ಎಂಟು ಮಂದಿಗೆ ಇಂದು ಅಗ್ನಿ ಪರೀಕ್ಷೆ..! ಈ ಬಾರಿ ದೊಡ್ಮನೆ ಜರ್ನಿ ಮುಗಿಸೋದು ಒಬ್ಬರ ಅಥವಾ ಇಬ್ಬರ..?!

By Shruthi Harishgowda

ಬಿಗ್ ಬಾಸ್ ಸೀಸನ್ 10 ಹನ್ನೆರಡು ವಾರಗಳನ್ನು ಮುಗಿಸುತ್ತಾ ಬಂದಿದೆ. ಇದರ ಜೊತೆಗೆ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರಿಗೂ ಕೂಡ ಈ ವಾರ ಒಳ್ಳೆಯ ಉಡುಗೊರೆ ನೀಡಿದೆ. ಅವರ ಮನೆಯ ಸದಸ್ಯರನ್ನು ಬಿಗ್ ಬಾಸ್ ಮನೆಗೆ ಕರೆಯಿಸಿ ಅವರ ಆಸೆ ಪೂರೈಸಿದೆ. ಈ ವಾರ ಯಾವುದೇ ಜಗಳ ಮುನಿಸು ಯಾವುದು ಇಲ್ಲದೆ ಅಂತ್ಯವಾಗಿದೆ. ವರ್ತೂರು ಸಂತೋಷ್ ಅವರಿಗೆ ಕಳಪೆ ಕೊಟ್ಟಿದ್ದು ಮಾತ್ರ ಸಂತೋಷ್ ಬೇಸರಕ್ಕೆ ಕಾರಣವಾಗಿದೆ. ಸದ್ಯಕ್ಕೆ ಮನೆಯ ಎಲ್ಲಾ ಸದಸ್ಯರು ಕೂಡ ಕೂಲ್ ಆಗಿಯೇ ಇದ್ದಾರೆ.

ಎಲಿಮಿನೇಷನ್ ಭೂತ ಎಂಟು ಮಂದಿಯ ತಲೆಯ ಮೇಲೆ ತೂಗು ಕತ್ತಿಯಾಗಿ ತೂಗುತ್ತಿದೆ. ಪದೇ ಪದೇ ಸಂಗೀತ ಹಾಗೂ ಮೈಕಲ್ ಇಬ್ಬರೂ ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಲೇ ಇದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ಅವರ ಪಂಚಾಯಿತಿ ಇಲ್ಲದೆ ವಾರ ಮುಗಿಯಿತು. ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ಶೃತಿ, ಶೈನ್ ಶೆಟ್ಟಿ, ಶುಭಪೂಂಜಾ ಮನೆಗೆ ಬಂದಿದ್ದರು. ಈ ವಾರ ಕಿಚ್ಚ ಬಂದಿದ್ದು ಕಿಚ್ಚನ ಪಂಚಾಯಿತಿಯಲ್ಲಿ ಏನೇನು ಇರಲಿದೆ. ಯಾರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಯಾರನ್ನು ರಿಪೇರಿ ಮಾಡುತ್ತಾರೆ ಇದಕ್ಕೆ ಸಂಜೆ ಕಿಚ್ಚ ಸುದೀಪ್ ಅವರೇ ಉತ್ತರ ಕೊಡಲಿದ್ದಾರೆ.

Bigg Boss Kannada Season 10: Who Will Eliminate On Weekend With Sudeepa

ಕಳೆದ ವಾರ ಅವಿನಾಶ್ ಶೆಟ್ಟಿ ದೊಡ್ಮನೆ ಜರ್ನಿ ಮುಗಿಸಿ ಹೋಗಿದ್ದರು. ಡಬಲ್ ಎಲಿಮಿನೇಷನ್ ಎಂಬ ಶಾಕ್ ಅನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಿತ್ತು. ನಂತರ ಮೈಕಲ್ ಅವರು ವಾಪಸ್ ಮನೆಗೆ ಬಂದಿದ್ದರು ಆದರೆ ಈ ವಾರ ಯಾವ ರೀತಿಯ ಎಲಿಮಿನೇಷನ್ ಇರಲಿದೆ ಎಂಬುವುದು ಕುತೂಹಲವಾಗಿದೆ. ಮನೆಯಲ್ಲಿರುವ 10 ಮಂದಿ ಸ್ಪರ್ಧಿಗಳ ಪೈಕಿ ಎಂಟು ಮಂದಿ ನಾಮಿನೇಟ್ ಆಗಿದ್ದು ಯಾರು ಮನೆಯಲ್ಲಿ ಉಳಿದುಕೊಳ್ಳುತ್ತಾರೆ ನೋಡಬೇಕಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ಹಲವರು ತುಂಬಾನೇ ಸ್ಟ್ರಾಂಗ್ ಕಂಟೆಸ್ಟೆಂಟ್ ಎನಿಸಿಕೊಂಡಿದ್ದಾರೆ.

ಎಂಟು ಮಂದಿ ಮೇಲೆ ಎಲಿಮಿನೇಷನ್ ತೂಗು ಕತ್ತಿ

ಯಾರಿಗೆ ಮುಗಿಯಲಿದೆ ಈ ವಾರದ ದೊಡ್ಮನೆಯ ಜರ್ನಿ

ಬಿಗ್ ಬಾಸ್ ಸೀಸನ್ 10 ಬರೀ ಜಗಳಗಳಿಂದಲೇ ತುಂಬಿ ಹೋಗಿದೆ ಎಂದು ವೀಕ್ಷಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಈ ಇನ್ನೇನು ಸೆಮಿ ಫೈನಲ್‌ಗೆ ಸಮೀಪಿಸುತ್ತಿದ್ದು ಯಾರು ಕೂಡ ಜಗಳವಾಡಿಕೊಳ್ಳಬಾರದು ಎಂದು ನಿರ್ಧಾರ ಮಾಡಿದಂತಿದೆ. ಇದಕ್ಕಾಗಿ ಈ ವಾರ ಬಹಳ ಶಾಂತಿಯಿಂದ ಬಿಗ್ ಬಾಸ್ ಮನೆಯ ವಾತಾವರಣ ಇತ್ತು. 8 ಮಂದಿಯ ತಲೆಯ ಮೇಲೆ ಎಲಿಮಿನೇಷನ್ ತೂಗು ಕತ್ತಿ ಇದ್ದು ಯಾರಿಗೆ ಈ ವಾರ ದೊಡ್ಮನೆಯ ಜರ್ನಿ ಮುಗಿಯಲಿದೆ ಎಂಬ ಕುತೂಹಲ ಸಹಜವಾಗಿದೆ.

Bigg Boss Kannada Season 10: Who Will Eliminate On Weekend With Sudeepa

ಸಂಗೀತ ಹಾಗೂ ಮೈಕಲ್ ಇಬ್ಬರೂ ಕೂಡ ಪ್ರತಿ ವಾರವು ನಾಮಿನೇಟ್ ಆಗುತ್ತಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್, ಕಾರ್ತಿಕ್, ತನಿಷಾ, ಸಿರಿ ಈ ವಾರ ಎಲಿಮಿನೇಷನ್ ಹಾಟ್ ಸೀಟಲ್ಲಿ ಕುಳಿತಿರುವ ಸ್ಪರ್ಧಿಗಳಾಗಿದ್ದಾರೆ. ಇವರ ಪೈಕಿ ಕಳೆದ ವಾರದಿಂದಲೂ ಕೂಡ ಸಂಗೀತ ವರ್ತೂರು ಸಂತೋಷ್ ಮೈಕಲ್ ಎಲ್ಲರೂ ಕೂಡ ಸೇಫ್ ಆಗುತ್ತಾ ಬರುತ್ತಿದ್ದಾರೆ ಆದರೆ ಸಿರಿ ಕೂಡ ಕಳೆದ ವಾರ ಸೇಫ್ ಆಗಿದ್ದರು ಇವರ ಸಿರಿ ಅವರು ಮನೆಯಿಂದ ಹೊರಗೆ ಹೋಗ್ತಾರೆ ಎಂಬ ಪ್ರಶ್ನೆ ಸಹಜವಾಗಿದೆ. ಯಾರು ಯಾವಾಗ ದೊಡ್ಮನೆಯಿಂದ ತಮ್ಮ ಜರ್ನಿ ಮುಗಿಸಿ ಹೋಗುತ್ತಾರೆ ಎಂಬುದನ್ನ ನಿಖರವಾಗಿ ಹೇಳಲು ಆಗುವುದಿಲ್ಲ.

ಈ ವಾರ ಎಲಿಮಿನೇಟ್ ಆಗ್ತಾರಾ ಸಿರಿ..?

ಕಳೆದ ವಾರ ಸಿರಿ ಹೋಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವಿನಾಶ್ ಶೆಟ್ಟಿ ಅವರು ತಮ್ಮ ಜರ್ನಿಯನ್ನು ಮುಗಿಸಿ ಮನೆಯಿಂದ ಹೊರಗೆ ಹೋದರು. ಆದರೆ ಈ ವಾರ ಸಿರಿ ಅವರು ತಮ್ಮ ಜರ್ನಿಯನ್ನು ಮುಗಿಸಿ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಅಂದುಕೊಳ್ಳಲಾಗಿದೆ. ವೀಕ್ಷಕರೂ ಕೂಡ ಸಿರಿ ಅವರೇ ಈ ವಾರ ಮನೆಯಿಂದ ಹೋಗುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಟಾಪ್ ಫೈವ್ ಅಲ್ಲಿ ವಿನಯ್, ಕಾರ್ತಿಕ್, ತನಿಷಾ, ಸಂಗೀತಾ, ವರ್ತೂರು ಸಂತೋಷ್ ಅಥವಾ ಪ್ರತಾಪ್ ಇರಲಿದ್ದಾರೆ ಎಂಬುದನ್ನು ಹೇಳಿದ್ದಾರೆ. ಸದ್ಯಕ್ಕೆ ಈ ವಾರ ಪ್ರತಾಪ್ ಹಾಗೂ ನಮ್ರತಾ ಇಬ್ಬರೂ ಸೇಫ್ ಆಗಿದ್ದು ಯಾರು ತಮ್ಮ ಜರ್ನಿ ಮುಗಿಸುತ್ತಾರೆ ನೋಡಬೇಕಾಗಿದೆ.

More from Filmibeat

English summary
Colors kannada Bigg Boss Written Update on weekend with sudeepa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X