BBK10: ಬಿಗ್ ಬಾಸ್ ಅವಕಾಶ ಕೊಟ್ಟಿದ್ದೇ ತಡ ವಿನಯ್, ಸಂಗೀತಾ ಮಾತಿನ ಗುದ್ದಾಟ..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಒಂದು ವಾರಗಳ ಕಾಲ ಪ್ರಾಥಮಿಕ ಶಾಲೆಯ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಒಮ್ಮೊಮ್ಮೆ ನಾಲ್ಕು ಜನರನ್ನು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನಾಗಿ ಮಾಡಲಾಗಿತ್ತು. ಈ ಸಮಯದಲ್ಲೂ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಯಾರು ದೂರುಗಳನ್ನು ಕಡಿಮೆ ಪಡೆಯುತ್ತಾರೆ. ಯಾರು ಹೆಚ್ಚು ಸ್ಟಾರ್ ಗಳನ್ನು ಪಡೆಯುತ್ತಾರೆ ಅವರಿಗೆ ದುಬಾರಿ ಬಜೆಟ್ ಪಡೆಯುವ ಅವಕಾಶ ನೀಡಲಾಗಿದೆ. ಅದರಂತೆ ಕಾರ್ತಿಕ್ ಉತ್ತಮ ಅಧ್ಯಾಪಕನಾಗಿ ಹಾಗೂ ತುಕಾಲಿ ಸಂತೋಷ್‌ಗೆ ವಿದ್ಯಾರ್ಥಿಯಾಗಿ ಶಬ್ಬಾಶ್ ಗಿರಿ ಸಿಕ್ಕಿದೆ.

ಇದರ ನಡುವೆ ಬಿಗ್ ಬಾಸ್ ಮತ್ತೊಂದು ಅವಕಾಶ ನೀಡಿದೆ. ಪ್ರಾಥಮಿಕ ಶಾಲೆಯಲ್ಲಿ ತರಲೆ ತಮಾಷೆಯಿಂದ ಜೀವಿಸಿದ್ದೀರಿ. ತಿಳಿದೋ ತಿಳಿಯದೆಯೊ ವ್ಯಕ್ತಪಡಿಸಿದ ಮಾತುಗಳಿಂದ ನಿಮಗೆ ನೋವಾಗಿರಬಹುದು. ಆ ನೋವನ್ನು ಹೇಳಿಕೊಳ್ಳುವ ಅವಕಾಶ ಇದೆ. ಎಲ್ಲರೂ ನೋವುಗಳನ್ನು ಹಂಚಿಕೊಳ್ಳಿ ಎಂದಿದ್ದಾರೆ.

Bigg Boss Kannada Season 10 Vinay and Sangeetha talk fight

ಕಾರ್ತಿಕ್‌ಗೆ ಕ್ಲಾರಿಟಿ ಕೊಟ್ಟ ನಮ್ರತಾ

ನಮ್ರತಾ, ವಿನಯ್ ಅವರ ತಂಡ. ವಿನಯ್ ಮಾತಿನಿಂದ ಸಾಕಷ್ಟು ಇನ್ಫ್ಲೂಯೆನ್ಸ್ ಆಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಕಾರ್ತಿಕ್ ಕೂಡ ಅದನ್ನೇ ಹೇಳಿದ್ದಾರೆ. ಅದಕ್ಕೆ ನಮ್ರತಾ ಕ್ಲಾರಿಟಿ ಕೊಟ್ಟಿದ್ದಾರೆ. ತನಿಷಾ ಹೇಗೆ ಫ್ರೆಂಡೋ, ವಿನಯ್ ಹಾಗೆ ಫ್ರೆಂಡ್. ಅವರಿಂದ ಇನ್ಫೂಯೆನ್ಸ್ ಆಗಿಲ್ಲ ಎಂದಿದ್ದಾರೆ. ಇದೆ ವೇಳೆ ಪ್ರತಾಪ್ ಮಾತಿಗೂ ಪ್ರತಿಕ್ರಿಯಿಸಿದ್ದು, ವಿನಯ್ ತಂಡ ಅಂತ ಹೇಳಿದಾಗ, ವಿನಯ್ ತಂಡ ಅಂದ್ರೆ ಯಾರು. ನಾನಿಲ್ವಾ ನಿಮ್ಮ ಪ್ರಕಾರ ಎಂದು ಗೊಂದಲ ಮಾಡಿದ್ದಾರೆ.

ಜೀರೋ ಅಂದಿದ್ದಕ್ಕೆ ಕಾರ್ತಿಕ್ ಗರಂ

ಕಾರ್ತಿಕ್ ಸರದಿ ಬಂದಿದ್ದು, "ವರ್ತೂರು ಸಂತೋಷ್ ಅವರು ಜೀರೋ ಅಂತ ಹೇಳಿ ಹೆಸರು ತೆಗೆದುಕೊಂಡರು. ಅದು ನನಗೆ ಇಷ್ಟವಾಗಲಿಲ್ಲ. ಸಂಗೀತಾ ಅವರು ಎದುರಾಳಿ ತಂಡಕ್ಕೆ ಹೋದಾಗ ನಾನು ಬೇಸರ ಆಗಿದ್ನಾ? ಅದನ್ನ ನಿಮ್ಮತ್ರ ಬಂದು ಹೇಳಿದ್ನಾ? ಎಂದು ಪ್ರಶ್ನಿಸಿದರು. ನಮ್ರತಾ ಸೇಮ್ ವಿಚಾರ. ಸಂಗೀತಾ ಅವರನ್ನು ಕಾರ್ತಿಕ್ ಕಡೆಯಿಂದ ತೆಗೆದರೆ ಜೀರೋ ಅಂತ ಹೇಳಿದ್ರಿ ಎಂದು ಬೇಸರ ಹೊರ ಹಾಕಿದರು.

Bigg Boss Kannada Season 10 Vinay and Sangeetha talk fight

ಸಂಗೀತಾ ವಿರುದ್ಧ ವಿನಯ್ ಗರಂ

ವಿನಯ್ ಹಾಗೂ ಸಂಗೀತಾಗೆ ಮನೆಯಲ್ಲಿ ಯಾವಾಗಲೂ ಜಗಳವೇ ಸರಿ. ಇದೀಗ ನೋವಿನ ಬಗ್ಗೆ ಮಾತನಾಡಲು ಬಿಗ್ ಬಾಸ್ ಅವಕಾಶ ನೀಡಿದಾಗ, ಇಲ್ಲಿ ನಾನು ನನ್ನ ಕ್ಯಾರೆಕ್ಟರ್ ಸರ್ಟಿಫಿಕೆಟ್ ಇಟ್ಟಿಕೊಂಡು ತಿರುಗುವುದಕ್ಕೆ ಹೋಗಲ್ಲ. ಅಗ್ರೆಸ್ಸಿವ್ ಅಂದ್ರೆ ಅಗ್ರೆಸ್ಸಿವ್. ಆಡುವುದಕ್ಕೆ ಇಷ್ಟ ಇಲ್ಲ ಅಂದರೆ ಸೈಡಿಗೆ ಹೋಗಿ. ಸಂಗೀತಾ ಅವರಿಗೆ ನಾನು ಏನು ಮಾಡಿದ್ದೀನಿ ಗೊತ್ತಿಲ್ಲ. ಡೋರ್ ತೆಗೆದುಕೊಂಡರು ವಿನಯ. "ಹುಳ.. ಒಂದು ವಾರ ನನ್ನ ಹೆಸರು ಬಿಟ್ಟು ನಿಮ್ಮದು ಏನೇ ಇದ್ದರು ತೋರಿಸಿ. ಬೇಗ ಹುಷಾರಾಗಿ" ಎಂದಿದ್ದಾರೆ.

ವಿನಯ್ ವಿರುದ್ಧ ಸಂಗೀತಾ ಗರಂ

ಸಂಗೀತಾ ಸರದಿ ಬಂದಾಗ ವಿನಯ್ ಆಡಿದ ಮಾತುಗಳಿಗೆಲ್ಲಾ ತಿರುಗೇಟು ನೀಡಿದ್ದಾರೆ. ಕೆಲವರು ಎಷ್ಟು ದಿನ ಸಂಗೀತಾ ಸಂಗೀತಾ ಅಂತೀರಾ. ನಿಮ್ಮ ಬಗ್ಗೆ ನಾವೂ ಮಾತನಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಮ್ಮ ತಂಡದಲ್ಲಿ ನಮ್ಮ ಬಗ್ಗೆ ಮಾತನಾಡಿಕೊಳ್ಳುವುದೇ ಹೆಚ್ಚು. ಇದಕ್ಕೋಸ್ಕರ ನೀವೂ ವೈಟ್ ಮಾಡ್ತಾ ಇದ್ರಿ. ಇವತ್ತು ನಾನು ವೈಟ್ ಮಾಡ್ತಾ ಇದ್ದೆ. ನಿಮ್ಮ ಬಗ್ಗೆ ನಂಗೆ ಮಾತನಾಡುವುದಕ್ಕೆ ಇಷ್ಟವೇ ಇಲ್ಲ. ಮೈಕಲ್ ನಿಮಗೆ ಏನು ಮಾಡಿದೆ ಗುರು ಅಂದ್ರು. ನಮ್ರತಾ ನಿಮಗೆ ನಾನು ಏನು ಮಾಡಿದೆ. ಅವತ್ತು ಆ ರೀತಿ ಮಾತನಾಡಿದ್ರಿ' ಎಂದು ಬೇಸರ ಹೊರ ಹಾಕಿದ್ದಾರೆ.

More from Filmibeat

English summary
BBK about Vinay and Sangeetha talk fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X