ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಭವಿಷ್ಯ ಕೇಳಿ ನಡುಗಿ ಹೋದ್ರಾ ಬಿಗ್ ಬಾಸ್ ಸ್ಪರ್ಧಿಗಳು..!?

By Shruthi Harishgowda

ಬಿಗ್ ಬಾಸ್ ಸೀಸನ್ 10 ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಂಡು ಸಾಗುತ್ತಿದೆ. ಇನ್ಮುಂದೆ ಯಾರು ಯಾವ ಸ್ಟಾಟರ್ಜಿ ಮಾಡುತ್ತಾರೆ ಎಂಬುದು ಮಾತ್ರ ಇನ್ನೂ ತಿಳಿಯುತ್ತಿಲ್ಲ. ಸೆಮಿಫೈನಲ್ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ. ‌ಮೊದಲು ಸಂಗೀತಾ ಹಾಗೂ ವಿನಯ್, ನಮ್ರತಾ ಮೂವರು ವಿರೋಧಿಗಳಂತೆ ಇದ್ದರು. ‌ಈಗ ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಂಡು ಆಟವಾಡುತ್ತಿರುವಂತೆ ಕಾಣುತ್ತಿದೆ. ಇದೆಲ್ಲವನ್ನೂ ಕೂಡ ಆಟದಲ್ಲಿ, ನಾಮಿನೇಟ್ ವಿಷಯದಲ್ಲಿ ಗಮನಿಸಬಹುದು. ನಮ್ರತಾ ಹಾಗೂ ಸಂಗೀತಾ ಇಬ್ಬರು ಕೂಡ ಒಬ್ಬರನ್ನೊಬ್ಬರು ನಾಮಿನೇಟ್ ಮಾಡಿಲ್ಲ.‌

ಕಾರ್ತಿಕ್ ಹಾಗೂ ತನಿಷಾ ಇಬ್ಬರು ಮೊದಲಿನಿಂದಲೂ ಹೇಗಿದ್ದರೋ ಹಾಗೇ ಇದ್ದಾರೆ.‌ ಈಗ ತನಿಷಾ ತಮ್ಮನ್ನು ಇತರ ಸ್ಪರ್ಧಿಗಳು ತುಳಿಯುತ್ತಾ ಇದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಮೈಕಲ್ ತನ್ನ ಧೋರಣೆಯನ್ನು ಬದಲು ಮಾಡಿಕೊಳ್ಳುತ್ತಲೇ ಇಲ್ಲ ಬದಲಾಗಿ ದುರಹಂಕಾರದ ಮಾತುಗಳನ್ನೇ ಆಡುತ್ತಿದ್ದಾರೆ. ಈಗ ಒಂಬತ್ತು ಮಂದಿ ಸದಸ್ಯರು ಮಾತ್ರ ಉಳಿದುಕೊಂಡಿದ್ದು ಎಲ್ಲರ ಗಮನ ಗೆಲುವಿನತ್ತ ಇದೆ. ಆದರೆ ಯಾರು ಫೈನಲ್‌ಗೆ ಬರುತ್ತಾರೆ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಇದೆಲ್ಲವಕ್ಕೂ ಕೂಡ ವೀಕ್ಷಕರು ನೀಡುವ ಮತಗಳಂತೆ ನಿರ್ಣಾಯಕ ಪಾತ್ರ ವಹಿಸುತ್ತವೆ.

Bigg Boss Kannada Season 10: Vidya Shankarananda Saraswathi Guruji in Bigg boss house

ಸದ್ಯಕ್ಕೆ ಬಿಗ್ ಬಾಸ್ ಮನೆಯ ಸದಸ್ಯರು ಹೊಸ ವರ್ಷದ ಸಂಭ್ರಮದಲ್ಲಿ ಇದ್ದಾರೆ. ಈಗ ಮನೆಗೆ ವಿಶೇಷ ಅತಿಥಿಯಾಗಿ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಂದಿದ್ದಾರೆ. ಮನೆಗೆ ಬಂದ ಗುರೂಜಿಯನ್ನು ಮನೆಯ ಎಲ್ಲಾ ಸದಸ್ಯರು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಅವರು ಮನೆಯಲ್ಲಿ ಇರುವ ದೇವರ ವಿಗ್ರಹಕ್ಕೆ ಪೂಜೆಯನ್ನ ಸಲ್ಲಿಸಿ ಮನೆಯ ಎಲ್ಲಾ ಸದಸ್ಯರಿಗೂ ಕೂಡ ಮಂಗಳಾರತಿಯನ್ನು ನೀಡಿ ಶುಭ ಕೋರಿದ್ದಾರೆ. ಮೊದಲೇ ಅವರು ಭವಿಷ್ಯ ಹೇಳುವುದರಲ್ಲಿ ಪ್ರಸಿದ್ಧಿ ಪಡೆದಿದ್ದು ಮನೆಯ ಸದಸ್ಯರ ಭವಿಷ್ಯ ತಿಳಿಸಿದ್ದಾರೆ.

ಮನೆಯ ಸದಸ್ಯರ ಭವಿಷ್ಯ ಹೇಳಿದ ಗುರೂಜಿ

ನಮ್ರತಾ ಬಾಳಲ್ಲಿ ಹೊಸ ವ್ಯಕ್ತಿಯ ಆಗಮನವಾಗುತ್ತಂತೆ..!?

ಬಿಗ್ ಬಾಸ್ ಮನೆಗೆ ಬಂದಿರುವ ಗುರೂಜಿ ಅವರು ಮನೆಯ ಎಲ್ಲಾ ಸದಸ್ಯರ ಭವಿಷ್ಯ ಹೇಳಿದ್ದಾರೆ. ಕಲರ್ಸ್ ಕನ್ನಡದವರು ಬಿಟ್ಟಿರುವ ಪ್ರೋಮೋದಲ್ಲಿ ಕೇವಲ ಮೂರು ಮಂದಿಯ ಭವಿಷ್ಯ ಮಾತ್ರ ಕಾಣುತ್ತಿದೆ. ಅದರಲ್ಲಿ ನಮ್ರತಾ, ವರ್ತೂರು ಸಂತೋಷ್ ಹಾಗೂ ಪ್ರತಾಪ್ ಅವರ ಭವಿಷ್ಯ ಹೇಳಿರುವಂತೆ ಮಾತ್ರ ತೋರಿಸಲಾಗಿದ್ದು, ಮಿಕ್ಕ ಸ್ಪರ್ದಿಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ವರ್ತೂರು ಸಂತೋಷ್ ಕಾಲಿನಲ್ಲಿ ಟ್ಯಾಟು ಒಂದನ್ನು ಹಾಕಿಸಿಕೊಂಡಿದ್ದು ಅದರಿಂದಲೇ ಸಾಕಷ್ಟು ನೋವು, ಅವಮಾನಗಳನ್ನು ಅನುಭವಿಸಿರುವುದಾಗಿ ಗುರೂಜಿ ಅವರು ವರ್ತೂರು ಸಂತೋಷ್‌ಗೆ ತಿಳಿಸಿದ್ದಾರೆ.

Bigg Boss Kannada Season 10: Vidya Shankarananda Saraswathi Guruji in Bigg boss house

ಇದನ್ನು ವರ್ತೂರು ಸಂತೋಷ್ ಹೌದು ಸ್ವಾಮಿ ಎಂದು ಒಪ್ಪಿಕೊಂಡಿದ್ದಾರೆ. ವರ್ತೂರು ನಂತರ ನಮ್ರತಾ ಗುರೂಜಿ ಮುಂದೆ ಬಂದು ಕುಳಿತುಕೊಂಡಿದ್ದು ನಿಮ್ಮ ಬಾಳಿನಲ್ಲಿ ಬೆಳಕಾಗುತ್ತದೆ. ಬಾಳಿಗೆ ಹೊಸ ವ್ಯಕ್ತಿಯ ಆಗಮನವಾಗುತ್ತದೆ ಎಂದು ಗುರೂಜಿ ಹೇಳಿದ್ದಾರೆ. ಗುರೂಜಿ ಮಾತು ನಮ್ರತಾಗೆ ಖುಷಿಯನ್ನು ತರಿಸಿದೆ. ಯಾರಪ್ಪ ನನ್ನ ಬಾಳಿಗೆ ಬೆಳಕು ಆಗುವವರು ಹೊಸ ವ್ಯಕ್ತಿ ಎಂದು ನಮ್ರತಾ ಯೋಚನೆ ಮಾಡುವಂತೆ ಆಗಿದೆ. ಸದ್ಯಕ್ಕೆ ಆಗುವುದೆಲ್ಲಾ ಒಳ್ಳೆಯದೇ ಆಗಲಿ ಎಂಬುವುದು ಮಾತ್ರ ನಮ್ರತಾ ಮನಸ್ಸಿನಲ್ಲಿ ಇದೆ.

ಮನೆಯವರಿಂದ ದೂರವೇ ಇರಬೇಕಂತೆ ಪ್ರತಾಪ್

ಗುರೂಜಿ ಮಾತು ಕೇಳಿ ಡ್ರೋನ್ ಕಣ್ಣೀರು

ಪ್ರತಾಪ್ ಈಗಾಗಲೇ ಮನೆಯವರಿಂದ ದೂರವೇ ಇದ್ದಾ.ರೆ ಅವರ ಅಪ್ಪ ಅಮ್ಮ ಬಿಗ್ ಬಾಸ್ ಮನೆಗೆ ಬಂದು ನೀನು ಶೋ ಮುಗಿದ ಕೂಡಲೇ ಮನೆಗೆ ಬರಬೇಕು ಎಂದು ಹೇಳಿ ಹೋಗಿದ್ದಾರೆ. ಇದಕ್ಕೆ ಪ್ರತಾಪ್ ಆಯ್ತು ಎಂದು ಹೇಳಿದ್ದಾರೆ.‌ ಆದರೆ ಈಗ ಬಿಗ್ ಬಾಸ್ ಮನೆಗೆ ಬಂದಿರುವ ಗುರೂಜಿ ಪ್ರತಾಪ್ ಬಂದ ತಕ್ಷಣವೇ ಈ ವಿಚಾರವನ್ನು ಹೇಳಲು ನನಗೆ ಸಂಕಟವಾಗುತ್ತದೆ. ನೀನು ಕುಟುಂಬದಿಂದ ದೂರವೇ ಇರುವುದೇ ಉತ್ತಮ. ಕುಟುಂಬದಿಂದ ದೂರವಿದ್ದು ದೂಪವಾಗುತ್ತಿಯೋ ಅಥವಾ ಹತ್ತಿರಕ್ಕೆ ಹೋಗಿ ಹೇಸಿಗೆ ಆಗುತ್ತಿಯೋ ನೀನೇ ತೀರ್ಮಾನ ತೆಗೆದುಕೋ ಎಂದು ಹೇಳಿದ್ದಾರೆ.

Bigg Boss Kannada Season 10: Vidya Shankarananda Saraswathi Guruji in Bigg boss house

ಇನ್ನೂ ಮುಂದೆ ಕೂಡ ಮನೆಯವರಿಂದ ದೂರವೇ ಇರಬೇಕು ಎಂಬ ಮಾತನ್ನು ಕೇಳಿ ಪ್ರತಾಪ್ ಕಣ್ಣಲ್ಲಿ ನೀರು ಬಂದಿದೆ. ಮೊದಲೇ ತಂದೆ ತಾಯಿಯಿಂದ ದೂರವಿದ್ದು ಸಾಕಷ್ಟು ನೋವು ಅನುಭವಿಸಿರುವ ಪ್ರತಾಪ್ ಮುಂದೆ ಗುರೂಜಿ ಹೇಳಿದಂತೆ ಕೇಳುತ್ತಾರಾ? ಅಥವಾ ತಂದೆ ತಾಯಿಯನ್ನ ದೂರದಿಂದಲೇ ನೋಡಿ ಖುಷಿಪಡುತ್ತಾರಾ ಅದು ಪ್ರತಾಪ್‌ಗೆ ಬಿಟ್ಟಿದ್ದಾಗಿದೆ.

More from Filmibeat

English summary
BBK 10: Vidya Shankarananda Saraswathi Guruji in bigg boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X