ಪ್ರತಾಪ್ ಮೇಲೆ ಮತ್ತೊಮ್ಮೆ ಸವಾರಿ ಮಾಡಲು ಹೊರಟ ವಿನಯ್..! ಪರಿಣಾಮ ನೆಟ್ಟಗಿರಲ್ಲ ಎಂದು ಡ್ರೋನ್ ವಾರ್ನಿಂಗ್!

By Shruthi Harishgowda

ಬಿಗ್ ಬಾಸ್ ಸೀಸನ್ 10 ಬರಿ ಜಗಳಗಳಿಂದಲೇ ಫೇಮಸ್ ಆಗಿದೆ. ಇಲ್ಲಿ ವಿನಯ್‌ಯಿಂದಲೇ ಅತಿ ಹೆಚ್ಚು ಜಗಳಗಳಾಗಿದೆ. ಒಮ್ಮೆ ಮಾತು ಆಡಿದ ಮೇಲೆ ಅದನ್ನು ಅಲ್ಲಿಗೆ ಮುಗಿಸುವ ಗೋಜಿಗೆ ವಿನಯ್ ಹೋಗುವುದಿಲ್ಲ ಅದು ಸಣ್ಣದೆ ಆಗಲಿ ದೊಡ್ಡದೇ ಆಗಲಿ. ಆ ಮಾತನ್ನು ಪದೇ ಪದೇ ಮನೆಯಲ್ಲಿ ಕೆಣಕಿ ಕೆಣಕಿ ಜಗಳಕ್ಕೆ ಕಾರಣರಾಗುತ್ತಿದ್ದಾರೆ. ಈಗಲೂ ಅಷ್ಟೇ ಎಲ್ಲರೂ ಊಹಿಸಿದಂತೆ ಮತ್ತೊಮ್ಮೆ ಡ್ರೋನ್ ಪ್ರತಾಪ್ ಮೇಲೆ ವಿನಯ್ ಅವರು ಮುಗಿಬಿದ್ದಿದ್ದಾರೆ. ಈಗ ಬಿಗ್ ಬಾಸ್ ಮನೆ ಅಕ್ಷರ ಸಹ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ. ಪದೇ ಪದೇ ವಿನಯ್ ಪ್ರತಾಪ್ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ.

ಪ್ರತಾಪ್ ಅವರು ವಿನಯ್ ಅವರ ಜೊತೆಗೆ ಇದ್ದವರಿಗೆಲ್ಲಾ ಸರಿದಾರಿ ತೋರದೆ ಸುಮ್ಮನೆ ಇದ್ದು ಅವರನ್ನೆಲ್ಲ ಮನೆಗೆ ಕಳುಹಿಸಿದ್ದಾರೆ ಎಂದು ಆರೋಪವನ್ನ ಮಾಡಿದ್ದರು. ಈಗ ಅದಕ್ಕೋಸ್ಕರ ವಿನಯ್ ರಿವೆಂಜ್ ತೆಗೆದುಕೊಳ್ಳುತ್ತಿದ್ದಾರೆ ಪದೇಪದೇ ಅದೇ ವಿಷಯವನ್ನು ಇಟ್ಟುಕೊಂಡು ಡ್ರೋನ್ ಪ್ರತಾಪ್ ಮೇಲೆ ಮುಗಿಬೀಳುತ್ತಾ ಇದ್ದಾರೆ. ಪ್ರತಾಪ್ ಆ ಮಾತನ್ನು ಕಿಚ್ಚ ಸುದೀಪ್ ಮುಂದೆಯೇ ಕ್ಲಾರಿಟಿ ನೀಡಿದ್ದರು. ಆದರೂ ಸಹ ಅದನ್ನು ಬಿಡುವ ಗೋಜಿಗೆ ವಿನಯ್ ಹೋಗುತ್ತಿಲ್ಲ. ಪ್ರತಾಪ್ ಒಬ್ಬ ಅಮಾಯಕನಂತೆ ನಟಿಸುತ್ತಾ ಇದ್ದು ಇಲ್ಲಿಯ ತನಕ ಬಂದಿದ್ದಾನೆ ಎಂದು ಮಾತನಾಡಿದ್ದಾರೆ. ಈ ಮಾತು ಪ್ರತಾಪ್‌ಗೆ ಸ್ವಲ್ಪವೂ ಸಹ ಇಷ್ಟವಾಗಿಲ್ಲ.

Bigg Boss Kannada Season 10: Vinay gowda and Drone Prathap fight

ಬಿಗ್ ಬಾಸ್ ಶುರುವಾದಾಗಿನಿಂದಲೂ ಸಹ ವಿನಯ್ ಪ್ರತಾಪ್ ವಿರುದ್ಧ ಕಿಡಿಕಾರುತ್ತಲೇ ಇದ್ದರೂ ಸಿಂಪತಿಯಿಂದ ಜನರ ಮನಸ್ಸನ್ನು ತನ್ನ ಕಡೆಗೆ ತಗೆದುಕೊಂಡು ಸೇಫಾಗಿ ಆಟವಾಡುತ್ತಿದ್ದಾನೆ ಅಂದಿದ್ದರು. ಆಗಲು ಕೂಡ ಪ್ರತಾಪ್ ಸುಮ್ಮನೆ ಇದ್ದು ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಹೇಳಿದ್ದರು. ಡ್ರೋನ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೂಡ ಪ್ರತಾಪ್ ವಿರುದ್ಧ ವಿನಯ್ ಮಾತನಾಡಿದರು ಈ ವೇಳೆ ಸ್ನೇಹಿತ್ ವಿನಯ್ ಬೆಂಬಲಕ್ಕೆ ನಿಂತಿದ್ದರು. ಇದೆಲ್ಲವನ್ನು ಗಮನಿಸಿದ ಪ್ರತಾಪ್ ಆಗಲು ಸಹ ಏನನ್ನು ಮಾತನಾಡಿರಲಿಲ್ಲ ಮನಸ್ಸಿಗೆ ನೋವಾಗಿದ್ದರೂ ಸಹ ಯಾರ ಮುಂದೆಯೂ ಅಳದೆ ಬಾತ್ರೂಮ್ ಗೆ ಹೋಗಿ ಅತ್ತಿದ್ದರು.

ಪರಿಣಾಮ ನೆಟ್ಟಗಿರಲ್ಲ ಎಂದ ಡ್ರೋನ್

ಮೊನ್ನೆ ಪ್ರತಾಪ್ ಆಡಿದ ಒಂದು ಮಾತಿಗೆ ವಿನಯ್ ಫುಲ್ ಉರಿದುಕೊಂಡಂತೆ ಕಾಣಿಸುತ್ತಾ ಇದ್ದಾರೆ. ಇದಕ್ಕಾಗಿ ಪದೇ ಪದೇ ಅದೇ ಮಾತು ಬಳಸಿ ಪ್ರತಾಪ್ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಇಷ್ಟು ದಿನ ಸೈಲೆಂಟಾಗಿದ್ದ ಪ್ರತಾಪ್ ಫುಲ್ ವೈಲೆಂಟ್ ಆಗಿದ್ದಾರೆ. ಈ ಮನೆಯಲ್ಲಿ ನೀವು ಅಂದಿದ್ದನ್ನೆಲ್ಲಾ ಅನ್ನಿಸಿಕೊಂಡು ಇರಲು ಆಗುವುದಿಲ್ಲ. ಅದೇನು ಮಾಡುತ್ತೀರಾ ಮಾಡಿ ಎಂದು ತಾವು ಸಹ ವಿನಯ್ ಸರಿ ಸಮಕ್ಕೆ ನಿಂತುಕೊಂಡಿದ್ದಾರೆ ಈಗಂತೂ ವಿನಯ್‌ಗೆ ಫುಲ್ ರೇಗಿ ಹೋಗಿದೆ.

Bigg Boss Kannada Season 10: Vinay gowda and Drone Prathap fight

ಇಷ್ಟು ದಿನ ವಿನಯ್ ಅಂದಂತೆ ಪ್ರತಾಪ್ ಅನಿಸಿಕೊಂಡು ಸುಮ್ಮನೆ ಇರುತ್ತಿದ್ದರು ಜಗಳ ಮಾಡಲು ಹೋಗುತ್ತಿರಲಿಲ್ಲ. ಆದರೆ ಈ ಬಾರಿ ವಿನಯ್ ಆಡಿದ ಮಾತಿಗೆ ಪ್ರತಾಪ್ ಎದುರು ಉತ್ತರ ನೀಡಿದ್ದಾರೆ. ಪ್ರತಾಪ್ ಅಮಾಯಕನ ತರ ಇದ್ದು ನಾಟಕವನ್ನು ಆಡುತ್ತಾ ಇದ್ದಾನೆ ಎಂದೆಲ್ಲ ಹೇಳಿದ್ದು ಇದು ಪ್ರತಾಪ್ ಗೆ ಇಷ್ಟವಾಗಿಲ್ಲ. ಗೌರವದಿಂದಲೇ ಪ್ರತಾಪ್ ಮಾತನಾಡಿದರು ಕೂಡ ವಿನಯ್ ಪ್ರತಾಪ್‌ಗೆ ಗೌರವ ನೀಡಿದ ಕಾರಣ ಗೌರವ ಕೊಟ್ಟು ಮಾತನಾಡಿ ಇಲ್ಲದೆ ಇದ್ದರೆ ಮಾತಿನ ಪರಿಣಾಮ ನೆಟ್ಟಗೆ ಇರೋದಿಲ್ಲ. ನಾನು ಕೂಡ ಮಾತಿನ ಮೂಲಕವೇ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನ ನೀಡಿದ್ದಾರೆ.

ಪ್ರತಾಪ್-ವಿನಯ್‌ಯರನ್ನು ಸುಮ್ಮನಿರಿಸಲು ಹರಸಾಹಸ

ಪ್ರತಾಪ್ ವಿನಯ್‌ಗೆ ನೀಟಾಗಿ ಮಾತನಾಡುವುದನ್ನು ಕಲಿತುಕೋ ಎಂದು ಹೇಳಿದಾಗ ವಿನಯ್ ಏನೋ ಮಾಡುತ್ತೀಯಾ ನೀನು ಎಂದು ಬಂದಾಗ ಇಬ್ಬರೂ ಕೂಡ ಜೋರಾಗಿಯೇ ಮಾತನಾಡುತ್ತಾ ಇದ್ದಾರೆ. ಇದರಿಂದಾಗಿ ಇತರ ಸ್ಪರ್ಧಿಗಳು ಇಬ್ಬರನ್ನು ಕೂಡ ಸುಮ್ಮನೆ ಇರಿಸಲು ಹರಸಾಹಸ ಪಟ್ಟಿದ್ದಾರೆ. ಪ್ರತಾಪ್ ಕೂಡ ಯಾರ ಮಾತನ್ನು ಕೇಳುತ್ತಿಲ್ಲ ವಿನಯ್ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ಈಗ ಪ್ರತಾಪ್ ಮಾತು ಅವರ ಅಭಿಮಾನಿಗಳಿಗೆ ಇಷ್ಟವಾಗಿದ್ದು ಇದೇ ರೀತಿ ಆಟವನ್ನ ಆಡಿ ಎಂದು ಹೇಳುತ್ತಾ ಇದ್ದಾರೆ. ಸದ್ಯಕ್ಕೆ ವಿನಯ್ ಟಾರ್ಗೆಟ್ ಪ್ರತಾಪ್ ಆಗಿದ್ದು ಈ ಬಾರಿಯೂ ಪ್ರತಾಪ್ ನಾಮಿನೇಟ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಏನೇ ವಿಷಯ ಬಂದರೂ ಅಲ್ಲಿ ವಿನಯ್ ಪ್ರತಾಪ್ ಹೆಸರನ್ನ ತೆಗೆದುಕೊಳ್ಳುತ್ತಲೇ ಇರುತ್ತಾರೆ.

More from Filmibeat

English summary
Bigg Boss Kannada 10: Drone Prathap gives warning to Vinay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X