BBK 11: ಗುರಿ ಕಳ್ಕೊಂಡಿರೋರು ಯಾರು? ಆಟ ಮರೆತಿರೋರು ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 11 ಈಗ 70 ದಿನಗಳನ್ನು ಮುಗಿಸಿ ಮುಂದೆ ಸಾಗುತ್ತಿದೆ. ಇಂದು ವೀಕೆಂಡ್ ಎಲ್ಲರೂ ಕಾತುರದಿಂದ ಕಾದು ಕುಳಿತಿರುವುದು ಕಿಚ್ಚನ ಪಂಚಾಯ್ತಿಗಾಗಿ. ಕಿಚ್ಚ ಸುದೀಪ್ ವೀಕೆಂಡ್‌ನಲ್ಲಿ ಶನಿವಾರ ಹಾಗೂ ಭಾನುವಾರ ಎರಡೆರಡು ಗಂಟೆಗಳ ಕಾಲ ತಮ್ಮ ಕಾಲು ನೋವಾದರೂ ನಿಂತೇ ಶೋ ನಡೆಸುತ್ತಾರೆ. ಸ್ಪರ್ಧಿಗಳ ಜೊತೆಗೆ ಮಾತಾಡುತ್ತಾರೆ. ಏನೆಲ್ಲಾ ಮಿಸ್ಟೇಕ್ ಆಯ್ತು ಎಂಬುದನ್ನು ಅರಿವು ಮೂಡಿಸುತ್ತಾರೆ. ಆದರೆ ಮತ್ತೆ ಅದೇ ತಪ್ಪುಗಳೇ ಆಗುತ್ತವೆ.
ಕಳೆದ ಬಾರಿಯ ಸೀಸನ್ ನೆನೆಪಿರಬಹುದು. ಒಂದೇ ಒಂದು ಸಲಕ್ಕೂ ಲಕ್ಸುರಿ ಬಜೆಟ್‌ನ ತಮ್ಮ ಎಫರ್ಟ್‌ನಿಂದ ಸ್ಪರ್ಧಿಗಳು ಗಳಿಸಲಿಲ್ಲ. ಆ ವಿಚಾರ ಕಿಚ್ಚನ ವೇದಿಕೆಯಲ್ಲಿ ಸಾಕಷ್ಟು ಸಲ ಚರ್ಚೆಯಾಗುತ್ತಿತ್ತು. ಕಿಚ್ಚ ತಪ್ಪಾಗುತ್ತಿರುವುದು ಎಲ್ಲು ಎಂಬುದನ್ನು ಬಿಡಿಸಿ ಹೇಳುತ್ತಿದ್ದರು. ಆದರಡ ಆ ತಪ್ಪುಗಳು ಸರಿಯಾಗಲೇ ಇಲ್ಲ. ಈಗ ಈ ಸೀಸನ್ ರೂಲ್ಸ್ ಬ್ರೇಕ್ ವಿಚಾರವೂ ಹಾಗೇ ಆಗಿದೆ.

ರೌಡಿಯಂತೆ ವರ್ತಿಸುವ ರಜತ್
ರಜತ್ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಬಂದಿದ್ದು. ಆದರೆ ಬಂದಾಗಿನಿಂದಲೂ ತನ್ನದೇ ಆದ ಹವಾ ಮೆಂಟೈನ್ ಮಾಡಿದ್ದಾರೆ. ಬಂದ ಹೊಸದರಲ್ಲಿಯೇ ಮಂಜು ವಿರುದ್ಧ ಯುದ್ಧ ಸಾರಿದ್ದರು. ಜೊತೆಗೆ ಯಾರಾದರೂ ಕಳಪೆ ಕೊಟ್ಟರೆ, ರಜತ್ ವಿರುದ್ಧ ಮಾತಾಡಿದರೆ ಹೆದರಿಸುವಂತೆಯೇ ಹೋಗುತ್ತಾರೆ. ಈ ಬಾರಿ ಕಳಪೆ ಕೊಟ್ಟ ಧನಂಜಯ್ ಮೇಲೆ ಮುಗಿ ಬಿದ್ದಿದ್ದರು.
ಗೌತಮಿ ಬೆಂಬಲಿಸುತ್ತಿದ್ದ ಮಂಜು
ಇನ್ನು ಮಂಜು ಆರಂಭದಿಂದ ಗೌತಮಿಯನ್ನು ಸಪೋರ್ಟ್ ಮಾಡಿಕೊಂಡೆ ಬಂದಿದ್ದಾರೆ. ಲಾಸ್ಟ್ ಟೈಮ್ ಕಿಚ್ಚ ಸುದೀಪ್ ಅವರು ಕೂಡ ಯಾರನ್ನು ಮೆಚ್ಚಿಸುತ್ತೀರಾ ಎಂದು ಕೇಳಿದ್ದಾಗ ಗೌತಮಿ ಅವರನ್ನ ಎಂದೇ ಹೇಳಿದ್ದರು. ಹಾಗೇ ಬೆಂಬಲಿಸಿಕೊಂಡು ಬಂದಿದ್ದ ಮಂಜು ಈ ಬಾರಿ ಕ್ಯಾಪ್ಟನ್ ಆಗುವುದಕ್ಕೂ ಪುಶ್ ಮಾಡಿದ್ದರು. ಮೋಕ್ಷಿತಾ ಬೇಡ ಎಂದಾಗ ಎಲ್ಲರು ಸೇರಿ ಗೌತಮಿಯನ್ನೇ ಆಯ್ಕೆ ಮಾಡಿದ್ದರು.
ಮಂಜು ವಿರುದ್ಧ ಗೌತಮಿ
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದಾಗಿನಿಂದ ಗೌತಮಿಯ ನಡವಳಿಕೆಯೇ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿದೆ. ಮಂಜಣ್ಣ, ಗೆಳೆಯ ಎನ್ನುತ್ತಿದ್ದ ಗೌತಮಿ ಬಾಯಲ್ಲಿ ಮಂಜು ಅವ್ರೆ ಎನ್ನುತ್ತಿದ್ದಾರೆ. ಇಲ್ಲಿ ನನ್ನ ಧ್ವನಿ ಮಾತ್ರ ಕೇಳಿಸಬೇಕು, ನೀವೂ ನನ್ನ ಧ್ವನಿಯಾಗಲೂ ಬರಬೇಡಿ ಎಂದಿದ್ದಾರೆ. ಪಾಪ ಮಂಜಣ್ಣನನ್ನ ನೋಡಿದ ವೀಕ್ಷಕರು ಮರುಕ ವ್ಯಕ್ತಪಡಿಸಿದ್ದಾರೆ. ಗೌತಮಿ ದೂರ ದೂರ ಇರುವುದು ಮಂಜಣ್ಣನಿಗೆ ಇಷ್ಟವಾದಂತೆ ಕಾಣಿಸುತ್ತಿಲ್ಲ. ಒಮ್ಮೆ ಅದನ್ನೇ ಕೇಳಿದರು, ಇಲ್ಲಿ ಮಾತ್ರವಾ ಅಥವಾ ಲೈಫ್ ಲಾಂಗ್ ನನ್ನ ಫ್ರೆಂಡ್ಶಿಪ್ ಬೇಡವಾ ಎಂದು.
ಕೈ ಮಾಡಲು ಹೋದ ರಜತ್ ಶಿಕ್ಷೆ?
ಇಂದು ಕಿಚ್ಚನ ಪಂಚಾಯ್ತಿ ಶುರುವಾಗಲಿದೆ. ಇಬ್ಬರಿಗೆ ಅಂತು ಕ್ಲಾಸ್ ಮಿಸ್ಸೇ ಇಲ್ಲ. ರಜತ್ ರೌಡಿಸಂಗೆ ಕಿಚ್ಚ ಸರಿಯಾಗಿಯೇ ಪಾಠ ಕಲಿಸುತ್ತಾರೆ. ಯಾಕಂದ್ರೆ ಕಿಚ್ಚನ ಪಂಚಾಯ್ತಿಯಲ್ಲಿ ಯಾರ ಆಟವೂ ನಡೆಯಲ್ಲ. ಹೊಗಳುವುದು ಗೊತ್ತು, ಇಳಿಸುವುದು ಕಿಚ್ಚನಿಗೆ ಗೊತ್ತು. ಇನ್ನು ಬಹಳ ಮುಖ್ಯವಾಗಿ ಮಂಜಣ್ಣ. ಕಡೆಯ ಪಂಚಾಯ್ತಿಯಲ್ಲಿ ಮಂಜಣ್ಣನಿಗೆ ಸಂಬಂಧಗಳು ಇಲ್ಲಿ ಬೇಕಾ ಅಂತ ಪಾಠ ಮಾಡಿದ್ರು. ಆದ್ರೂ ಅದ್ಯಾಕೋ ಮಂಜಣ್ಣ, ಗೌತಮಿ ಬಾಲ ಬಿಟ್ಟಿಲ್ಲ. ಹೀಗಾಗಿ ಮಂಜಣ್ಣನಿಗೆ ಈಗ ಆಟದ ಅರಿವು ಮೂಡಿಸುತ್ತಾರೆ ಎನಿಸುತ್ತದೆ.


Click it and Unblock the Notifications











