BBK 10: ಕಳೆದ 9 ಸೀಸನ್‌ನಲ್ಲೂ ಎದುರಾಗದ ಸಮಸ್ಯೆ ಈ ಸೀಸನ್ ಬಂದಿದ್ದೇಕೆ? ಬಿಗ್ ಬಾಸ್ ಬಗೆ ಹರಿಸಿದ್ದೇಗೆ..?

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 10 ಇಂದಿನಿಂದ ಸ್ಪರ್ಧಿಗಳ ರಿಯಲ್ ಆಟ ಶುರುವಾಗಿದೆ. ಮನೆಯೊಳಗೆ 17 ಮಂದಿ‌ ಈಗಾಗಲೇ‌ ಎಂಟ್ರಿ ಕೊಟ್ಟಿದ್ದರು. ಆದರೆ, ಇಂದು ಹೊಸದಾಗಿ ನೋ ವೋಟಿಂಗ್, ನೇರವಾಗಿ ಪ್ರದೀಪ್ ಈಶ್ವರ್ ಕೂಡ ಮನೆಯ ಒಳಗೆ ಬಂದಿದ್ದಾರೆ. ಇಂದಿನಿಂದ ಎಲ್ಲರ ರಿಯಲ್ ಲೈಫ್ ಶುರುವಾಗಿದೆ.

ಹೊಸ ಮನೆ, ಹೊಸ ಜನ, ಹೊಸ ರೀತಿಯ ಬದುಕು, ಮೊದಲ ದಿನ ಮನೆಯೆಲ್ಲಾ ಗಿಜಿ ಗಿಜಿ ಎನ್ನುತ್ತಿದೆ. ಎಲ್ಲರೂ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಆದರೆ ಇನ್ನೆಷ್ಟು ದಿನ ಈ ಗಿಜಿ ಗಿಜಿ ಮಾತುಗಳು ಎಂಬುದನ್ನು ನೋಡಬೇಕಿದೆ.

Bigg Boss Kannada Season 10 written update on October 9th episode

ಬಿಗ್ ಬಾಸ್ ಮನೆಯಲ್ಲಿ ನಗಿಸುವ ಬಾಂಬ್

ಬಿಗ್ ಬಾಸ್ ಒಂದು ದಿನದ ಆಟವಲ್ಲ. ಹಾಗಂತ ಹೋದವರೆಲ್ಲ ನೂರು ದಿನ ಇರುತ್ತಾರೆ ಅಂತಾನೂ ಅಲ್ಲ. ತಮ್ಮ ತಮ್ಮ ಆಟದ ವೈಖರಿ, ಸ್ಟ್ರೆಂತ್ ಎಲ್ಲವೂ ಮನೆಯಲ್ಲಿ ಉಳಿಯಬೇಕು ಅನ್ನೋದು ಮ್ಯಾಟರ್ ಆಗುತ್ತೆ. ನೂರು ದಿನದಲ್ಲಿ ಯಾರು ಇರುತ್ತಾರೋ ಇಲ್ಲವೋ, ಗೊತ್ತಿಲ್ಲ. ಆದರೆ, ಆ ನೂರು ದಿನ ಜನ ನೋಡಲೇಬೇಕಾಗುತ್ತದೆ. ಅದಕ್ಕೆಂದು ಆಟದ ಜೊತೆಗೆ ಒಂದಷ್ಟು ಮನರಂಜನೆ ಬೇಕಾಗಿದೆ. ಆ ಮನರಂಜನೆ ಕೊಡುವುದಕ್ಕೆ ರೆಡಿಯಾಗಿರುವುದು ಸಂತೋಷ್.

ಈ ಬಾರಿ ಸಂತೋಷ್‌ನದ್ದೇ ದೊಡ್ಡ ಸಮಸ್ಯೆ

ಇಡೀ ಟೀಂ ಒಂದು ಕಡೆ ಕೂತು ಹರಟೆ ಹೊಡೆಯುತ್ತಿತ್ತು. ತಕ್ಷಣ ಬಿಗ್ ಬಾಸ್ ಧ್ವನಿ‌ ಕೇಳಿದೆ. "ಇಷ್ಟು ಸೀಸನ್‌ನಲ್ಲಿ ಕಾಣದ ಸಮಸ್ಯೆ, ಈ ಸೀಸನ್‌ನಲ್ಲಿ ಕಾಣಿಸುತ್ತಿದೆ. ಎಲ್ಲರೂ ಈ ಸಮಸ್ಯೆಗೆ ಗೊಂದಲಗೊಂಡಿದ್ದಾರೆ. ಈ ಸಮಸ್ಯೆಗೆ ಒಂದು ಪರಿಹಾರ ಹುಡುಕಬೇಕಿದೆ" ಎಂದಿದ್ದಾರೆ. ಮನೆಯವರಷ್ಟೇ ಅಲ್ಲ ನೋಡುಗರೇ ಶಾಕ್ ಆಗಿದ್ದರು. ಬಳಿಕ ಬಿಗ್ ಬಾಸ್ ಇಬ್ಬರು ಸಂತೋಷ್‌ರನ್ನು ಕರೆದು ನಿಲ್ಲಿಸಿದ್ದಾರೆ.

ಖುಷಿ ಪಟ್ಟ ಸಂತೋಷ್‌ಗೆ ಶಾಕ್

ಬಿಗ್ ಬಾಸ್ ಹೇಳಿದ್ದು ಹೌದು ಎನಿಸಿದ್ದಂತು ಸತ್ಯ. ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಸಂತೋಷ್ ಇದ್ದಾರೆ. ಒಬ್ಬರು ತುಕಾಲಿ ಸಂತೋಷ್, ಇನ್ನೊಬ್ಬರು ವರ್ತೂರು ಸಂತೋಷ್. ಆದರೆ, ಬಿಗ್ ಬಾಸ್‌ ಇಬ್ಬರು ಸಂತೋಷ್‌ರನ್ನ ಏನಂತ ಕರೆಯಬೇಕು ಎಂದು ತಿಳಿದಿಲ್ಲ. ಹೀಗಾಗಿ ಅವರಿಗೆ ಆಯ್ಕೆ ಕೊಟ್ಟಾಗ ವರ್ತೂರ್ ಸಂತೋಷ್ ಎಂದು ಕರೆಯಿರಿ ಅಂದ್ರು. ಆದರೆ, ಕಡೆಗೆ ಬಿಗ್ ಬಾಸ್ ಒಂದು ಹೆಸರನ್ನು ಆಯ್ಕೆ ಮಾಡಿತ್ತು. ಅದಕ್ಕೂ ಮುನ್ನ ಇಬ್ಬರಿಗೂ ಒಂದು ಟ್ವಿಸ್ಟ್ ಕೂಡ ಕೊಟ್ಟಿತ್ತು. "ಬಲಗಡೆ ಇರುವ ಸಂತೋಷ್ ಕುಮಾರ್‌ರನ್ನು ಸಂತೋಷ್ ಎಂದು ಕರೆಯೋಣಾ" ಎಂದಿತ್ತು. ಅದಕ್ಕೆ ಖುಷಿಯಾದ ಸಂತೋಷ್‌ಗೆ ತಕ್ಷಣವೇ ಶಾಕಿಂಗ್ ನೀಡಿತ್ತು. ನನ್ನ ಬಲಗಡೆ ಅಂತ ಹೇಳಿ ಗೊಂದಲ ಮಾಡಿತ್ತು.

ತುಕಾಲಿಗೆ ಮರ್ಯಾದೆ ಕೊಟ್ಟ ಬಿಗ್ ಬಾಸ್

ಎಲ್ಲಾ ಗೊಂದಲದ ಬಳಿಕ ವರ್ತೂರು ಸಂತೋಷ್ ಅವರನ್ನು ಸಂತೋಷ್ ಎಂದು ಕರೆಯಲಾಗಿದೆ. ಈಗ ತುಕಾಲಿ ಸಂತೋಷ್ ಅವರನ್ನು ತುಕಾಲಿ ಎಂದು ಹೇಳುವುದಕ್ಕೆ ಬಿಗ್ ಬಾಸ್‌ಗೂ ಬೇಸರ ಅಂತೆ. ಅದಕ್ಕೆಂದೆ ಸ್ವಲ್ಪ ಮರ್ಯಾದೆ ಕೂಡ ಕೊಟ್ಟಿದೆ. ಏನು ಅಂದರೆ ತುಕಾಲಿ ಅವರೆ ಎಂದು ಹೇಳುವ ಮೂಲಕ ಸಂತೋಷ್‌ಗೆ ಹೆಚ್ಚು ಗೌರವ ನೀಡಿದೆ.

More from Filmibeat

English summary
Bigg Boss Kannada Season 10 written update on October 9th episode. Here is the details about Santhosh problem:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X