BBK 10: ಸಮರ್ಥರಿಗಿಂತ ಅಸಮರ್ಥರೇ ಬೆಸ್ಟ್.. ಲಾರ್ಡ್ ಪ್ರಥಮ್ ರೂಲ್ ಅಂದ್ರೆ ಸುಮ್ನೆನಾ?

By ಎಸ್ ಸುಮಂತ್

ಈ ಬಾರಿ ವೋಟಿಂಗ್ ಪದ್ದತಿಯಿದ್ದಿದ್ದರಿಂದ ಆರು‌ ಜನ ವೈಟಿಂಗ್ ಲಿಸ್ಟ್ ನಲ್ಲಿ ಉಳಿದು ಬಿಟ್ಟರು. ಎಲ್ಲರೂ ಮನೆಯ ಒಳಗೆ ಹೋದ ಮೇಲೆ ವೈಟಿಂಗ್ ಲೀಸ್ಟ್ ನಲ್ಲಿದ್ದವರನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ, ಷರತ್ತು ಬದ್ದ ಒಪ್ಪಿಗೆಯ ಮೇರೆಗೆ. ಬಿಗ್ ಬಾಸ್ ಮನೆಯ ಒಳಗೆ ಹೋದಾಗಿನಿಂದ‌ ಎಲ್ಲಾ‌ ಕೆಲಸವನ್ನು ಈ ಅಸಮರ್ಥರು ಎನಿಸಿಕೊಂಡ ಆರು ಜನರೇ ಮಾಡುತ್ತಿದ್ದಾರೆ.

ಪಾಪ ಕಳೆದ ನಾಲ್ಕು ದಿನದಿಂದ ಒಂದೇ ಜೊತೆ ಬಟ್ಟೆಯನ್ನೇ ಹಾಕಿಕೊಂಡಿದ್ದಾರೆ. ಸ್ನಾನ ಮಾಡಿ ಮತ್ತೆ ಅದೇ ಬಟ್ಟೆಯನ್ನೆ ಹಾಕಿಕೊಳ್ಳುತ್ತಾರೆ. ಅದರಲ್ಲೂ ಸಮರ್ಥರು ಎನಿಸಿಕೊಂಡವರು ಅಸಮರ್ಥರನ್ನು ಒಳ್ಳೆ ಜೀತದಾಳುಗಳಂತೆ ಫೀಲ್ ಮಾಡುತ್ತಿದ್ದಾರೆ. ಆದರೆ, ಬಿಗ್ ಬಾಸ್‌ನಲ್ಲಿ ಯಾವುದು ಶಾಶ್ವತ ಅಲ್ಲ. ಕಾಲ ಚಕ್ರ ಉರುಳಲೇಬೇಕು. ಅದು ಬೇಗನೇ‌ ಉರುಳಿದೆ.

Bigg Boss Kannada season 10 written update on October 12th episode

ಲಾರ್ಡ್ ಪ್ರಥಮ್ ಆಗಿ ಬಂದ ಒಳ್ಳೆ ಹುಡುಗ

ಬಿಗ್ ಬಾಸ್ ಮನೆಯಲ್ಲಿರುವವರೆಲ್ಲ ಹೊಸಬರೆ. ಈ ಹಿಂದೆಯೆಲ್ಲಾ ಹಳೆ ಎಪಿಸೋಡ್‌ಗಳನ್ನು ನೋಡಿಯೇ ಬಂದಿದ್ದಾರೆ. ಆದರೂ ಕೊಂಚ ಗೊಂದಲದಲ್ಲಿಯೇ ಎಲ್ಲಾ ಸ್ಪರ್ಧಿಗಳು ಇದ್ದರು. ಗೇಮ್ ಆಡುವುದಕ್ಕೆ ಬಂದಿದ್ದೇವೆ ಎಂಬ ಮನಸ್ಥಿತಿ ಯಾರಲ್ಲಿಯೂ ಕಂಡಂತೆ ಕಾಣಲಿಲ್ಲ. ಅದಕ್ಕೆ ಎಲ್ಲರಿಗೂ ಎನರ್ಜಿ ತುಂಬುವುದಕ್ಕೆ‌ ಲಾರ್ಡ್ ಆಗಿ ಒಳ್ಳೆ ಹುಡುಗ ಪ್ರಥಮ್ ಎಂಟ್ರಿ ಕೊಟ್ಟಿದ್ದರು.

ಪ್ರಥಮ್ ಬಂದಾದ ಮೇಲೆ ಬದಲಾವಣೆ

ಪ್ರಥಮ್ ಬಂದಾಗಿನಿಂದ ಮುಖದಲ್ಲಿ ನಗು ಇರಲಿಲ್ಲ. ಫುಲ್ ಶಿಸ್ತಿನ ಸಿಪಾಯಿಯಂತೆ ಎಲ್ಲರ ಬಳಿ ನಡೆದುಕೊಂಡರು. ಯಾರು ಏನೇನು ತಪ್ಪು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿದರು. ಯಾರ ಧ್ವನಿ ಎಷ್ಟಿದೆ? ಆದರೆ ಹೊರಗೆ ಬರದೆ ಇರಲು ಕಾರಣವೇನು ಎಂಬುದನ್ನು ಪ್ರಶ್ನಿಸಿದರು. ಪ್ರಥಮ್ ಅಷ್ಟು ಸೀರಿಯಸ್ ಆಗಿ ಇದ್ದಿದ್ದರಿಂದಾನೇ ಎಲ್ಲರೂ ಇನ್ನು ಮುಂದೆ ಆಕ್ಟೀವ್ ಆಗಬೇಕು ಎಂಬ ಮನಸ್ಥಿತಿಗೆ ಬಂದರು. ಇರುವಷ್ಟು ಸಮಯ ಮಾತ್ರ ಪ್ರಥಮ್ ಸಂಗೀತಾ, ನಮ್ರತಾ, ಸಂತೋಷ್, ಕಾರ್ತೀಕ್ ಬಳಿ ಸೇವೆ ಮಾಡಿಸಿಕೊಂಡರು.

ಟಾಸ್ಕ್ ಗೆದ್ದ ಅಸಮರ್ಥರು

ಬಿಗ್ ಬಾಸ್ ಅಂದ ಮೇಲೆ ಟಾಸ್ಕ್ ಇದ್ದೆ ಇರುತ್ತದೆ. ಸೋಲು ಗೆಲುವು ಅನ್ನೋದು ಟಾಸ್ಕ್‌ಗಳಿಂದಾನೇ ನಿರ್ಧಾರವಾಗುವುದು. ಈ ಬಾರಿಯ ಟಾಸ್ಕ್‌ನಲ್ಲಿ ಅಸಮರ್ಥರಿಗೂ ಅವಕಾಶ ನೀಡಲಾಗಿದೆ. ಸಮರ್ಥರ ಟೀಂ ಮೇಲೆ ಅಸಮರ್ಥರು ಆಡಬೇಕಾಗಿತ್ತು. ಬಾಕ್ಸ್ ಗಳ ಒಳಗೆ ನಿಂತು ಮತ್ತೆ ಅದೇ ಸ್ಥಾನಕ್ಕೆ ತಂದು ನಿಲ್ಲಿಸಬೇಕಿತ್ತು. ಐದು ಸುತ್ತಿನ ಆಟ ಅದಾಗಿತ್ತು. ಆದರೆ ಅಸಮರ್ಥರು ಮೂರು ಸುತ್ತಿನಲ್ಲೂ ವಿನ್ ಆಗಿದ್ದರು. ಹೀಗಾಗಿ ಐದು ಸುತ್ತಲ್ಲ, ಮೂರೇ ಅಉತ್ತಿಗೆ ಆಟ ನಿಲ್ಲಿಸಿ, ಗೆದ್ದವರಿಗೆ ಶುಭಾಶಯ ತಿಳಿಸಿದ್ದರು ಬಿಗ್ ಬಾಸ್. ಹಾಗೇ ಪ್ರಥಮ್ ರನ್ನು ವಾಪಾಸ್ ಕಳುಹಿಸಿದ್ದರು.

ಸಮರ್ಥರಿಗಿಂತ ಈಗ ಅಸಮರ್ಥರೇ ಗ್ರೇಟ್

ಬಿಗ್ ಬಾಸ್ ಒಂದೊಂದು ಟಫ್ ಎನಿಸುವ ಟಾಸ್ಕ್ ಕೊಟ್ಟಾಗೆಲ್ಲ ವಿನ್ ಆದವರಿಗೆ ಏನಾದರೊಂದು ವಿಶೇಷ ಗಿಫ್ಟ್ ನೀಡುತ್ತೆ. ಅದರಲ್ಲೂ ಊಟದ ವಿಚಾರದಲ್ಲಿಯೇ ಹೆಚ್ಚು ಕಾಳಜಿ ವಹಿಸುತ್ತದೆ. ಈ ಬಾರಿ ಅಸಮರ್ಥರು ಟಾಸ್ಕ್ ನಲ್ಲಿ ವಿನ್ ಆಗಿದ್ದಾರೆ. ಹೀಗಾಗಿ ನಾನ್ ವೆಜ್ ಊಟವನ್ನು ನೀಡಿದೆ. ಅದರ ಜೊತೆಗೆ ಈ ಊಟವನ್ನು ಅಸಮರ್ಥರ ಜೊತೆಗೆ ಹಂಚಿಕೊಳ್ಳುವಂತೆ ಇಲ್ಲ ಎಂದು ತಿಳಿಸಿದೆ. ಅಸಮರ್ಥರು ಇಷ್ಟು ದಿನ ಪಟ್ಟ ಕಷ್ಟಕ್ಕೂ ಒಳ್ಳೆ ಊಟ ಸಿಕ್ಕಿದೆ.

More from Filmibeat

English summary
Bigg Boss Kannada season 10 written update on October 12th episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X