ಇರೋದೆ ಕಡಿಮೆ ಸಮಯ, ಕಿತ್ತಾಟ ಯಾಕೆ ಅಂತಿದ್ದಾರೆ ವಿನಯ್ ಗೌಡ..!: ಏನಿದು ಹೊಸ ಗೇಮ್?
ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದ ಹಾಗೇ ಜ್ಞಾನೋದಯ ಆಗಿ ಹೋಗಿದೆಯಾ ಅಂತ. ದಿನಗಳು ಉರುಳುತ್ತಿವೆ. ಫೈನಲ್ ರೌಂಡ್ ಹತ್ತಿರ ಬರುತ್ತಿದೆ. ಮನೆಯೊಳಗೆ ಇರುವ ಪ್ರತಿಯೊಬ್ಬರಲ್ಲೂ ತಾನೇ ಗೆಲ್ಲುವುದು ಎಂಬ ಗಟ್ಟಿ ನಂಬಿಕೆ ಇದೆ. ಹೀಗಾಗಿ ಯಾರ ಮುಖದಲ್ಲೂ ಆತಂಕದ ವಾತಾವರಣ ಕಾಣಿಸುತ್ತಿಲ್ಲ.
ಈ ಸೀಸನ್ ಆರಂಭದಿಂದ ಒಂದು ಕ್ಷಣ ಎಪಿಸೋಡ್ ಗಳನ್ನು ಮೆಲುಕು ಹಾಕಿದರೆ ಬರೀ ಕಿತ್ತಾಟ, ಅಗ್ರೆಸ್ಸಿವ್ ಆಟ, ರೂಲ್ಸ್ ಬ್ರೇಕ್‌ಗಳನ್ನೇ ಮಾಡಲಾಗಿದೆ. ಇನ್ಮುಂದೆ ಜನ ಕಡಿಮೆಯಾಗುತ್ತಿದ್ದಾರೆ. ಇರುವವರ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಹೀಗಾಗಿ ಕಿತ್ತಾಟಗಳು ಕಡಿಮೆಯಾಗಲೇಬೇಕು. ಇದೇ ಸಮಯದಲ್ಲಿ ವಿನಯ್ ಕೂಡ ಅಗ್ರೆಸ್ಸಿವ್ ಆಟ ಆಡುವುದಿಲ್ಲ ಎಂದಿದ್ದಾರೆ.

ಮನೆಯವರ ಮುಂದೆ ಅಗ್ರೆಸ್ಸಿವ್ ಆಟ ಆಡಲ್ಲ ಎಂದ ವಿನಯ್!
ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಆಟ ಕಳೆಯುವುದು ಅಷ್ಟು ಸುಲಭವಲ್ಲ. ಹೊರಗಿನ ಪ್ರಪಂಚದ ಸಂಪರ್ಕವೇ ಇರುವುದಿಲ್ಲ, ತಂದೆ - ತಾಯಂದಿರ ಪೋಷಣೆ ಇರುವುದಿಲ್ಲ, ಬೆಸ್ಟ್ ಫ್ರೆಂಡ್ಸ್ ಗಳ ಸಹಕಾರ ಇರುವುದಿಲ್ಲ. ಒಳಗೆ ಇರುವವರೆ ಕುಟುಂಬದವರು, ಸ್ನೇಹಿತರು. ಅದರೊಳಗೂ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿ. ಸ್ನೇಗಿತರಾದವರೇ ಕೊನೆಯಲ್ಲಿ ದುಷ್ಮನ್‌ಗಳಾಗುತ್ತಾರೆ. ಹೊರಗೆ ಆದರೆ ದುಷ್ಮನ್ ಗಳಾದರೆ ಅವರ ಮುಖವನ್ನೇ ನೋಡದೆ ದೂರ ಉಳಿಯಬಹುದು. ಆದರೆ ಬಿಗ್ ಬಾಸ್ ಮನೆಯಲ್ಲಿ ಆ ರೀತಿ ಆಗಲ್ಲ. ದಿನಗಳು ಉರುಳುತ್ತಿದ್ದಂತೆ ಇದು ವಿನಯ್‌ಗೆ ರಿಯಲೈಸ್ ಆಗಿರುವ ಹಾಗಿದೆ. ಅದಕ್ಕೆ ಮನೆಯವರೆಲ್ಲಾ ಅತ್ಯಾಶ್ಚರ್ಯ ಪಡಯವಂತೆ ಪ್ರಾಮೀಸ್ ಮಾಡಿದ್ದಾರೆ.
ವಿನಯ್ ಮಾತು ಕೇಳಿ ಕಾರ್ತಿಕ್ ಶಾಕ್, ಮತ್ತೆ ಅಖಾಡಕ್ಕೆ ಕರೆದ ತನಿಷಾ!
ವಿನಯ್ ಇನ್ಮುಂದೆ ಅಗ್ರೆಸ್ಸಿವ್ ಆಗಿ ಆಡುವುದಿಲ್ಲವಂತೆ. ಎಷ್ಟು ತಾಳ್ಮೆಯಿಂದ ಸಾಧ್ಯವೋ ಅಷ್ಟು ತಾಳ್ಮೆಯಿಂದ ಆಡುತ್ತಾರೆ. ನಮ್ರತಾ, ವಿನಯ್, ಮೈಕಲ್, ಕಾರ್ತಿಕ್, ತನಿಷಾ, ತುಕಾಲಿ ಅಡುಗೆ ಮನೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ವಿನಯ್ ಇದ್ದಕ್ಕಿದ್ದ ಹಾಗೇ ಇನ್ಮುಂದೆ ಅಗ್ರೆಸ್ಸಿವ್ ಆಗಿ ಆಡುವುದಿಲ್ಲ ಎಂದಿದ್ದಾರೆ. ಇದನ್ನು ಕೇಳಿದ ಎಲ್ಲರಿಗೂ ಶಾಕ್ ಆಗಿದೆ. ನಮ್ರತಾ ಪ್ರಾಮೀಸ್ ಕೂಡ ಮಾಡಿಸಿಕೊಂಡಿದ್ದಾರೆ. ಪ್ರಾಮೀಸ್ ಮಾಡಿದ ವಿನಯ್ ಕಂಡು ತನಿಷಾ 'ಬಾರೋ.. ಬಾ' ಅಂತ ಕೆರಳಿಸುವ ಪ್ರಯತ್ನ ಮಾಡಿದ್ದಾರೆ.
ಮೈಕಲ್‌ನಿಂದ ಬದಲಾದರಾ ವಿನಯ್..?, ಮೈಕಲ್‌ಗೆ ಥ್ಯಾಂಕ್ಸ್ ಹೇಳಿದ್ದೇಕೆ..?
ಅಡುಗೆ ಮನೆಯಲ್ಲಿ ವಿನಯ್ ಹೇಳಿದ ಮಾತು ಒಂದು ಕ್ಷಣ ಎಲ್ಲರಿಗೂ ಶಾಕ್ ಆಗಿತ್ತು. ಇದೇ ವೇಳೆ ನಮ್ರತಾ, ಇನ್ಮುಂದೆ ನಾವೆಲ್ಲಾ ಅಗ್ರೆಸ್ಸಿವ್ ಆಗಿ ಆಡೋಣಾ ಅಂತಾನೇ ಹೇಳಿದ್ದಾರೆ. ವಿನಯ್ ಅವರಿಗೆ ಎಷ್ಟು ಕಾಡುವುದಕ್ಕೆ ಸಾಧ್ಯವೋ ಅಷ್ಟು ಕಾಡಿದ್ದಾರೆ. ಬಳಿಕ ವಿನಯ್ ಮೈಕಲ್ ಗೆ ಥ್ಯಾಂಕ್ಸ್ ಹೇಳಿದ್ದಾರೆ. ವಿನಯ್ ಈ ಮಾತಿಗೆ ಮೈಕಲ್ ಸ್ಪೂರ್ತಿಯಾಗಿದ್ದಾರೆ. ನಿನ್ನೆ ಡಬಲ್ ಎಲಿಮಿನೇಷನ್ ಎನ್ನಲಾಗಿತ್ತು. ಮೈಕಲ್ ಕೂಡ ಔಟ್ ಆಗಿದ್ದಾರೆ ಎನ್ನಲಾಗಿತ್ತು. ಈಗ ಇದ್ದಕ್ಕಿಂದ ಹಾಗೇ ಪ್ರತ್ಯಕ್ಷರಾಗಿ ವಿನಯ್‌ಗೆ ಸ್ಪೂರ್ತಿಯಾಗಿದ್ದಾರೆ.

ವಿನಯ್ ಅಗ್ರೆಸ್ಸಿವ್ ಆಡಲ್ಲ ಎಂದಿದ್ದಕ್ಕೆ ಅಭಿಮಾನಿಗಳು ಏನಂದ್ರು..?
ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಅವರವರದ್ದೇ ಆದಂತ ಬೆಂಬಲಿಗರ ಪಡೆಗಳನ್ನು ಹೊಂದಿದ್ದಾರೆ. ಶುಕ್ರವಾರ ಬಂತು ಅಂದರೆ ತಮ್ಮಿಷ್ಟದ ಆಟಗಾರರನ್ನು ಉಳಿಸುತ್ತಾರೆ. ಕಮೆಂಟ್ ಬಾಕ್ಸ್‌ಗಳಲ್ಲಿ ಪ್ರತಿ ದಿನ ಬಿಡುವ ಪ್ರೋಮೋಗಳಿಗೆ ಜೈಕಾರ ಕೂಡ ಹಾಕುತ್ತಾರೆ. ಇದೀಗ ವಿನಯ್, ಇನ್ಮುಂದೆ ಅಗ್ರೆಸ್ಸಿವ್ ಇಲ್ಲ.. ಕೂಲ್ ಕೂಲ್ ಎಂದಾಗಲೇ ಅಭಿಮಾನಿಗಳ ದಿಲ್, ಖುಷ್ ಆಗಿದೆ. ಒಂದು ವೇಳೆ ಬಿಗ್ ಬಾಸ್ ಅಗ್ರೆಸ್ಸಿವ್ ಆಗಿ ಆಡುವ ಆಟವನ್ನೇ ಕೊಟ್ಟರೂ ಕೂಲ್ ಆಗಿರುತ್ತಾರಾ ಎಂಬುದನ್ನು ನೋಡಬೇಕಿದೆ.


Click it and Unblock the Notifications











