BBK10: ಕಾರ್ತಿಕ್ ಠುಸ್ ಆಗೋಕೆ ವಿನಯ್ ಕಾರಣನಾ..? ಭ್ರಮೆಯಲ್ಲಿದ್ದಾರಾ ಬಿಗ್ ಬಾಸ್ 'ಆನೆ'?
ಬಿಗ್ ಬಾಸ್ ಆರಂಭವಾದಾಗಿನಿಂದ ಮನೆಯಲ್ಲಿ ಆನೆ ಎಂಬಂತೆ ವಿನಯ್ ಗುರುತಿಸಿಕೊಂಡಿದ್ದಾರೆ. ಯಾರೂ ಕೂಡ ತಮಗೆ ಸರಿಸಾಟಿಯಿಲ್ಲ ಎಂಬ ರೀತಿಯೇ ನಡೆದುಕೊಳ್ಳುತ್ತಾರೆ. ಸಮನಾವಾದ ಸ್ಪರ್ಧಿ ಯಾರೆಂದರೆ ಯಾರನ್ನು ಹೇಳುವುದಕ್ಕೆ ಸಿದ್ಧರಿರುವುದಿಲ್ಲ ವಿನಯ್. ಆದರೆ, ಸಂಗೀತಾ ಪಕ್ಕ ಸ್ಪರ್ಧೆ ಕೊಡುತ್ತಾರೆ. ಅದು ನೋಡುಗರಿಗೆ ತಿಳಿಯುತ್ತಿದೆ.
ಬಿಗ್ ಬಾಸ್ ಇನ್ನೊಂದು ವಾರವಷ್ಟೇ. ಈ ವಾರವೇ ಕಿಚ್ಚನ ಪಂಚಾಯ್ತಿ ಕೊನೆಯ ಪಂಚಾಯ್ತಿಯಾಗಿರುತ್ತದೆ. ಮುಂದಿನ ವಾರಕ್ಕೆ ಗೆದ್ದ ಸ್ಪರ್ಧಿಯ ಘೋಷಣೆಯಾಗಿರುತ್ತದೆ. ಬಿಗ್ ಬಾಸ್ ಮನೆಯಲ್ಲಿ ಜನ ಕಡಿಮೆಯಾಗಿದ್ದಾರೆ. ಫಿನಾಲೆಗೆ ದಿನ ಹತ್ತಿರವಾಗುತ್ತಿದೆ. ಟಾಸ್ಕ್ ಗಳು ಕಡಿಮೆಯಾಗಿದೆ. ಹೀಗಾಗಿ ಮನೆ ಸಹಜವಾಗಿಯೇ ಸೈಲೆಂಟ್ ಆಗಿದೆ. ಈ ಹೊತ್ತಲ್ಲಿ ವಿನಯ್ ಇದೆಲ್ಲ ನನ್ನಿಂದಲೇ ಎಂದುಕೊಳ್ಳುತ್ತಿದ್ದಾರಾ? ಈ ಪ್ರಶ್ನೆಯಂತೂ ಕಾಡಿದೆ.

ವಿನಯ್ ಗೇಮ್ ಪ್ಲ್ಯಾನ್ ಏನು?
ಬಿಗ್ ಬಾಸ್ ಮನೆಗೆ ಬರುವಾಗ ಆಟ ಆಡಲೆಂದೇ ಬರುವವರು ಹೆಚ್ಚು. ಆದರೆ ದಿನ ಕಳೆದಂತೆ ಆಟ ಮರೆತು ಜೀವಿಸುವುದಕ್ಕೆ ಶುರು ಮಾಡಿ ಬಿಡುತ್ತಾರೆ. ಆಗಾಗ ನೆನಪು ಮಾಡಿಕೊಂಡು ಮತ್ತೆ ಆಟ ಆಡುವುದಕ್ಕೆ ಪ್ರಯತ್ನ ಪಡುತ್ತಾರೆ. ಆದರೆ, ವಿನಯ್ ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಾನೂ ತಂತ್ರಗಾರಿಕೆ ಮಾಡುತ್ತಲೇ ಇದ್ದಾರೆ. ಅಗ್ರೆಸ್ಸಿವ್ ಆಗಬೇಕೆಂಬ ಸಂದರ್ಭದಲ್ಲಿ ಅಗ್ರೆಸ್ಸಿವ್, ಸೈಲೆಂಟ್ ಪರಿಸ್ಥಿತಿ ಸೈಲೆಂಟ್, ಕ್ಷಮೆ ಕೇಳಬೇಕೆಂದಾಗ ಕ್ಷಮೆಯನ್ನು ಕೇಳಿದ್ದಾರೆ. ಈಗ ಫಿನಾಲೆಗೂ ಆಟ ಶುರು ಮಾಡಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ತುಕಾಲಿ-ವಿನಯ್ ಡೀಪ್ ಡಿಸ್ಕಷನ್
ಬಿಗ್ ಬಾಸ್ ಶುರುವಾದಾಗಿನಿಂದ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಜೊತೆಯಾಗಿಯೇ ಇದ್ದಾರೆ. ಅವರ ಬಾಂಧವ್ಯ ಕಂಡು ಸಂತು-ಪಂತು ಅಂತಾನೇ ಹೆಸರನ್ನು ನೀಡಲಾಗಿದೆ. ಯಾರ ಜೊತೆಗೂ ಹೆಚ್ಚು ಸೇರದೆ ಸಂತು - ಪಂತು ಕುಳಿತು, ಗಾಸಿಪ್ ಮಾತನಾಡುತ್ತಾ ಇರುತ್ತಾರೆ. ಇದೀಗ ತುಕಾಲಿ ಮತ್ತು ವಿನಯ್ ಕೂತು ಕಾರ್ತಿಕ್ ಬಗ್ಗೆ ಮಾತನಾಡುತ್ತಾ ಕೂತಿದ್ದಾರೆ. ಈಗ ಕಾರ್ತಿಕ್ ಟಾಪ್ 5 ಹೋಗುವುದಕ್ಕೆ ಅರ್ಹನಲ್ಲ ಎಂದು ತುಕಾಲಿ ಹೇಳಿದ್ದಾರೆ.
ವಿನಯ್ ಕಿರುಚಾಟ ನಿಲ್ಲಿಸಿದ್ದೇಕೆ..?
ತುಕಾಲಿ ಬಳಿ ವಿನಯ್ ರಿಯಲ್ ವಿಚಾರ ಬಾಯ್ಬಿಟ್ಟಿದ್ದಾರೆ. "ನೀನ್ ಯಾವಾಗ ಅಗ್ರೆಸ್ಸಿವ್ ನಿಲ್ಲಿಸಿದೆ. ಮನೆಯಲ್ಲೆಲ್ಲಾ ಹಲವರು ಸೈಡ್ಲೈನ್ ಆಗಿ ಹೋದ್ರು ಅಂತ ತುಕಾಲಿ ಹೇಳಿದರೆ, ಹೌದು ಅದಕ್ಕೆ ಅಂತಾನೇ ನಾನು ನಿಲ್ಲಿಸಿದೆ" ಎಂದು ವಿಬಯ್ ಹೇಳಿದ್ದಾರೆ. ಕಾರ್ತಿಕ್ ವಿಚಾರ ಮಾತನಾಡಿದ ಬಳಿಕ, ಸಂಗೀತಾ ರೂಟ್ ಚೆಂಜ್ ಮಾಡಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಕ್ಯಾಪ್ಟನ್ ಆಗಿದ್ದು, ಎಲ್ಲವೂ ಪ್ಲಸ್ ಪಾಯಿಂಟ್ ಆಯಿತಲ್ಲ, ಅದನ್ನೇ ಹಿಡಿದುಕೊಂಡಳು. ನಾನು ಗಟ್ಟಿ ಮಹಿಳೆ, ಅಂತ ಒಂಟಿಯಾಗಿ ಬಿಟ್ಟಳು. ಅದೇ ಲಾಭ ಆಯ್ತು" ಅಂತ ಸಂಗೀತಾರ ಬಗ್ಗೆ ಮಾತನಾಡಿದ್ದಾರೆ.

ವಿನಯ್ ಭ್ರಮೆಯಲ್ಲಿದ್ದಾರಾ..?
ಮನೆ ಸೈಲೆಂಟ್ ಆಗಿದ್ದಕ್ಕೆ, ಸಂಗೀತಾ ಸಾಫ್ಟ್ ಆಗಿದ್ದಕ್ಕೆ, ಕಾರ್ತಿಕ್ ಠುಸ್ ಪಟಾಕಿ ಆಗಿದ್ದಕ್ಕೆ ವಿನಯ್ ಅಂದುಕೊಂಡಿದ್ದಾರೆ ಇದಕ್ಕೆಲ್ಲಾ ನಾನೇ ಕಾರಣ ಅಂತ. ತಾನು ಅಗ್ರೆಸ್ಸಿವ್ ಆಗಿ ಆಡದೆ ಇರುವುದಕ್ಕೆ ಎಲ್ಲರೂ ಸೈಲೆಂಟ್ ಆಗಿದ್ದಾರೆ ಅಂತ. ಆದರೆ, ವಿನಯ್ ಈ ವಿಚಾರದಲ್ಲಿ ಭ್ರಮೆಯಲ್ಲಿದ್ದಾರಾ? ಈ ಪ್ರಶ್ನೆಯಂತೂ ಕಾಡುತ್ತಿದೆ. ಮನೆಯ ಜರ್ನಿಯನ್ನು ಇನ್ನು ಕೆಲವೇ ದಿನಗಳಲ್ಲಿ ಮುಗಿಸುತ್ತಾರೆ ಎಂಬ ಕಾರಣಕ್ಕೆ ಬಿಗ್ ಬಾಸ್ ಜಗಳವಾಗುವಂತಹ ಟಾಸ್ಕ್‌ಗಳನ್ನು ನೀಡುತ್ತಿಲ್ಲ. ಬದಲಿಗೆ ಶಾಂತವಾಗಿ, ತಲೆ ಉಪಯೋಗಿಸುವಂತ ಟಾಸ್ಕ್‌ಗಳನ್ನಷ್ಟೇ ನೀಡುತ್ತಿದೆ. ಆದರೆ, ವಿನಯ್ ತಾನೂ ಅಗ್ರೆಸ್ಸಿವ್ ಆಟ ನಿಲ್ಲಿಸಿದ್ದೀನಿ ಎಂದುಕೊಂಡಿದ್ದಾರೆ.


Click it and Unblock the Notifications











