BBK10: ಸಂಗೀತಾ, ವರ್ತೂರು ಮಧ್ಯೆ ಜೋರು ಜಗಳ, ಸಂಗೀತಾ ನಿಜವಾಗಿಯೂ ರಾಕ್ಷಸಿ ಎಂದ ವರ್ತೂರು ಸಂತೋಷ್
ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಟಾಸ್ಕ್ ನೀಡಲಾಗುತ್ತಿದೆ. ಆ ಟಾಸ್ಕ್‌ಗಳಿಂದಾನೇ ಒಂದಷ್ಟು ಜಗಳಗಳು ಶುರುವಾಗುತ್ತಿವೆ. ಬಿಗ್ ಬಾಸ್ ಆಟದಲ್ಲಿ ಸಾಕಷ್ಟು ವೈಯಕ್ತಿಕ ನಿಂದನೆಗಳು ಅಗುತ್ತಿವೆ. ಫಿಸಿಕಲ್ ಟಾಸ್ಕ್‌ನಲ್ಲಂತೂ ಮನುಷ್ಯತ್ವವನ್ನೇ ಮರೆಯುತ್ತಿದ್ದಾರೆ. ಈಗಂತೂ ಬಿಗ್ ಬಾಸ್ ಮನೆ ಗಂಧರ್ವರು ಹಾಗೂ ರಾಕ್ಷಸರು ಇರುವಂತಹ ಲೋಕವಾಗಿದೆ.
ಲೋಕದೊಳಗೆ ಗಂಧರ್ವರನ್ನು ರಾಕ್ಷಸರು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ತಮಗೆ ಹೇಗೆ ಬೇಕೋ ಹಾಗೇ ಕೆಲಸಗಳನ್ನು ಮಾಡಿಸಿಕೊಳ್ಳುವುದಲ್ಲದೆ, ತಮ್ಮಲ್ಲಿರುವ ಕೋಪವನ್ನೆಲ್ಲಾ ತೀರಿಸಿಕೊಳ್ಳುತ್ತಿದ್ದಾರೆ. ಇವತ್ತು ರೂಲ್ಸ್ ಬ್ರೇಕ್ ಹಾಗೂ ವೈಯಕ್ತಿಕ ನಿಂದನೆಯೇ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇದೆ ಮೊದಲ ಬಾರಿಗೆ ಸಾಕಷ್ಟು ಬಾರಿಗೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಬಿಗ್ ಬಾಸ್ ಕೂಡ ಇದನ್ನು ಹಲವು ಬಾರಿ ಎಚ್ಚರಿಸಿದ್ದಾರೆ.

ಸಂಗೀತಾ, ವರ್ತೂರು ಮಧ್ಯೆ ಜಗಳ
ಸಂಗೀತಾ ಮತ್ತು ತಂಡದವರಿಗೆ ರಾಕ್ಷಸರು ಎಂಬ ನೀಡಲಾಗಿದೆ. ರಾಕ್ಷಸರ ವೇಷ ತೊಟ್ಟು ಮನೆಯೊಳಗೆಲ್ಲಾ ರಾಕ್ಷಸರ ರೀತಿಯೇ ವರ್ತಿಸುತ್ತಿದ್ದಾರೆ. ಆದರೆ, ಟಾಸ್ಕ್ ವಿಚಾರದಲ್ಲಿ ವರ್ತೂರು ಸಂತೋಷ್ ಹಾಗೂ ಸಂಗೀತಾ ನಡುವಲ್ಲಿ ಎದ್ದ ಗಲಾಟೆ ದೊಡ್ಡಮಟ್ಟದಲ್ಲಿ ಆಗುತ್ತಿದೆ. ನಿಮ್ಮ ಕ್ಯಾರೆಕ್ಟರ್ ಇರುವುದು ಅದೇ ರೀತಿ ಎಂದಿದ್ದೇ ತಡ, ವಾದ ಜೋರಾಗಿಯೇ ನಡೆದಿದೆ. ಅವಳಾಗಿಯೇ ಅವಳು ಹೇಳಿದಾಗ ಅವಳ ಕ್ಯಾರೆಕ್ಟರ್ ಡ್ಯಾಮೇಜ್ ಆಗಲ್ಲ. ನಾನು ಹೇಳಿದ ಕೂಡಲೇ ಅವರು ರೈಸ್ ಎಂದು ವರ್ತೂರು ಸಂತೋಷ್ ಕೋಪ ಹೊರ ಹಾಕಿದ್ದಾರೆ. ಬಳಿಕ ನಮ್ರತಾ ಅಂಡ್ ತಂಡದವರ ಬಳಿ ಕುಳಿತು ಇದನ್ನೇ ಚರ್ಚೆ ಮಾಡಿದ್ದಾರೆ.
ವಿಜಯ ಪತಾಕೆ ರದ್ದಾಗಿದ್ದೇಕೆ?
ಈ ಬಾರಿಯ ಸೀಸನ್ 10ರಲ್ಲಿ ಫಿಸಿಕಲಿ ಟಾಸ್ಕ್ ಹಾಗೂ ಮೈಂಡ್ ಟಾಸ್ಕ್‌ಗಳನ್ನು ನೀಡುತ್ತಲೇ ಇದ್ದಾರೆ. ಆದರೆ, ಫಿಸಿಕಲ್ ಟಾಸ್ಕ್‌ನಲ್ಲಿ ಮನೆಯ ಸದಸ್ಯರು ಮೈಮರೆತು ಆಡುತ್ತಿದ್ದಾರೆ. ಇದು ಮನೆಯ ಸದಸ್ಯರಿಗೂ ತೊಂದರೆಯನ್ನುಂಟು ಮಾಡುತ್ತಿದೆ. ಈಗಾಗಲೇ ತನಿಷಾ ಕಾಲು ಮುರಿದುಕೊಂಡಿದ್ದರೆ, ತುಕಾಲಿ ಸಂತೋಷ್ ಕೈ ಮುರಿದುಕೊಂಡಿದ್ದಾರೆ. ಇವತ್ತಿನ ವಿಜಯ ಪತಾಕೆ ಟಾಸ್ಕ್ ರದ್ದಾಗುವುದಕ್ಕೂ ಇದೇ ಕಾರಣ. ಫಿಸಿಕಲಿ ಸಾಕಷ್ಟು ಜನರಿಗೆ ನೋವಾಗಿದ್ದೇ ಟಾಸ್ಕ್ ರದ್ದು ಮಾಡುವುದಕ್ಕೆ ಕಾರಣವಾಗಿದೆ.

ಆಟದಲ್ಲಿ ಗೆದ್ದ ರಾಕ್ಷಸರು
ಬಾವುಟಗಳನ್ನು ಸಂಗ್ರಹಿಸುವ ಟಾಸ್ಕ್ ಅನ್ನು ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ವಿನಯ್ ಹಾಗೂ ಕಾರ್ತಿಕ್ ಸಣ್ಣ ಸಣ್ಣ ವಿಚಾರಕ್ಕೂ ಮೈಮೇಲೆ ಬೀಳುವುದಕ್ಕೆ ಶುರು ಮಾಡಿದರು. ಬಾರೋ ಬಾ ಅಂತ ಎದುರು ಬದುರು ನಿಂತರು. ಮಧ್ಯಸ್ಥಿಕೆ ವಹಿಸಿದ್ದ ಸ್ನೇಹಿತ್ ಸರಿಯಾಗಿ ಹ್ಯಾಂಡಲ್ ಮಾಡದ ಕಾರಣ, ಟಾಸ್ಕ್‌ನಲ್ಲಿ ದೇಹಕ್ಕೆ ತೊಂದರೆಯಾಗುವುದೇ ಹೆಚ್ಚಾಗುವುದಕ್ಕೆ ತೊಡಗಿತು. ಹೀಗಾಗಿ ಬಿಗ್ ಬಾಸ್ ನಿಲ್ಲಿಸಿದ ಟಾಸ್ಕ್‌ನಲ್ಲಿ ರಾಕ್ಷಸರೇ ಗೆದ್ದರು.
ಸಂಗೀತಾ ಮೇಲೆ ಗಂಧರ್ವರ ಆರೋಪ
ನಮ್ಮ ತಂಡಕ್ಕೆ ಬಂದಿದ್ದ ಸಂಗೀತಾ, ತನಿಷಾ ಹಾಗೇ, ಕಾರ್ತಿಕ್ ಹೀಗೆ ಎಂದು ನಮ್ಮ ಬಳಿಯೇ ಹೇಳಿದ್ದರು. ನೀವೂ ಈಗ ಅವರನ್ನು ನೋಡುತ್ತಿದ್ದೀರಿ. ಆದರೆ, ಅವರನ್ನು ನಾವೂ ಮೊದಲಿನಿಂದಲೂ ನೋಡಿದ್ದೀವಿ ಎಂದು ನಮ್ರತಾ ಹೇಳಿದ ಮೇಲೆ, ವರ್ತೂರು ಸಂತೋಷ್ ನಿಜಕ್ಕೂ ಅವಳು ಕಚಡಾನೇ ಎಂದಿದ್ದಾರೆ. ಸಂಗೀತಾ ಬಗ್ಗೆ ಸಾಕಷ್ಟು ಕೋಪದಿಂದ ಮಾತುಗಳನ್ನೇ ಆಡಿದ್ದಾರೆ.


Click it and Unblock the Notifications











