BBK 11: ಫೇವರಿಸಂ ಮಾಡಿದ್ದ ರಜತ್‌ನನ್ನೇ ಟಾರ್ಗೆಟ್ ಮಾಡಿದ ಭವ್ಯಾ - ಮೋಕ್ಷಿತಾ!

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ಇನ್ನುಳಿದಿರುವುದು ಕೇವಲ ಎರಡು ವಾರ ಮಾತ್ರ. ಈ ವಾರ ಮತ್ತು ಮುಂದಿನ ವಾರ. ಕಪ್ ಗೆಲ್ಲೋದು ಯಾರೂ ಎಂಬ ಪ್ರಶ್ನೆಗಿಂತ ಫಿನಾಲೆ ತಲುಪುವುದಕ್ಕಾಗಿಯೇ ಈಗ ಬಿಗ್ ಬಾಸ್ ಮನೆಯಲ್ಲಿ ಯುದ್ಧ ಶುರುವಾಗಿದೆ. ಹನುಮಂತ ಟಾಸ್ಕ್ ಗೆದ್ದು ಫಿನಾಲೆ ತಲುಪಿದ ಮೊದಲ ಸ್ಪರ್ಧಿಯಾಗಿದ್ದಾರೆ.

ಫಿನಾಲೆ ವೇದಿಕೆಯಲ್ಲಿ ಐದು ಜನ ಮಾತ್ರ ಇರುತ್ತಾರೆ. ಅದರಲ್ಲಿ ಒಬ್ಬರು ವಿನ್ನರ್ ಇಬ್ಬರು ರನ್ನರ್ ಅಪ್ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಈಗ ಮನೆಯಲ್ಲಿ ಎಂಟು ಜನ ಇದ್ದಾರೆ. ಮೂವರು ಹೊರಗೆ ಬರೋದು ಯಾರೂ ಎಂಬುದೇ ದೊಡ್ಡ ಪ್ರಶ್ನೆ ಹಾಗೇ ಕುತೂಹಲಕಾರಿಯಾದಂತ ವಿಚಾರ. ಈಗಾಗಲೇ ಟಫ್ ಕಾಂಪಿಟೇಷನ್ ಶುರುವಾಗಿದೆ. ಈ ವಾರದಿಂದ ಟಾಸ್ಕ್‌ಗಳು ಊಹೆ ಮಾಡಲಾಗದ ಟಾಸ್ಕ್ ಗಳೇ ಆಗಿರುತ್ತವೆ.

Bigg boss kannada season 11 Bhavya and Mokshita targeted Rajath

ವಾರದಲ್ಲೇ ಒಬ್ಬರು ಹೊರಕ್ಕೆ

ಫಿನಾಲೆ ಹತ್ತಿರ ಆಗುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿದ್ದ ಮಂದಿಯೂ ಕಡಿಮೆಯಾಗಬೇಕಿತ್ತು. ಆದರೆ ಈ ಸೀಸನ್‌ನಲ್ಲಿ ಅದ್ಯಾಕೋ ಏನೋ ಎಲಿಮಿನೇಷನ್ ಪ್ರಕ್ರಿಯೆ ಸರಿಯಾಗಿ ಆಗಲಿಲ್ಲ. ರಂಜಿತ್ - ಜಗದೀಶ್ ಜಗಳ ಆಡಿಕೊಂಡು ಹೋದರೆ, ಶೋಭಾ ಅನಾರೋಗ್ಯದಿಂದ ಹೊರ ನಡೆದರು. ಈ ವಾರವಾದರೂ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎಂದರೆ ಅದಕ್ಕೂ ಟ್ವಿಸ್ಟ್ ಕೊಡಲಾಗಿದೆ. ಒಬ್ಬರನ್ನು ಮಾತ್ರ ಎಲಿಮಿನೇಟ್ ಮಾಡಲಾಗಿತ್ತು. ಇದೀಗ ಶಾಕಿಂಗ್ ಎಂಬಂತೆ, ವಾರದ ಮಧ್ಯೆ ಒಬ್ಬರು ಹೊರಗೆ ಹೋಗ್ತಾರೆ ಎಂದು ಬಿಗ್ ಬಾಸ್ ಶಾಕಿಂಗ್ ಸುದ್ದಿ ತಿಳಿಸಿದ್ದಾರೆ.

ಟಾಸ್ಕ್ ಗೆಲ್ಲಲು ಹಾಕಿದ್ರು ಸ್ಕೆಚ್

ಬಿಗ್ ಬಾಸ್ ಫಿನಾಲೆಗೆ ತಲುಪಲು ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದ್ದಾರೆ. ಈ ವಾರದ ಎಲಿಮೊನೇಷನ್ ನಿಂದ ಪಾರಾದರೆ ಫಿನಾಲೆ ತನಕ ತಲುಪಬಹುದು. ಈಗ ಎಲ್ಲರೂ ಸ್ಚಾರ್ಥಿಗಳಾಗಿದ್ದಾರೆ. ತಮ್ಮನ್ನು ಸೇವ್ ಮಾಡಿದವರು, ಗೆಳೆಯ, ಗೆಳತಿ ಅಂತೇನಿಲ್ಲ. ಭವ್ಯಾ ಹಾಗೂ ಮೋಕ್ಷಿತಾ ಇಬ್ಬರು ಸೇರಿ ಒಬ್ಬರಿಗೆ ಸ್ಕೆಚ್ ಹಾಕಿದ್ದಾರೆ. ಅದುವೇ ರಜತ್. ಏನ್ ಮಾಡೋಣ. ರಜತ್‌ನ ಹೊರಗೆ ಇಡೋಣ ಎಂದು ನಿರ್ಧಾರ ಮಾಡಿದ್ದಾರೆ.

ರಜತ್‌ಗೆ ತ್ರಿವಿಕ್ರಂ ಟಾಂಗ್

ಕಳೆದ ವಾರ ರಜತ್ ಉಸ್ತುವಾರಿಯಾಗಿದ್ದರು. ತಮ್ಮ ಉಸ್ತುವಾರಿಯನ್ನು ಎಷ್ಟರಮಟ್ಟಿಗೆ ಮಾಡಿದ್ರು ಅಂದ್ರೆ ಭವ್ಯಾಗೋಸ್ಕರ ಉಸ್ತುವಾರಿ ಮಾಡಿದ್ದಾರೆಂಬುದು ಎದ್ದು ಕಾಣಿಸ್ತಾ ಇತ್ತು. ಇದನ್ನ ಕಿಚ್ಚ ಸುದೀಪ್ ಕೂಡ ಹೇಳಿದ್ದಾರೆ. ವಾರದ ಪಂಚಾಯ್ತಿಯಲ್ಲಿಹೆಚ್ಚು ಚರ್ಚೆಯಾಗಿದ್ದೆ ರಜತ್ ಉಸ್ತುವಾರಿ ಬಗ್ಗೆ. ಇದೀಗ ರಜತ್‌ಗೆ ವಿಕ್ರಂ ಟಾಂಗ್ ಕೊಟ್ಟಿದ್ದಾರೆ. ಟಿಕೆಟ್ ಟು ಫಿನಾಲೆಗೆ ಹೋಗಬಾರದು ಅಂತ ಭವ್ಯಾ ಹೆಸರು ತಗೋಳ್ತೀರಾ. ನಾಮಿನೇಷನ್‌ನಿಂದ ಬಚಾವ್ ಆಗೋದಕ್ಕೆ ಭವ್ಯಾ ಜೊತೆ ಸೇರಿಕೊಳ್ತೀರಾ ಎಂದು ತಿರುಗೇಟು ಕೊಟ್ಟಿದ್ದಾರೆ.

ಮೋಕ್ಷಿತಾ ಮೇಲೆ ರಜತ್ ಕೋಪ

ಈ ಟಾಸ್ಕ್ ಗೆದ್ದವರು ನಾಮಿನೇಷನ್‌ನಿಂದ ಸೇವ್ ಆಗುತ್ತಾರೆ ಎಂದು ಬಿಗ್ ಬಾಸ್ ಸೂಚನೆ ನೀಡಿತ್ತು. ಅದರಂತೆ ಭವ್ಯಾ ಹಾಗೂ ಮೋಕ್ಷಿತಾ ತಾವೂ ಸೇವ್ ಆಗುವುದಕ್ಕೆ ರಜತ್ ಬಲಿಪಶು ಮಾಡುವುದಕ್ಕೆ ಸ್ಕೆಚ್ ಹಾಕಿದ್ದರು. ಇದು ರಜತ್ ಗಮನಕ್ಕೂ ಬಂದಿತ್ತು. ನಂಗೆ ಗೊತ್ತು ನೀವಿಬ್ಬರು ಮಾತಾಡಿಕೊಂಡಿದ್ರಿ ಎಂದು ರಜತ್ ಹೇಳಿದ್ದಾರೆ. ದಿ ಈಸ್ ನಾಟ್ ಫೇರ್ ಅಂತಾನೂ ಬೇಸರ ಹೊರ ಹಾಕಿದ್ದಾರೆ. ಆದರೂ ಪ್ರಯೋಜನವೇನು ಭವ್ಯಾಗೋಸ್ಕರ ಫೇವರಿಸಂ ಮಾಡಿದ್ದ ರಜತ್ ಈಗ ಟಾರ್ಗೆಟ್ ಆಗಿದ್ದಾರೆ. ನೋಡೋಣ ಟಾಸ್ಕ್ ಏನಾದ್ರು ಕಂಪ್ಲೀಟ್ ಮಾಡಿ ಅವರಿಬ್ಬರಿಗೆ ಮುಖಭಂಗ ಮಾಡ್ತಾರಾ ಅಂತ.

More from Filmibeat

English summary
BBK 11: Here is the details about Rajat becomes Bhavya's target
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X