ಆನೆ ಹೋಗಿ ಬಾತ್‌ರೂಂನಲ್ಲಿ ಅತ್ತಿದೆ ಅಂದ್ರೆ...! ವಿನಯ್‌ಗಾಗಿ 'ನೊಂದವರ ಸಂಘ'ದ ಅಧ್ಯಕ್ಷ ಸ್ಥಾನ ಬಿಡ್ತಾರಂತೆ ತುಕಾಲಿ!

ಬಿಗ್ ಬಾಸ್‌ನಲ್ಲಿ ಕಳೆದ ವಾರ ನೊಂದವರ ಸಂಘ ಒಂದು ಪ್ರಾರಂಭವಾಗಿತ್ತು. ಈ ವಾರ ಕೂಡ ಅದರ ಬಗ್ಗೆ ಚರ್ಚೆಗಳಾಗಿದ್ದು, ಇತರ ಸದಸ್ಯರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗಿದೆಯೇ..? ಅಥವಾ ಇತರ ಸ್ಪರ್ಧಿಗಳು ಸಂಘಕ್ಕೆ ಸೇರಿಕೊಂಡಿದ್ದಾರೆ ಎಂಬ ಬಗ್ಗೆ ಸಂಡೇ ವಿತ್ ಸುದೀಪ ಸಂಚಿಕೆಯಲ್ಲಿ ಮಜವಾದ ಸಂವಾದ ನಡೆದಿದೆ.

ಬಿಗ್​ಬಾಸ್ ಕನ್ನಡ ಸೀಸನ್ 10 ಎಂಟನೇ ವಾರಕ್ಕೆ ಬಂದಿದ್ದು, ಕಿಚ್ಚ ಸುದೀಪ್ ಭಾನುವಾರ (ಡಿಸೆಂಬರ್ 04) ಸೂಪರ್ ಸಂಡೇ ವಿತ್ ಸುದೀಪ ವಿಶೇಷ ಸಂಚಿಕೆ ನಡೆಸಿಕೊಡಲಿದ್ದಾರೆ. ಇದರಲ್ಲಿ ಕಳೆದ ಬಾರಿ ಉದ್ಘಾಟನೆಯಾದ 'ನೊಂದವರ ಸಂಘ'ದ ಬಗ್ಗೆ ಮಾತುಕತೆಯಾಗಿದೆ. ಹಲವು ಪ್ರಶ್ನೆಗಳನ್ನು ಸುದೀಪ್ ಕೇಳಿದ್ದು, ತನಿಶಾ ಮತ್ತು ತುಕಾಲಿ ಸಂತೋಷ್ ಉತ್ತರ ಮನೆಯವರನ್ನು ನಗೆ ಕಡಲಲ್ಲಿ ತೇಲಾಡಿಸಿದೆ.

Bigg boss kannada season 10: Will Vinay Gowda be part of Nondavara Sangha?

ನೊಂದವರ ಸಂಘಕ್ಕೆ ವಿನಯ್ ಗೌಡ ಸೇರ್ಪಡೆ!?

ಬಿಗ್ ಬಾಸ್‌ನ Super Sunday with ಸುದೀಪ ಸಂಚಿಕೆಯ ಹೊಸ ಫೋಮೋದಲ್ಲಿ ಸುದೀಪ್ ಮನೆ ಮಂದಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಮುಖ್ಯವಾಗಿ ನೊಂದವರ ಸಂಘದ ಕುರಿತದ್ದು. ಹೊಸದಾಗಿ ಆರಂಭವಾಗಿರುವ ನೊಂದವರ ಸಂಘಕ್ಕೆ ಹೊಸ ಎಂಟ್ರಿ ವಿನಯ್ ಎಂದು ಕೇಳಿದ್ದಾರೆ. ಇದಕ್ಕೆ ತನಿಶಾ ಕುಪ್ಪಂಡ ಮತ್ತು ತುಕಾಲಿ ಸಂತೋಷ್ ಎಸ್ ಎಂಬ ಪ್ಲಕಾರ್ಡ್ ಹಿಡಿದು ಹೌದು ಎಂದಿದ್ದಾರೆ.

ಸ್ವತಃ ವಿನಯ್ ಗೌಡ ಇದನ್ನು ನಿರಾಕರಿಸಿದರು ಕೂಡ ಇಬ್ಬರು ಹೌದು ಎಂದಿದ್ದಾರೆ. ಇದಕ್ಕೆ ಕಾರಣ ಕೊಟ್ಟಿರುವ ತನಿಶಾ, " ಅವರೇ ಅವಾಗವಾಗ ಅವರೇ ಹೇಳಿಕೊಂಡಿದ್ದರು. ಆಗಲ್ಲ ಗುರು ನಂಗೆ ಈ ಗುಂಪು ..ಗ್ಯಾಂಗ್ ಎಲ್ಲಾ ಸಾಕಾಯಿತು. ನಾನು ನೊಂದವರ ಗುಂಪಿಗೆ ಹೋಗುತ್ತೇನೆ ಎಂದು ಅವರೇ ಹೇಳಿದ್ದರು. ಹೀಗಾಗಿ ನಾನು ಎಸ್ ಎಂದಿದ್ದೇನೆ" ಎಂದು ತನಿಶಾ ಹೇಳಿಕೊಂಡಿದ್ದಾರೆ.

50% ವಿನಯ್ ನೊಂದವರ ಸಂಘದಲ್ಲಿದ್ದಾರೆ!: ತುಕಾಲಿ

ಇನ್ನು ಎಸ್ ಎಂದು ಹೇಳಿರುವ ತುಕಾಲಿ ಸಂತೋಷ್ ಅವರನ್ನು ಸುದೀಪ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ತುಕಾಲಿ ಸಂತೋಷ್, "ಅಣ್ಣ, ಆಲ್ಮೋಸ್ಟ್ ಅವರು ಒಂದು ಐವತ್ತು ಪರ್ಸೆಂಟ್ ನಮ್ಮ ಕಡೆನೆ ಬಂದಿರುವ ಹಾಗಿದೆ. ಆನೆ ಹೋಗಿ ಬಾತ್‌ರೂಂನಲ್ಲಿ ಅತ್ತಿದೆ ಅಂದ್ರೆ ನಮ್ಮ ಗುಂಪಿಗೆ ಸ್ಟ್ರಾಂಗ್ ಕ್ಯಾಂಡಿಡೇಟ್ ಬಂದಿದೆ ಅಂತ ಅರ್ಥ. ನಾನು ಬೇಕಾದರೇ ಅಧ್ಯಕ್ಷ ಸ್ಥಾನ ತ್ಯಜಿಸಿ ಅವರಿಗೆ ಕೊಡೋಕೆ ಸಿದ್ಧವಾಗಿದ್ದಿನಿ" ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.

Bigg boss kannada season 10: Will Vinay Gowda be part of Nondavara Sangha?

ಈ ಬಗ್ಗೆ ಮಾತನಾಡಿರುವ ವರ್ತೂರ್ ಸಂತೋಷ್, ಇಲ್ಲ ಅವರು ನಮ್ಮ ಸಂಘಕ್ಕೆ ಬಂದಿಲ್ಲ ಎಂದಿದ್ದಾರೆ. ಮೊನ್ನೆ ಕೋಡ ನಾನು ಕೇಳಿದ ನಮ್ಮ ಗುಂಪಿಗೆ ಬಂದಿದ್ದಿರಾ ಎಂದು, ಇಲ್ಲ ಸುಮ್ಮನೆ ಮಾತಾಡೋಕೆ ಬಂದಿದ್ದಿನಿ. ಗುಂಪಿಗೆಲ್ಲಾ ಬರೋದಿಲ್ಲ ಅಂದ್ರು ಎಂದು ವರ್ತೂರ್ ಹೇಳಿದ್ದಾರೆ. ಇದಕ್ಕೆ ಮಧ್ಯೆ ಮಾತಾಡಿರುವ ತುಕಾಲಿ ಸಂತೋಷ್, 'ಹೀಗೆ ಮಾತಾಡೋಕೆ ಬರೋದೆ ಮೊದಲ ಸ್ಟೆಪ್. ಜಾಯಿನ್ ಆಗೋದು ಸೆಕೆಂಡ್ ಸ್ಟೆಪ್ ಎಂದು ಹೇಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು, ಈ ವಾರ ಸಂಗೀತಾ ಶೃಂಗೇರಿ, ಮೈಕಲ್ ಅಜಯ್, ವಿನಯ್ ಗೌಡ, ತನಿಷಾ ಕುಪ್ಪಂಡ ಮತ್ತು ಸ್ನೇಹಿತ್ ಗೌಡ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದ್ದು, ಇದರಲ್ಲಿ ಒಬ್ಬರು ಮನೆ ಬಿಟ್ಟು ಹೊರಹೊಗಲಿದ್ದಾರೆ. ಬಹುತೇಕ ಸ್ನೇಹಿತ್ ಗೌಡ ಎಲಿಮಿನೇಟ್ ಆಗುವ ಸಾಧ್ಯತೆಯಿದೆ.

More from Filmibeat

English summary
Bigg boss: Nondavara Sangha and Vinay Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X