BBK10: ಫಿನಾಲೆ ಹತ್ತಿರವಾದದ್ದಂತೆ ವಿನಯ್ ಸೈಲೆಂಟ್ ಆದ್ರಾ? ಏನಿದು ಸ್ಟ್ರಾಟಜಿನಾ?

By ಎಸ್ ಸುಮಂತ್

ಬಿಗ್ ಬಾಸ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ನೋಡ ನೋಡುತ್ತಿದ್ದಂತೆ ಮನೆ ಖಾಲಿಯಾಗುತ್ತಾ ಇದೆ. ಇನ್ನೆರಡು ವಾರ ಯಾರ್ಯಾರು ಹೊರಗೆ ಹೋಗುತ್ತಾರೋ, ಯಾರ್ಯಾರು ಫಿನಾಲೆ ವೇದಿಕೆ ಹಂಚಿಕೊಳ್ಳುತ್ತಾರೋ ಎಂಬ ಕುತೂಹಲ ಇದ್ದೆ ಇದೆ. ಈ ಮಧ್ಯೆ ವಿನಯ್ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಮನೆಯೊಳಗಿರುವವರಲ್ಲಿ ಕೆಲವರು ಬದಲಾವಣೆಯಾಗಿಲ್ಲ. ಆದರೆ, ವಿನಯ್ ನಡವಳಿಕೆಯಲ್ಲಿ ಬದಲಾಗಿರುವುದು ಎದ್ದು ಕಾಣುತ್ತಿದೆ. ಮನೆಗೆ ಆ ರೀತಿಯ ಒಬ್ಬ ನಾಯಕ ಬೇಕಿತ್ತು ಎಂದೆನಿಸಬೇಕು, ಅಷ್ಟು ಪ್ರಬುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇವತ್ತಿನ ಟಾಸ್ಕ್ ವಿಚಾರದಲ್ಲೂ ಅಷ್ಟೇ.

Bigg Boss Kannada season 10 Vinay is an enlightened hero

ಬದಲಾಗದ ಸಂಗೀತಾ, ಸೈಲೆಂಟ್ ಆದ ತನಿಷಾ

ಮನೆಯಲ್ಲಿ ದಿನ ಕಳೆದಂತೆ ಯಾರಿಗೂ ಬೇಸರವೇ ಇಲ್ಲ. ಇಷ್ಟು ತಿಂಗಳ ಕಾಲ ಈ ಮನೆ ನಮ್ಮದಾಗಿತ್ತು, ಈ ಮನೆಯಲ್ಲಿ ನಾವಷ್ಟೇ ಜೀವನ ಮಾಡಿದ್ದೀವಿ, ಫಿನಾಲೆ ಹತ್ತಿರವಾದಂತೆ ಈ ಮನೆಯ ಬಾಂಧವ್ಯವನ್ನು ಕಳೆದುಕೊಳ್ಳುತ್ತೀವಿ ಎಂಬ ಸಣ್ಣ ಆಲೋಚನೆಯೂ ಸುಳಿಯುತ್ತಿಲ್ಲ. ಮೊದಲ ದಿನ ಹೇಗಿದ್ದರೋ ಅದೇ ರೀತಿ ಇಂದಿಗೂ ಇದ್ದಾರೆ. ಅದೇ ಟಾಸ್ಕ್ , ಅದೇ ಸಮಯ, ಅದೇ ದಿನವನ್ನು ಮುಂದೂಡುತ್ತಿದ್ದಾರೆ. ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ನಮ್ರತಾರನ್ನು ಸಂಗೀತಾ ನಂಬಿದ್ದಾರೆ. ಆದರೂ ಹೋಗಿ ಕಾರ್ತಿಕ್ ಬಳಿ ನೆಗೆಟಿವ್ ಮೂಡುವ ರೀತಿ ಮಾತನಾಡುತ್ತಾರೆ. ಸಂತು-ಪಂತು ಬದಲಾಗಲ್ಲ. ಇವತ್ತಿನ ದಿನಕ್ಕೆ ತನಿಷಾ ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದಾರೆ.

ವಿನಯ್ ನಡವಳಿಕೆಯಲ್ಲಿ ಬದಲಾವಣೆ

ಆದರೆ ವಿನಯ್ ಮನೆಯೊಳಗೆ ತುಂಬಾನೇ ಬದಲಾಗಿದ್ದಾರೆ. ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದಾರೆ. ಆಗಾಗ ವಿನಯ್ ಬಾಯಲ್ಲಿ ಈ ಮಾತು ಬರುತ್ತಾ ಇರುತ್ತದೆ. ಇನ್ನೆಷ್ಟು ದಿನ ಇರುತ್ತೀವೋ ಎಲ್ಲರೂ ಚೆನ್ನಾಗಿರೋಣಾ ಅಂತ. ಆದರೆ, ಅಗ್ರೆಸ್ಸಿವ್ ಆಗಿ ಆಡುವಂತ ಆಟ ಬಂದರೆ ಮತ್ತೆ ಶುರು ಮಾಡುತ್ತಾರೆ. ಅಗ್ರೆಸ್ಸಿವ್ ಟಾಸ್ಕ್ ಅಲ್ಲದೆ ಹೋದರೇ ವಿನಯ್ ಎಲ್ಲರನ್ನು ನಗಿಸುತ್ತಾ, ತಾನೂ ನಗುತ್ತಾ, ಕಾಲೆಳೆದುಕೊಂಡು ಆಟವಾಡುತ್ತಾ ಇರುತ್ತಾರೆ.

ಕಾರ್ತಿಕ್‌ಗೆ ಬುದ್ದಿ ಮಾತು

ಇಂದು ಕಾರ್ತಿಕ್ ಸಿಕ್ಕಾಪಟ್ಟೆ ಬ್ಲಾಸ್ಟ್ ಆಗಿದ್ದರು. ಯಾಕಂದ್ರೆ ಅದಾಗಲೇ ಸಂಗೀತಾ, ಕಾರ್ತಿಕ್ ರನ್ನು ಆಟದಿಂದ ಬೇಕು ಅಂತಾನೇ ಹೊರಗೆ ಇಟ್ಟಿದ್ದರು. ಇದರಿಂದ ಮನದಲ್ಲಿ ಕೋಪ ಉರಿಯುತ್ತಲೇ ಇತ್ತು. ಅದನ್ನು ಬಿಗ್ ಬಾಸ್ ಕ್ಯಾಮೆರಾ ಚೆನ್ನಾಗಿಯೇ ಕ್ಯಾಪ್ಚರ್ ಕೂಡ ಮಾಡಿದೆ. ಆಟವೆಲ್ಲಾ ಮುಗಿದ ಮೇಲೆ ಸಂಗೀತಾರನ್ನು ನೋಡಿ, ವುಮೆನ್ ಕಾರ್ಡ್ ಅಂದಿದ್ದೇ ತಡ ಮನೆಯಲ್ಲಿ ಜೋರು ಜಗಳ ಎದ್ದಿತ್ತು. ಅಷ್ಟೇ ಯಾಕೆ ಯೋಗ್ಯತೆ ಅಂತೆಲ್ಲಾ ಮಾತನಾಡಿದರು. ಆಗ ವಿನಯ್ ಬುದ್ದಿಮಾತು ಹೇಳಿದರು. ಕಾರ್ತಿಕ್ ಬಳಿ ಬಂದು ಈ ರೀತಿ ಎಲ್ಲಾ ಮಾತನಾಡಬೇಡ. ನನಗೆ ಆದ ಪರಿಸ್ಥಿತಿ ಗೊತ್ತಲ್ವಾ ಎಂದು ಎಚ್ಚರಿಕೆ ನೀಡಿದ್ದಾರೆ.

Bigg Boss Kannada season 10 Vinay is an enlightened hero

ವಿನಯ್ ಗುಣಕ್ಕೆ ಮೆಚ್ಚುಗೆ

ಗೋಪುರದ ಆಟ ಆಡುವಾಗ ಕಡೆಯಲ್ಲಿ ಸಂಗೀತಾ ಹಾಗೂ ವಿನಯ್ ಎದುರು ಬದುರಾಗುತ್ತಾರೆ. ವಿನಯ್ ಹಾಗೂ ಸಂಗೀತಾ ಎದುರು ಬದುರು ಆಡಬೇಕು ಎಂದಾಗೆಲ್ಲಾ ಏನಾದರೂ ಸಮಸ್ಯೆ ಬರುತ್ತಾ ಇತ್ತು. ಈ ಬಾರಿ ಆ ಎಲ್ಲವೂ ಕಳೆದು ಇಬ್ಬರು ಆಟವಾಡಿದ್ದಾರೆ. ಈ ವೇಳೆ ಸಂಗೀತಾ ಅವರ ಗೋಪುರ ಕಾಪಾಡಿಕೊಳ್ಳಲು ವಿನಯ್ ಎಸೆಯುವ ಬಾಲ್ ಅನ್ನು ತಡೆಯುವುದಕ್ಕೆ ಯತ್ನಿಸಿದ್ದಾರೆ. ಆಗ ಹಣೆಗೆ ಕೊಂಚ ಪೆಟ್ಟು ಬಿದ್ದಿತ್ತು. ಆಟ ಮುಗಿದ ಮೇಲೆ ವಿನಯ್ ಬಹಳ ಕಾಳಜಿ ತೋರಿದರು. ಔಷಧಿ ಹಚ್ಚುವುದಕ್ಕೆ ಬಿಗ್ ಬಾಸ್ ಕರೆದಾಗ, ಕಾರ್ತಿಕ್ ಜೊತೆಗೆ ಜಗಳವಾಡುತ್ತಾ ನಿಂತ ಸಂಗೀತಾರನ್ನು, ವಿನಯ್ ಸಮಾಧಾನ ಪಡಿಸಿ ಕಳುಹಿಸಿದ್ದನ್ನು ನೋಡಿದಾಗ ಮನೆಗೊಬ್ಬ ನಾಯಕನಂತೆ ಫೀಲ್ ಆದರು.

More from Filmibeat

English summary
BBK 10 Vinay is an enlightened hero ?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X