BBK 11: ಮನೆಯಿಂದ ಬಂದ ಊಟ ಕೊಟ್ಟಿದ್ದ ಮಂಜುಗೆ ಐಶ್ವರ್ಯಾ ಮೇಲೆ ಇಷ್ಟು ಕೋಪನಾ?
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು 76 ದಿನಗಳನ್ನು ಪೂರೈಸಿ ಆಗಿದೆ. ಆದರೆ ಒಂದು ಕ್ಷಣ ಹಿಂತಿರುಗಿ ನೋಡಿದರೆ ಮೊದಲ ವಾರದಲ್ಲಿ ಇದ್ದಂತ ಬಾಂಡಿಂಗ್, ಭಾವನೆ, ಪ್ರೀತಿ ಕೆಲವೊಂದಿಷ್ಟು ಮಂದಿಯಲ್ಲಿ ಇಲ್ಲವಾಗಿದೆ. ಅದು ಇರೋದೆ ಹಾಗೇ. ಆರಂಭದಲ್ಲಿ ಇಷ್ಟವಾದರವರ ಗುಣ ಮುಂದೆ ಸಾಗುತ್ತಿದ್ದ ಹಾಗೇ ಹಿಡಿಸದೇ ಇರಬಹದು. ಅಂದುಕೊಂಡ ರೀತಿಯಲ್ಲಿ ಅವರು ಕಾಣಿಸದೆ ಇರಬಹುದು. ಹಾಗಾಗಿ ಅಂತರವನ್ನು ಕಾಯ್ದುಕೊಳ್ಳುತ್ತಾರೆ.
ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಐಶ್ವರ್ಯಾ-ಮಂಜಣ್ಣ-ತ್ರಿವಿಕ್ರಂ-ಭವ್ಯಾ. ಹೌದು ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿ ಇಷ್ಟು ಜನಕ್ಕೆ ಟಾರ್ಗೆಟ್ ಆಗಿದ್ದು ಒಬ್ಬರೆ, ಅದು ಐಶ್ವರ್ಯಾ. ಅಂತರ ಕಾಯ್ದುಕೊಳ್ಳುವುದು ಓಕೆ ಆದರೆ ಐಶ್ವರ್ಯಾ ವಿರುದ್ಧ ದೊಡ್ಡಮಟ್ಟದ ದ್ವೇಷವನ್ನೇ ಕಾಯ್ದಿರಿಸಿಕೊಂಡಿದ್ದಾರೆ. ಅದು ಈಗ ಅನಾವರಣವಾಗಿದೆ.

ಕೋಪ ಕಳೆದುಕೊಳ್ಳಲು ಕಿಚ್ಚ ಅವಕಾಶ
ಇಷ್ಟು ದಿನಗಳ ಆಟದಲ್ಲಿ ಈಗಾಗಲೂ ಹಲವರ ಮನಸ್ಸಲ್ಲಿ ಕೋಪ, ತಾಪ ಜೋರಾಗಿರುತ್ತದೆ. ಆ ದ್ವೇಷ ಹಗೆಯಾಗಬಾರದು ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ಒಂದು ಟಾಸ್ಕ್ ನೀಡಿದ್ದರು. ಯಾರ ಮೇಲೆ ಕೋಪ, ದ್ವೇಷ ಇದೆ ಅದೆಲ್ಲವನ್ನು ಹೇಳಿ, ಫೋಟೋಗೆ ಒಡೆಯುವ ಮೂಲಕ ತೀರಿಸಿಕೊಂಡು, ಇಲ್ಲೇ ಬಿಟ್ಟು ಬಿಡಿ ಎಂದು. ಅದರಂತೆ ಒಬ್ಬೊಬ್ಬರು ಒಬ್ಬೊಬ್ಬರ ಫೊಟೋಗೆ ಒಡೆಯಲು ಶುರು ಮಾಡಿದರು. ಆದರೆ ಹೆಚ್ಚು ದ್ವೇಷ ಕಾರಿದ್ದೇ ಐಶ್ವರ್ಯಾ ಮೇಲೆ ಎಂಬುದು ಶಾಕಿಂಗ್ ವಿಚಾರ.
ಐಶ್ವರ್ಯಾ ವಿರುದ್ಧ ಉದ್ದುದ್ದ ದೂರು
'ಅನುಷಾ ವಿಚಾರದಲ್ಲಿಯೇ ಹಾಕೊಡ್ತಾರೆ. ಯಾವುದೋ ವಿಚಾರಕ್ಕೆ ಇನ್ಯಾವುದೋ ವಿಚಾರ ಮಾತಾಡ್ತಾರೆ. ರಜತ್ ಮಾತಾಡಿದ್ದು ತಪ್ಪು ಅಂತ ಅವರೇ ನೇರವಾಗಿ ಹೇಳಬೇಕಿತ್ತು. ಅದನ್ನ ಬಿಟ್ಟು ಓಡಾಡುವಾಗ ಹೇಳುತ್ತಾರೆ. ಅಡುಗೆ ಮನೆಯಲ್ಲಿ ಮುಖ ನೋಡಿ ಬಡಿಸುವಂತದ್ದು ತೀರಾ ಇಷ್ಟ ಇಲ್ಲ. ನಾಮಿನೇಷನ್ ಆಯ್ತು, ಇನ್ನೇನೋ ಆಯ್ತು ಅಂದಾಗ ಎಕ್ಸ್‌ಪ್ರೆಷನ್ ಬೇರೆ ಕೊಡ್ತಾರೆ. ಸುಮಾರು ನಾಟಕಗಳನ್ನ ನೋಡಿದ್ದೀನಿ. ಟಾಸ್ಕ್ ಆಡದೆ ಇದ್ದರು ಎಮೋಷನಲ್ ಆಗಿ ತೋರಿಸುತ್ತಾರೆ. ಕುಣಿಯುವುದಕ್ಕೆ ಆಗದವರು ನೆಲ ಡೊಂಕು ಅಂತಾರೆ ಆ ರೀತಿ ಕ್ಯಾಟಗರಿ ಇವರದ್ದು. ಗ್ಯಾಂಗ್ ಕಟ್ಟಿಕೊಂಡು ಆಡುತ್ತಿರುವ ಕಾರಣ ಬೇಗ ಮನೆಗೆ ಹೋಗೋದು ಗ್ಯಾರಂಟಿ. ಆಡೋದಕ್ಕೆ ಪ್ರಯತ್ನ ಪಡು ಹನ್ನೊಂದು ವಾರ ಮುಗ್ದಿದೆ. ಇನ್ಮೇಲಾದ್ರೂ ಆಟ ಆಡು'
ಐಶ್ವರ್ಯಾ ವಿರುದ್ಧ ದೂರು
'ಐಶ್ವರ್ಯಾ ಅವರು ಇಲ್ಲಿರುವ ರೀತಿ ಹೊರಗಡೆ ಇಲ್ಲ. ಸಾಫ್ಟ್ ಆಗಿ ಇಲ್ಲ. ಎದುರುಗಡೆ ಒಂದು ಹಿಂದೆ ಒಂದು ಮಾಡ್ತಾರೆ. ನಾಮಿನೇಷನ್ ಅಂತ ಬಂದಾಗ ಡೈರೆಕ್ಟ್ ಆಗಿ ಮಾಡಲ್ಲ, ಕ್ರೀಮ್ ಹಾಕಿ ಕೊಡ್ತಾರೆ. ಕಳಪೆಗೆ ಕೊಡುವಂತ ರೀಸನ್ ಇನ್ನು ಕಲಿತಿಲ್ಲ ಇಲ್ಲ'
ಫೋಟೋಗೆ ಹೊಡೆದ ಕೋಪ ಹೇಗಿತ್ತು?
'ನಾಮಿನೇಷನ್, ಕಳಪೆ ಯಾವುದರಲ್ಲಿಯೇ ಕಾರಣ ಹೇಳಿದರೂ ಅವರು ಹೇಳಿದ್ದನ್ನ ನಾವೂ ತೆಗೆದುಕೊಳ್ಳಬೇಕು. ಆದರೆ ನಾವೂ ಹೇಳಿದ್ದನ್ನ ಅವರು ತೆಗೆದುಕೊಳ್ಳಲ್ಲ. ಮ್ಯಾನಿಪ್ಲೇಟ್ ಮಾಡ್ತಾರೆ. ಶಿಶಿರ್ ಹತ್ರ ಮಾತಾಡಬೇಕು ಅಂದ್ರೆ ಐಶ್ವರ್ಯಾ ಅವರ ಪರ್ಮಿಷನ್ ತೆಗೆದುಕೊಳ್ಳಬೇಕು. ಶಿಶಿರ್ ನನ್ನ ಎತ್ತಿಕೊಂಡು ಮುದ್ದಾಡಿದಾಗ, ಶಿಶಿರ್ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಯಾರಾದ್ರೂ ಏನಾದ್ರೂ ಹೇಳಿದ್ರೆ ನಗಾಡುವುದು, ಇವರಿಂದ ಯಾವುದೇ ಎಂಟರ್ಟೈನ್ಮೆಂಟ್ ಕಾಣಿಸುತ್ತಿಲ್ಲ. ಫಿಸಿಕಲ್ ಟಾಸ್ಕ್ ನಲ್ಲಾಗಲೀ, ಮನರಂಜನೆಯಲ್ಲಾಗಲಿ ಕಾಣಿಸುತ್ತಿಲ್ಲ. ಮನೆಯಲ್ಲಿ ಓಡಾಡಿಕೊಂಡಿರುವ ಬೆಕ್ಕಿನ ರೀತಿ ಕಾಣಿಸ್ತಾ ಇದಾರೆ.


Click it and Unblock the Notifications











