BBK 11: ಬಿಗ್‌ಬಾಸ್ ಮನೆಯಿಂದ ಗಂಟು ಮೂಟೆ ಕಟ್ಟಿದ ಜಗದೀಶ್- ರಂಜಿತ್!

ಕಳೆದೆರಡು ದಿನಗಳಿಂದ ಬಿಗ್‌ಬಾಸ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಮನೆಯಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಹೊರಬಂದಿದ್ದಾರೆ ಎನ್ನಲಾಗ್ತಿದೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಜಗದೀಶ್ ಮೇಲೆ ರಂಜಿತ್ ಹಲ್ಲೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಅಷ್ಟಕ್ಕೂ ಬಿಗ್‌ಬಾಸ್ ಮನೆಯಲ್ಲಿ ಏನಾಯ್ತು ರಂಜಿತ್ ಹಾಗೂ ಜಗದೀಶ್ ಹೊರ ಬಂದಿದ್ದು ನಿಜವೇ? ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಇಬ್ಬರ ತಪ್ಪಿಗೆ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುವಂತೆ ಆದೇಶ ನೀಡಿದ್ದಾರೆ. ಇಬ್ಬರೂ ಕೂಡಲೇ ಅದಕ್ಕೆ ಒಪ್ಪಿ ಸೂಟ್‌ಕೇಸ್ ಸಿದ್ಧಪಡಿಸಿಕೊಂಡಿರುವುದನ್ನು ಇವತ್ತಿನ ಎಪಿಸೋಡ್ ಕೊನೆಗೆ ತೋರಿಸಲಾಗಿದೆ.

Bigg Boss Kannada Season 11 Jagadish Ranjith evicted from show

ಹೆಣ್ಣುಮಕ್ಕಳ ಮೇಲೆ ಜಗದೀಶ್ ಬೀಳಲು ಬಂದರು. ಹಾಗಾಗಿ ನಾನು ದೂರಕ್ಕೆ ತಳ್ಳಿದೆ ಹಲ್ಲೆ ಮಾಡಲಿಲ್ಲ ಎಂದು ರಂಜಿತ್ ಹೇಳಿದ್ದಾರೆ. ನಾನು ಅವಾಚ್ಯ ಶಬ್ಧ ಬಳಸಿಲ್ಲ ನನ್ನದೇನು ತಪ್ಪಿಲ್ಲ ಎಂದು ಜಗದೀಶ್ ವಾದಿಸಿದ್ದಾರೆ. ಮನೆಮಂದಿಯ ಅಭಿಪ್ರಾಯ ಕೇಳಿದ ಬಳಿಕ ಬಿಗ್‌ಬಾಸ್ ಇಬ್ಬರಿಗೂ ಮನೆಯಿಂದ ಹೊರ ಹೋಗುವ ಶಿಕ್ಷೆ ನೀಡಿದ್ದಾರೆ.

ಮೊದಲಿಗೆ ಏನಾಯಿತು ಎನ್ನುವುದನ್ನು ನೋಡವುದಾದರೆ ಲಾಯರ್ ಜಗದೀಶ್ ಆರ್ಭಟ ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆಯಲ್ಲಿ ಹೆಚ್ಚುತ್ತಲೇ ಇದೆ. ಇಡೀ ಮನೆ ಮಂದಿ ಒಂದು ಕಡೆ, ಜಗದೀಶ್ ಒಂದು ಕಡೆ ಎನ್ನುವಂತಾಗಿದೆ. ಎಲ್ಲರಿಗೂ ಜಗದೀಶ್ ಒಬ್ಬರೇ ಎದುರಾಗಿ ನಿಲ್ಲುತ್ತಿದ್ದಾರೆ. ಅವರು ಕೆಲವರನ್ನು ಟಾರ್ಗೆಟ್ ಮಾಡಿದ್ರೆ ಉಳಿದವರೆಲ್ಲಾ ಸೇರಿ ಅವರ ಮೇಲೆ ಮುಗಿ ಬೀಳುತ್ತಿದ್ದಾರೆ.

Bigg Boss Kannada Season 11 Jagadish Ranjith evicted from show

ಕೆಲ ದಿನಗಳ ಹಿಂದೆ ಹಂಸಾ ಜೊತೆ ಫ್ಲಟ್ ಮಾಡುತ್ತಿದ್ದ ಲಾಯರ್ ಜಗದೀಶ್ ಇದೀಗ ಆಕೆಯ ವಿರುದ್ಧ ಉರಿದು ಬೀಳುತ್ತಿದ್ದಾರೆ. ನಾನು ಹಂಸಾಗೆ ಬೆಂಬಲ ಸೂಚಿಸಿದೆ. ಆದರೆ ಆಕೆ ನನ್ನ ಬೆನ್ನಿಗೆ ಚೂರಿ ಹಾಕಿದರು ಎನ್ನುವ ರೀತಿ ಮಾತನಾಡಲು ಆರಂಭಿಸಿದ್ದಾರೆ. ಇದೀಗ ಹಂಸಾ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ಜಗದೀಶ್ ರಾದ್ಧಾಂತ ಮಾಡಿಕೊಂಡಿದ್ದಾರೆ.

ಸುಮ್ಮನೆ ಕೂತಿದ್ದ ಗೋಲ್ಡ್ ಸುರೇಶ್ ಬಳಿಕ ಹೋಗಿ ಜಗದೀಶ್ ಮಾತನಾಡಲು ಆರಂಭಿಸಿದರು. ಈ ವೇಳೆ ಹಂಸಾ ಬಗ್ಗೆ ಮಾತನಾಡುತ್ತಾ ಒಂದು ಅವಾಚ್ಯ ಪದ ಬಳಸಿದರು. ಈ ಬಗ್ಗೆ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಇಬ್ಬರ ನಡುವೆ ತಿಕ್ಕಾಟ ಶುರುವಾಯಿತು. ಏನಿದು ಜಗಳ ಎಂದು ಮನೆಮಂದಿ ನೋಡುತ್ತಿದ್ದಂತೆ ಎಲ್ಲರೂ ಅತ್ತ ಬಂದರು. ನಡೆದ ಘಟನೆಯನ್ನು ಸುರೇಶ್ ಎಲ್ಲರಿಗೂ ಹೇಳುತ್ತಿದ್ದಂತೆ ಎಲ್ಲರೂ ಜಗದೀಶ್ ಮೇಲೆ ತಿರುಗಿಬಿದ್ದರು.

ಜಗದೀಶ್ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಚೈತ್ರಾ, ಹಂಸಾ, ಮಾನಸಾ ಎಲ್ಲರೂ ಕಿರುಚಾಡಿದರು. ಈ ವೇಳೆ ಹಂಸಾ ತಮ್ಮ ಬಗ್ಗೆ ಜಗದೀಶ್ ಬಳಸಿದ ಪದಗಳ ಬಗ್ಗೆ ಆಕ್ರೋಶ ಹೊರ ಹಾಕಿದರು. ಮಾನಸಾ ಕೂಗಾಡಿ ನಿಮ್ಮಮ್ಮ, ಹೆಂಡ್ತಿ ಬಗ್ಗೆ ಇದೇ ರೀತಿ ಮಾತನಾಡ್ತೀಯಾ ಎಂದು ಕೇಳಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಮಾನಸ ಮಾತನ್ನು ಜಗದೀಶ್ ತಪ್ಪಾಗಿ ಅರ್ಥ ಮಾಡಿಕೊಂಡು ಆಕೆಯ ವಿರುದ್ಧ ಏಕವಚನದಲ್ಲಿ ಕೂಗಾಡಿದರು. ಇದೇ ವೇಳೆ ತಳ್ಳಾಟ ನೂಕಾಟ ನಡೆಯಿತು. ಬಿಗ್‌ಬಾಸ್ ಗದರಿ ಮನೆಯನ್ನು ಶಾಂತಗೊಳಿಸಿದರು.

ಎಲ್ಲರೂ ಸೋಫಾದಲ್ಲಿ ಕುಳಿತ ಬಳಿಕ ಮೊದಲಿಗೆ ಸುರೇಶ್ ನಡೆ ಸಂಗತಿ ವಿವರಿಸಿದ್ದರು. ಬಳಿಕ ಮಾನಸ ತಮ್ಮ ವರ್ಷನ್ ಹೇಳಿದರು. ಜಗದೀಶ್ ತಮ್ಮ ವಾದ ಮುಂದಿಟ್ಟರು. ಕೊನೆಗೆ ಕ್ಯಾಪ್ಟನ್ ಶಿಶಿರ್ ಏನಾಯಿತು ಎಂದು ಹೇಳುವ ಪ್ರಯತ್ನ ಮಾಡಿದರು. ಬಳಿಕ ಎಲ್ಲರೂ ಸುಮ್ಮನಿರುವಂತೆ ಹೇಳಿ ಘಟನೆ ಬಗ್ಗೆ ಪ್ರತಿಯೊಬ್ಬರು ಅಭಿಪ್ರಾಯವನ್ನು ಬಿಗ್‌ಬಾಸ್ ಆಲಿಸಿದರು. ಕೊನೆಗೆ ತಮ್ಮ ನಿರ್ಧಾರ ತಿಳಿಸಿದರು. ಕೂಡಲೇ ರಂಜಿತ್ ಹಾಗೂ ಜಗದೀಶ್ ಮುಖ್ಯ ದ್ವಾರದಿಂದ ಹೊರ ಬರಬೇಕು ಎಂದರು. ಇದನ್ನು ನೋಡಿ ಕೆಲವರು ಬೇಸರಗೊಂಡು ಕಣ್ಣೀರು ಹಾಕಿದ್ದಾರೆ.

More from Filmibeat

English summary
Bigg Boss kannada 11: Arguments between Jagadish and Ranjith, Manasa, hamsa raise the heat;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X