BBK 11: ಬಿಗ್ ಬಾಸ್ ಮನೆಗೆ ರಾಧಾ ಹಿರೇಗೌಡರ್ ಎಂಟ್ರಿ; ಚೈತ್ರಾ ಫುಲ್ ಕನ್‌ಫ್ಯೂಸ್
ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಬದಲಾವಣೆ ಆಗ್ತಿದೆ. ಬರೀ ಕಿರುಚಾಟ, ಅರುಚಾಟವೇ ಕೇಳಿಸುತ್ತಿದ್ದ ಮನೆಯಲ್ಲಿ ಹನುಮಂತು ಅವರಿಂದ ನಗುವಿನ ಶಬ್ದವೂ ಅರಳುವುದಕ್ಕೆ ಶುರುವಾಯ್ತು. ಮನೆಯ ವಾತಾವರಣ ಕೊಂಚ ಬದಲಾಗಿದೆ.
ಬಿಗ್ ಬಾಸ್ ಒಳಗಿರುವ ಕೆಲವು ಮನಸ್ಸುಗಳು ಇನ್ನು ಬದಲಾಗಬೇಕಿದೆ. ಸದ್ಯಕ್ಕೆ ಮನರಂಜನೆ ಕೊಡುವ ದಾರಿಯಲ್ಲೇ ಬಿಗ್ ಬಾಸ್ ಸಾಗುತ್ತಿದೆ. ಕಂಟೆಸ್ಟೆಂಟ್ ಗಳು ಜಗಳವಾಡುತ್ತಿದ್ರೆ ಬಿಗ್ ಬಾಸ್ ಏನಾದರೊಂದು ಪ್ಲ್ಯಾನ್ ಮಾಡಿ, ಎಂಟರ್ಟೈನ್ಮೆಂಟ್ ಕೊಡಿಸಲು ಯೋಜನೆ ರೂಪಿಸುತ್ತದೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎರಡು ಪಕ್ಷಗಳಾಗಿ ವಿಂಗಡನೆ ಮಾಡಲಾಗಿದೆ. ಅದರಲ್ಲಿ ಎಲ್ಲರೂ ರಾಜಕಾರಣಿಗಳಂತೆಯೇ ನಡೆದುಕೊಳ್ಳುತ್ತಿದ್ದಾರೆ. ತಮ್ಮ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೂ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇದರ ಮಧ್ಯೆ ರಾಧಾ ಹಿರೇಗೌಡರ್ ಎಂಟ್ರಿಯಾಗಿದ್ದಾರೆ.
ರಾಧಾ ಹಿರೇಗೌಡರ್ ಎಂಟ್ರಿ
ಬಿಗ್ ಬಾಸ್ ಮನೆಗೆ ನಿರೂಪಕಿ ರಾಧಾ ಹಿರೇಗೌಡರ್ ಎಂಟ್ರಿಯಾಗಿದ್ದಾರೆ. ಕೆಲ ಸೀಸನ್‌ಗಳಲ್ಲಿ ನ್ಯೂಸ್ ಆಂಕರ್ಸ್ ಇರ್ತಾ ಇದ್ರು. ಆದ್ರೆ ಈ ಸೀಸನ್‌ನಲ್ಲಿ ಅದ್ಯಾಕೋ ಆರಂಭದಲ್ಲಿ ಕರೆಸಿರಲಿಲ್ಲ. ಸ್ಪರ್ಧಿಗಳ ಪಟ್ಟಿ ಬಗ್ಗೆ ಚರ್ಚೆಯಾದಾಗ ರಾಧಾ ಹಿರೇಗೌಡರ್ ಹೆಸರು ಕೂಡ ಚಾಲ್ತಿಯಲ್ಲಿತ್ತು. ಇದೀಗ ರಾಧಾ ಹಿರೇಗೌಡರು ಕುಇಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಚೈತ್ರಾಗೆ ಟೆನ್ಶನ್ ಶುರುವಾಗಿದ್ದೇಕೆ..?
ರಾಧಾ ಹಿರೇಗೌಡರ್ ಮನೆಗೆ ಬರ್ತಿದ್ದಂತೆ ಮನೆ ಮಂದಿಯೆಲ್ಲಾ ಖುಷಿಯಾಗಿದ್ದಾರೆ. ಅದರಲ್ಲೂ ಚೈತ್ರಾಗೆ ಖುಷಿಯ ಜೊತೆಗೆ ಗೊಂದಲವೂ ಶುರುವಾಗಿದೆ. ರಾಧಾ ಹಿರೇಗೌಡರ್ ಜೊತೆಗೆ ಹೆಜ್ಜೆ ಹಾಕುತ್ತಾ, ನೀವೂ ಕಂಟೆಸ್ಟೆಂಟ್ ಆಗಿ ಬಂದದ್ದ ಎಂದು ಪ್ರಶ್ನಿಸಿದ್ದಾರೆ. ಬಳಿಕ ನೀವೂ ಬಂದ್ಮೇಲೆ ಮುಗೀತು ಬಿಡಿ ಎಂದು ಹೊಗಳಿದ್ದಾರೆ. ರಾಧಾ ಹಿರೇಗೌಡರ್ ಕೂಡ ಚೈತ್ರಾ ಬಗ್ಗೆ ಒಂದೆರಡು ಮಾತಾಡಿದ್ದಾರೆ. ನಿಮ್ಗೆನು ಇದೆಲ್ಲಾ ಹೊಸದಲ್ವಲ್ಲ ಬಿಡಿ. ಭಾಷಣ ಮಾಡೋದೆಲ್ಲ ಚೆನ್ನಾಗಿಯೇ ಗೊತ್ತು ಎಂದಿದ್ದಾರೆ.
ಐಶ್ವರ್ಯಾ ಪಕ್ಷದ ಬಗ್ಗೆ ರಾಧಾ ಗರಂ
ಇನ್ನು ಬಿಗ್ ಬಾಸ್ ಮನೆಯಲ್ಲಿ ಎರಡು ರಾಜಕೀಯ ಪಕ್ಷಗಳಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಎರಡು ಪಕ್ಷದವರನ್ನು ಕೂರಿಸಿಕೊಂಡು ಪ್ಯಾನಲ್ ಡಿಸ್ಕಷನ್ ಮಾಡುವುದಕ್ಕೆ ರಾಧಾ ಹಿರೇಗೌಡರ್ ಶುರು ಮಾಡಿದ್ದಾರೆ. ಅದರಲ್ಲೂ ಐಶ್ವರ್ಯಾ ಅಂಡ್ ಟೀಂಗೆ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಐಶ್ವರ್ಯಾ ಅವರೆ ನೀವೂ ಎದೆ ಮುಟ್ಟಿಕೊಂಡು ಹೇಳಿ ನಿಮ್ಮ ಪಕಗಷದವರು ಪ್ತಾಮಾಣಿಕವಾಗಿ ಇದ್ದಾರಾ ಎಂದು ಕೇಳಿದ್ದಾರೆ.
ಐಶ್ವರ್ಯಾಗೆ ನಗಿಸೋ ಟಾಸ್ಕ್
ಇನ್ನು ಎರಡು ಪಕ್ಷಗಳಿಗೂ ಪ್ರಶ್ನೆ ಮಾಡಿದ ರಾಧಾ ಹಿರೇಗೌಡರ್, ವಿಕ್ರಮ್ ಪಕ್ಷಕ್ಕೆ ಏನನ್ನ ಕೊಡ್ತೀರಾ ಗೆದ್ದರೆ ಎಂದು ಕೇಳಿದ್ದಾರೆ. ಆಗ ವಿಕ್ರಮ್ ಕಾಫಿ ಕೊಡ್ತೀವಿ ಎಂದಿದ್ದಾರೆ. ಅದನ್ನ ಬಿಗ್ ಬಾಸ್ ಕೊಡೋದು ನೀವೇನು ಕೊಡ್ತೀರಾ ಹೇಳಿ ಎಂದಿದ್ದಾರೆ. ಇದೇ ಪ್ರಶ್ನೆಗೆ ಎದುರಾಳಿ ಪಕ್ಷ ಐಶ್ವರ್ಯಾ ಅಂಡ್ ಟೀಂ ಮನರಂಜನೆಯನ್ನು ನೀಡ್ತೇವೆ. ನಗಿಸುತ್ತೇವೆ ಎಂದಿದ್ದಾರೆ. ಆಗ ರಾಧಾ ಹಿರೇಗೌಡರ್, ಹೌದಾ ಹಾಗಾದ್ರೆ ನನ್ನನ್ನ ನಗಿಸಿ ನೋಡೋಣಾ ಎಂದಿದ್ದಾರೆ. ಅದ್ಯಕೋ ಏನೋ ಐಶ್ವರ್ಯಾ ಕಣ್ಣಲ್ಲಿ ಕೊನೆಯಲ್ಲಿ ನೀರು ಬಂದಿದೆ. ಫುಲ್ ಎಪಿಸೋಡ್ ನೋಡಿದಾಗ ಅಲ್ಲಿ ನಡೆದದ್ದು ತಿಳಿಯುತ್ತದೆ.


Click it and Unblock the Notifications











