BBK10: ಸಂಗೀತಾ ಭಾವನೆಗಳ ಜೊತೆಗೆ ಆಟ ಆಡುತ್ತಿದ್ದಾರಾ ವಿನಯ್ ಅಂಡ್ ನಮ್ರತಾ..? ಪಾಪ ಸಂಗೀತಾ..!
ಸಂಗೀತಾರನ್ನು ನೋಡುತ್ತಿದ್ದರೆ ಪಾಪ ಎನಿಸಿದೆ ಇರುವುದಿಲ್ಲ. ತನಿಷಾ ಮತ್ತು ಕಾರ್ತಿಕ್ ಜೊತೆಗೆ ಇದ್ದಾಗ, ಖುಷಿಯಾಗಿಯೇ ಇದ್ದರು. ಆ ಇಬ್ಬರು ಸಂಗೀತಾ ಸ್ನೇಹವನ್ನು ಲಾಭವಾಗಿ ಎಂದಿಗೂ ನೋಡಿದವರಂತೆ ಕಾಣಲಿಲ್ಲ. ಆದರೆ, ಸಂಗೀತಾ ಮಾತ್ರ ಕೊಂಚ ಸ್ವಾರ್ಥದಿಂದ ಯೋಚನೆ ಮಾಡಿ, ಅಲ್ಲಿಂದ ದೂರವಾಗಿಯೇ ಬಿಟ್ಟರು.
ಆ ನೋವು ಈಗ ಸಂಗೀತಾ ಅವರ ನಡೆಯನ್ನೇ ಬದಲಾಯಿಸಿದೆ. ಬೇಡದ ಮಾತುಗಳನ್ನೇ ಆಡುತ್ತಿದ್ದಾರೆ. ಇಷ್ಟು ದಿನ ಅರ್ಥ ಮಾಡಿಕೊಂಡಿದ್ದ ಜನರೇ ಈಗ ನಾಟಕೀಯವಾಗಿ ಕಾಣುತ್ತಿದ್ದಾರೆ. ಇದನ್ನು ಇನ್ಫ್ಯೂಯನ್ಸ್ ಅಂತ ಜನ ಹೇಳ್ತಿದ್ದಾರೆ. ಎಲ್ಲರ ಮನಸ್ಸನ್ನು ಗೆದ್ದಿದ್ದ ಸಂಗೀತಾ ಬರಬರುತ್ತಾ ಹಿಂಗ್ಯಾಕೆ ಆದ್ರೂ ಎಂಬ ಬೇಸರ ನೋಡುಗರದ್ದಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಂಗೀತಾ ಬಗ್ಗೆ ಅಯ್ಯೋ ಪಾಪ ಎನ್ನುತ್ತಿದ್ದಾರೆ.

ಸಂಗೀತಾ ಮನಸ್ಸು ಕೆಡಿಸುತ್ತಿದ್ದಾರಾ ನಮ್ರತಾ?
ಯಾವುದೋ ಮನ:ಸ್ತಾಪದಿಂದ ಸಂಗೀತಾ ಹಳೆ ಟೀಂ ಬಿಟ್ಟು ದೂರ ಬಂದಿದ್ದಾರೆ. ವಾಪಾಸ್ ಆ ಫ್ರೆಂಡ್‌ಶಿಪ್ ಬೇಕು ಎಂದರೂ, ಮನಸ್ಸನ್ನು ಗಟ್ಟಿ ಮಾಡಿಕೊಂಡು ಆಟ ಆಡುತ್ತಿದ್ದಾರೆ. ಬಿಗ್ ಬಾಸ್ ಬಳಿ ಮನಸ್ಸಿನ ಇಕ್ಕಟ್ಟನ್ನು ಹೇಳಿಕೊಂಡ ಬಳಿಕ, ಬಿಗ್ ಬಾಸ್ ಧೈರ್ಯ ತುಂಬಿರಬೇಕು. ಅದಕ್ಕೆ ಕಾರ್ತಿಕ್ ಮುಂದೆ ಬಂದರೂ, ನೋಡದೆ ಇರುವಂತೆ ಸಂಗೀತಾ ನಟಿಸುತ್ತಿದ್ದಾರೆ. ಇದನ್ನೇ ನಮ್ರತಾ ಅಡ್ವಾಂಟೇಜ್ ತೆಗೆದುಕೊಂಡರಾ ? ತನಿಷಾ ಬಗ್ಗೆ ಕೂಡ ನಮ್ರತಾ ಮಾತನಾಡಿದ್ದರು. ನಿಮ್ಮ ಫ್ರೆಂಡ್ ನಿಮ್ಮ ಫ್ರೆಂಡ್ ಅಂತ ಹೇಳುತ್ತಲೇ ಇದ್ದಾರೆ. ಈಗ ನೀವೂ ಆ ಟೀಂನಲ್ಲಿ ಇದ್ದಾಗ ಸ್ವತಂತ್ರವೇ ಇರಲಿಲ್ಲ ಅಲ್ವಾ ಎಂಬ ಪ್ರಶ್ನೆ ಕೇಳಿದ್ದಾರೆ.
ನಮ್ರತಾ ಜೊತೆಗೆ ಹೆಚ್ಚು ಕ್ಲೋಸ್
ಸಂಗೀತಾ ಹಾಗೂ ಕಾರ್ತಿಕ್ ಈಗ ದೂರ ದೂರ. ಆದರೆ, ನಮ್ರತಾ ಸಿಕ್ಕಾಪಟ್ಟೆ ಹತ್ತಿರವಾಗುತ್ತಿದ್ದಾರೆ. ಸಂಗೀತಾ ಮನಸ್ಸಿನ ಒಳಗೆ ಅಡಗಿರುವ ಕೆಂಡಕ್ಕೆ ಮೆಲ್ಲನೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಇದು ಸಂಗೀತಾ ಮನಸ್ಸಿನ ಮೇಲೆ ಸ್ಟ್ರಾಂಗ್ ಆಗಿಯೇ ಪರಿಣಾಮ ಬೀರುತ್ತಿದೆ. ಹೀಗಾಗಿ ನಮ್ರತಾ ಸಹವಾಸ ಬೇಡ ಎಂದು ಚಾರ್ಲಿ ಬೆಡಗಿಯ ಫ್ಯಾನ್ಸ್ ಸಲಹೆ ನೀಡುತ್ತಿದ್ದಾರೆ.

ತನಿಷಾ ಮತ್ತು ಸಂಗೀತಾ ಬಗ್ಗೆಯೂ ಮಾತು
ವಿನಯ್, ನಮ್ರತಾ ಮತ್ತು ಸ್ನೇಹಿತ್ ಮನೆಯಲ್ಲಿ ಕೂತು ಸಿಕ್ಕಾಪಟ್ಟೆ ಗಾಸಿಪ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸಂಗೀತಾ ದೂರವಾದ ಮೇಲೆ ಸಹಜವಾಗಿಯೇ ತನಿಷಾ ಹಾಗೂ ಕಾರ್ತೀಕ್ ಇಬ್ಬರೇ ತಮ್ಮ ಫ್ರೆಂಡ್ಶಿಪ್ ಮುಂದುವರೆಸಿದ್ದಾರೆ. ಆದರೆ ಇದನ್ನು ವ್ಯಂಗ್ಯ ಮಾಡುತ್ತಾ ಕುಳಿತಿದ್ದಾರೆ. "ತನಿಷಾಗೂ ಯಾರೂ ಇಲ್ಲ. ಬೋಡನಿಗೂ ಯಾರೂ ಇಲ್ಲ. ಅವನು ರಾಂಗ್ ಆದಾಗ ಅವಳು ಕೂಲ್ ಕೂಲ್ ಅಂತಾಳೆ. ಇವಳು ರಾಂಗ್ ಆದರೆ, ಅವನು ಕೂಲ್ ಕೂಲ್ ಎನ್ನುತ್ತಾನೆ" ಎಂದು ವ್ಯಂಗ್ಯವಾಡಿದ್ದಾರೆ.
ಸಂಗೀತಾ ಬಗ್ಗೆ ನೆಟ್ಟಿಗರು ಏನಂದ್ರು?
ಸಂಗೀತಾಗೆ ವಿನಯ್ ಅಂಡ್ ಟೀಂ ಆಡುತ್ತಿರುವ ಆಟ ಗಮನಕ್ಕೆ ಬರುತ್ತಿಲ್ಲ. ಸಂಪೂರ್ಣವಾಗಿ ನಂಬಿದ್ದಾರೆ. ಒಬ್ಬ ವ್ಯಕ್ತಿಯ ಮೇಲಿನ ನಂಬಿಕೆ ಸುಳ್ಳಾದಾಗ, ಅದೇ ವ್ಯಕ್ತಿಯ ಬಗ್ಗೆ ಇನ್ನೊಬ್ಬ ವ್ಯಕ್ತಿ ನೆಗೆಟಿವ್ ಆಗಿ ಮಾತನಾಡಿದಾಗ ಮನಸ್ಸಿನ ಕೋಪ ಜಾಸ್ತಿಯಾಗುವುದು ಮನುಷ್ಯನ ಸೈಕಾಲಜಿ. ಇದನ್ನ ವಿನಯ್ ಅಂಡ್ ಟೀಂ, ಸಂಗೀತಾ ವಿಚಾರದಲ್ಲಿ ಅದನ್ನೇ ಮಾಡುತ್ತಾ ಇದ್ದಾರೆ. ಇದನ್ನ ಸ್ನೇಹಿತ್ ಬಾಯಿ ಬಿಟ್ಟಿದ್ದಾರೆ. "ನೀವೂ ವಿಲನ್ ಆಗಿದ್ದಾಗ ಕಾರ್ತಿಕ್ ಹೀರೋ ಆದರು. ಇನ್ಮುಂದೆ ಆ ರೀತಿ ಆಗುವುದು ಬೇಡ" ಎಂಬ ಮಾತನ್ನ ಹೇಳಿದ್ದಾರೆ. ಇದಕ್ಕೆ ವಿನಯ್ ಕೂಡ "ಅವಳಿಗೆ ಕಾರ್ತಿಕ್ ತುಂಬಿದ ಪ್ಲೇಸ್ ಖಾಲಿ ಖಾಲಿಯಾದಂತೆ ಕಾಣಿಸುತ್ತಿದೆ" ಎಂದು ಹೇಳುವ ಮೂಲಕ ನಮ್ಮ ಟೀಂನಲ್ಲಿ ಲಾಭ ಪಡೆಯಬೇಕು ಎಂಬ ಅರ್ಥದಲ್ಲಿ ಹೇಳಿದ್ದಾರೆ.


Click it and Unblock the Notifications











