ಇಂದು ಕಿಚ್ಚನ ಪಂಚಾಯಿತಿ: 10ನೇ ವಾರ ಆರು ಮಂದಿಯಲ್ಲಿ ದೊಡ್ಮನೆಯಿಂದ ಹೊರ ಹೋಗೋದು ಯಾರು..!?
ಬಿಗ್ ಬಾಸ್ ಸೀಸನ್ 10 ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು 10ನೇ ವಾರವನ್ನು ಮುಗಿಸಿದೆ. ಇಂದು ಕಿಚ್ಚನ ಪಂಚಾಯಿತಿ ಇದ್ದು ಆರು ಮಂದಿಯ ತಲೆಯ ಮೇಲೆ ಎಲಿಮಿನೇಷನ್ ತೂಗು ಕತ್ತಿ ಇದೆ. ಇಂದು ಮನೆಯಿಂದ ಹೊರಗೆ ಹೋಗೋದು ಯಾರು ಮನೆಯಲ್ಲಿ ಉಳಿದುಕೊಳ್ಳುವುದು ಯಾರು ಎಂಬುದನ್ನು ಕಿಚ್ಚ ಸುದೀಪ್ ಹೇಳಲಿದ್ದಾರೆ. ವಾರಪೂರ್ತಿ ಬಿಗ್ ಬಾಸ್ ಸ್ಪರ್ಧಿಗಳು ವೀಕ್ಷಕರಿಗೆ ಮನರಂಜನೆಯನ್ನು ನೀಡಿದ್ದಾರೆ. ಬಿಗ್ ಬಾಸ್ ಪ್ರಾಥಮಿಕ ಪಾಠ ಶಾಲೆಯ ಮೂಲಕ ಉತ್ತಮವಾಗಿ ಈ ವಾರ ಸ್ಪರ್ಧಿಗಳು ಮನರಂಜನೆಯನ್ನು ನೀಡಿದ್ದಾರೆ.
ಬಿಗ್ ಬಾಸ್ ಶುರುವಾದಾಗಿನಿಂದಲೂ ಸಹ ಬರೀ ಜಗಳವೇ ನೋಡುತ್ತಿದ್ದ ವೀಕ್ಷಕರಿಗೆ ಈ ವಾರ ಸ್ಪಲ್ಪ ಮಟ್ಟಿಗೆ ಖುಷಿಯ ವಾತಾವರಣ ನಿರ್ಮಾಣವಾಗಿತ್ತು. ಎಲ್ಲರೂ ಕೂಡ ತಮಗೆ ಕೊಟ್ಟಿದ್ದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರೇ ತಮ್ಮ ಕೈಯಾರೆ ಮಾಡಿದ ಅಡುಗೆಯನ್ನ ಬಿಗ್ ಬಾಸ್ ಸ್ಪರ್ಧಿಗಳಿಗೆ ಕಳುಹಿಸಿದ್ದರು. ಇದಂತೂ ಎಲ್ಲರಿಗೂ ಕೂಡ ಸರ್ಪ್ರೈಸ್ ಆಗಿತ್ತು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ನಾನು ಒಂದು ಸರ್ಪ್ರೈಸ್ ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ಲೆಟರ್ ಬರೆದು ಅವರು ಯಾವ ರೀತಿ ಚೇಂಜ್ ಆಗಬೇಕು ಯಾವ ರೀತಿ ಆಟವನ್ನು ಆಡಬೇಕು ಎಂಬುದನ್ನು ಕೂಡ ಕಳುಹಿಸಿದ್ದರು. ಜೊತೆಗೆ ಎಲ್ಲರಿಗೂ ಇಷ್ಟವಾಗುವ ಅಡುಗೆ ಮಾಡಿ ಕಳುಹಿಸಿ ಎಲ್ಲರ ಖುಷಿಗೆ ಕಾರಣರಾಗಿದ್ದರು.

ಸದ್ಯಕ್ಕೆ ಮನೆಯಲ್ಲಿ ಎಲ್ಲರೂ ಕೂಡ ಹೊಂದಿಕೊಂಡು ಹೋಗುವ ನೀತಿಯನ್ನ ಅನುಸರಿಸುತ್ತಾ ಇದ್ದಾರೆ. ಇನ್ನು ಈ ಬಗ್ಗೆ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಕೂಡ ಮಾತನಾಡಿದ್ದು ಇನ್ಮುಂದೆ ಮನೆಯ ವಾತಾವರಣ ಚೇಂಜ್ ಆಗಲಿದೆ. ಯಾರು ಕೂಡ ಅತಿಯಾಗಿ ಕಿರುಚಾಟ ನಡೆಸುವುದಿಲ್ಲ ಎಂದೆಲ್ಲಾ ಮಾತನಾಡಿಕೊಂಡಿದ್ದಾರೆ. ಅದೇ ರೀತಿ ಆಟವಾಡಿಕೊಂಡು ಮುಂದುವರೆಯುತ್ತಾರೆ ನೋಡುತ್ತಾ ಇರು ಎಂದು ಮಾತನಾಡಿಕೊಂಡಿದ್ದು ಮನೆ ವಾತಾವರಣವು ಅದೇ ರೀತಿ ಇದೆ. ಎಲ್ಲರೂ ಕೂಡ ಸೇಫ್ ಆಗಿ ಆಟವಾಡುತ್ತಾ ಹೋಗುತ್ತಾ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗ ಕಾರ್ತಿಕ್ ಹಾಗೂ ವಿನಯ್ ಕಿರುಚಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸಂಗೀತಾ ಅಂತೂ ತಮ್ಮ ಪಾಡಿಗೆ ತಾವು ಇರಲು ಪ್ರಯತ್ನ ಪಡುತ್ತಿದ್ದಾರೆ.
ಈ ವಾರ ಬಿಗ್ ಬಾಸ್ ಜರ್ನಿ ಮುಗಿಸೋದು ಯಾರು..?
ಯಾರಿಗೆ ಸಿಗಲಿದೆ ದೊಡ್ಮನೆಯಿಂದ ಗೇಟ್ ಪಾಸ್
10 ವಾರಗಳನ್ನ ಮುಗಿಸಿ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರನ್ನ ಕಾಡುತ್ತಾ ಇದೆ. ಸಿರಿ, ಪವಿ ಪೂವಪ್ಪ, ಮೈಕಲ್ , ವಿನಯ್ ಗೌಡ , ಸಂಗೀತಾ ಹಾಗೂ ಪ್ರತಾಪ್ ನಾಮಿನೇಟ್ ಆಗಿದ್ದಾರೆ. ಈ ಆರು ಮಂದಿಯಲ್ಲಿ ಯಾರು ಇಂದು ದೊಡ್ಮನೆಯಲ್ಲಿ ತಮ್ಮ ಜರ್ನಿ ಮುಗಿಸಿ ಹೊರಗೆ ಹೋಗ್ತಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ವಿನಯ್ ಮೈಕಲ್ ಹಾಗೂ ಪ್ರತಾಪ್ ಸಂಗೀತ ಇವರು ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಕೊಡುವ ಟಾಸ್ಕ್‌ಗಳಲ್ಲಿ ಚನ್ನಾಗಿ ಪ್ರದರ್ಶನವನ್ನ ನೀಡುತ್ತಾರೆ.

ಪವಿ ಅಥವಾ ಸಿರಿ ಈ ಇಬ್ಬರಲ್ಲಿ ಒಬ್ಬರು ಮನೆಯಲ್ಲಿ ಜರ್ನಿ ಅನ್ನು ಮುಗಿಸುತ್ತಾರೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಕಳೆದ ವಾರ ಸ್ನೇಹಿತ್ ಬಿಗ್ ಬಾಸ್ ಜರ್ನಿ ಮುಗಿಸಿದ್ದರು. ಈ ವಾರ ಸಿರಿ ಅಥವಾ ಪವಿ ಬಿಗ್ ಬಾಸ್ ಮನೆಯ ಪಯಣವನ್ನು ಮುಗಿಸುವ ಸಾಧ್ಯತೆ ಇದೆ. ಯಾವಾಗಲೂ ನಾಮಿನೇಷನ್ ಸ್ಥಾನದಲ್ಲಿ ಇರುತ್ತಿದ್ದ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಈ ವಾರ ಬಚಾವ್ ಆಗಿದ್ದಾರೆ. ತನಿಷಾ, ನಮ್ರತಾ, ವರ್ತೂರು ಸಂತೋಷ್, ಅವಿನಾಶ್ ಶೆಟ್ಟಿ ಸೇಫ್ ಆಗಿದ್ದಾರೆ.
ಈ ವಾರ ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಕಿಚ್ಚ..?
ಯಾರಿಗೆ ಸಿಗಲಿದೆ ಈ ವಾರದ ಕಿಚ್ಚನ ಚಪ್ಪಾಳೆ
ಈ ವಾರ ಮನೆಯಲ್ಲಿ ಯಾರೂ ಕೂಡ ಅಂತಹ ತಪ್ಪನ್ನ ಮಾಡಿಲ್ಲ ಎಲ್ಲರೂ ಕೂಡ ನಗುನಗುತ್ತಲೇ ಟಾಸ್ಕ್ ಮಾಡಿದ್ದಾರೆ. ಯಾರಿಗೆ ಕಿಚ್ಚ ಬುದ್ಧಿವಾದವನ್ನು ಹೇಳುತ್ತಾರೆ ಹಾಗೂ ಯಾರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಗಲಿದೆ ನೋಡಬೇಕಾಗಿದೆ. ಪ್ರತಾಪ್ ಮಾತ್ರ ಬಿಗ್ ಬಾಸ್ ನೀಡಿದ್ದ ಒಂದು ರೂಲ್ಸ್ ಬ್ರೇಕ್ ಮಾಡಿ ಮನೆಯ ಐದು ಮಂದಿಗೆ ಮುದ್ದೆಯನ್ನು ಮಾಡಿ ಕೊಟ್ಟಿದ್ದರು. ಈ ವಿಷಯಕ್ಕೆ ಕಿಚ್ಚ ಸುದೀಪ್ ಪ್ರತಾಪ್ ಅವರನ್ನು ಪ್ರಶ್ನೆ ಮಾಡಬಹುದು. ಆದರೆ ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಲಿದೆ ನೋಡಬೇಕು.


Click it and Unblock the Notifications











