BBK10: ಮಿನಿಟ್ಸ್ ಗೇಮ್‌ನಲ್ಲಿ ಗೆದ್ದು ಕಡೆಗೂ ಕ್ಯಾಪ್ಟನ್ ಆದ ಹಳ್ಳಿಕಾರ್ ವರ್ತೂರ್ ಸಂತೋಷ್
ಶುಕ್ರವಾರ ಬಂತು ಅಂದರೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಅಲರ್ಟ್ ಆಗಿ ಬಿಡುತ್ತಾರೆ. ತುಂಬಾ ಮುಖ್ಯವಾದ ಟಾಸ್ಕ್‌ಗಳನ್ನು ಬಿಗ್ ಬಾಸ್ ನೀಡುತ್ತಾರೆ. ಅದರಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಬಹಳ ಮುಖ್ಯವಾಗುತ್ತದೆ. ಕೆಲವೊಬ್ಬರಿಗೆ ಮಾತ್ರ ಎರಡೆರಡು ಬಾರಿ ಕ್ಯಾಪ್ಟನ್ ಆಗುವುದಕ್ಕೆ ಅವಕಾಶ ಸಿಗುವುದು. ಆ ಅದೃಷ್ಟ ಸ್ನೇಹಿತ್ ಹಾಗೂ ನೀತೂಗೆ ಸಿಕ್ಕಿತ್ತು.
ಕಳಪೆ ಪಟ್ಟ ಕೂಡ ಕೆಲವೊಂದು ಸಲ ಒಬ್ಬರಿಗೆ ಎರಡೆರಡು ಬಾರಿ ಬಂದು ಬಿಡುತ್ತದೆ. ಅದೇ ರೀತಿ ಮುಂದುವರೆದರೆ ಕಳಪೆ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಬದಲಾಯಿಸಿಕೊಂಡರೆ ಉತ್ತಮವೂ ಸಿಗುತ್ತದೆ. ಈ ವಾರ ವೈಲ್ಡ್ ಕಾರ್ಡ್ ಎಂಟ್ರಿಯಿಂದ ಬಂದ ಪವಿ ಹಾಗೂ ಅವಿನಾಶ್ ಇಬ್ಬರು ಉತ್ತಮ ತೆಗೆದುಕೊಂಡಿದ್ದಾರೆ. ಕಳಪೆ ಕಾರ್ತಿಕ್ ಆದರೆ, ಕ್ಯಾಪ್ಟನ್ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಆಗಿದ್ದಾರೆ.

ಕ್ಯಾಪ್ಟನ್ ಆಗಲು ರೇಸ್
ಇವತ್ತು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಲು ಎಲ್ಲರೂ ರೇಸ್‌ನಲ್ಲಿಯೇ ಇದ್ದರು. ಆದರೆ, ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿದ್ದ ಸ್ನೇಹಿತ್ ಕಡೆಯಿಂದ ರೇಸ್‌ನಲ್ಲಿದ್ದ ಕೆಲವರನ್ನು ಉರುಳಿಸಿತ್ತು. ಒಂದೊಂದು ಬಾರಿ ಎರಡು ಟೀಂನಿಂದ ಅರ್ಹರಲ್ಲದವರನ್ನು ತೆಗೆಯಬೇಕಿತ್ತು. ಹೀಗೆ ಮಾಡಿ ಮಾಡಿ ಕಡೆಗೆ ನಾಲ್ಕು ಜನ ಕ್ಯಾಪ್ಟನ್ ರೇಸ್‌ನಲ್ಲಿ ಉಳಿದರು. ಸಿರಿ, ಮೈಕೆಲ್, ವರ್ತೂರು ಸಂತೋಷ್ ಹಾಗೂ ಅವಿನಾಶ್.
ಮಿನಿಟ್ಸ್ ಗೇಮ್ಸ್ ನೀಡಿದ ಬಿಗ್ ಬಾಸ್
13 ನಿಮಿಷ ಏಣಿಸಬೇಕು. ಚೇರ್ ಮೇಲೆ ಸದಸ್ಯರು ಕುಳಿತುಕೊಳ್ಳುತ್ತಾರೆ. ಅವರನ್ನು ತಿರುಗಿಸಬೇಕು. ನಂಬರ್ ಎಣಿಸುವಾಗ ಮನೆ ಮಂದಿ ಡಿಸ್ಟರ್ಬ್ ಮಾಡಬಹುದು. ಅವರು ಸರಿಯಾಗಿ ಕೌಂಟ್ ಮಾಡದ ರೀತಿ ನೋಡಿಕೊಳ್ಳಬೇಕು. ಅದನ್ನು ಮೀರಿ ಹದಿಮೂರು ನಿಮಿಷದ ಆಸುಪಾಸಿನಲ್ಲಿ ಕೌಂಟ್ ಮಾಡಿದರೆ ಅವರು ವಿನ್ ಆಗುತ್ತಾರೆ. ಈ ವಾರದ ಕ್ಯಾಪ್ಟನ್ ಆಗುತ್ತಾರೆ.

ಯಾರು ಎಷ್ಟೆಲ್ಲಾ ನಿಮಿಷ ಎಣಿಸಿದರು..?
ಬಿಗ್ ಬಾಸ್ ಕೊಟ್ಟ ಈ ಟಾಸ್ಕ್‌ನಲ್ಲಿ ಅವಿನಾಶ್ 9 ನಿಮಿಷ ಎಣಿಸಿದರು. ಮೈಕೆಲ್, 15.15 ನಿಮಿಷ, ವರ್ತೂರು ಸಂತೋಷ್ 12.13 ನಿಮಿಷ, ಸಿರಿ 19 ನಿಮಿಷ ಎಣಿಸಿದ್ದಾರೆ. ಸಿರಿ ಎಣಿಸಿದ್ದನ್ನು ನೋಡಿ ತುಕಾಲಿ ಸಂತೋಷ್ ರೇಗಿಸಿದ್ದರು. ಬನ್ನಿ ಬನ್ನಿ 20 ನಿಮಿಷ ಎಣಿಸಿದ್ದೀರಾ ಎಂದಿದ್ದರು. ಕಡೆಗೂ ಸಿರಿ ಅವರು 19 ನಿಮಿಷ ಎಣಿಸಿದ್ದರು. ಮನೆಯವರು ಸಾಕಷ್ಟು ಡಿಸ್ಟರ್ಬ್ ಮಾಡಿದ್ದರು. ಹೀಗಾಗಿ ಎಲ್ಲರೂ ಹದಿಮೂರು ನಿಮಿಷ ಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿಯೇ ಎಣಿಸಿದ್ದಾರೆ. ಆದರೆ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ವರ್ತೂರು ಸಂತೋಷ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ವರ್ತೂರು ಸಂತೋಷ್‌ಗೆ ಸಿಕ್ತು ಸ್ಪೆಷಲ್ ಗಿಫ್ಟ್
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದವರಿಗೆ ಸ್ಪೆಷಲ್ ಗಿಫ್ಟ್ ಒಂದು ಸಿಗುತ್ತದೆ. ಕ್ಯಾಪ್ಟನ್ ಆದರೆ ಅವರ ಸ್ವೀಟೆಸ್ಟ್ ಮೆಮೊರಿ ಎನಿಸುವಂತ ಫೋಟೋಗಳು ಗಿಫ್ಟ್ ಆಗಿ ಬರುತ್ತದೆ. ಬಿಗ್ ಬಾಸ್ ಅಭಿನಂದನೆ ಸಲ್ಲಿಸಿ, ಗಿಫ್ಟ್ ನೀಡಿದ್ದಾರೆ. ಈ ಗಿಫ್ಟ್ ಬಂದ ಕೂಡಲೇ ವರ್ತೂರು ಸಂತೋಷ್ ಫುಲ್ ಖುಷಿಯಾಗಿದ್ದಾರೆ. ಮನೆಯವರೆಲ್ಲಾ ಗೆಸ್ ಮಾಡಲು ಹೇಳಿದಾಗ, ಎತ್ತುಗಳು ಬಂದಿದೆಯಾ.. ನಾನು ಚಿಕ್ಕ ಮಗು ಅಪ್ಪ ಎತ್ತುಕೊಂಡಿರುವುದು. ಅಮ್ಮ ನಂದು ಎಂದಿದ್ದಾರೆ. ಕಡೆಗೆ ಫೋಟೋ ನೋಡಿದ ಸಂತೋಷ್, ನಮ್ ಅಪ್ಪ ನನ್ ಥರನೇ ಇದಾರಲ್ಲ ಎಂದಿದ್ದಾರೆ. ಆಗ ತುಕಾಲಿ, ನಿನ್ ಥರ ಅಲ್ಲ ಅವರ ಥರ ನೀನು ಅಂತ ಕರೆಕ್ಷನ್ ಮಾಡಿದ್ದಾರೆ.


Click it and Unblock the Notifications











