BBK 11: ದಿಸ್ ಈಸ್ ಶೋಭಾ ಶೆಟ್ಟಿ; ಇದು ಕನ್ನಡ ಕಣಮ್ಮ ಎಂದು ಟಾಂಗ್ ಕೊಟ್ಟ ನೆಟ್ಟಿಗರು!
ಬಿಗ್ ಬಾಸ್ ಕನ್ನಡ ಸೀಸನ್ 11 ಅರ್ಧ ಜರ್ನಿ ಮುಗಿಸಿದ್ದು, ಇನ್ನರ್ಧ ಜರ್ನಿಯಲ್ಲಿ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ರಜತ್ ಹಾಗೂ ಶೋಭಾ ಶೆಟ್ಟಿ. ಬಿಗ್ ಬಾಸ್ ಅಂದ್ರೇನೆ ಜಗಳ ಆಡೋದು, ನೇರ ಮೈಮೇಲೆ ಬೀಳುವುದು ಎಂಬಂತೆ ಬಂದವರು ಥಿಂಕ್ ಮಾಡುತ್ತಾ ಇದ್ದಾರೆ ಎನ್ನಿಸುತ್ತೆ. ಅದಕ್ಕೆ ಮಾತಿಗೆ ಮುಂಚೆ ಜಗಳ ಆಡಲು ಶುರು ಮಾಡಿದ್ದಾರೆ.
ಕಳೆದ ಸೀಸನ್ ಅಂದ್ರೆ ಸೀಸನ್ 10ನಲ್ಲೂ ವೈಲ್ಡ್ ಎಂಟ್ರಿಯಾಗಿ ಅವಿನಾಶ್ ಶೆಟ್ಟಿ, ಪವಿ ಪೂನಪ್ಪ ಬಂದಿದ್ದರು. ಅವರಿಬ್ಬರು ಕೂಡ ಸೇಮ್ ಹೀಗೆ ಆಡಿದ್ದರು. ಮನೆಯೊಳಗೆ ಬಂದ ಕೂಡಲೇ ನಂಗೆ ಅದು ಗೊತ್ತು ಇದು ಗೊತ್ತು, ನೀವೆಲ್ಲಾ ಯಾವ ಲೆಕ್ಕ, ನಂದು ಹೊಸ ಲೆಕ್ಕ ಎಂಬಂತೆ ಹಾರಾಡಿದ್ದರು. ಈಗ ಮನೆಯೊಳಗೆ ಬಂದಿರುವ ರಜತ್ ಕೂಡ ಎಲ್ಲರಿಗೂ ತನ್ನದೇ ಬಿಲ್ಡಪ್ ಕೊಡುತ್ತಾ ಇದ್ದಾರೆ. ಶೋಭಾ ಶೆಟ್ಟಿ ಸವಾಲುಗಳನ್ನೆ ಹಾಕಿಕಿಂಡು ಓಡಾಡುತ್ತಿದ್ದಾರೆ.

ಕಿರುಚಿ ಹೆಸರು ಮಾಡಿದ್ದ ಶೋಭಾ
ಶೋಭಾ ಶೆಟ್ಟಿ ಕನ್ನಡ ಸೀರಿಯಲ್‌ಗಳ ಮೂಲಕವೇ ಪರಿಚಯವಾಗಿದ್ದರು. ಅದರಲ್ಲೂ 'ಅಗ್ನಿಸಾಕ್ಷಿ' ಧಾರಾವಾಹಿಯ ತನು ಆಗಿ ಎಲ್ಲರ ಗಮನ ಸೆಳೆದಿದ್ದವರು. ಬಳಿಕ ತೆಲುಗು ಕಡೆ ಹೊರಟ ಶೋಭಾ ಅಲ್ಲಿಯೇ ಪ್ರಾಜೆಕ್ಸ್‌ಗಳನ್ನ ಮಾಡ್ತಾ ಇದ್ರು. ಜೊತೆಗೆ ಬಿಗ್ ಬಾಸ್‌ಗೆ ಕೂಡ ಹೋಗಿದ್ದರು. ಯಾರಿಗೂ ಹೆದರದೇ, ಮಾತಲ್ಲಿಯೇ ಉತ್ತರ ಕೊಡುವ ಮೂಲಕ ಫೇಮಸ್ ಆಗಿದ್ದರು.
ಶೋಭಾ ಶೆಟ್ಟಿಗೆ ಜೈಕಾರ
ತೆಲುಗು ಮಂದಿಯ ನಡುವೆ ಕನ್ನಡದ ಹುಡುಗಿಯ ಆರ್ಭಟ ಜೋರಾಗಿತ್ತು. ಸರಿಸಮಾನವಾಗಿ ನಿಂತಿದ್ದರು. ತೆಲುಗು ನೆಲದಲ್ಲಿ ಕನ್ನಡದ ಹುಡುಗಿ ಅಬ್ಬರಿಸಿದಾಗ ಸಹಜವಾಗಿಯೇ ಹೆಮ್ಮೆ ಎನಿಸುತ್ತದೆ. ಹೀಗಾಗಿಯೇ ಕನ್ನಡಿಗರೇ ಅಂದು ಶೋಭಾ ಶೆಟ್ಟಿಯನ್ನು ಹೊತ್ತು ಮೆರೆಸಿದ್ದರು. ಪಾಸಿಟಿವ್ ಕಮೆಂಟ್ ಮಾಡುತ್ತಾ, ಜೈಕಾರ ಹಾಕಿದ್ದರು.
ಸದ್ದು.. ಶ್.. ಎನ್ನುತ್ತಿರುವ ಶೋಭಾ
ಈಗ ಶೋಭಾ ಶೆಟ್ಟಿ ಕನ್ನಡದ ಬಿಗ್ ಬಾಸ್ ಶೋಗೂ ಬಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಈಗಾಗಲೇ ಮುಕಗಕಾಲು ಭಾಗ ಬಿಗ್ ಬಾಸ್ ಜರ್ನಿಯ ಅನುಭವ ಪಡೆದಿದ್ದ ಶೋಭಾ, ಕನ್ನಡಕ್ಕೆ ಬಂದಾಗ ಏನಾದರೂ ಮಾಡಬಹುದಿತ್ತೇನೋ. ಮನರಂಜನೆ, ಟೈ ಪಾಸ್ ಹೊಸ ಟ್ರಿಕ್ಸ್ ಗಳು, ಜನರನ್ನ ಗೆಲ್ಲುವ ತಂತ್ರ.. ಹುಹು ಇದ್ಯಾವುದು ಮಾಡದೆ ನೇರವಾಗಿ ಜಗಳಕ್ಕೇನೆ ನಿಂತಿದ್ದಾರೆ.
ಶೋಭಾ ಟ್ರೋಲ್ ಆಗ್ತಿರೋದ್ಯಾಕೆ?
ಅಷ್ಟಕ್ಕೂ ಶೋಭಾಗೆ ಟ್ರೋಲ್ ಮೂಲಕ, ಕಮೆಂಟ್ ಮೂಲಕ ಇದು ತೆಲುಗು ಕಾದಮ್ಮ, ಇದು ಕನ್ನಡದ ನೆಲ ಕಣಮ್ಮ ಅಂತ ಎಚ್ಚರಿಸ್ತಾ ಇರೋದಾದ್ರೂ ಯಾಕೆ ಗೊತ್ತಾ..? ತೆಲುಗು ನೆಲದಲ್ಲಿ ಹೋಗಿ ಕನ್ನಡಿಗರಿಗೆ ಹೆಮ್ಮೆ ತಂದು ಕೊಟ್ರು ಸರಿ. ಆದರೆ ಕನ್ನಡಿಗರ ಜೊತೆಗೂ ಅದೇ ಥರ ಜಗಳಕ್ಕೆ ಬಿದ್ದರೆ ಸರೀನಾ? ಎಂಬ ಪ್ರಶ್ನೆಯನ್ನ ಜನ ಕೇಳ್ತಿದ್ದಾರೆ. ಇದರ ನಡುವೆ ಅದಾಗಲೇ ತೆಲುಗಿನಲ್ಲೂ ಆರ್ಭಟಿಸಿದ್ದ ಶೋಭಾ ಶೆಟ್ಟಿಗೇನೆ ಅವಕಾಶ ಕೊಡುವ ಬದಲು ಬೇರೆಯವರಿಗೆ ಕೊಡಬಹುದಿತ್ತು ಎಂಬ ಸಲಹೆಗಳು ಬರುತ್ತಿವೆ.


Click it and Unblock the Notifications