ಡ್ರೋನ್ ಪ್ರತಾಪ್ ಮಾತಿಗೆ ಹರ್ಟ್ ಆದ್ರಾ ವಿನಯ್?: ಕಿಚ್ಚ ಸುದೀಪ್ ಮುಂದೆ ಹೇಳಿದ್ದೇನು ಅಗ್ರೆಸ್ಸಿವ್ ಮ್ಯಾನ್..!?

By ಶೃತಿ ಹರೀಶ್ ಗೌಡ

ಬಿಗ್ ಬಾಸ್ ಸೀಸನ್ 10ರಲ್ಲಿ ವಿನಯ್‌ಗೆ ಯಾರು ಕೂಡ ಮನಸ್ಸಿಗೆ ನೋವಾಗುವಂಥ ಮಾತು ಆಡಿರಲಿಲ್ಲ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಪವಿ ಪೂವಪ್ಪ ಅವರು ನೀವು ಆಡುತ್ತಿರುವ ಮಾತು ನಿಮ್ಮ ಹೆಂಡತಿ ಹಾಗೂ ಮಗನ ಮೇಲೆ ಪರಿಣಾಮವನ್ನು ಬೀರುತ್ತಿದೆ ಎಂದಿದ್ದರು. ಕನ್ಫೆಕ್ಷನ್ ರೂಂಗೆ ಹೋದ ವಿನಯ್ ನಾನೇನು ಬೇಕು ಅಂತ ಮಾಡಲಿಲ್ಲ ನನ್ನಿಂದಾಗಿ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಕಣ್ಣೀರು ಹಾಕಿದ್ದರು.

ಅದನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ವಿನಯ್ ಕಣ್ಣೀರು ಹಾಕಿದ ಇತಿಹಾಸವೇ ಇಲ್ಲ. ಆದರೆ ಪ್ರತಾಪ್ ಆಡಿದ ಒಂದೇ ಒಂದು ಮಾತು ಈಗ ವಿನಯ್ ಕಣ್ಣಲ್ಲಿ ಕಣ್ಣೀರು ತರಿಸಿದೆ. ಈ ಮಾತು ನನಗೆ ಇಷ್ಟವಾಗಿಲ್ಲ ಎಂದು ವಿನಯ್ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಈ ಮನೆಯಲ್ಲಿ ಯಾರು ಸ್ಪಾರ್ಥಿ ಎಂದು ಕೇಳಿದಾಗ ಕಾರ್ತಿಕ್ ಸಂಗೀತಾ ಹೆಸರನ್ನು ತೆಗೆದುಕೊಂಡರು. ಆನಂತರ ಪ್ರತಾಪ್ ಅವರು ವಿನಯ್ ಅವರ ಹೆಸರನ್ನ ತೆಗೆದುಕೊಂಡು ವಿನಯ್ ತನ್ನ ಜೊತೆಯಲ್ಲಿದ್ದವರನ್ನೆಲ್ಲ ಮನೆಯಿಂದ ಹೊರಗಡೆ ಕಳುಹಿಸಿದ್ದಾರೆ. ತಾವು ಬೆಳೆಯಬೇಕು ಎಂದರೆ ಇನ್ನೊಬ್ಬರನ್ನ ತುಳಿಯಲು ಅವರು ರೆಡಿ ಎಂದಿದ್ದರು. ಈ ಮಾತು ಕೇಳಿದ ಕೂಡಲೇ ವಿನಯ್ ಮುಖ ಒಂದು ರೀತಿಯ ಕಾಣಿಸಿಕೊಂಡಿತ್ತು.

Bigg Boss Kannada Season 10; Vinay Gowda hurts by Drone Prathaps statement, Super Sunday with sudeepa

ನಂತರ ಮುಂದುವರೆದ ಪ್ರತಾಪ್ ವಿನಯ್ ಜೊತೆಯಲ್ಲಿ ಇದ್ದ ಎಲ್ಲರೂ ಕೂಡ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅವರ ಬೆಡ್ ಶೀಟ್‌ಗಳೆಲ್ಲವೂ ಕೂಡ ಇವರ ಬೆಡ್ ಕೆಳಗೆ ಸೇರಿಕೊಂಡಿವೆ ಎಂದಿದ್ದರು. ಈ ಮಾತಂತೂ ವಿನಯ್‌ಗೆ ಕೆಟ್ಟ ಕೋಪ ತರಿಸಿದೆ. ಕಿಚ್ಚ ಸುದೀಪ್ ಮುಂದೆ ಆಗ ಏನನ್ನು ಮಾತನಾಡಿಲ್ಲ. ಇಂದು ಯಾರು ಮನೆಯಲ್ಲಿ ಹೆಚ್ಚು ಫೇಕ್ ಎಂದು ಅನಿಸುತ್ತಾರೆ ಯಾರ ಮಾತು ಫೇಕ್ ಆಗಿದೆ ಎಂಬ ಪ್ರಶ್ನೆ ಕೇಳಿದ್ದಾರೆ. ಆಗ ವಿನಯ್ ಅವರು ಪ್ರತಾಪ್ ಆಡಿದ ಮಾತು ನನಗೆ ಬೇಜಾರಾಗುತ್ತಿದೆ. ನಾನು ಆ ರೀತಿ ಎಂದಿಗೂ ಕೂಡ ನಡೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿನಯ್ ಮೇಲೆ ಪರಿಣಾಮ ಬೀರಿದ ಪ್ರತಾಪ್ ಮಾತು

ಕಿಚ್ಚ ಸುದೀಪ್ ಇಂದು ಮನೆಯ ಎಲ್ಲಾ ಸದಸ್ಯರಿಗೂ ಕೂಡ ಒಂದು ಟಾಸ್ಕ್ ನೀಡಿದ್ದಾರೆ. ತಲೆಗೆ ಬಲ್ಬನ್ನು ಹಾಕಿ ಈ ಮನೆಯಲ್ಲಿ ಯಾರ ಮಾತು ಅತಿ ಹೆಚ್ಚು ಫೇಕ್ ಎಂದು ಅನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಮೊದಲಿಗೆ ಕಾರ್ತಿಕ್ ಸಂಗೀತಾ ಬಳಿ ಬಂದು ಸಂಗೀತಾ ಮಾತು ನನಗೆ ಫೇಕ್ ಎಂದು ಅನಿಸುತ್ತದೆ. ಅವರು ಹೇಳಿದ್ದನ್ನೆಲ್ಲ ಕೇಳಬೇಕು ಎಂಬ ಧೋರಣೆ ಸಂಗೀತಾ ಅವರಲ್ಲಿ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ತಲೆ ಮೇಲೆ ಹಾಕಿದ್ದ ಲೈಟನ್ನು ಆನ್ ಮಾಡಿದ್ದಾರೆ. ಇನ್ನು ಇದೇ ವೇಳೆ ವಿನಯ್ ಅವರು ಪ್ರತಾಪ್ ಆಡಿದ ಮಾತಿನ ಬಗ್ಗೆ ಕಿಚ್ಚ ಸುದೀಪ್ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಾಪ್ ಬಳಿ ಬಂದ ವಿನಯ್ ಇವರ ಜೊತೆಯಲ್ಲಿ ಇದ್ದ ಫ್ರೆಂಡ್ ಅನ್ನು ತುಳಿದು ಮೇಲಕ್ಕೆ ಬಂದಿದ್ದಾರೆ. ಆದ್ದರಿಂದ ಅವರೆಲ್ಲರೂ ಕೂಡ ಮನೆಯಿಂದ ಹೊರಗೆ ಹೋದರು ಎಂದು ಹೇಳಿದ ಸ್ಟೇಟ್ಮೆಂಟ್ ಫೇಕ್ ಎಂದು ನನಗೆ ಅನಿಸುತ್ತದೆ. ನಾನು ಆ ಕೆಲಸವನ್ನು ಎಂದಿಗೂ ಮಾಡಿಲ್ಲ ಎಂದುಹೇಳಿದ್ದಾರೆ. ತಾವು ಎಲ್ಲರ ಜೊತೆಗೂ ಚೆನ್ನಾಗಿಯೇ ಇದ್ದೇನೆ. ಅವರು ಕೂಡ ನನ್ನಂತೆ ಎಂದು ಭಾವಿಸಿದ್ದೆ. ಪ್ರತಾಪ್ ಆ ಮಾತನ್ನು ಯಾಕೆ ಹೇಳಿದ್ದರೋ ಗೊತ್ತಿಲ್ಲ ಎಂದಿದ್ದಾರೆ.

Bigg Boss Kannada Season 10; Vinay Gowda hurts by Drone Prathaps statement, Super Sunday with sudeepa

ತಮ್ಮ ಸ್ಟೇಟ್ಮೆಂಟ್‌ಗೆ ಕ್ಲಾರಿಟಿ ಕೊಟ್ಟ ಡ್ರೋನ್

ಪ್ರತಾಪ್ ತಾವು ಆಡಿದ ಮಾತಿಗೆ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ನಾನು ಆ ರೀತಿ ಹೇಳಲಿಲ್ಲ ಅವರ ಜೊತೆಗಿದ್ದ ಸ್ನೇಹಿತರು ತಪ್ಪು ಮಾಡಿದಾಗ ಅವರನ್ನು ತಿದ್ದಿಲ್ಲ. ಅದಕ್ಕಾಗಿ ಅವರು ಮನೆಯಿಂದ ಹೊರಗಡೆ ಹೋದರು ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ಫೇಕ್ ಇರಲಿಲ್ಲ ಎಂದು ಡ್ರೋನ್ ಹೇಳಿದ್ದಾರೆ. ಆದರೂ ಸಹ ಪ್ರತಾಪ್ ಅವರು ಹೇಳಿದ ಮಾತು ವಿನಯ್ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿದಂತೆ ಇದೆ ಅವರು ಕಣ್ಣಲ್ಲಿ ನೀರು ತುಂಬಿಕೊಂಡಿದ್ದು ಸಹ ವೀಕ್ಷಕರು ನೋಡಿದ್ದಾರೆ.

More from Filmibeat

English summary
Bigg boss 10: Vinay Gowda hurts by Drone Prathap's statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X