BBK 11; ಬಿಗ್ ಬಾಸ್‌ನಿಂದ ಮನೆಗೆ ಬಂದ ಮೋಕ್ಷಿತಾಗೆ ವೆಲ್ ಕಮ್ ಹೇಗಿತ್ತು ನೋಡಿ, ಇಲ್ಲಿದೆ ವೀಡಿಯೋ
ಬಿಗ್ ಬಾಸ್ ಮನೆಗೆ ಬಂದ 17 ಸ್ಪರ್ಧಿಗಳಲ್ಲಿ ಕಡೆ ತನಕ ಸ್ಪರ್ಧೆ ಕೊಟ್ಟವರು ಬಂದಂತವರು. ಹೆಚ್ಚು ಅರಚಾಡಲಿಲ್ಲ, ಕಿರುಚಾಡಲಿಲ್ಲ. ಆದರೂ ತನ್ನ ಸರಳ, ಸ್ವಭಾವದಿಂದಾನೇ ಇಲ್ಲಿಯ ತನಕ ಬಂದವರು. ಮೋಕ್ಷಿತಾ ಎಂದಾಗ ವ್ಯಕ್ತಿತ್ವದ ಆಟ, ಇನ್ನೋಸೆಂಟ್ ಹುಡುಗಿ ಕಣ್ಣ ಮುಂದೆ ಬರ್ತಾರೆ. 'ಪಾರು' ಧಾರಾವಾಹಿಯ ಥೇಟ್ ರೂಪವೇ ನಿಜವಾದ ಮೋಕ್ಷಿತಾ ಇರುವುದು ಕೂಡ.
ಘಟಾನುಘಟಿ ಪುರುಷ ಸ್ಪರ್ಧಿಗಳ ನಡುವೆ ಸರಳವಾಗಿಯೇ ಜೀವಿಸಿದರು. ಈ ಬಾರಿ ಮಹಿಳಾ ಸ್ಪರ್ಧಿ ವಿನ್ ಆಗ್ತಾರೆ ಎಂದೇ ಹಲವು ಚರ್ಚೆಗಳಾಗಿತ್ತು. ಅದರಲ್ಲಿ ಮೋಕ್ಷಿತಾನೇ ವಿನ್ ಆಗೋದು ಅಂತಾನೂ ಚರ್ಚೆಗಳಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಮತ್ತೊಂದು ಬೇಸರದ ಸಂಗತಿ ಎಂದರೆ ಮೋಕ್ಷಿತಾ ಹಾಗೂ ತಮ್ಮನ್ನ ತಾವೂ ಫಸ್ಟ್ ಅಂಡ್ ಸೆಕೆಂಡ್ ಪ್ಲೇಸ್ ಗೆ ತಂದುಕೊಳ್ಳಲೇ ಇಲ್ಲ. ಇದು ಕಿಚ್ಚನಿಗೂ ಬೇಸರದ ಸಂಗತಿಯಾಗಿದೆ.

ಮನೆಗೆ ಬಂದ ಮೋಕ್ಷಿತಾ
ಬಿಗ್ ಬಾಸ್‌ನಲ್ಲಿ ಮೋಕ್ಷಿತಾ ಆರಂಭದಿಂದಾನೂ ಇದ್ದರು. 120 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಠಕ್ಕರ್ ಕೊಡುತ್ತಾ ಯಶಸ್ಸಿನ ದಾರಿಯಲ್ಲಿ ಸಾಗಿದ್ದರು. ಜನರ ಮನಸ್ಸನ್ನ ಗೆದ್ದಿದ್ದರು. ಫಿನಾಲೆ ತಲುಪಿ, 3ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು. ಇಂದು ಮನೆಗೆ ಬಂದಿದ್ದು, ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ತೆರೆದ ಕಾರಿನಲ್ಲಿ ಮನೆಗೆ ಬಂದ ಮೋಕ್ಷಿತಾಗೆ ಮನೆಯೊಳಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಅರ್ಥ ಆಯ್ತಾ ಎಂದ ಮೋಕ್ಷಿ
ಮನೆಗೆ ಬಂದ ಮೋಕ್ಷಿತಾಗೆ ಅದ್ದೂರಿ ಸ್ವಾಗತವನ್ನ ಕೋರಿದ್ದರು. ಡೆಕೋರೇಷನ್ ಮಾಡಿ, ಕೇಕ್ ಕಟ್ ಮಾಡಿಸಿ, ಸ್ವಾಗತ ಕೋರಿದರು. 120 ದಿನಗಳ ಕಾಲ ಮಿಸ್ ಮಾಡಿಕೊಂಡಿದ್ದ ಮೋಕ್ಷಿಯನ್ನ ಮನೆಯವರೆಲ್ಲ ತಬ್ಬಿ, ಮುದ್ದಾಡಿದರು. ಕೇಕ್ ಕಟ್ ಮಾಡಿದ ಬಳಿಕ ಮಾತನಾಡಿದ ಮೋಕ್ಷಿ, ಬಿಗ್ ಮನೆಯಲ್ಲಿ ಹೆಚ್ಚು ನಾಮಿನೇಟ್ ಆಗಿದ್ದೆ ನಾನು. ಆದರೂ ನೀವೆಲ್ಲಾ ನನಗೆ ವೋಟ್ ಮಾಡಿ ಉಳಿಸಿದ್ದೀರಿ ಧನ್ಯವಾದಗಳು ಅರ್ಥ ಆಯ್ತಾ ಎಂದು ತಮ್ಮ ಹಳೆಯ ಡೈಲಾಗ್ ಅನ್ನು ಹೇಳಿದ್ದಾರೆ.
ಫ್ಯಾನ್ಸ್ ಶುಭ ಹಾರೈಕೆ
ಮೋಕ್ಷಿತಾಗೆ ಮನೆಯ ಹೊರಗೆ ಸಿಕ್ಕಾಪಟ್ಟೆ ಕ್ರೇಜ್ ಇತ್ತು. ಮೋಕ್ಷಿತಾ ಗೆಲ್ಲಲಿ ಎಂದೇ ಬಯಸಿದ್ದರು. ಮೋಕ್ಷಿತಾ ಇನ್ನೊಂದು ಸ್ವಲ್ಪ ಚೆನ್ನಾಗಿ ಆಡಿದ್ದರೆ ಖಂಡಿತ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಆಗಾಗ ತೀರಾ ಸೈಲೆಂಟ್ ಆಗಿ ಬಿಟ್ಟರು. ಅಷ್ಟು ಸಲ ಸೇವ್ ಆದರೂ ಮತ್ತೆ ಸ್ಟ್ರಾಂಗ್ ಆಗದೆ ಸಾಧಾರಣವಾಗಿ ಆಡಿದ್ದರ ಕಾರಣ ಹೊರಗೆ ಬರಬೇಕಾಯ್ತು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಂತ ಇಬ್ಬರು ಫಿನಾಲೆ ತಲುಪಿದರು.
ಮತ್ತೆ ಕಿರುತೆರೆಯಲ್ಲಿ ಮೋಕ್ಷಿ
ಅಭಿಮಾನಿಗಳಿಗೆ ಮೋಕ್ಷಿತಾ ಎಂದರೆ ಬಲು ಪ್ರೀತಿ. ಕಮೆಂಟ್ ಬಾಕ್ಸ್‌ನಲ್ಲೂ ಮೋಕ್ಷಿತಾರಿಗೆ ಶುಭ ಹಾರೈಸಿದ್ದಾರೆ. ಆದಷ್ಟು ಬೇಗ ಮೋಕ್ಷಿತಾ ಕಮ್ ಬ್ಯಾಕ್ ಎಂದು ಕೇಳಿದ್ದಾರೆ. 'ಪಾರು' ಮುಗಿದ ಮೇಲೆ ಯಾವ ಸೀರಿಯಲ್‌ನಲ್ಲಿಯೂ ನಟಿಸದ ಮೋಕ್ಷಿತಾ, ಬಿಗ್ ಬಾಸ್‌ನಲ್ಲಿ ರಂಜಿಸಿದ್ದರು. ಈಗ ಮತ್ತೆ ಕಿರುತೆರೆಯಲ್ಲಿ ಸೀರಿಯಲ್‌ಗಳ ಮೂಲಕ ರಂಜಿಸುವ ನಿರೀಕ್ಷೆ ಇದೆ. ಬಿಗ್ ಬಾಸ್ ಮುಗಿದಿದೆ ವಿಶ್ರಾಂತಿ ಮಾಡಿ ಆಮೇಲೆ ನಟನೆ ಕಡೆ ಮರಳಬಹುದು.


Click it and Unblock the Notifications











