರಿ ಅಂದರೆ ಗೋವಾ ನೆನಪಾಗುತ್ತಂತೆ. ಹದಿನೈದು ಸಲ ಗೋವಾಗೆ ಹೋಗಿದ್ದಾರಂತೆ. ಗೋವಾದ ಒಂದೊಂದು ಬೀದಿಯನ್ನು ವರ್ತೂರು ಸಂತೋಷ್ ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರಂತೆ.


Click it and Unblock the Notifications











