ಮತ್ತೆ ಕಿತ್ತಾಟಕ್ಕೆ ಇಳಿದ ವಿನಯ್, ಕಾರ್ತಿಕ್, ತನಿಷಾ: ಹೊಸ ವರ್ಷದ ಮೊದಲ ದಿನವೇ ಮತ್ತೆ ಜಗಳ ಆರಂಭ!
ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರು ಯಾವಾಗ ಯಾವ ರೀತಿ ಜಗಳಕ್ಕೆ ಇಳಿಯುತ್ತಾರೆ ಎಂಬುದು ಮಾತ್ರ ಗೊತ್ತೇ ಆಗುವುದಿಲ್ಲ. ಕೆಲವೊಂದಷ್ಟು ವಿಷಯಕ್ಕೆ ಕುಳಿತು ಮಾತನಾಡಿದರೆ ಎಲ್ಲವೂ ಕೂಡ ಬಗೆ ಹರಿಯುತ್ತದೆ. ಆದರೆ ಇಲ್ಲಿ ವಿನಯ್ ಆ ರೀತಿ ಮಾಡೋದಿಲ್ಲ ಬದಲಾಗಿ ತಮ್ಮ ಸ್ಟಾಟರ್ಜಿ ಎಂಬಂತೆ ಜೋರಾಗಿ ಎಲ್ಲರ ಮೇಲೂ ಕೂಡ ಕೂಗಾಡುತ್ತಾರೆ. ಇದರಿಂದಾಗಿ ಸ್ವಲ್ಪ ಕಿರಿಕಿರಿ ಉಂಟಾಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ಬಿಗ್ ಬಾಸ್ ಒಂದಷ್ಟು ಪಾಯಿಂಟ್ಸ್ ಗಳನ್ನು ಸ್ಪರ್ಧಿಗಳ ಮುಂದೆ ನೀಡಿದೆ. ಅವರಿಗೆ ಅವರು ಎಷ್ಟಕ್ಕೆ ಬೆಲೆ ಬಾಳುತ್ತಾರೆ ಅಷ್ಟು ಪಾಯಿಂಟ್ಸ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ತನಿಷಾ, ಕಾರ್ತಿಕ್ ಹಾಗೂ ವಿನಯ್ ಮೂವರು ಕೂಡ ಒಂದೇ ಪಾಯಿಂಟ್ ಹೇಳಿದ್ದಾರೆ ಇದಕ್ಕೆ ಕಿರಿಕ್ ಶುರುವಾಗಿದೆ.

ಮೊದಲಿನಿಂದಲೂ ಕೂಡ ವಿನಯ್ ಬಹಳ ಅಗ್ರೆಸ್ಸಿವ್‌ವಾಗಿ ಬಿಗ್ ಬಾಸ್ ಮನೆಯಲ್ಲಿ ಆಟವಾಡುತ್ತಿದ್ದಾರೆ. ಇನ್ನು ಫಿಸಿಕಲ್ ಟಾಸ್ಕ್ ಬರಲಿ ಮೆಂಟಲ್ ಟಾಸ್ಕ್ ಬರಲಿ ಇಲ್ಲಿ ವಿನಯ್ ಇತರ ಸ್ಪರ್ಧಿಗಳನ್ನು ಕುಗ್ಗಿಸುವ ಕೆಲಸ ಮಾಡಿ ತಾವು ಗೆಲುವು ಪಡೆಯುತ್ತಾರೆ. ಇಂದು ಸಹ ಅದೇ ರೀತಿ ಮಾಡಲು ಹೋಗಿದ್ದಾರೆ. ಆದರೆ ಕಾರ್ತಿಕ್ ಹಾಗೂ ತನಿಷಾ ಇಬ್ಬರು ಕೂಡ ವಿನಯ್ ಪ್ರತಿಸ್ಪರ್ಧೆ ನೀಡಿದ್ದಾರೆ. ತನಿಷಾ ಮಾತ್ರ ಯಾವುದೇ ಕಾರಣಕ್ಕೂ ನಾನು ಸೋಲು ಒಪ್ಪಿಕೊಳ್ಳೋದಿಲ್ಲ ಎಂದು ತಾವು ಹೇಳಿದಷ್ಟು ಪಾಯಿಂಟ್ಸ್ ಗಳನ್ನ ತೆಗೆದುಕೊಂಡು ಕತ್ತಿಗೆಗೆ ನೇತು ಹಾಕಿಕೊಂಡಿದ್ದಾರೆ.
ಇನ್ನು ವರ್ತೂರು ಸಂತೋಷ್ ಯಾವುದೇ ವಿವಾದಕ್ಕೂ ಜಗಳಕ್ಕೂ ಮೊದಲಿನಿಂದಲೂ ಹೋದವರಲ್ಲ. ತಾವು ಎಷ್ಟಕ್ಕೆ ತೂಗುತ್ತಾರೋ ಅಷ್ಟು ಪಾಯಿಂಟ್ಸ್ ತೆಗೆದುಕೊಂಡು ಕತ್ತಿಗೆ ಹಾಕಿಕೊಂಡಿದ್ದಾರೆ. ಪ್ರತಾಪ್ ಕೂಡ ಅಷ್ಟೇ ನಾನು 50,000ಕ್ಕೆ ತೂಗುತ್ತೇನೆ ಎಂದು 50,000 ತೆಗೆದುಕೊಂಡಿದ್ದಾರೆ. ಇಲ್ಲಿ ಜಗಳ ಬಂದಿರುವುದು ಸಂಗೀತಾ, ವಿನಯ್, ಕಾರ್ತಿಕ್ ತನಿಷಾ ಈ ನಾಲ್ವರ ಮಧ್ಯೆ. ಸದ್ಯಕ್ಕೆ ಸಂಗೀತಾ ಅವರು ನಾನು ಅಸಮರ್ಥರಾಗಿ ಇಲ್ಲಿಗೆ ಬಂದೆ ಎಂಬ ಮಾತು ಆಡಿದ್ದು ಇದಕ್ಕೆ ವಾಪಸ್ ವಿನಯ್ ಅವರು ನೀವು ಆ ರೀತಿ ಕಾರ್ಡ್ ಪ್ಲೇ ಮಾಡಬೇಡಿ ಎಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪಾಯಿಂಟ್‌ಗಳನ್ನು ಪಡೆದುಕೊಳ್ಳುವ ಬರದಲ್ಲಿ ಎಲ್ಲೋ ಒಂದು ಕಡೆ ಮತ್ತೆ ಕಿರಿಕ್ ಶುರುವಾಗಿದೆ.
ದೊಡ್ಮನೆಯಲ್ಲಿ ಶುರುವಾಯಿತು ಕಿರಿಕ್
ಪಾಯಿಂಟ್ಸ್ ಗಾಗಿ ಸ್ಪರ್ಧಿಗಳ ನಡುವೆ ಕಿತ್ತಾಟ
ಬಿಗ್ ಬಾಸ್ ಮನೆಯಲ್ಲಿ ಈಗ ಪಾಯಿಂಟ್ಸ್ ಗಳಿಗಾಗಿ ದೊಡ್ಡ ಯುದ್ದವೇ ನಡೆಯುತ್ತಾ ಇದೆ. ಇಲ್ಲಿ ನಮ್ರತಾ ಹಾಗೂ ಮೈಕಲ್ ಇಬ್ಬರು ತುಂಬಾ ಸೈಲೆಂಟಾಗಿ ಇರುವಂತೆ ಕಾಣಿಸುತ್ತಿದೆ. ಮೊದಲಿಗೆ ಬಂದ ವರ್ತೂರು ಸಂತೋಷ್ ಹಾಗೂ ಪ್ರತಾಪ್ ಇಬ್ಬರು ಕೂಡ ತಾವು ಇಷ್ಟು ಪಾಯಿಂಟ್‌ಗೆ ತೂಗುತ್ತೇವೆ ಎಂದು ಅವರು ಅಷ್ಟು ಪಾಯಿಂಟ್ಸ್ ಇಟ್ಟುಕೊಂಡಿದ್ದಾರೆ. ಅದು ಕಡಿಮೆ ಮೊತ್ತದ ಮನೆಯ ಇತರ ಸದಸ್ಯರು ಯಾವುದೇ ವಾದಕ್ಕೆ ಇಳಿಯಲಿಲ್ಲ. ಈಗ ಅತಿ ಹೆಚ್ಚು ಪಾಯಿಂಟ್ಸ್ ಪಡೆಯಲು ಸಂಗೀತಾ, ಕಾರ್ತಿಕ್, ತನಿಷಾ ಹಾಗೂ ವಿನಯ್ ನಡುವೆ ದೊಡ್ಡ ಯುದ್ದವೇ ಏರ್ಪಟ್ಟಿದೆ. ಇದಕ್ಕಾಗಿ ವಿನಯ್ ತನಿಷಾ ಹಾಗೂ ಕಾರ್ತಿಕ್ ಮೇಲೆ ಮುಗಿ ಬಿದ್ದಿದ್ದಾರೆ. ಸತ್ಯವನ್ನ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂತೆ ಎಂಬ ಗಾದೆ ಮಾತು ಕೂಡ ಆಡಿದ್ದಾರೆ.

ಇನ್ನು ಸಂಗೀತಾ ನಾನು ಅಸಮರ್ಥರಾಗಿ ಎಲ್ಲಿಗೆ ಎಂಟ್ರಿ ಕೊಟ್ಟೆ ಹಲವಾರು ಹೇಳು ಬೀಳುಗಳನ್ನು ನೋಡಿದ್ದೇನೆ ಎಂದು ಹೇಳಿದ್ದಕ್ಕೆ ನೀನು ಆ ರೀತಿಯ ಕಾರ್ಡ್‌ನ್ನು ಇಲ್ಲಿ ಪ್ಲೇ ಮಾಡಬೇಡ ಎಂದು ವಿನಯ್ ಹೇಳಿದ್ದಾರೆ. ಸಂಗೀರಾ ಆ ರೀತಿ ಮಾತು ಆಡಿದ್ದಕ್ಕೆ ನಮ್ರತಾ ಮುಖಭಾವ ಬದಲಾಗಿದೆ. ಸದ್ಯಕ್ಕೆ ವಿನಯ್ ಅವರು ಒಬ್ಬರೇ 20 ಲಕ್ಷ ಪಾಯಿಂಟ್ಸ್ ತೆಗೆದುಕೊಂಡಿದ್ದರೆ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಸಮಸ್ಯೆಗಳು ಕೂಡ ಬರುತ್ತಾ ಇರಲಿಲ್ಲ ಇಲ್ಲಿ ಮೂವರು ಕೂಡ ಅದೇ ರೀತಿಯಲ್ಲಿ ಶೇರ್ ಕೇಳಿದ್ದಕ್ಕೆ ವಿನಯ್ ಗೆ ಕೋಪ ಬಂದಿದೆ. ಇದಕ್ಕಾಗಿ ಮೊದಲು ತನಿಷಾ ಜೊತೆಯಲ್ಲಿ ವಾಗ್ವಾದಕ್ಕೆ ಇಳಿದಿದ್ದಾರೆ.
ಬುಡವನ್ನೇ ಅಲ್ಲಾಡಿಸುತ್ತೇನೆಂದ ಕಾರ್ತಿಕ್
ಯಾವುದೋ ವಿಚಾರಕ್ಕೆ ತನಿಷಾ ಅವರು ಇದ್ದಿದ್ದನ್ನ ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂತೆ ಎಂಬ ಗಾದೆ ಹೇಳಿದ್ದಾರೆ. ಈ ಮಾತಿಗೆ ವಿನಯ್ ಮನೆಯಲ್ಲಿ ನನ್ನ ಎದೆಗೆ ಒದೆಯುವ ಧೈರ್ಯ ಯಾರಿಗೂ ಇಲ್ಲ ಎಂದಿದ್ದಾರೆ. ನಿನಗೆ ಯೋಗ್ಯತೆ ಇದ್ದರೆ ನನ್ನ ಎದೆಗೆ ಒದ್ದು ನೋಡು ಎಂದಿದ್ದಾರೆ. ಈ ಮಾತಿಗೆ ತನಿಷಾ ನಾನು ಸತ್ಯ ಹೇಳಿದರೆ ಉರಿದು ಕೊಳ್ಳೋರಿಗೆ ಈ ಮಾತು ಹೇಳಿದ್ದೇನೆ ನೀನು ಯಾಕೆ ಚುಚ್ಚಿ ಕೊಳ್ಳುತ್ತಿದ್ದೀಯಾ ಎಂದು ಹೇಳಿದ್ದಾರೆ.
ನಂತರ ಕಾರ್ತಿಕ್ ಯಾವುದೋ ವಿಚಾರಕ್ಕೆ ನಾನು ಬುಡವನ್ನೇ ಅಲ್ಲಾಡಿಸುತ್ತೇನೆ ಎಂದಿದ್ದಾರೆ. ಈ ಮಾತಿಗೂ ಕೂಡ ವಿನಯ್ ಅಲ್ಲಾಡಿಸು ನೋಡೋಣ ಎಂದು ಪೈಪೋಟಿಗೆ ಹೋಗಿದ್ದಾರೆ. ಈ ಹಿಂದೆ ವಿನಯ್ ನಾನು ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಜಗಳವಾಡೋದಿಲ್ಲ ಎಂದು ಹೇಳಿದ್ದರು. ಆದರೆ ಈಗ ಅವರು ಆ ಮಾತನ್ನೇ ಮರೆತಂತಿದ್ದು ಹೊಸ ವರ್ಷದ ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ತಮ್ಮಲ್ಲೇ ಕಚ್ಚಾಡಿ ಕೊಳ್ಳುತ್ತಿದ್ದಾರೆ.


Click it and Unblock the Notifications











