BBK10: ತನಿಷಾ ಬಳಸಿದ್ದು 'ಥರ್ಡ್ ಕ್ಲಾಸ್' ಪದ, ವಿನಯ್ ಜಗಳ ಆಡಿದ್ದೇ ಬೇರೆ ಮಾತಿಗೆ.. ಮನೆಯಲ್ಲಿ ಏನಾಗ್ತಿದೆ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಹೊಸ ಲೋಕದಲ್ಲಿ ಕೊಟ್ಟ ಟಾಸ್ಕ್‌ಗಳು ಸಿಕ್ಕಾಪಟ್ಟೆ ಫಿಸಿಕಲಿ ಅಟ್ಯಾಕ್ ಆಗುತ್ತಿದೆ. ಇದನ್ನು ಗಮನಿಸಿದ ಬಿಗ್ ಬಾಸ್ ಆಟವನ್ನೇ ರದ್ದು ಮಾಡಿದೆ. ಈಗ ಬಿಗ್ ಬಾಸ್ ಲೋಕ ನಾರ್ಮಲ್ ಆಗಿದೆ. ಹಾಗಂತ ಶಾಂತವಾಗಿ ಏನು ಇಲ್ಲ.

ಇಂದು ಹೊಸ ಕ್ಯಾಪ್ಟನ್ ನೇಮಕ ಬೇರೆ ಆಗಬೇಕಿದೆ. ಆ ಖುಷಿ ಎಲ್ಲರಲ್ಲೂ ಇದೆ. ಈ ವಾರ ನಾನು ಕ್ಯಾಪ್ಟನ್ ಆಗಬೇಕು.. ನಾನು ಕ್ಯಾಪ್ಟನ್ ಆಗಬೇಕು ಎಂಬ ಆಸೆಯನ್ನು ಎಲ್ಲರೂ ಇಟ್ಟುಕೊಂಡಿದ್ದಾರೆ. ಆದರೆ, ಅದಕ್ಕೆ ಬಿಗ್ ಬಾಸ್ ಬೇರೆಯದ್ದೇ ಟ್ವಿಸ್ಟ್ ಇಟ್ಟಿದೆ. ಇದರ ನಡುವೆ ಮನೆಯಲ್ಲಿ ಥರ್ಡ್ ಕ್ಲಾಸ್, ಬೇವರ್ಸಿ ಜಗಳ ಜೋರಾಗಿದೆ.

Bigg Boss Kannada, Season 10 Vinay and Tanisha fight over vulgar speech

ಪ್ರೊಟೀನ್ ಶೇಕ್ ಸಿಗದಿದ್ದಾ ತನಿಷಾ ಕೋಪ

ಬಿಗ್ ಬಾಸ್ ಮನೆಯಲ್ಲಿ ಆಗಾಗ ಪ್ರೊಟೀನ್ ಶೇಕ್ ವಿಚಾರಕ್ಕೆ ಜಗಳಗಳು ನಡೆಯುತ್ತಲೇ ಇರುತ್ತವೆ. ತನಿಷಾಗೆ ಪೆಟ್ಟಾದಗಲೂ ಕಾರ್ತಿಕ್ ಹಾಗೂ ವಿನಯ್ ನಡುವೆ ಇದೆ ಪ್ರೊಟೋನ್ ಶೇಕ್ ವಿಚಾರಕ್ಕೆ ಜಗಳ ನಡೆದಿತ್ತು. ಇದೀಗ ತನಿಷಾ ಅವರಿಗೆ ಅಂತಿದ್ದ ಪ್ರೊಟೀನ್ ಶೇಕ್ ಖಾಲಿಯಾಗಿದೆ. ಪೌಡರ್ ರೂಮಿನಲ್ಲಿ ಕುಳಿತು, ಇದರ ಬಗ್ಗೆ ಕಾರ್ತಿಕ್ ಬಳಿ ಹೇಳಿಕೊಂಡು ಬೈದುಕೊಂಡಿದ್ದಾರೆ. ಸ್ವಲ್ಪ ಜೋರಾಗಿಯೇ ಬೈಗುಳಗಳು ಬಂದಿವೆ.

ಥರ್ಡ್ ಕ್ಲಾಸ್ ಎಂದ ತನಿಷಾ

ಬಿಗ್ ಬಾಸ್ ಮನೆಯಲ್ಲಿ ಸಂಪ್ರದಾಯಸ್ಥ ಮಾತುಗಳು ಈಗ ಕಡಿಮೆ. ಆರಂಭದಲ್ಲಿ ಎಲ್ಲರ ನಾಲಿಗೆಯಲ್ಲಿ ಲಾಕ್ ಇತ್ತು. ಆದರೆ, ಈಗ ಲಾಕ್ ಓಪನ್ ಆಗಿದೆ. ಬರೀ ಪುಟ್ಗೋಸಿ, ಬೇವರ್ಸಿ, ಮುಚ್ಕೊಂಡಿರು, ಆ ನನ್ ಮಕ್ಳು ಎಂಬ ಪದಗಳೇ ಹರಿದಾಡುತ್ತಿವೆ. ಇದೀಗ ಶೇಕ್ ಸಿಗದೆ ಇದ್ದ ಕಾರಣ ತನಿಷಾ, ಥರ್ಡ್ ಕ್ಲಾಸ್ ಪದ ಬಳಕೆ ಮಾಡಿದ್ದಾರೆ. "ಥರ್ಡ್ ಕ್ಲಾಸ್ ಬುದ್ದಿಗಳನ್ನು ತೋರಿಸುವುದು. ಕಂಡವರದ್ದನ್ನು ಎತ್ತಿಕೊಂಡು ತಿಂದರೇನೆ ಸಮಾಧಾನ ಆಗೋದು. ಎಲ್ಲರಿಗೂ ಕೊಟ್ಟಿರುತ್ತಾರೆ ಅಲ್ವಾ. ಬೇರೆಯವರದ್ದನ್ನು ಯಾಕೆ ತಿನ್ನಬೇಕು. ನಾಯಿ ಬುದ್ದಿ ಯಾಕೆ ತೋರಿಸುವುದು" ಎಂದು ಜೋರು ಮಾತನ್ನ ಆಡಿದ್ದಾರೆ.

ತನಿಷಾ ಬಳಿ ಜಗಳಕ್ಕೆ ನಿಂತ ವಿನಯ್

ತನಿಷಾ ಹೇಳಿದ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಕೂತಿದ್ದ ವಿನಯ್ ಎಚ್ಚರಿಕೆ ನೀಡಿದ್ದಾರೆ. "ಸಂಗೀತಾ ಕೂಡ ತೆಗೆದುಕೊಂಡಿದ್ದರು. ನಾಯಿ ಬುದ್ದಿ, ಬೇವರ್ಸಿಗಳು ಅಂತ ಹೇಳಬೇಡ. ಕಳ್ಳತನ ಮಾಡಿಲ್ಲ. ಬಂದಾಗ ಸಂಗೀತಾ ಬಳಿ ಕೇಳಿ ತಿಳಿದುಕೊಳ್ಳಿ. ಪ್ರೊಟೀನ್ ಶೇಕ್ ಎತ್ತಿಕೊಂಡಿರೋದು ಅಷ್ಟೆ. ಜಾಸ್ತಿ ಮಾತನಾಡುವುದು ಬೇಡ. ಇಲ್ಲಿ ಯಾರು ಮನೆಯಿಂದ ಎತ್ತಿಕೊಂಡು ಬಂದಿಲ್ಲ. ನಿಮ್ಮನ್ನ ಆ ರೀತಿ ಬೆಳೆಸಿರಬಹುದು. ಆದರೆ ನಮ್ಮನ್ನ ಆ ರೀತಿ ಬೆಳೆಸಿಲ್ಲ" ಎಂದು ವಿನಯ್ ಹೇಳಿದ್ದಾರೆ.

Bigg Boss Kannada, Season 10 Vinay and Tanisha fight over vulgar speech

ವಿನಯ್ ಮಾತಿಗೆ ನಮ್ರತಾ ಹ್ಯಾಪಿ

ಮಾತು ಬೆಳೆಯುತ್ತಲೇ ಹೋಗಿದೆ. ಬೇವರ್ಸಿ ಎಂಬ ಪದ ಬಳಸಬೇಡಿ. ಬೇರೆಯವರದ್ದು ಎಷ್ಟು ತಿಂದಿದ್ದೀರಾ ಅಂತ ಗೊತ್ತು. ನಿಮ್ಮ ಒಬ್ಬರಿಗೆ ಸೌಂಡ್ ಇರುವುದಲ್ಲ. ಈ ಮನೆಯಲ್ಲಿ ನಾವೂ ಕೆಲಸ ಮಾಡಿದ್ದೀವಿ. ಬೇವರ್ಸಿ ಕೆಲಸಗಳನ್ನು ಮಾಡಿಕೊಂಡು ಬಂದಿಲ್ಲ ಎಂದು ವಿನಯ್ ಹೇಳಿದ್ದಾರೆ. ಬಳಿಕ ಜಗಳ ಅಲ್ಲಿಗೆ ನಿಂತಿದೆ. ವಿನಯ್ ಬೆಡ್ ರೂಮಿಗೆ ಹೋಗುವಾಗ ತನಿಷಾ ನಡೆಯುವುದನ್ನು ಇಮಿಟೇಟ್ ಮಾಡಿದ್ದಾರೆ. ಇದಕ್ಕೆ ನಮ್ರತಾ ಫುಲ್ ಖುಷಿಯಾಗಿದ್ದಾರೆ. ವಿನಯ್ ಮಾಡುವ ಟೀಕೆಗಳಿಗೆ ನಮ್ರತಾ ಸದಾ ಬೆಂಗಾವಲಾಗಿ ನಿಲ್ಲುತ್ತಾರೆ.

More from Filmibeat

English summary
Bigg Boss Kannada 10 December 8th episode about Vinay and Tanisha fight over vulgar speech:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X