BBK 11: ಅನುಷಾ ಔಟ್.. ಧರ್ಮ ಕಣ್ಣೀರು; ಬ್ಯೂಟಿಫುಲ್ ಲವ್ ಸ್ಟೋರಿಗೆ ಬ್ರೇಕ್!

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11 ಇದೀಗ 8ನೇ ವಾರಕ್ಕೆ ಕಾಲಿಟ್ಟಿದೆ. ಒಬ್ಬೊಬ್ಬರೇ ಒಂದೊಂದು ವಾರದಲ್ಲಿ ಹೊರಗೆ ಬರುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಅಂದುಕೊಂಡು ಹೋಗಿದ್ದು ಒಂದು ರೀತಿ, ಅಲ್ಲಿ ಫೀಲ್ ಮಾಡಿಕೊಳ್ಳುವುದೇ ಮತ್ತೊಂದು ರೀತಿ. ದೂರದಿಂದ ನಿಂತು ನೋಡಿದಾಗ ಕಂಡ ಬಿಗ್ ಬಾಸ್ ಮನೆ, ಹೋಗಿ ಜೀವಿಸಿದಾಗ ಅದಾಗಿರಲ್ಲ ಎಂಬುದು ಎಷ್ಟೋ ಸ್ಪರ್ಧಿಗಳ ಅನುಭವಕ್ಕೆ ಬಂದಿದೆ. ಹಿಂಗೆ ಆಡಬೇಕು ಎಂದುಕೊಂಡವರು ಹೊರಗೆ ಬಂದಿದ್ದಾರೆ. ಬಂದಿದ್ದೀನಿ, ಆಡಬೇಕು ಎಂದುಕೊಂಡ ಹನುಮಂತ ಅಂಥವರು ಸೇವ್ ಆಗುತ್ತಿದ್ದಾರೆ.

ಈ ವಾರ ಮನೆಯಿಂದ ಹೊರಗೆ ಬಂದಿದ್ದು ಅನುಷಾ ರೈ. ವಿನ್ನರ್ ಆಗ್ತೀನಿ ಎಂಬ ನಂಬಿಕೆಯಿಂದಾನೇ ಮನೆಗೆ ಹೋದ್ರು. ಆದರೆ ಬಹಳ ಬೇಗನೇ ಮನೆಯಿಂದ ಹೊರಗೆ ಬಂದರು. ಧರ್ಮ ಹಾಗೂ ಅನುಷಾ ಲವ್ ಬರ್ಡ್ಸ್ ಥರ ಇದ್ರು. ಈಗ ಕೊಂಬೆ ಮೇಲೆ ಧರ್ಮ ಎಂಬ ಹಕ್ಕಿ ಮಾತ್ರ ಕೂತು, ದುಃಖಿಸುತ್ತಿದೆ. ಹೊರಗೆ ಬಂದದ್ದು ಅನುಷಾಗೂ ಬೇಸರವೂ ಇದೆ, ಪಶ್ಚಾತ್ತಾಪವೂ ಇದೆ. ಅಷ್ಟಕ್ಕೂ ಹೊರ ಬರಲು ಕಾರಣವೇನು..? ಸುದೀಪ್ ಜೊತೆಗೆ ಅನುಷಾ ಹಂಚಿಕೊಂಡ ವಿಚಾರವೇನು..? ಮುಂದೆ ಓದಿ.

Bigg boss kannada season 11 Anusha Rai evicted from sudeep hosted show

ಕೊನೆ ಕ್ಷಣದಲ್ಲಿ ಅನುಷಾ ಹೊರಕ್ಕೆ

ಈ ವಾರ ಅನುಷಾ ಮತ್ತು ಧರ್ಮ ಕೂಡ ನಾಮಿನೇಷನ್‌ನಲ್ಲಿ ಇದ್ದರು. ಕಡೆ ಗಳಿಗೆಯಲ್ಲಿ ಅನುಷಾ ಹಾಗೂ ಧರ್ಮ ಇಬ್ಬರು ಹಾಟ್ ಸೀಟ್‌ನಲ್ಲಿ ನಿಂತರು. ಆದರೆ ಇಬ್ಬರು ಹೋಗುವ ಸಾಧ್ಯತೆ ಇದೆ ಎಂದು ಸುದೀಪ್ ಅವರು ಹೇಳಿದ್ದರು. ಭಯ ಭಯದಲ್ಲಿ, ಬೇಸರದಲ್ಲಿಯೇ ನಿಂತಿದ್ದ ಅನುಷಾ ಮತ್ತು ಧರ್ಮ ವಿಚಾರದಲ್ಲಿ ಕೊನೆಗೆ ಹೊರಗೆ ಬಂದಿದ್ದು ಅನುಷಾ.

ಬಿಕ್ಕಿ ಬಿಕ್ಕಿ ಅಂತ ಚೈತ್ರಾ

ಬಿಗ್ ಬಾಸ್ ಮನೆಗೆ ಹೋದಾಗಿನಿಂದ ಧರ್ಮ ಹಾಗೂ ಅನುಷಾ ಇಬ್ಬರು ಒಟ್ಟೊಟ್ಟಿಗೆ ಇರುತ್ತಾ ಇದ್ದರು. ಒಂದೆರಡು ವಾರ ನಾಮಿನೇಷನ್ ನಲ್ಲಿ ಅವರಿಬ್ಬರ ವಿಚಾರವೇ ಟಾಪಿಕ್ ಆಗಿತ್ತು. ಈಗೀಗ ಆಟದ ಕಡೆಗೆ ಗಮನ ಕೊಡುತ್ತಿದ್ದರು. ಆದರೆ ಧರ್ಮಗೆ ಅನುಷಾ ಮನೆಯಿಂದ ಹೊರಗೆ ಹೋಗಿದ್ದನ್ನು ಸಹಿಸಲು ಸಾಧ್ಯವಾಗಿಲ್ಲ. ಜೋರು ಕಣ್ಣೀರಿಟ್ಟಿದ್ದಾರೆ. ಇನ್ನು ತನ್ನ ಅಕ್ಕನಂತೆ ಚೈತ್ರಾ ಅವರನ್ನು ನೋಡಿದ್ದರು ಅನುಷಾ. ಚೈತ್ರಾ ಕೂಡ ದುಃಖಿಸಿದ್ದಾರೆ.

ಅನುಷಾ ಹೇಳಿದ್ದೇನು..?

'ಇನ್ನು ಪ್ರೂವ್ ಮಾಡಿಕೊಳ್ಳುವುದು ತುಂಬಾನೇ ಇತ್ತು. ಇಷ್ಟು ಬೇಗ ಹೊರಗೆ ಬರ್ತೀನಿ ಅಂತ ಗೊತ್ತಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಆಟದ ರೀತಿಯೇ ಇರಬೇಕಿತ್ತು. ನಾನು ಸ್ವಲ್ಪ ಎಮೋಷನಲ್. ಕೆಲವೊಂದು ಸಲ ನನಗೆ ನೋವಾದರೂ ಬೇರೆಯವರಿಗೆ ನೋವಾಗುತ್ತೆ ಅಂತ ನನ್ನ ಆಟವನ್ನೇ ಬಿಟ್ಟು ಕೊಡುತ್ತಿದೆ. ಆಟದಲ್ಲಿ ಅಗ್ರೇಷನ್ ಇರಬೇಕಿತ್ತು ಅನ್ನಿಸ್ತು' ಎಂದಿದ್ದಾರೆ.

Bigg boss kannada season 11 Anusha Rai evicted from sudeep hosted show

ಅನುಷಾಗೆ ಸಿಕ್ಕ ಕ್ಯಾಶ್ ಎಷ್ಟು?

ಅನುಷಾ 50 ದಿನಗಳ ಆಟ‌ಮುಗಿಸಿ ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಕೂತಿದ್ದ ಅವರ ಪೋಷಕರು ಮಗಳ ಬಗ್ಗೆ ಹೇಳಿದ್ದು ಹೀಗೆ, 'ಮೈನಸ್ ಅಂದ್ರೆ ಮೊದಲಿನಿಂದಾನೂ ಮನೆಯಲ್ಲಿ ಸ್ಮೂತ್ ಆಗಿನೇ ಬೆಳೆದಿದ್ದಳು. ಮನೆಯಲ್ಲಿ ಸಪೋರ್ಟ್ ಕಡಿಮೆ ಆಯ್ತು. ಎಲ್ಲದರಲ್ಲೂ ಮುನ್ನುಗ್ಗಬೇಕಿತ್ತು. ಎಲ್ಲಾ ವಿಚಾರದಲ್ಲೂ ಇನ್ವಾಲ್ ಆಗಬೇಕಿತ್ತು. ನಮಗೆ ಹೆಮ್ಮೆ ಇದೆ ಸರ್. ಹೊರಗಿನ ಜನ ಮಗಳಾಗಿದ್ದಾಳೆ' ಎಂದಿದ್ದಾರೆ. ಇದೆ ವೇಳೆ ಅವರ ತಮ್ಮ ನಾನು ಕಾಲೇಜಿಗೆ ಸೇರಿದಾಗಿನಿಂದ ನನ್ನ ಜವಾಬ್ದಾರಿ ಹೊತ್ತು ನೋಡಿಕೊಂಡಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಇನ್ನು ಅನುಷಾಗೆ ಒಂದು ಲಕ್ಷ ಕ್ಯಾಶ್, 50 ಸಾವಿರದ ಗಿಫ್ಟ್ ವೋಚರ್, 50 ಸಾವಿರ ಕ್ಯಾಶ್ ಪ್ರೈಸ್ ಸಿಕ್ಕಿದೆ.

More from Filmibeat

English summary
Colors kannada bigboss Written Update on Bigboss season 11 November 17th episode. Here is the details about Anusha Rai exit from Bigg Boss house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X