BBK10: ಬಿಗ್ ಬಾಸ್ ಉಗಿದರೂ ಡೋಂಟ್ ಕೇರ್; ಏನಾಗಿದೆ ಮನೆ ಮಂದಿಗೆ?
ಬಿಗ್ ಬಾಸ್ ಮನೆಯಲ್ಲಿ ಮೊದಲೇ ದಿನಗಳು ಉರುಳುತ್ತಿವೆ. ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮುಗಿದರೆ ಎಲ್ಲರೂ ಮನೆಯಿಂದ ಹೊರಗೆ ಇರುತ್ತಾರೆ. ಮನೆಯಲ್ಲಿ ಇರುವಷ್ಟು ದಿನ ಗಳಿಕೆ ಮಾಡಿಯೇ ಊಟ ಮಾಡಬೇಕು. ಮೊದಲೇ ಅಡುಗೆಯನ್ನು ಸರಿಯಾಗಿ ಮಾಡಿಕೊಳ್ಳುವುದಕ್ಕೆ ಕಷ್ಟ ಸಾಧ್ಯ. ಅದರ ಜೊತೆಗೆ ಸಿಗುವ ವಸ್ತುಗಳನ್ನು ಕಳೆದುಕೊಳ್ಳುತ್ತಲೇ ಇದ್ದಾರೆ.
ವಾರಕ್ಕೆ ಒಮ್ಮೆ ಮಾತ್ರ ಬಿಗ್ ಬಾಸ್ ಲಕ್ಸುರಿ ಬಜೆಟ್ ನೀಡುತ್ತಾರೆ. ಅದಕ್ಕಾಗಿಯೇ ಸದಸ್ಯರು ಕಾಯುತ್ತಾ ಇರುತ್ತಾರೆ. ಆದರೆ, ಸೀಸನ್ 10 ಸ್ಪರ್ಧಿಗಳು ಈ ಲಕ್ಸುರಿ ಬಜೆಟ್ ಬಗ್ಗೆ ಕೊಂಚವೂ ಸೀರಿಯಸ್ ನೆಸ್ ಇಲ್ಲದಂತೆ ಆಡುತ್ತಿದ್ದಾರೆ. ಇಂದು ಕೂಡ ಲಕ್ಸುರಿ ಬಜೆಟ್ ಕಳೆದುಕೊಂಡಿದ್ದಾರೆ.

ಬಿಗ್ ಬಾಸ್ ಉಗಿದರೂ ಡೋಂಟ್ ಕೇರ್
ಇಂದು ಕೂಡ ಲಕ್ಸುರಿ ಬಜೆಟ್ ಇಡಲಾಗಿತ್ತು. ಲೆಕ್ಕ ಮಾಡುವ ಸಮಯದಲ್ಲಿ ಸರಿಯಾಗಿ ಮನೆ ಮಂದಿ ಎಡವುತ್ತಾರೆ. ಲಕ್ಸುರಿ ಬಜೆಟ್ ಕಳೆದುಕೊಳ್ಳುತ್ತಾರೆ. ಈ ವಾರವೂ ತಪ್ಪಾದ ಲೆಕ್ಕಾಚಾರದಿಂದ ಲಕ್ಸುರಿ ಬಜೆಟ್ ಕಳೆದುಕೊಳ್ಳಲಾಗಿದೆ. ಮನೆಯವರೆಲ್ಲಾ ಸೇರಿ ಕಾರ್ತಿಕ್ ಗೆ ಬೈದಿದ್ದು ಆಯಿತು. ಗಣಿತದಲ್ಲಿ ಫಸ್ಟ್ ಕ್ಲಾಸ್ ಅಂತೀಯ ಅಂತ. ಲಕ್ಸುರಿ ಬಜೆಟ್ ಅಂದರೆ ಏನು ಅಂತ ನಮ್ರತಾ ಹಾಗೂ ಸಂಗೀತಾ ತಮಾಷೆಯಾಗಿ ಸ್ವೀಕರಿಸಿದರು. ಕಳೆದುಕೊಂಡ ಸೀರಿಯಸ್ ನೆಸ್ ಯಾರಲ್ಲಿಯೂ ಕಾಣಲೇ ಇಲ್ಲ.
ಸಿಂಪತಿ ತೋರಿದ ಬಿಗ್ ಬಾಸ್
ಬಿಗ್ ಬಾಸ್ ಮನೆ ಮಂದಿಗೆ ಈ ವಾರವೂ ನೀವೂ ಲಕ್ಸುರಿ ಬಜೆಟ್ ಕಳೆದುಕೊಂಡಿದ್ದೀರಾ. ಒಂಭತ್ತು ಸೀಸನ್ ಸ್ಪರ್ಧಿಗಳಿಗೆ ಕುತೂಹಲ, ಜನರಿಗೂ ಮುಂದಿನ ಲಕ್ಸುರಿ ಬಜೆಟ್ ಏನು ಮಾಡಲಿದ್ದೀರಿ ಎಂಬ ಕುತೂಹಲವಿದೆ. ಒಮ್ಮೆ ಕಣ್ಣು ಮುಚ್ಚಿ ಆದನ್ನು ನೆನಪಿಸಿಕೊಳ್ಳಿ. ಮತ್ತೆ ಅದನ್ನು ವಾಪಾಸ್ ಪಡೆಯುವ ಅವಕಾಶ ನಿಮ್ಮದಾಗಿದೆ. ನೋಡುಗರನ್ನು ನಿಮ್ಮ ಪ್ರತಿಭೆಯಿಂದ ರಂಜಿಸಬೇಕು. ಆ ಮನರಂಜನೆಯಿಂದ ಮನೆಯವರಲ್ಲೂ ನಗು ತರಿಸಬೇಕು ಎಂಬ ಸೂಚನೆಯನ್ನು ನೀಡಿದೆ.
ವರ್ತೂರು ಸಂತೋಷ್ 2.0
ನಗಿಸುವುದಕ್ಕೆ ಮನೆ ಮಂದಿ ಒಂದಷ್ಟು ಸ್ಕಿಟ್‌ಗಳನ್ನು ಮಾಡಿಕೊಂಡಿದ್ದರು. ಅದರಲ್ಲಿ ವರ್ತೂರು ಸಂತೋಷ್ ಅವರ ನಗುಮುಖ, ಆಕ್ಟೀವ್ ಮುಖ ಅನಾವರಣವಾಗಿದೆ. ಸಂಗೀತಾ ಹಾಗೂ ಕಾರ್ತಿಕ್ ಯಾವ ರೀತಿ ಇದ್ದರು, ಯಾವ ರೀತಿ ಇರುತ್ತಾರೆ ಎಂಬುದನ್ನು ತೋರಿಸಿದರು. ಬಳಿಕ ಬೆಂಕಿ ಜೊತೆಗೆ ರೊಮ್ಯಾನ್ಸ್ ಬೇರೆ ಮಾಡಿದರು. ಈ ಸ್ಕಿಟ್ ಮಾಡುವಾಗ ವರ್ತೂರು ಸಂತೋಷ್ ಬೇರೆಯದ್ದೆ ರೀತಿಯಾಗಿ ಕಾಣಿಸಿದರು. ಹಿಂದೆಂದು ಕಾಣದ, ಫುಲ್ ಎನರ್ಜಿ ಇರುವ ವರ್ತೂರು ಸಂತೋಷ್ ಕಂಡಿದ್ದಾರೆ.
ಕೊನೆಯ ದಿನಗಳೆಂದು ಬಿಗ್ ಬಾಸ್ ಕನಿಕರ
ವರ್ತೂರು ಸಂತೋಷ್, ನಮ್ರತಾ, ಸಂಗೀತಾ, ತನಿಷಾ ಸೇರಿ ಒಳ್ಳೆಯ ಮನರಂಜನೆಯನ್ನು ನೀಡಿದರು. ಇದನ್ನು ನೋಡಿದ ಬಿಗ್ ಬಾಸ್, ಮನೆ ಮಂದಿಗೆ ಸಂತಸದ ವಿಚಾರವನ್ನು ತಿಳಿಸಿತು. ನಗಿಸುವುದಕ್ಕೆ, ನಗುವುದಕ್ಕೆ ಬಹಳ ಪ್ರಯತ್ನ ಪಟ್ಟಿದ್ದೀರಿ. ಲಕ್ಸುರಿ ವಸ್ತುಗಳನ್ನು ಬಿಗ್ ಬಾಸ್ ವಾಪಸ್ ಕೊಡುವುದಕ್ಕೆ ಪ್ರಯತ್ನ ಪಡುತ್ತದೆ ಎಂದು ತಿಳಿಸಿದೆ. ಪ್ರಯತ್ನ ಎಂಬ ಪದ ಕೇಳಿ ಮನೆ ಮಂದಿ ಮತ್ತೆ ಮನವಿ ಮಾಡಿಕೊಂಡಿದ್ದಾರೆ. ಆಟವನ್ನೇ ಆಡದೆ ಇದ್ದರು ಬಿಗ್ ಬಾಸ್ ಸಿಂಪತಿ ತೋರಿಸಿ, ಅವಕಾಶ ನೀಡಿದೆ. ಇನ್ನು ಲಕ್ಸುರಿ ವಸ್ತುಗಳನ್ನು ನೀಡದೆ ಇರುತ್ತದೆಯೇ..?


Click it and Unblock the Notifications











