BBK 11: ಹೆಚ್ಚು ಬಾರಿ ಕಳಪೆ ಪಟ್ಟ ಹೊತ್ತ ಚೈತ್ರಾ ; ನೀನೇನ್ ನಮ್ಮ ಅತ್ತೆ ಮಗಳ ಎಂದ ಹನುಮಂತ
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಗೋಳಾಟ, ಕಿರುಚಾಟ ಅಷ್ಟೇ ಜೋರಾಗಿ ಕೇಳುವುದು. ಅದನ್ನ ಬಿಟ್ಟರೆ ಬೇರೆಯವರ ಮೇಲೆ ಮಾತಿನಲ್ಲಿಯೇ ಯುದ್ಧಕ್ಕೆ ನಿಂತು ಬಿಡುತ್ತಾರೆ. ಪ್ರತಿ ಸಲ ನಾಮಿನೇಷನ್ ಆಗುವ ಚೈತ್ರಾ, ವೀಕೆಂಡ್ ನಲ್ಲಿ ಪ್ರತಿ ಸಲ ಸೇವ್ ಆಗುತ್ತಿದ್ದಾರೆ. ಈ ವಾರ ಚೈತ್ರಾನೇ ಹೊರಗೆ ಬರೋದು ಅಂತ ವೀಕ್ಷಕರು ಗೆಸ್ ಮಾಡಿದರೂ ಅದು ಸುಳ್ಳಾಗಿರುತ್ತದೆ.
ಅಭಿಮಾನಿ ಬಳಗ, ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚೈತ್ರಾ ಸಂಪಾದಿಸಿರುವ ಕಾರಣ ಸೇಫ್ ಆಗ್ತಾ ಇದಾರೆ. ಆದರೆ ಸೇಫ್ ಆದಾಗ ಏನು ಹೇಳ್ತಾರೆ ಈ ವಾರ ನನ್ನ ಆಟ ನಾನು ಆಡ್ತೀನಿ. ಇನ್ಮೇಲೆ ನಿಜವಾದ ಆಟ ಶುರು ಎಂದು ಡೈಲಾಗ್ ಹೊಡೆದು ಸುಮ್ಮನೆ ಆಗ್ತಾರೆ. ಈ ವಾರ ನಾಮಿನೇಷನ್ ಜೊತೆಗೆ ಮತ್ತೆ ಕಳಪೆ ತೆಗೆದುಕೊಂಡಿದ್ದಾರೆ.

ಮತ್ತೆ ಕಳಪೆಯಾದ ಚೈತ್ರಾ
ಶುಕ್ರವಾರ ಬಂತು ಅಂದ್ರೆ ಇಡೀ ವಾರದ ವಿಮರ್ಶೆ ಮಾಡಲು ಬಿಗ್ ಬಾಸ್ ಅವಕಾಶ ನೀಡುತ್ತದೆ. ಅದರಲ್ಲಿ ಕಳಪೆ ಯಾರು ಉತ್ತಮವಾಗಿ ಯಾರು ಎಲ್ಲದನ್ನು ನಿಭಾಯಿಸಿದರು ಎಂಬ ಲೆಕ್ಕಚಾರ. ಕಳಪೆ ಎನಿಸಿಕೊಂಡವರು ಮುಂದಿನ ವಾರಕ್ಕಾದರೂ ಉತ್ತಮರಾಗಲಿ ಎಂಬ ಉದ್ದೇಶ. ಆದರೆ ಚೈತ್ರಾ ಪಾಲಿಗೆ ಅದ್ಯಾಕೋ ಕಳಪೆ ಹೋಗಲ್ಲ ಎನಿಸುತ್ತಿದೆ. ಈ ವಾರವೂ ಅವರಿಗೆ ನೀಡಿದ್ದಾರೆ ಕಳಪೆ.
ಎಲ್ಲರ ಕೆಂಗಣ್ಣಿಗೂ ಗುರಿಯಾಗಿದ್ದೇಕೆ..?
ರಜತ್, ಐಶ್ವರ್ಯಾ, ಮೋಕ್ಷಿತಾ, ಧನರಾಜ್, ಹನುಮಂತು, ಭವ್ಯಾ, ಚೈತ್ರಾ ಹೆಸರನ್ನೇ ಕಳಪೆಗೆ ತೆಗೆದುಕೊಂಡರು. ಈ ವೇಳೆ ಮೋಕ್ಷಿತಾ, ಪಕ್ಷಪಾತಿ ಕಾರಣ ಕೊಟ್ಟರೆ ಧನರಾಜ್, ಈ ವಾರ ಯಾವ ಆಟದಲ್ಲೂ ಕಾಣಿಸಿಕೊಳ್ಳಲಿಲ್ಲ ಎಂಬ ಕಾರಣ ಕೊಟ್ಟರು. ಉಸ್ತುವಾರಿ ನಿಮಗೆ ಮುಂದೆ ಕೊಡೋದೆ ಬೇಡ. ಕೊಟ್ಟರು ಆಟಗಾರರನ್ನ ನೆಮ್ಮದಿಯಾಗಿ ಇರಲು ಬಿಡಿ ಎಂದರು ರಜತ್. ಹನುಮಂತು ಕೂಡ ಚೈತ್ರಾ ಹೆಸರನ್ನೇ ತೆಗೆದುಕೊಂಡಾಗ ಚೈತ್ರಾ ವಿರೋಧಿಸಿದ್ದಾರೆ. ಆಗ ಹನುಮಂತು ಕಳಪೆ ಕೊಡಲೇಬೇಕು ಅನ್ನೋಕೆ ನೀನೇನು ನನ್ನ ಅತ್ತೆ ಮಗಳು ನೋಡಿ ಎಂದಿದ್ದಾರೆ.
ಇತಿಹಾಸ ಸೃಷ್ಟಿಸ್ತಾರಾ ಅಂತ!
ಮನೆಯವರ ಹೇಳಿಕೆಗಳನ್ನು ವಿರೋಧಿಸಿದ ಚೈತ್ರಾ, ಕುಣಿಯೋಕೆ ಬಾರದವರು ನೆಲ ಡೊಂಕು ಎಂಬಂತೆ ಆಡೋಕೆ ಬರದವರು ಉಸ್ತುವಾರಿಯಿಂದ ಸೋತೆ ಅಂತ ಹೇಳಿದ್ರೆ ನಾನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಎಲ್ಲರೂ ಕಳಪೆ ಫೈನಲ್ ಮಾಡಿದಾಗ ಹೇಯ್ ಇದು ನಂಗೆ ಅಭ್ಯಾಸ ಆಗಿ ಹೋಗಿದೆ ಬಿಡು ಎಂದಿ ಕಳಪೆ ಸ್ವೀಕಾರ ಮಾಡಿದ್ದಾರೆ. ಆದರೂ ಇದು ಸತತವಾಗಿ ಮೂರನೇ ಬಾರಿ ಕಳಪೆ ಪಡೆದಿದ್ದಾರೆ. ತ್ರಿವಿಕ್ರಂ ಕಳಪೆ ತೆಗೆದುಕೊಂಡಾಗಲೂ ಚೈತ್ರಾ ಕೂಡ ತಗೊಂಡಿದ್ರು.
ಚೈತ್ರಾ ಕಳಪೆ ಫುಲ್ ಟ್ರೋಲ್
ಇನ್ನು ಕೆಲವೊಬ್ಬರು ಚೈತ್ರಾ ಬಗ್ಗೆ ಪಾಸಿಟಿವ್ ಆಗಿ ಪೋಸ್ಟ್ ಹಾಕಿದ್ರೆ ಅದಕ್ಕೆ ನೆಗೆಟಿವ್ ಕಮೆಂಟ್ ಗಳೇ ಬಂದಿವೆ. ಉಸ್ತುವಾರಿಯನ್ನು ಸರಿಯಾಗಿ ಮಾಡಲ್ಲ, ಆಟ ಆಡೋದಕ್ಕೆ ಕೊಡಲ್ಲ ಅಂತ ಕಣ್ಣೀರಿಡುತ್ತಾರೆ, ಕೊಟ್ರೆ ಆಟವನ್ನು ಸರಿಯಾಗಿ ಆಡಲ್ಲ. ಚೈತ್ರಾಗೆ ಕಳಪೆ ಕೊಟ್ಟಿದ್ದೆ ಬೆಸ್ಟ್ ಎಂದು ಕಮೆಂಟ್ ಹಾಕುತ್ತಿದ್ದಾರೆ. ಈ ವಾರವೂ ಚೈತ್ರಾ ಮನೆಯೊಳಗೆ ಉಳಿದುಕೊಂಡರೆ ಮತ್ತೆ ಕಳಪೆ ಬೋರ್ಡ್ ಹಾಕಿಕೊಳ್ತಾರಾ ಅಂತ..?


Click it and Unblock the Notifications











