ಬಿಗ್ ಬಾಸ್‌ನಲ್ಲಿ ಮುಗಿತಾ ಸ್ನೇಹಿತ್ ಗೌಡ ಜರ್ನಿ...? ದೊಡ್ಮನೆ ಬಾಗಿಲು ತೆಗೆದಿದ್ದು ಯಾರಿಗೆ?
ಬಿಗ್ಬಾಸ್ ಕನ್ನಡ ಸೀಸನ್ 10 ಮತ್ತೊಂದು ವಾರದ ಎಲಿಮಿನೇಷನ್ ಹಂತಕ್ಕೆ ಬಂದು ನಿಂತಿದೆ. ಕಿಚ್ಚ ಸುದೀಪ್ ಭಾನುವಾರ (ಡಿಸೆಂಬರ್ 04) ಸೂಪರ್ ಸಂಡೇ ವಿತ್ ಸುದೀಪ ನಡೆಸಿಕೊಡಲಿದ್ದಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ಇಂದು ತಿಳಿಯಲಿದೆ. ಇದರ ನಡುವೆ ಕಲರ್ಸ್ ಕನ್ನಡ ಹೊಸ ಪ್ರೋಮೊ ಬಿಡುಗಡೆ ಮಾಡಿದೆ.
ಬಿಗ್ ಬಾಸ್‌ನಲ್ಲಿ ಈ ವಾರ ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದರು. ಅದರಲ್ಲಿ ವರ್ತೂರು ಸಂತೋಷ್, ನಮ್ರತಾ ಗೌಡ ಮತ್ತು ಡ್ರೋನ್ ಪ್ರತಾಪ್ ಈಗಾಗಲೇ ಸೇಫ್ ಆಗಿದ್ದಾರೆ. ಇನ್ನು, ಸಂಗೀತಾ ಶೃಂಗೇರಿ, ಮೈಕಲ್ ಅಜಯ್, ವಿನಯ್ ಗೌಡ, ತನಿಷಾ ಕುಪ್ಪಂಡ ಮತ್ತು ಸ್ನೇಹಿತ್ ಗೌಡ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ. ಇದರಲ್ಲಿ ಒಬ್ಬರು ಮನೆ ಬಿಟ್ಟು ಹೊರಹೊಗಲಿದ್ದಾರೆ.

ಎಲಿಮಿನೇಟ್ ಆಗ್ತಾರಾ ಸ್ನೇಹಿತ್ ಗೌಡ!?
ಕಲರ್ಸ್ ಕನ್ನಡ ಬಿಗ್ ಬಾಸ್‌ನ Super Sunday with ಸುದೀಪ ಸಂಚಿಕೆಯ ಹೊಸ ಫೋಮೋ ಹಂಚಿಕೊಂಡಿದ್ದು, ಇದರಲ್ಲಿ ಮನೆ ಬಿಟ್ಟು ಹೋಗುವವರು ಯಾರು ಎಂಬ ಬಗ್ಗೆ ಸುಳಿವು ನೀಡಿದೆ. ಈಗಾಗಲೇ ಡೇಂಜರ್ ಝೋನ್‌ನಲ್ಲಿರುವ ಐದು ಮಂದಿಯ ಪೈಕಿ ಸ್ನೇಹಿತ್ ಗೌಡ ಮತ್ತು ಮೈಕಲ್ ಅಜಯ್ ಹೊರ ಹೋಗುವ ಸಾಧ್ಯತೆಯಿತ್ತು. ಆದರೆ, ಇಲ್ಲಿ ಎಲ್ಲಾ ಅಂಶಗಳು ಸ್ನೇಹಿತ್ ಗೌಡ ಕಡೆ ಬೊಟ್ಟು ಮಾಡುತ್ತಿವೆ.
ಹೊಸ ಪ್ರೋಮೊದಲ್ಲಿ ನಟ ಸುದೀಪ್ ಅವರು ಬಿಗ್ ಬಾಸ್‌ಗೆ ವಿನಂತಿ ಮಾಡಿ ಬಾಗಿಲು ತೆಗೆಸುತ್ತಾರೆ. ಬಳಿಕ ಸ್ಪರ್ಧಿಗಳ ಕಡೆ ತಿರುಗಿ ಈ ವಾರ ಮನೆಯಿಂದ ಯಾರು ಹೊರ ಹೋಗಬೇಕು ಎಂದು ಕೇಳುತ್ತಾರೆ. ಆಗ ಬಹುತೇಕ ಸ್ಪರ್ಧಿಗಳು ಸ್ನೇಹಿತ್ ಗೌಡ ಕಡೆ ಬೆರಳು ಮಾಡಿದ್ದಾರೆ. ಇದರಿಂದ ಸ್ನೇಹಿತ್ ಕೂಡ ಶಾಕ್ ಆಗಿದ್ದಾರೆ.

ಸ್ನೇಹಿತ್ ಯಾಕೆ ಹೊರ ಹೋಗಬೇಕು? ಮನೆಯ ಸದಸ್ಯರು ಹೇಳಿದ್ದೇನು?
ಸುದೀಪ್ ಪ್ರಶ್ನೆಗೆ ಉತ್ತರಿಸುವ ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್, ಕಾರ್ತಿಕ್ ಮಹೇಶ್ ಮೂವರು ಸ್ನೇಹಿತ್ ಹೆಸರು ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣವಾಗಿ ಸ್ನೇಹಿತ್ ಎಲ್ಲರನ್ನು ಒಂದೇ ರೀತಿ ಟ್ರಿಟ್ ಮಾಡಲ್ಲ ಎಂದು ಕಾರ್ತಿಕ್ ಕಾರಣ ನೀಡಿದ್ದಾರೆ. ತುಕಾಲಿ ಸಂತೋಷ್ ಅವರು, ಸ್ನೇಹಿತ್ ಇನ್ನು ತನ್ನ ಕಂಫರ್ಟ್ ಝೋನ್ ಬಿಟ್ಟು ಹೊರ ಬಂದಿಲ್ಲ ಎಂಬ ಕಾರಣ ನೀಡಿದ್ದಾರೆ.
ದೊಡ್ಮನೆ ಬಿಟ್ಟು ಹೋಗುವ ಬಗ್ಗೆ ಸ್ನೇಹಿತ್ ಹೇಳಿದ್ದೇನು?
ಇನ್ನು, ಈ ಮಾತುಗಳಿಗೆ ಸ್ನೇಹಿತ್ ಕೂಡ ಪ್ರತಿಕ್ರಿಯೆ ನೀಡಿದ್ದು, ತಾನು ಮನೆ ಬಿಟ್ಟು ಹೋಗುವುದು ಸರಿಯಲ್ಲ ಎಂದಿದ್ದಾರೆ. "ನಾನು ಅಷ್ಟು ಆಡಿ, ನಾನು ಈ ವಾರ ಹೊರಹೋದರೆ ನನ್ನ ಎಫರ್ಟ್‌ಗೆ ಯಾವುದೇ ಬೆಲೆ ಇಲ್ಲದಂತೆ ಆಗುತ್ತದೆ" ಎಂದು ಬೇಸರ ಹೊರಹಾಕಿದ್ದಾರೆ. ಆದರೆ, ಈ ಬಾರಿ ಒಬ್ಬರು ಮನೆಯಿಂದ ಹೊರ ಹೋಗುವುದು ಖಚಿತ ಎಂದು ಸುದೀಪ್ ಹೇಳುತ್ತಿದ್ದಾರೆ.
ಇನ್ನು, ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಈ ವಾರ ಹೆಚ್ಚು ಪ್ರೇಕ್ಷಕರ ವೋಟ್ ಪಡೆದು ವರ್ತೂರ್ ಸಂತೋಷ್ ಸೇಫ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಿಸಿದ್ದಾರೆ. ನಾಮಿನೇಟ್ ಆಗಿದ್ದವರನ್ನು ಸೇಫ್ ಮಾಡುವ ಪ್ರಕ್ರಿಯೆಯಲ್ಲಿ ವೋಟುಗಳನ್ನು ಆಧಾರವಾಗಿ ತೆಗೆದುಕೊಂಡಿದ್ದು, ಅದರಲ್ಲಿ ಅಗ್ರ ಸ್ಥಾನದಲ್ಲಿ ವರ್ತೂರ್ ಸಂತೋಷ್ ಇದ್ದರು. ಎರಡನೇ ಸ್ಥಾನದಲ್ಲಿ ನಮ್ರತಾ ಗೌಡ, ಮೂರನೇ ಸ್ಥಾನದಲ್ಲಿ ಡ್ರೋನ್ ಪ್ರತಾಪ್ ಇದ್ದರು.


Click it and Unblock the Notifications











