BBK 11: ಮಂಜಣ್ಣ ಹೋಗಿ ಮಂಜು ಅವ್ರೆ ಆಯ್ತು; ಮೋಕ್ಷಿ ಹೇಳಿದ್ದೆ ಸರಿ ಎಂದ ಗೌತಮಿ, ಫ್ರೆಂಡ್ಶಿಪ್ ಕಟ್!

By ಎಸ್ ಸುಮಂತ್

ಈ ವಾರ ಗೌತಮಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅದು ಗೌತಮಿಯ ಲಕ್ ಆಗಿತ್ತು. ಮೋಕ್ಷಿತಾ ತಾನು ಬೇಡ ಎಂದು ಬಿಟ್ಟುಕೊಟ್ಟಾಗ ಬಿಗ್ ಬಾಸ್ ಕೊಟ್ಟ ಅವಕಾಶದಿಂದ, ಮನೆಯವರ ಸಪೋರ್ಟ್‌ನಿಂದ ಕ್ಯಾಪ್ಟನ್ ಆದ್ರು. ಮೋಕ್ಷಿತಾ, ಮಂಜು, ಗೌತಮಿ ನಡುವೆ ಭಿನ್ನಾಭಿಪ್ರಾಯ ಮೂಡಿ ತುಂಬಾ ದಿನಗಳಾಗಿವೆ‌.

ಕ್ಯಾಪ್ಟನ್ ಆಗಬೇಕು ಅಂದ್ರೆ ಗೌತಮಿಯ ಸಹಾಯ ಕೇಳಬೇಕಿತ್ತು. ಆದರೆ ಅದನ್ನ ಮೋಕ್ಷಿತಾ ಮಾಡಲಿಲ್ಲ. ಕ್ಯಾಪ್ಟನ್ ಆಗದೆ ಇದ್ದರು, ಮನೆಯಿಂದ ಇವತ್ತೆ ಕಳುಹಿಸಿದ್ರು ನನ್ನ ಸ್ವಾಭಿಮಾನ ಬಿಟ್ಟು ಬದುಕಲ್ಲ ಅಂತ ಹೇಳಿದ್ರು.

Bigg Boss Kannada Season 11 Gauthami Jadav Ends Friendship with ugramm manju

ದೊಡ್ಡ ನಿರ್ಧಾರಗಳಿಗೆ ದೊಡ್ಡ ದೊಡ್ಡ ಬೆಲೆ ತರಬೇಕಾಗುತ್ತೆ ಎಂದು ಹೇಳಿದ ಬಿಗ್ ಬಾಸ್ ಎದುರಾಳಿಯ ಒಬ್ಬರಿಗೆ ಅವಕಾಶ ನೀಡಿದರು. ಅದರಲ್ಲಿ ಮಂಜು ಹೆಚ್ಚಿನ ಬೆಂಬಲ ನೀಡಿ, ಗೌತಮಿಗೆ ಕ್ಯಾಪ್ಟನ ಓಟಕ್ಕೆ ಇಳಿಸಿದರು. ಗೌತಮಿಯೇ ಕ್ಯಾಪ್ಟನ್ ಕೂಡ ಆದರೂ. ಈಗ ಮಂಜು ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೋಕ್ಷಿ ಹೇಳಿದ್ದೆ ಸರಿ ಎನ್ನುತ್ತಿದ್ದಾರೆ.

ಮಂಜು ಮೇಲೆ ಗೌತಮಿ ಗರಂ

ಈ ವಾರ ಗೌತಮಿ ಕ್ಯಾಪ್ಟನ್ ಆಗಿದ್ದು ಮನೆಯಲ್ಲಿ ಒಂದಷ್ಟು ಬದಲಾವಣೆ ತರುವುದಕ್ಕೆ ಪ್ರಯತ್ನ ಪಡ್ತಾ ಇದಾರೆ. ಆದರೆ ಗೌತಮಿಗೆ ಬಹಳಷ್ಟು ಸಮಸ್ಯೆ ಎನಿಸುತ್ತಿರುವುದೇ ಮಂಜು. ಈಗಷ್ಟೇ ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಗೌತಮಿಯ ಬೇಸರ ಕಾಣಿಸುತ್ತಿದೆ. ಈಗ ನನ್ನನ್ನ ನೀವೂ ಲೀಡ್‌ ಮಾಡೋದಕ್ಕೆ ಬರಬೇಡಿ ಎಂದೇ ಹೇಳಿದ್ದಾರೆ.

ಗೌತಮಿ ಭಾಷೆಯೇ ಬದಲಾಯ್ತಲ್ಲ

ಮೋಕ್ಷಿ ಹೇಳಿದ್ದೇ ಸರಿ ಎಂದ ಗೌತಮಿ, ನಾನು ಕ್ಯಾಪ್ಟನ್ ಆದಾಗ ಡು ನಾಟ್ ಲೀಡ್ ಮೀ. ನಿಮ್ಮ ವಾಯ್ಸ್‌ನಲ್ಲಿ ನನ್ನ ವಾಯ್ಸ್ ಕೆಳಗೆ ಹೋಗ್ತಾ ಇದೆ. ಮೋಕ್ಷಿತಾ ಏನಂದ್ರು ನನಗಿಂತ ಹೆಚ್ಚಿಗೆ ಅವರಿಬ್ಬರೆ ಮಾತಾಡ್ತಾರೆ ಅಂದ್ರು. ಆದ್ರೆ ಈಗ ನನಗಿಂತ ನೀವೇ ಹೆಚ್ಚಿಗೆ ಮಾತಾಡ್ತೀರ ಎನಿಸಿದೆ' ಅಂತ ಮಂಜಣ್ಣನ ಬಳಿ ಗೌತಮಿ ಹೇಳಿದ್ದಾರೆ. ಇದರ ಜೊತೆಗೆ ಇಷ್ಟು ದಿನ ಮಂಜಣ್ಣ ಎನ್ನುತ್ತಿದ್ದ ಗೌತಮಿ ದಿಢೀರನೆ ಮಂಜು ಅವರೇ ಎನ್ನುತ್ತಿದ್ದಾರೆ. ಮಂಜು ಅವರೇ ಎಷ್ಟು ಸಲ ಹೇಳಬೇಕು ಅಂತೆಲ್ಲಾ ಮಾತಾಡಿದ್ದಾರೆ. ಯಾರು ಮಾತಾಡ್ಬೇಡಿ. ಮಂಜು ಅವರೆ ನಿಮಗೆ ಇಪ್ಪತ್ತು ಸಲ ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ.

ಮಂಜಣ್ಣನನ್ನೇ ಹೊರಗಿಟ್ಟ ಗೌತಮಿ

ಇನ್ನು ಈ ವಾರದ ಕ್ಯಾಪ್ಟೆನ್ಸಿ ಆಟ ಇಂದಿನಿಂದ ಶುರುವಾಗಿದೆ. ಆದ್ರೆ ಬಿಗ್ ಬಾಸ್ ಟಾಸ್ಕ್ ನೀಡಿನೆ ಕ್ಯಾಪ್ಟನ್ ಮಾಡುತ್ತಾರೆ. ಆ ಮೂಲಕ ಗೌತಮಿ ಅವರಿಗೆ ಒಂದು ವಿಶೇಷ ಅಧಿಕಾರ ನೀಡಿದ್ದು, ಕ್ಯಾಪ್ಟೆನ್ಸಿ ಓಟದಿಂದ ಯಾರನ್ನ ಹೊರಗೆ ಇಡಬೇಕು ಎಂಬುದನ್ನು ಹೇಳಬೇಕಿತ್ತು. ಗೌತಮಿ ಮೊದಲು ಹೆಸರು ತೆಗೆದುಕೊಂಡಿದ್ದೆ ಮಂಜು ಅವರದ್ದು. ಮಂಜು ಅವರನ್ನ ಹೊರಗೆ ಇಡ್ತೀನಿ ಬಿಗ್ ಬಾಸ್ ಎಂದಿದ್ದಾರೆ.

ಗೌತಮಿ ನಡೆಗೆ ಮನೆ ಮಂದಿ ಶಾಕ್

ಮಂಜಣ್ಣ ಬೇರೆಯವರ ಮಾತಿಗೆ ಅಣಕಿಸುವುದು, ಜೋರು ಮಾಡುವುದನ್ನು ಮಾಡುತ್ತಿದ್ದರು. ಆದರೆ ಗೌತಮಿಯ ಮಾತುಗಳು ಮನಸ್ಸಿಗೆ ನೋವುಂಟು ಮಾಡಿದಂತೆ ಕಾಣಿಸುತ್ತಿದೆ. ಹೀಗಾಗಿ ಸೈಲೆಂಟ್ ಆಗಿಬಿಟ್ಟಿದ್ದಾರೆ. ಮಂಜು ಮುಖದಲ್ಲಿ ಆ ನೋವು ಎದ್ದು ಕಾಣಿಸುತ್ತಿದೆ. ಗೌತಮಿಯ ನಡೆಗೆ ಮಂಜು ನೊಇವು ಮಾಡಿಕೊಂಡಿದ್ದರೆ, ತ್ರಿವಿಕ್ರಂ, ಭವ್ಯ ಶಾಕ್ ಆಗಿದ್ದಾರೆ. ಮೋಕ್ಷಿತಾ ಖುಷಿಯಾಗಿದೆ.

More from Filmibeat

English summary
BBK 11; Here is the details about Gautami and Manju friendship breakup;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X