ಸ್ವಾರ್ಥಿಗಳಾದ್ರಾ ಬಿಗ್ ಬಾಸ್ ಸ್ಪರ್ಧಿಗಳು..?: ವಿಕೇಂಡ್ ಶೋನಲ್ಲಿ ಕಿಚ್ಚ ಹೇಳಿದ್ದೇನು ಗೊತ್ತಾ..?!
ಬಿಗ್ ಬಾಸ್ ಸೀಸನ್ 10 ಹಲವು ಕಾರಣಗಳಿಂದಾಗಿ ಸಾಕಷ್ಟು ಬಾರಿ ಸದ್ದು ಮಾಡುತ್ತಲೇ ಇದೆ. ಸದ್ಯಕ್ಕೆ ಪ್ರತಾಪ್ ಅವರು ಮರಳಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇದೆಲ್ಲದರ ನಡುವೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕಾಗಿ ವೀಕ್ಷಕರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಕೂಡ ಕಾತುರದಿಂದ ಕಾಯುತ್ತಾ ಇದ್ದಾರೆ. ಇನ್ನೂ ಈ ವಾರ ಯಾವ ವಿಚಾರಕ್ಕೆ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಸಹಜವಾಗಿ ಇತ್ತು. ಸದ್ಯಕ್ಕೆ ಈಗ ಸುದೀಪ್ ಅವರು ಮನೆಯಲ್ಲಿ ನಡೆದ ಪಾಯಿಂಟ್ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ತನಿಷಾ ಅವರು ಕ್ಯಾಪ್ಟನ್ ಆಗಿದ್ದ ಸಂದರ್ಭದಲ್ಲಿ ಮನೆಯಲ್ಲಿರುವ ಸದಸ್ಯರು ಎಷ್ಟು ತೂಕ ಬಾಳುತ್ತಾರೆ ಅವರ ಪಾಯಿಂಟ್ಸ್ ಗಳನ್ನು ಅವರೇ ತೆಗೆದುಕೊಳ್ಳಬೇಕು ಎಂದು ಹೇಳಲಾಗಿತ್ತು.ಆದರೆ ಮನೆಯ ಎಲ್ಲಾ ಸದಸ್ಯರು ಕೂಡ ತಮಗೆ ಅತಿ ಹೆಚ್ಚು ಪಾಯಿಂಟ್ಸ್ ಬೇಕೇ ಬೇಕು ಎಂದು ವಾದಕ್ಕೆ ನಿಂತರು. ನಂತರ ವಾದ ಕೊನೆಗೆ ಜಗಳದಲ್ಲಿ ಅಂತ್ಯವಾದಾಗ ಯಾರಿಗೆ ಅತಿ ಹೆಚ್ಚು ವೋಟ್ ಬರುತ್ತದೆ ಅವರಿಗೆ ಹೆಚ್ಚು ಪಾಯಿಂಟ್ಸ್ ಎಂಬಂತೆ ಅವರೇ ಮಾತನಾಡಿಕೊಂಡರು. ಇದೆಲ್ಲದರ ನಡುವೆ ತುಕಾಲಿ ಅವರು 20 ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಮನೆಯ ಇತರ ಸದಸ್ಯರಿಗಿಂತಲೂ ಹೆಚ್ಚು ಬೆಲೆ ಬಾಳುತ್ತೇನೆ ಎಂಬುದನ್ನು ತೋರಿಸಿದರು. ಆದರೆ ತನಿಷಾ ಕೇವಲ ಒಂದು ಲಕ್ಷ ರೂಪಾಯಿ ಮಾತ್ರ ಇಟ್ಟುಕೊಂಡಿದ್ದರು. ಇದಕ್ಕೆ ಬೇಸರ ಕೂಡ ವ್ಯಕ್ತಪಡಿಸಿದ್ದರು. ಈಗ ಇದೇ ವಿಚಾರ ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಮಾಡುತ್ತಿದ್ದಾರೆ.

ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಎಂದಿನಂತೆ ತಮ್ಮ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರನ್ನು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸುದೀಪ್ ರವರು ಈ ಮನೆಯಲ್ಲಿ ಈಗಲೂ ಸಹ ಈಗೋಯಿಂದಲೇ ಆಟ ಆಡಲಾಗುತ್ತಿದೆ. ಯಾರು ಕೂಡ ಸರಿಯಾದ ರೀತಿಯಲ್ಲಿ ಮಾತನಾಡುವುದಿಲ್ಲ .ತಮ್ಮ ತಮ್ಮ ಈಗೋದಿಂದ ಇಲ್ಲಿ ಎಲ್ಲವೂ ಕೂಡ ಸರಿಯಾಗಿ ನಡೆಯುತ್ತಿಲ್ಲ ಎಂದಿದ್ದಾರೆ.
ಸುದೀಪ್ ಮುಂದೆ ನೋವು ತೋಡಿಕೊಂಡ ತನಿಷಾ
ಸ್ಪಾರ್ಥಿಗಳಾದ್ರ ಮನೆಯ ಸ್ಪರ್ಧಿಗಳು
ಕಿಚ್ಚ ಸುದೀಪ್ ಬಂದವರೇ ಸ್ಪರ್ಧಿಗಳ ಬಳಿ, ಪ್ರೈಜ್ ಮನಿ ಇಟ್ಟುಕೊಂಡು ಒಂದು ಟಾಸ್ಕ್ ನಡೆಯುತ್ತೆ ಆದರೆ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿ ಕೊನೆಗೆ ಅದು ಎಲ್ಲೋ ಒಂದು ಕಡೆ ಎಂಡ್ ಆಗುತ್ತದೆ ಎಂದು ಕೇಳಿದ್ದಾರೆ. ನಂತರ ಈ ಟಾಸ್ಕ್ ಅಂಚಿಕೆ ವಿಚಾರ ಹೇಗಿತ್ತು ಎಂದು ಕೇಳಿದಾಗ ಕಾರ್ತಿಕ್ ಅವರು ಅಲ್ಲಿ ನಡೆದ ಪ್ರಕ್ರಿಯೆ ನನಗಂತೂ ಸ್ವಲ್ಪ ಇಷ್ಟವಾಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ನಂತರ ನಮ್ರತಾ ಎಲ್ಲೋ ಒಬ್ಬರನ್ನ ಕೆಳಗೆ ಹಾಕಬೇಕು ಎಂದುಕೊಂಡು ಬೇರೆಯವರನ್ನು ನೋಟಿಸ್ ಮಾಡದೆ ಹೋದರು ಎಂದು ಕಿಚ್ಚ ಸುದೀಪ್ ಮುಂದೆ ಹೇಳಿದ್ದಾರೆ.
ತನಿಷಾ ಮಾತ್ರ ಬಹಳ ನೋವಿನಿಂದ ಮಾತನಾಡಿದ್ದಾರೆ. ನಾನು ಇಲ್ಲಿಯವರೆಗೂ ಕೂಡ ಬರಿ ಮಾತನಾಡಿಕೊಂಡೆ ಬಂದಿದ್ದೇನೆ ಎಂಬುದು ಇಲ್ಲಿರುವ ಕೆಲವು ಸ್ಪರ್ಧಿಗಳು ಅಂದುಕೊಂಡಿದ್ದಾರೆ ಎಂದು ಕಿಚ್ಚ ಸುದೀಪ್ ಅವರ ಮುಂದೆ ಹೇಳಿದ್ದಾರೆ. ವಿನಯ್ ಅವರು ಕೂಡ ಇದೇ ವೇಳೆ ಮಾತನಾಡಿದ್ದು ಈ ಮನೆಯಲ್ಲಿ ಪಾಯಿಂಟ್ ಲೆಸ್ ಆಗ್ಯೂಮೆಂಟ್ಸ್ ತುಂಬಾ ನಡೆಯುತ್ತಿವೆ ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಎಲ್ಲರ ಅಭಿಪ್ರಾಯವನ್ನು ಕೇಳಿಸಿಕೊಂಡ ಕಿಚ್ಚ ಸುದೀಪ್ ಅವರಿಗೆ ಬೇಸರವಾಗಿದೆ. ಮನೆ ದಿನದಿಂದ ದಿನಕ್ಕೆ ಸಂಕುಚಿತವಾಗುತ್ತಾ ಹೋಗುತ್ತಿದ್ದು ಎಲ್ಲರೂ ಕೂಡ ಪ್ರೀತಿಯಿಂದ ನಡೆದುಕೊಳ್ಳಬೇಕು. ಆದರೆ ಇಲ್ಲಿ ಪ್ರೀತಿ ಕಾಣದೆ ಬರಿ ಸ್ಪರ್ಧಿಗಳ ಸ್ವಾರ್ಥ ಹಾಗೂ ಇಗೋ ಅತಿ ಹೆಚ್ಚಾಗಿ ಕಾಣುತ್ತಿದೆ. ಅದಕ್ಕಾಗಿ ನೀವು ಜಗಳ ಮಾಡಿಕೊಳ್ಳುತ್ತಾ ಇದ್ದೀರಾ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಸ್ಪರ್ಧಿಗಳಿಗೆ ಬುದ್ದಿ ಹೇಳಿದ ಕಿಚ್ಚ ಸುದೀಪ್
ಮನೆಯ ಸ್ಪರ್ಧಿಗಳು ನಡೆದುಕೊಳ್ಳುತ್ತಿರುವ ರೀತಿ ಕಿಚ್ಚ ಸುದೀಪ್ ಅವರಿಗೆ ಸ್ವಲ್ಪವೂ ಕೂಡ ಇಷ್ಟವಾಗಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರು ಯಾವ ರೀತಿ ನಡೆದುಕೊಳ್ಳುತ್ತಾ ಇದ್ದಾರೆ ಎಂಬುದನ್ನು ಎಲ್ಲರಿಗೂ ಕೂಡ ತಿಳಿಸಿದ್ದಾರೆ. ಒಬ್ಬರ ತಟ್ಟೆಯಲ್ಲಿ ಅನ್ನವೇ ಇಲ್ಲ ಆದರೆ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಮಾತನಾಡುತ್ತಿರುವಂತಹ ಪರಿಸ್ಥಿತಿ ಈಗ ಬಿಗ್ ಬಾಸ್ ಮನೆಯಲ್ಲಿ ನಿರ್ಮಾಣವಾಗಿದೆ ಎಂದು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಹೇಳಿದ್ದಾರೆ.


Click it and Unblock the Notifications











