ಮತ್ತೆ ಕಳಪೆ ಪಟ್ಟ ಹೊತ್ತು ಜೈಲಿಗೆ ಹೊರಟ ವರ್ತೂರು ಸಂತೋಷ್: ಗೆದ್ದೇ ತೀರುತ್ತೇನೆ ಎಂದು ಸವಾಲು ಹಾಕಿದ ಹಳ್ಳಿಕಾರ್!

By Shruthi Harishgowda

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ರವರು ಪದೇ ಪದೇ ಜನರ ಮನಸ್ಸನ್ನು ಗೆಲ್ಲುತ್ತಾ ಬಂದಿದ್ದಾರೆ. ಅದು ಅವರು ಆಡುವ ಹಳ್ಳಿಯ ಭಾಷೆಗೆ ಆಗಲಿ ಅಥವಾ ಅವರು ನಡೆದುಕೊಳ್ಳುವ ರೀತಿಗೆ ಆಗಲಿ, ವರ್ತೂರು ಸಂತೋಷ್ ಅವರು ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಪ್ರತಿ ಬಾರಿ ಎಲಿಮಿನೇಟ್ ಆದಾಗ ವರ್ತೂರು ಸಂತೋಷ್ ಅವರನ್ನು ಅವರ ಅಭಿಮಾನಿಗಳು ಉಳಿಸಿಕೊಂಡು ಬಂದಿದ್ದಾರೆ. ಕೆಲವೊಮ್ಮೆ 30 ಲಕ್ಷ ಮತಗಳನ್ನು ನೀಡಿ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಸೇಫ್ ಆದ ದಿನವೂ ಕೂಡ ಇದೆ. ಇಂತಹ ವರ್ತೂರು ಸಂತೋಷ್ ಮನೆಯಲ್ಲಿ ಸ್ಲೋ ಆಗಿದ್ದಾರೆ ಎಂಬ ಕಾರಣಕ್ಕೆ ಕಳಪೆ ಪಟ್ಟ ಹೊತ್ತುಕೊಂಡಿದ್ದಾರೆ.

ಬಿಗ್ ಬಾಸ್ ಈಗ 82 ದಿನಗಳನ್ನು ಪೂರೈಸಿದ್ದು ಪ್ರತಿದಿನವೂ ಕೂಡ ಬಿಗ್ ಬಾಸ್ ಮನೆಯಲ್ಲಿ ರೋಚಕ ತಿರುವುಗಳು ಪಡೆದುಕೊಳ್ಳುತ್ತಿವೆ. ಈಗ ಗಲಾಟೆ ಎಲ್ಲವೂ ಕಡಿಮೆಯಾಗಿದ್ದು ಎಲ್ಲರೂ ಕೂಡ ಸ್ನೇಹಿತರಂತೆ ಇದ್ದಾರೆ. ಇನ್ನೇನು ಹೋಗುವ 20 ದಿನಗಳಲ್ಲಿ ಯಾಕೆ ಗಲಾಟೆಯ ಉಸಾಬರಿ ಎಂಬುವುದು ಆಟಗಾರರ ಬುದ್ಧಿವಂತಿಕೆಯಾಗಿರಬಹುದು. ವರ್ತೂರು ಸಂತೋಷ್ ಕೂಡ ಜನರೇ ನನ್ನನ್ನ ಗೆಲ್ಲಿಸುತ್ತಿರುವುದು ಎಂಬ ಮನೋಭಾವನೆ ಹೊಂದಿದ್ದು ತಲೆಕೆಡಿಸಿಕೊಳ್ಳುತ್ತಿಲ್ಲ. ಎಲ್ಲದಕ್ಕೂ ವೀಕ್ಷಕರು ಕಾರಣ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳುತ್ತಿರುವುದು ಇತರ ಕಂಟೆಸ್ಟೆಂಟ್‌ಗಳಿಗೆ ಇಷ್ಟವಾಗುತ್ತಿಲ್ಲ ಇದಕ್ಕಾಗಿ ಕಳಪೆ ಪಟ್ಟ ಕೊಟ್ಟಿದ್ದಾರೆ.

Bigg Boss Kannada Season 10: Vartur Santosh Gets Kalape On 11th week

ಬಿಗ್ ಬಾಸ್ ಈ ಬಾರಿ ವಿನೂತನ ರೀತಿಯಲ್ಲಿ ಕಳಪೆ ಪಟ್ಟವನ್ನು ಕೊಡಬೇಕು ಎಂದು ಘೋಷಣೆ ಮಾಡಿದ್ದಾರೆ. ಮನೆಯಲ್ಲಿ ಇರುವ ಸದಸ್ಯರಲ್ಲಿ ಯಾರು ಸ್ಲೋ ಆಗಿ ಇದ್ದಾರೆ ಅಂತವರಿಗೆ ಕಳಪೆ ಪಟ್ಟವನ್ನು ನೀಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಎಲ್ಲಾ ಸ್ಪರ್ಧಿಗಳು ಕೂಡ ವರ್ತೂರು ಸಂತೋಷ್ ಹೆಸರನ್ನೇ ತೆಗೆದುಕೊಂಡಿದ್ದಾರೆ. ಎಲ್ಲ ತಮ್ಮ ಹೆಸರನ್ನು ತಗೆದುಕೊಂಡಿರುವುದು ವರ್ತೂರು ಸಂತೋಷ್ ಅವರಿಗೆ ಇಷ್ಟವಾಗಿಲ್ಲ. ಹೀಗಾಗಿ ನಾನು ಕಪ್ ತಗೆದುಕೊಂಡು ಹೋಗುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಎರಡನೇ ಬಾರಿಗೆ ಜೈಲಿಗೆ ಹೋದ ವರ್ತೂರು

ಕಳಪೆ ಕೊಟ್ಟ ಸಂಗೀತಾ, ಕಾರ್ತಿಕ್, ನಮ್ರತಾ

ಎರಡನೇ ಬಾರಿಗೆ ವರ್ತೂರು ಸಂತೋಷ್ ಜೈಲಿಗೆ ಹೋಗಿದ್ದಾರೆ. ಮೊದಲು ಸಂಗೀತಾ ಬಂದು ವರ್ತೂರು ಸಂತೋಷ್ ಯಾಕೋ ಸ್ಲೋ ಆಗಿ ಆಟ ಆಡುತ್ತಿದ್ದಾರೆ ಎಂದು ಅನಿಸಿದೆ ಎಂದಿದ್ದಾರೆ. ನಮ್ರತಾ ಕೂಡ ವರ್ತೂರು ಸಂತೋಷ್ ಕ್ಯಾಪ್ಟನ್ಸಿ ಟಾಸ್ಕ್‌ನ್ನು ಲೈಟಾಗಿ ತೆಗೆದುಕೊಂಡರು ಎಂದು ನನಗೆ ಅನಿಸುತ್ತಿದೆ ಎಂದಿದ್ದಾರೆ. ಇದಕ್ಕೆ ವರ್ತೂರು ಸಂತೋಷ್ ರವರು ಅಲ್ಲಿಯೇ ಉತ್ತರವನ್ನು ನೀಡಿದ್ದಾರೆ. ಕ್ಯಾಪ್ಟನ್ ಆಗುವುದು ಬಿಡುವುದು ಅವರವರ ವೈಯಕ್ತಿಕ ಎಂದು ಹೇಳಿದ್ದಾರೆ.

Bigg Boss Kannada Season 10: Vartur Santosh Gets Kalape On 11th week

ಕಾರ್ತಿಕ್ ಬಂದವರೇ ವರ್ತೂರು ಸಂತೋಷ್ ಅವರು ಪ್ರತಿಯೊಂದು ಮಾತಿಗೂ ಕೂಡ ಜನಕ್ಕೆ ಉತ್ತರ ಕೊಟ್ಟರೆ ಸಾಕು ಎಂಬ ಮಾತು ಆಡುತ್ತಾರೆ ಎಂದಿದ್ದಾರೆ. ಇದಕ್ಕೆ ವರ್ತೂರು ಸಂತೋಷ್ ನನ್ನನ್ನ ಉಳಿಸುತ್ತಿರುವವರು ಜನರು ಅದಕ್ಕಾಗಿ ನಾನು ಜನರಿಗೆ ಉತ್ತರ ಕೊಟ್ಟರೆ ಸಾಕು ಎಂದು ಕೊಂಡಿದ್ದೇನೆ ಇಲ್ಲಿವರೆಗೂ ಮತಗಳನ್ನ ನೀಡಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರ ವಿರುದ್ಧ ವರ್ತೂರು ಸಂತೋಷ್ ತಿರುಗಿ ಬಿದ್ದಿದ್ದಾರೆ ಎಂಬುದಂತು ಸ್ಪಷ್ಟ.

ಗೆದ್ದೆ ಹೋಗುತ್ತೇನೆ ಎಂದು ಸವಾಲು ಹಾಕಿದ ವರ್ತೂರು

ವರ್ತೂರು ಸಂತೋಷ್ ತಮಗೆ ಕಳಪೆ ಪಟ್ಟ ಕಟ್ಟಿದ್ದಕ್ಕೆ ಕೋಪಗೊಂಡಿದ್ದಾರೆ. ಇದೇ ವೇಳೆ ನಾನು ಈ ಮನೆಯಲ್ಲಿ ಇರುವ ಯಾರಿಗೂ ಕೂಡ ಹೆದರುವುದಿಲ್ಲ. ನಾನು ಗೆದ್ದೇ ಗೆಲ್ಲುತ್ತೇನೆ ಎಂದಿದ್ದಾರೆ. ಹೊರಗೆ ಇರುವ ಜನರು ನನ್ನನ್ನ ಗೆಲ್ಲಿಸಿಕೊಂಡು ಬರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಜೈಲಿಗೆ ಹೋಗಿದ್ದಾಗ ವರ್ತೂರು ಸಂತೋಷ್ ನನಗೆ ಜೈಲಿನ ಸಹವಾಸವೇ ಬೇಡ ಎಂಬ ಮಾತಯ ಆಡಿದ್ದರು, ಈಗ ಜೈಲಿಗೆ ಹೋಗಿದ್ದು ಯಾವ ರೀತಿ ಇರುತ್ತಾರೆ ನೋಡಬೇಕಾಗಿದೆ.

More from Filmibeat

English summary
Colors kannada Bigg Boss: Varthur Santhosh gets kalape.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X