ಟಾಸ್ಕ್‌ಗಾಗಿ ತುಕಾಲಿ ಸಂತೋಷ್-ವಿನಯ್ ನಡುವೆ ಫೈಟ್: ಅವರವರ ಗತ್ತು ಅವರವರಿಗೆ ಗೊತ್ತು ಎಂದ ಹಳ್ಳಿಕಾರ್..!
ವಿನಯ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಕೂಡ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಸುದೀಪ್ ಅವರು ಯಾವಾಗ ಕ್ಲಾಸ್ ತೆಗೆದುಕೊಳ್ಳುತ್ತಾರೋ ಆ ವಾರ ಪೂರ್ತಿ ಸೈಲೆಂಟಾಗಿ ಇರುತ್ತಾರೆ ಯಾವುದೇ ಜಗಳಗಳು ಆಗದೆ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ ಈಗ ಸೆಮಿ ಫೈನಲ್‌ಗೆ ಇನ್ನೊಂದೆರಡು ದಿನ ಬಾಕಿ ಮಾತ್ರ ಇದ್ದು ತಾವು ಕೂಡ ಟಾಪ್ ಫೈವ್‌ನಲ್ಲಿ ಬರಬೇಕು ಎಂಬ ಆಶಯದಿಂದಲೋ ಅಥವಾ ತಾವೇ ಗೆಲುವು ಪಡೆಯಬೇಕು ಎಂಬ ಸ್ವಾರ್ಥದಿಂದಲೋ ಇಂದು ತುಕಾಲಿ ಅವರ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ. ಅದು ಕೂಡ ಟಾಸ್ಕ್ ವಿಚಾರಕ್ಕೆ ಆಗಿದ್ದು ಸುಮ್ಮನೆ ಇಲ್ಲಿ ಜಗಳವಾಡಿದಂತೆ ಕಾಣಿಸುತ್ತಾ ಇದೆ.
ತುಕಾಲಿ ಸಂತೋಷ್, ವರ್ತೂರು ಸಂತೋಷ್, ಸಂಗೀತಾ, ನಮ್ರತಾ ಹಾಗೂ ಕಾರ್ತಿಕ್, ವಿನಯ್ ಈಗ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಆಗಿದ್ದು ಕಳೆದುಕೊಂಡಿರುವ ಫಿನಾಲೆ ಹಣವನ್ನು ಗಳಿಸಬೇಕಾಗಿದೆ. ಇದಕ್ಕಾಗಿ ಸ್ಪರ್ಧಿಗಳಿಗೆ ಈಗ ಹೊಸ ರೂಲ್ಸ್ ಹಾಕಿ ಟಾಸ್ಕ್ ನೀಡಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದವರು ಆಡಿದ ಆಟಗಳನ್ನು ಈಗ ಆಡಿಸಲಾಗಿದ್ದು ಅದಕ್ಕೆ ಸಮಯವನ್ನು ನಿಗದಿ ಮಾಡಲಾಗುತ್ತಿದೆ ಇದೇ ರೀತಿಯ ಆಟವನ್ನ ಆಡಲು ಸಂತೋಷ್ ಹಾಗೂ ವಿನಯ್ ನಡುವೆ ಫೈಟ್ ನಡೆದಿದೆ. ವಿನಯ್ ಪ್ರತಾಪ್ ಜೊತೆಯಲ್ಲಿ ನಡೆದುಕೊಂಡ ರೀತಿಯಲ್ಲೇ ತುಕಾಲಿ ಸಂತೋಷ್ ಅವರ ಜೊತೆಯಲ್ಲಿ ನಡೆದುಕೊಂಡಿದ್ದಾರೆ.

ಸಂಗೀತಾ ಈ ವಾರವು ಕೂಡ ಮನೆಯ ಕ್ಯಾಪ್ಟನ್ ಆಗಿದ್ದು ಟಾಸ್ಕನ್ನು ನೀಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಈ ವೇಳೆ ತುಕಾಲಿ ಸಂತೋಷ್ ಸಂಗೀತಾರನ್ನು ಪ್ರಶ್ನೆ ಮಾಡಿದ್ದಾರೆ. ಎಲ್ಲದಕ್ಕೂ ಕೂಡ ವೋಟ್ ಹಾಕಿಸಿ ಈಗ ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ವಿನಯ್ ಗೆ ಕೋಪ ಬಂದಂತೆ ಕಾಣಿಸುತ್ತಿದೆ. ನಾನೇ ಟಾಸ್ಕ್ ಆಡುತ್ತೇನೆ ಎಂದು ಒಮ್ಮತದ ಅಭಿಪ್ರಾಯವನ್ನು ಪಡೆದುಕೊಂಡಿದ್ದರೆ ಸಾಕಾಗುತ್ತಿತ್ತು. ಆದರೆ ಇಲ್ಲಿ ವಿನಯ್ ಅವರು ಅಟೆನ್ಷನ್ ಕ್ರಿಯೇಟ್ ಮಾಡಲೋ ಅಥವಾ ನಾನು ಕೂಡ ಮನೆಯಲ್ಲಿ ಸೈಲೆಂಟ್ ಆಗಿಲ್ಲ ಎಂದು ತೋರಿಸಿಕೊಳ್ಳಲೋ ಗೊತ್ತಿಲ್ಲ ಇದಕ್ಕಿದ್ದಂತೆ ಜಗಳಕ್ಕೆ ನಿಂತುಕೊಂಡಿದ್ದಾರೆ.
ಟಾಸ್ಕ್ ಆಡಲು ತುಕಾಲಿ ವಿರುದ್ಧ ತಿರುಗಿ ಬಿದ್ದ ವಿನಯ್
ವಿನಯ್ ಹಾಗೂ ತುಕಾಲಿ ಸಂತೋಷ್ ನಡುವೆ ಟಾಸ್ಕ್ ಆಡಲು ಜಗಳವೇ ನಡೆದಿದೆ. ಆ ವಿನಯ್ ತುಕಾಲಿ ಮೇಲೆ ಮುಗಿಬಿದ್ದಿದ್ದಾರೆ. ನೀನು ಇಲ್ಲಿ ಆತನಕ ಯಾವ ರೀತಿ ಆಟವನ್ನು ಆಡಿಕೊಂಡು ಬಂದಿದ್ದೀಯಾ ಎಂಬುದು ನನಗೆ ಗೊತ್ತು, ಜೋರಾಗಿ ಮಾತನಾಡಿದ ತಕ್ಷಣ ನೀನು ಎನು ಕಿತ್ತುಕೊಳ್ಳೋಕೆ ಆಗಲ್ಲ ನಾನೇನು ಎದುರಿಕೊಳ್ಳೋದಿಲ್ಲ ಎಂದಿದ್ದಾರೆ.

ತುಕಾಲಿ ಸಂತೋಷ್ ತಾನು ಏನು ಕಮ್ಮಿ ಇಲ್ಲ ಎಂಬಂತೆ ನೀನು ಏನೋ ಮಾಡ್ತೀಯಾ ಎಂದು ವಿನಯ್ ಮುಂದೆ ಹೋಗಿ ನಿಂತುಕೊಂಡಿದ್ದಾರೆ. ವಿನಯ್ ಇಲ್ಲಿ ತುಕಾಲಿ ಸಂತೋಷ್ ಅವರ ಆತ್ಮವಿಶ್ವಾಸಕ್ಕೆ ಪೆಟ್ಟು ಕೊಡುವಂತೆ ಮಾತನಾಡಿದ್ದಾರೆ. ಆದರೆ ಅದನ್ನ ತಡೆಯಲು ವರ್ತೂರು ಸಂತೋಷ್ ಎಂಟ್ರಿ ಕೊಟ್ಟಿದ್ದಾರೆ. ವಿನಯ್ ಮಾತಿಗೆ ಆ ರೀತಿಯಲ್ಲ ಮಾತನಾಡಬೇಡಿಯಲ್ಲ ಮಾತನಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.
ಅವರವರ ಗತ್ತು ಅವರಿಗೆ ಗೊತ್ತು, ತುಕಾಲಿ ಪರ ವರ್ತೂರು ಕೆಂಡ
ತುಕಾಲಿ ಸಂತೋಷ್ ಮುಂದೆ ಬಂದು ಫಸ್ಟ್ ಡೇ ಇಂದ ನೀನು ಏನು ಕಿತ್ತಿ ಗುಡ್ಡೆ ಹಾಕಿಕೊಂಡು ಬಂದಿದ್ದೀಯಾ ಎಂಬುವುದು ನನಗೆ ಗೊತ್ತು ಎಂಬ ಪದ ಬಳಕೆ ಮಾಡುತ್ತಿದ್ದಂತೆ ವರ್ತೂರು ಸಂತೋಷ್ ಅವರಿಗೆ ಕೋಪ ಬಂದಿದೆ. ಇದಕ್ಕಾಗಿ ಅದು ಇದು ಪದ ಬಳಕೆ ಮಾಡಬೇಡಿ ಅವರವರ ಗತ್ತು ಅವರಿಗೆ ಗೊತ್ತು ಎಂದು ವಿನಯ್ ಅವರಿಗೆ ಬೆವರಿಳಿಸಿದ್ದಾರೆ.
ವಿನಯ್ ಪದೇ ಪದೇ ತುಕಾಲಿ ಮುಂದೆ ಬಂದು ಏನೋ ಮಾಡ್ತೀಯಾ ಎಂದು ಪ್ರವೋಕ್ ಮಾಡಿದ್ದಾರೆ. ಇಲ್ಲಿ ವಿನಯ್ ಅವರೇ ಜಗಳ ಆಡಿದಂತೆ ಎಲ್ಲರಿಗೂ ಕಾಣಿಸುತ್ತಾ ಇದೆ. ಮತ್ತೆ ತಾವು ಅಟೆನ್ಶನ್ ಕ್ರಿಯೇಟ್ ಮಾಡಲು ಜಗಳವನ್ನು ಆಡುತ್ತಿದ್ದಾರೆ ಎಂದು ವೀಕ್ಷಕರ ಅಭಿಪ್ರಾಯವಾಗಿದೆ. ಹಳೆಯ ಸ್ನೇಹಿತರು ಬಿಗ್ ಬಾಸ್ ಮನೆಗೆ ಬಂದು ಹೋದ ಮೇಲೆ ವಿನಯ್ ಅವರ ವರ್ತನೆಯಲ್ಲಿ ಬದಲಾವಣೆ ಕಾಣುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಹಳೆಯ ಸ್ಪರ್ಧಿಗಳು ವಿನಯ್ ಬಗ್ಗೆ ಹೇಳಿದ ಅಭಿಪ್ರಾಯ ಮುಖ್ಯ ಕಾರಣವಾಗಿದೆ.


Click it and Unblock the Notifications











