BBK10: ವಿನಯ್ ಮೈಕ್ ಕೂಡ ಅವರೇ ಗೆಲ್ತಾರೆ ಅಂತ.. ಏನ್ ಸಮಾಚಾರ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಇನ್ನೇನು ಕೆಲವು ದಿನಗಳ ಜರ್ನಿಯನ್ನು ಮುಗಿಸಿ, ಫೈನಲ್ ಹಂತಕ್ಕೆ ತಲುಪಲಿದ್ದಾರೆ. ಟ್ರೋಫಿ ತೆಗೆದುಕೊಂಡು ಖುಷಿಯಿಂದ ನಡೆಯುತ್ತಾರೆ. ಅಷ್ಟೇ ಅಲ್ಲ 50 ಲಕ್ಷ ಅಮೌಂಟ್ ಕೂಡ ಗೆದ್ದವರ ಪಾಲಾಗುತ್ತದೆ. ಆ ದಿನಕ್ಕೋಸ್ಕರ ಮನೆಯೊಳಗಿನ ಸ್ಪರ್ಧಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಊಹೆಗಳ ಜೊತೆಗೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಎಂಬ ಕುತೂಹಲವೂ ಇದೆ.

ಈ ಬಾರಿಯ ಸೀಸನ್‌ನಲ್ಲಿರುವ ಸ್ಪರ್ಧಿಗಳೇ ನೋಡುಗರಿಗೆ ಬೇಸರ ತರಿಸಿದ್ದಾರೆ. ಎಷ್ಟೋ ಸಲ ರೂಲ್ಸ್ ಬ್ರೇಕ್, ಎಷ್ಟೋ ಸಲ ಸೀರಿಯಸ್ ನೆಸ್ ಇಲ್ಲದೆ ಇರುವುದು. ಅದರಲ್ಲೂ ಒಮ್ಮೆಯೂ ಲಕ್ಸುರಿ ಬಜೆಟ್ ಅನ್ನು ಗೆಲ್ಲದೆ ಇರುವುದು. ಹೀಗಾಗಿ ಗೆಲುವು ಯಾರ ಮುಡಿಗಪ್ಪ ಎಂಬ ಕಾಡುವ ಪ್ರಶ್ನೆಯ ಜೊತೆಗೆ ಈ ಬಾರಿ ವಿನಯ್ ಗೆಲ್ಲಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ವಿನಯ್ ಮೈಕ್ ಕೂಡ ಅವರೇ ವಿನ್ನರ್ ಅಂತಿದೆ.

Bigg Boss Kannada 10 Vinay Mic Matter

ವಿನಯ್ ಗೆಲ್ಲುವ ಆನೆಯೇ..?

ಆರಂಭದಿಂದಾನೂ ವಿನಯ್ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆನೆ ಅಂತಾನೇ ಗುರುತಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ ಮನೆಯಲ್ಲಿರುವ ಹಲವರು ಕೂಡ ವಿನಯ್ ಗೆಲ್ಲುವಂತೆ ಜೊತೆಯಾಗಿದ್ದಾರೆ. ಕಿಚ್ಚನ ಎಚ್ಚರದಿಂದ ಆಗೊಮ್ಮೆ ಈಗೊಮ್ಮೆ ಎಂಬಂತೆ ಸರಿಯಾಗುತ್ತಿದ್ದವರು, ಮತ್ತೆ ಮತ್ತೆ ಅದೇ ತಪ್ಪನ್ನೇ ಮಾಡಿದ್ದಾರೆ.

ಸ್ನೇಹಿತರಿಂದ ಸಿಗುತ್ತಿದೆ ಬೆಂಬಲ

ವಿನಯ್ ಗೆಲ್ಲಲೇಬೇಕೆಂದು ಮನೆ ಮಂದಿ, ಸ್ನೇಹಿತರೆಲ್ಲರೂ ಆಸೆ ಪಟ್ಟಿದ್ದಾರೆ. ಅದಕ್ಕೆ ತಕ್ಕ ಹಾಗೇ ಪ್ರತಿ ವಾರ ಹೆಚ್ಚೆಚ್ಚು ವೋಟಿಂಗ್ ಮಾಡಿಸುತ್ತಾರೆ. ಅಷ್ಟೇ ಅಲ್ಲ ಬೇರೆಯವರ ಬೆಂಬಲವನ್ನು ಕೇಳಿದ್ದಾರೆ. ಇದರ ನಡುವೆ ವಿನಯ್ ಅಭಿಮಾನಿಗಳೇನು ಸುಮ್ಮನೆ ಕೂತಿಲ್ಲ. ಪ್ರಚಾರ ಮಾಡುವುದರ ಜೊತೆಗೆ ವಿನಯ್ ಗೆಲುವಿಗಾಗಿ ಪೋಸ್ಟರ್ ಹಾಕುವ ಮೂಲಕ, ಶುಭಕೋರುತ್ತಿದ್ದಾರೆ. ವಿನಯ್ ಗೆಲ್ಲಿಸಲು ಲೈಕ್ ಮಾಡಿ ಅಂತೆಲ್ಲ ಕಮೆಂಟ್ಸ್ ಮಾಡುತ್ತಿದ್ದಾರೆ.

Bigg Boss Kannada 10 Vinay Mic Matter

ವಿನಯ್ ಮೈಕ್ ಹೇಳಿದ್ದೇನು..?

ಈಗಾಗಲೇ ಬಿಗ್ ಬಾಸ್ ಮನೆಯಿಂದ ಬಂದ ಪ್ರತಿಯೊಬ್ಬರು ವಿನಯ್ ಕೂಡ ಗೆಲುವಿನ ಓಟದಲ್ಲಿದ್ದಾರೆ ಎಂದಿದ್ದಾರೆ. ಕಳೆದ ವಾರ ಬಂದಂತ ಸ್ವಾಮೀಜಿ ಬೇರೆ ರಾಜಯೋಗ ಇದೆ ಎಂದಿದ್ದಾರೆ. ಈಗ ವಿನಯ್ ಹಾಕಿರುವ ಮೈಕ್ ಕೂಡ ವಿನ್ ಎಂದೇ ಘೋಷಣೆ ಮಾಡಿದೆ. ಬಿಗ್ ಬಾಸ್ ಮನೆಯೊಳಗೆ ಪ್ರತಿ ಸೆಕೆಂಡ್ ಕೂಡ ಮೈಕ್ ಹಾಕಿರಲೇಬೇಕು. ಈ ಮೈಕ್ ಮೇಲೆ ಈ ಮೊದಲು ಇಂಗ್ಲಿಷ್ ನಲ್ಲಿ ಹೆಸರು ಬರೆಯಲಾಗಿತ್ತು. ಆದರೆ ಈ ಸಲ ಕನ್ನಡದಲ್ಲಿ ಹೆಸರನ್ನು ಬರೆಯಲಾಗಿದೆ.

ವಿನಯ್ ಅಕ್ಷರದಲ್ಲಿ 'ಯ್' ಮಿಸ್

ಎಲ್ಲರೂ ಮೈಕ್ ತೊಟ್ಟಿದ್ದಾರೆ. ಮೈಕ್ ಒಂದು ಕ್ಷಣ ಮಿಸ್ ಆದರೂ ಬಿಗ್ ಬಾಸ್ ಶಿಕ್ಷೆಯನ್ನು ನೀಡುತ್ತಾರೆ. ಹೀಗಾಗಿ ಮೈಕ್ ಮರೆಯುವುದಿಲ್ಲ. ಈ ಬಾರಿ ಕನ್ನಡದಲ್ಲಿ ಅಕ್ಷರಗಳನ್ನು ಬರೆಯಲಾಗಿದೆ. ಆಲ್ಮೋಸ್ಟ್ ಎಲ್ಲರ ಮೈಕ್‌ನಲ್ಲಿ ಹೆಸರಿನ ಒಂದೊಂದು ಗೆರೆಗಳು, ಅಕ್ಷರಗಳು ಕಳಚಿ ಬಿದ್ದಿವೆ. ಎಲ್ಲವನ್ನು ಕ್ಷಣ ಮಾತ್ರದಲ್ಲಿ ಸರಿ ಮಾಡುವ ಬಿಗ್ ಬಾಸ್ ಈ ವಿಚಾರದಲ್ಲಿ ಸುಮ್ಮನೆ ಆಗಿ ಬಿಟ್ಟಿದೆ. ಎಲ್ಲರ ಮೈಕ್‌ನಲ್ಲೂ ಅಕ್ಷರಗಳು ಕಳಚಿ ಬಿದ್ದರು ಅಷ್ಟೇನು ವ್ಯತ್ಯಾಸ ಎನಿಸಿಲ್ಲ. ಆದರೆ ವಿನಯ್ ಮೈಕ್‌ನಲ್ಲಿ ವಿನ್ ಅಂತ ಮಾತ್ರ ಉಳಿದುಕೊಂಡಿದೆ. ವಿನಯ್ ಎಂಬ ಹೆಸರಿನಲ್ಲಿ 'ಯ್' ಅಕ್ಷರ ಬಿದ್ದಾಗಲೂ, ವಿನ ಆಗಬೇಕು. ಆದರೆ ಅದೇಗೆ ವಿನ್ ಆಯ್ತು ಎಂಬುದೇ ಕುತೂಹಲಕಾರಿ.

More from Filmibeat

English summary
Bigg Boss Kannada Season 10 Will Vinay win Bigg Boss what is his mic story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X