BBK10: ಕಿತ್ತೋದ್ ಲವ್ ಸ್ಟೋರಿ ಎಂದ ನಮ್ರತಾ.. ಫೇಕ್ ರೊಮ್ಯಾನ್ಸ್ ಎಂದ ವಿನಯ್.. ಸಂಗೀತಾ -ಕಾರ್ತಿಕ್ ಬಗ್ಗೆ ಯಾಕಿಂಗೆ..?
ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಾನೂ ತುಂಬಾ ಆತ್ಮೀಯವಾಗಿದ್ದವರು ಸಂಗೀತಾ ಮತ್ತು ಕಾರ್ತಿಕ್. ಆದರೆ, ಇತ್ತೀಚೆಗೆ ಯಾವುದೋ ಸಣ್ಣ ಮನ:ಸ್ತಾಪದಿಂದ ಮೂವರು ದೂರ ದೂರ ಆಗಿದ್ದರು. ತನಿಷಾ ಹಾಗೂ ಕಾರ್ತಿಕ್ ಒಂದು ಕಡೆ ಇದ್ದರು. ಸಂಗೀತಾ, ವಿನಯ್ ಟೀಂ ಜೊತೆಗೆ ಸೇರಿದ್ದರು.
ಈ ಮನಸ್ತಾಪ ಕಿಚ್ಚನ ಪಂಚಾಯ್ತಿಯಲ್ಲೂ ಚರ್ಚೆಗೆ ಬಂದಿತ್ತು. ಈ ಚರ್ಚೆಯ ಬಳಿಕ ವಿನಯ್ ಅವರೇ ಹೇಳಿದ್ದರು. ಇನ್ನು ಎರಡು ದಿನದಲ್ಲಿ ಸರಿ ಆಗುತ್ತಾರೆ ಅಂತ. ಅದರಂತೆ ಮಾರನೇ ದಿನಕ್ಕೆ ಇಬ್ಬರು ಸರಿ ಆಗಿದ್ದರು. ಆದರೆ, ಈಗ ವಿನಯ್ ಅಂಡ್ ಟೀಂ ಸಂಗೀತಾ ಮತ್ತು ಕಾರ್ತಿಕ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.

ನಮ್ರತಾ ಅವರ ವಿಚಾರದಲ್ಲಿ ಕಾರ್ತಿಕ್ ಹಾಗೂ ಸ್ನೇಹಿತ್ ಸ್ಪರ್ಧೆಗೆ ನಿಲ್ಲುತ್ತಾರೆ. ಈ ಹಿಂದೆಯೇ ಒಂದು ಡೇಟ್ ಅನೌನ್ಸ್ ಆಗಿತ್ತು. ಅದು ನಮ್ರತಾ ಹುಟ್ಟುಹಬ್ಬ ಎಂಬ ಕಾರಣಕ್ಕೆ. ಆದರೆ, ಅದು ಫೇಕ್ ಹುಟ್ಟುಹಬ್ಬವಾಗಿತ್ತು. ಆಗ ಬಿಗ್ ಬಾಸ್ ಸತ್ಯ ತಿಳಿಸಿತ್ತು. ಹುಟ್ಟುಹಬ್ಬ ಅಲ್ಲ ಎಂದೇ ಹೇಳಿತ್ತು. ಆಗ ಇಬ್ಬರ ಡೇಟಿಂಗ್ ಕ್ಯಾನ್ಸಲ್ ಆಗಿತ್ತು. ಈಗ ಮತ್ತೆ ಆ ಡೇಟಿಂಗ್ ಬಗ್ಗೆ ಮತ್ತೆ ಚರ್ಚೆಗೆ ಬಂದಿದೆ. ಸ್ನೇಹಿತ್ ಕ್ಯಾಪ್ಟನ್ ಆದರೆ, ನಮ್ರತಾ ಡೇಟಿಂಗ್ ಹೋಗುತ್ತಾರಂತೆ.
ಸಂಗೀತಾ ಬಗ್ಗೆ ನಾಲಿಗೆ ಹರಿಬಿಟ್ಟರಾ ನಮ್ರತಾ ..?
ಸಂಗೀತಾ ಮತ್ತು ಕಾರ್ತಿಕ್ ಕ್ಲೋಸ್ ಆಗಿದ್ದನ್ನು ನಮ್ರತಾ ಆಗಾಗ ಮಾತನಾಡುತ್ತಲೇ ಇದ್ದರು. ಆದರೆ, ಇವರದ್ದೇ ಗುಂಪಿನ ಕಡೆಗೆ ಸಂಗೀತಾ ಬಂದ ಮೇಲೆ ಅವರ ಮೇಲೆ ಕಾಳಜಿ ಇದೆ ಎಂಬಂತೆ ತೋರಿಸಿಕೊಳ್ಳುವುದಕ್ಕೆ ಆರಂಭಿಸಿದ್ದರು. ಸಮಯ ಸಿಕ್ಕಾಗಲೆಲ್ಲಾ ಸಂಗೀತಾ ಬಳಿ ಕಾರ್ತಿಕ್ ಹಾಗೂ ತನಿಷಾ ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನೇ ಮಾಡುತ್ತಿದ್ದರು. ಆದರೆ, ಈಗ ಮತ್ತೆ ಕಾರ್ತಿಕ್ ತಂಡದಲ್ಲಿಯೇ ಸಂಗೀತಾ ಕಾಣಿಸಿಕೊಳ್ಳುತ್ತಿರುವುದಕ್ಕೆ ನಮ್ರತಾ ಮತ್ತು ತಂಡ ಸಹಿಸಿಕೊಳ್ಳುತ್ತಿಲ್ಲ. ಮೊದಲಿನ ರೀತಿಯಲ್ಲಿಯೇ ಟಾಕ್ ಶುರು ಮಾಡಿದ್ದಾರೆ.
ಕಿತ್ತೋದ್ ಲವ್ ಸ್ಟೋರಿ ಎಂದ ನಮ್ರತಾ
ಕಾರ್ತಿಕ್, ನಮ್ರತಾ ಅವರನ್ನು ರೇಗಿಸುತ್ತಿದ್ದಾಗ ಪ್ರತಿ ಸಲ ಸಂಗೀತಾ ವಿಚಾರ ಬರುತ್ತದೆ. ಸಂಗೀತಾಗೆ ಕೊಂಚ ಆರೋಗ್ಯ ಸರಿ ಇಲ್ಲ ಎನಿಸುತ್ತದೆ. ಮಲಗಿದ್ದರು. ಆಗ ಕಾರ್ತಿಕ್, ನಮ್ರತಾ ಅವರ ಬಳಿ ಸಮಯ ಕಳೆಯುತ್ತಿದ್ದಾಗ ನಿಮ್ಮವರು ಏನು ಮಾಡುತ್ತಿದ್ದಾರೆ ಎಂದು ನೆನಪಿಸಿದ್ದಾರೆ. ಆಗ ಓಡಿ ಹೋದ ಕಾರ್ತಿಕ್ ಕಂಡು, ನಮ್ರತಾ, ಇವರದ್ದೊಂದು ಕಿತ್ತೋದ್ ಲವ್ ಸ್ಟೋರಿ ಎಂದಿದ್ದಾರೆ.
ಬಾಡಿಗೆ ಶೋಕಿಗಳು ಎಂದ ವಿನಯ
ಬಳೆಗಳ ವಿಚಾರವಾಗಿ ಮತ್ತು ಸಂಗೀತಾ ವಿಚಾರವಾಗಿ ಮಾತನಾಡಿದ ವಿನಯ್, ನಂದು ಕಾರ್ತಿಕ್ ಜಗಳದಲ್ಲಿ ಅವನು ಅಮ್ಮ ಅಕ್ಕ ಅಂದಿದ್ದು ಯಾರಿಗೂ ಕಾಣಿಸಿಲ್ಲ. ಬಳೆ ವಿಚಾರ ಬಂದಿದ್ದು ತಪ್ಪು. ಆ ವಿಚಾರಕ್ಕೆ ಪ್ರವೋಕ್ ಮಾಡಿದ್ದು ಯಾರು? ಅದನ್ನು ಬಿಟ್ಟರೆ ಯಾವ ಟಾಸ್ಕ್ ಮಾಡಿದ್ದಾಳೆ. ಹ್ಯಾಂಗಿಂಗ್ ಟಾಸ್ಕ್ ಒಂದೇ. ಫೇಕ್ ರೊಮ್ಯಾಂಟಿಕ್ ಸೀನ್ ಮಾಡಿಕೊಂಡು, ಬಾಡಿಗೆ ಶೋಕಿಗಳನ್ನು ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಸಂಗೀತಾ ಬಗ್ಗೆ ಮಾತನಾಡಿದ್ದಾರೆ. ತಮ್ಮದೇ ತಂಡದಲ್ಲಿ ಇದ್ದಾಗ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಆದರೆ, ಈಗ ಉಲ್ಟಾ ಆಗಿದೆ ಎಂಬ ಕಾರಣಕ್ಕೆ ಮತ್ತೆ ಅದೇ ಬುದ್ದಿ ತೋರಿಸುತ್ತಿದ್ದಾರೆ.


Click it and Unblock the Notifications











