ಹೈವೋಲ್ಟೇಜ್ ಅಖಾಡದಿಂದ ಹೊರ ಹೋಗೋದು ಯಾರು..? ಕಿಚ್ಚನ ಪಂಚಾಯಿತಿಯಲ್ಲಿ ಯಾರಿಗೆ ಕ್ಲಾಸ್?
ಬಿಗ್ ಬಾಸ್ ಸೀಸನ್ 10 ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. ಜೊತೆಗೆ ಈಗಿರುವ ಎಲ್ಲಾ ಸ್ಪರ್ಧಿಗಳು ಕೂಡ ಸ್ಟ್ರಾಂಗ್ ಎನಿಸಿದ್ದಾರೆ. ಮೊದಲು ಆಟವಾಡದೇ ಇದ್ದವರು ಕೊನೆಗೆ ಆಟವಾಡುತ್ತಾ ಇದ್ದಾರೆ. ಪ್ರತಾಪ್ ಮೊದಲಿನಿಂದಲೂ ಕೂಡ ಸ್ವಲ್ಪ ಆಟದಲ್ಲಿ ಹಿಂದುಳಿದಿದ್ದರು ಆದರೆ ಫಿನಾಲೆ ಹತ್ತಿರ ಬರುತ್ತಿದ್ದಂತೆ ಸಕ್ಕತ್ ಆಕ್ಟಿವ್ ಆಗಿದ್ದಾರೆ. ಈ ವಾರ ಸಂಗೀತಾ ವರಕೃಪೆಯಿಂದಾಗಿ ಪ್ರತಾಪ್ ನಾಮಿನೇಷನ್ ನಿಂದ ಪಾರಾಗಿದ್ದರು. ಬಿಗ್ ಬಾಸ್ ಮನೆಯಲ್ಲಿರುವ ಸಂಗೀತಾ ಹಾಗೂ ಪ್ರತಾಪ್ ಇಬ್ಬರು ಕೂಡ ಈ ವಾರ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದು ಇನ್ನುಳಿದ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ.
ವಿನಯ್ ಅಂತೂ ಈ ವಾರ ಎಲ್ಲಾ ಸ್ಪರ್ಧಿಗಳ ಮೇಲು ಬೇಸರ ಮಾಡಿಕೊಂಡಿದ್ದಾರೆ. ಅವರಿಗೆ ಆಟವಾಡಲು ಚಾನ್ಸ್ ಸಿಕ್ಕಿರಲಿಲ್ಲ ಮೈಕಲ್ ಕೊಟ್ಟ ವಿಶೇಷ ಅಧಿಕಾರದಿಂದಾಗಿ ಮೂರು ನಾಲ್ಕು ಆಟದಲ್ಲಿ ವಿನಯ್ ಭಾಗಿಯಾಗಿದ್ದರು. ಆದರೆ ಇಲ್ಲಿ ವಿನಯ್ ನಿರೀಕ್ಷೆ ಮಾಡಿದ ಪಾಯಿಂಟ್ಸ್ ಗಳಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ವಿನಯ್‌ಗೆ ನಿರಾಸೆಯಾಗಿದೆ. ವಿನಯ್ ಕೂಡ ಈ ವಾರದ ನಾಮಿನೇಷನ್ ಲಿಸ್ಟ್ ನಲ್ಲಿ ಇದ್ದು ಅವರ ಅಭಿಮಾನಿಗಳು ಹಾಗೂ ವೀಕ್ಷಕರು ವಿನಯ್ ಅವರನ್ನು ಈ ವಾರವು ಕೂಡ ಉಳಿಸಿಕೊಂಡು ಫಿನಾಲೆಗೆ ತಲುಪಿಸುತ್ತಾರಾ ನೋಡಬೇಕಾಗಿದೆ.

ನಮ್ರತಾ ಅವರು ಕೂಡ ಬೇರೆಯವರು ನೀಡಿದ ಅವಕಾಶ ಬಳಸಿಕೊಂಡು ಟಾಸ್ಕ್‌ಗಳನ್ನು ಆಡಿ ವಿನ್ ಆಗಿ ಒಂದಷ್ಟು ಪಾಯಿಂಟ್ಸ್ ಗಳಿಸಿದ್ದರು. ನಮ್ರತಾ ನಾಮಿನೇಟ್ ಆಗಿದ್ದರೂ ಕೂಡ ಫಿನಾಲೆಗೆ ಟಿಕೆಟ್ ಪಡೆಯುವ ಎಲ್ಲಾ ಲಕ್ಷಣಗಳು ಕೂಡ ಕಾಣಿಸುತ್ತಿದೆ. ಆದರೆ ಈ ವಾರ ಮನೆಯಿಂದ ಹೊರಗೆ ಹೋಗೋದು ಯಾರು ಎಂಬ ಪ್ರಶ್ನೆ ಮಾತ್ರ ಯಕ್ಷಪ್ರಶ್ನೆಯಾಗಿದೆ. ಯಾಕೆಂದರೆ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಇಬ್ಬರಿಗೂ ಕೂಡ ಮತಗಳು ಬಂದು ಅವರು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎಂಬುದನ್ನು ವೀಕ್ಷಕರು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸೇಫ್ ಆಗಿರುವವರು ಇಬ್ಬರೇ
ಈ ವಾರ 6 ಮಂದಿಗೆ ಎಲಿಮಿನೇಷನ್ ಅಗ್ನಿ ಪರೀಕ್ಷೆ
ಬಿಗ್ ಬಾಸ್ ಮನೆಯಲ್ಲಿ ಇರುವ ಪ್ರತಾಪ್ ಹಾಗೂ ಸಂಗೀತಾ ಈ ಇಬ್ಬರು ಈ ವಾರ ಸೇಫಾಗಿದ್ದಾರೆ. ಸಂಗೀರಾ ಕ್ಯಾಪ್ಟನ್ ಆಗಿದ್ದರಿಂದ ತಮಗೆ ಸಿಕ್ಕ ವಿಶೇಷ ಅಧಿಕಾರದಿಂದ ಪ್ರತಾಪ್ ಅವರನ್ನು ನಾಮಿನೇಷನ್ ನಿಂದ ಪಾರು ಮಾಡುತ್ತೇನೆ ಎಂದು ತಿಳಿಸಿದ್ದರು. ಇದರಿಂದಾಗಿ ಪ್ರತಾಪ್‌ಗೆ ಜೀವದಾನ ದೊರಕಿದೆ. ಸಂಗೀತಾ ಕ್ಯಾಪ್ಟನ್ ಆಗಿದ್ದರಿಂದ ಅವರನ್ನು ಯಾರು ಕೂಡ ನಾಮಿನೇಟ್ ಮಾಡುವಂತೆ ಇರಲಿಲ್ಲ. ಈಗ ಫಿನಾಲೆಗೆ ಟಿಕೆಟ್ ಕೂಡ ಪಡೆದುಕೊಂಡಿದ್ದಾರೆ.
ತನಿಷಾ, ಕಾರ್ತಿಕ್, ವಿನಯ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ನಮ್ರತಾ ಆರು ಮಂದಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಯಾರಿಗೆ ದೊಡ್ಮನೆಯ ಆಟ ಮುಗಿಯಲಿದೆ ಎಂಬುದನ್ನು ಹೇಳುವುದು ಅಸಾಧ್ಯವಾಗಿದೆ. ತನಿಷಾ ಈ ವಾರ ಸ್ಪಲ್ಪ ಹಿಂದೆ ಉಳಿದುಕೊಂಡರು ಎಂದು ವೀಕ್ಷಕರ ಅಭಿಪ್ರಾಯವಾಗಿದೆ. ಕಾರ್ತಿಕ್ ಅವರಿಗೆ ಸರಿಯಾದ ರೀತಿಯಲ್ಲಿ ಆಟವಾಡಲು ಅವಕಾಶವೇ ದೊರೆಯದೆ ಅವರು ಫಿನಾಲೆಗೆ ಹೋಗುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಈ ವಾರ ಕಾರ್ತಿಕ್ ಕೂಡ ನಾಮಿನೇಟ್ ಆಗಿದ್ದಾರೆ. ಇಲ್ಲಿ ವಿನಯ್ ಹಾಗೂ ಕಾರ್ತಿಕ್ ಇಬ್ಬರನ್ನು ಕೂಡ ಅವರ ಅಭಿಮಾನಿಗಳು ಸೇವ್ ಮಾಡುತ್ತಾರೆ ಎಂಬ ನಂಬಿಕೆ ಅವರಿಗಿದ್ದು ಫಿನಾಲೆಗೆ ಹೋಗುವ ಆತ್ಮವಿಶ್ವಾಸದಲ್ಲಿ ಇದ್ದಾರೆ.

ಈ ವಾರ ಯಾರಿಗೆ ಸಿಗಲಿದೆ ಕಿಚ್ಚನ ಚಪ್ಪಾಳೆ
ಈ ವಾರ ಕಿಚ್ಚ ಸುದೀಪ್ ಯಾರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬುದೇ ಕುತೂಹಲವಾಗಿದೆ. ಕಾರ್ತಿಕ್ ಸ್ವಲ್ಪಮಟ್ಟಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಬಹುದು. ಅದಕ್ಕೆ ಮುಖ್ಯ ಕಾರಣವೆಂದರೆ ಸಂಗೀತಾ ಹಾಗೂ ಕಾರ್ತಿಕ್ ನಡುವೆ ನಡೆಯುತ್ತಿರುವ ಮಾತಿನ ಚಕಮಕಿ. ವಿನಯ್‌ಗೂ ಕೂಡ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಬಹುದು ವಾರದ ಮೊದಲನೇ ದಿನವೇ ಪ್ರತಾಪ್ ಜೊತೆಗೆ ವಿನಯ್ ಬಹಳ ರೂಡಾಗಿ ನಡೆದುಕೊಂಡಿದ್ದರು.
ಬಿಗ್ ಬಾಸ್ ಮನೆಯಿಂದ ನಮ್ರತಾ ಅಥವಾ ತನಿಷಾ ಇಬ್ಬರಲ್ಲಿ ಒಬ್ಬರು ಹೊರಗಡೆ ಹೋಗಬಹುದು ಎಂದು ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ. ಆದರೆ ಇರುವ ಆರು ಮಂದಿಯಲ್ಲಿ ಯಾರಿಗೆ ಬಿಗ್ ಬಾಸ್ ಮನೆಯ ಪ್ರಯಾಣ ಇಂದಿಗೆ ಮುಗಿಯುತ್ತದೆ ಎಂಬುದಕ್ಕೆ ಸಂಜೆ ಉತ್ತರ ಸಿಗಲಿದೆ.


Click it and Unblock the Notifications











