BBK 11: ಬಿಗ್ ಬಾಸ್‌ ಮನೆಗೆ ಜಗದೀಶ್ ವಾಪಸ್ ಹೋಗಲ್ವಾ?

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11 ಎಪಿಸೋಡಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಗಳೆಲ್ಲ ಈ ಸೀಸನ್‌ನ ಅಭ್ಯರ್ಥಿಗಳನ್ನು ನೋಡಿದಾಗ ಹುಸಿಯಾಗಿದೆ. ಮನೆಯೊಳಗೆ ಹೋಗುವ ಮುನ್ನ ವೇದಿಕೆ ಮೇಲೆ ಬಂದಂತ ಸ್ಪರ್ಧಿಗಳನ್ನು ಕಂಡು ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದರು.

ಮಾನಸ ಕೊಡೋ ಪಂಚ್ ಡೈಲಾಗ್, ಧನರಾಜ್ ಆಚಾರ್ ನೀಡಿರೋ ಕಂಟೆಂಟ್‌, ಮೋಕ್ಷಿತಾ ಸಾಫ್ಟ್ ಕ್ಯಾರೆಕ್ಟರ್. ಎಲ್ಲವೂ ಬೇರೆಯದ್ದೇ ಲೆವೆಲ್‌ಗೆ ತೆಗೆದುಕೊಂಡು ಹೋಗಿತ್ತು. ಆದರೆ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿವೆ.

Bigg boss kannada season 11 Will Jagdish return to the Bigg Boss house

ಮನಯೊಳಗಿರೋರೆ ಏನು ಮಾಡಬೇಕೆಂದು ತೋಚದೇ ಕಂಗಾಲಾಗಿದ್ದಾರೆ. ಬಿಗ್ ಬಾಸ್ ಹೀಗೆ ಇರಿ, ಹೀಗೆ ಮಾಡಿ ಎಂದು ಆಜ್ಞೆ ಮಾಡಿದರಷ್ಟೇ ಎಲ್ಲರೂ ಆಕ್ಟೀವ್ ಆಗೋದು. ಅದನ್ನ ಬಿಟ್ಟರೆ ಬಿಗ್ ಬಾಸ್ ಮನೆಯಲ್ಲಿ ಸಪ್ಪೆ ಫೀಲ್ ಇದೆ. ಮನೆಯಲ್ಲಿ ಗೊಂದಲದ ಗೂಡಂತು ದೊಡ್ಡದಾಗಿಯೇ ಇದೆ.

ಆರಂಭದಲ್ಲಿ ರಂಜಿಸಿದ್ದ ಜಗ್ಗು

ಲಾಯರ್ ಜಗದೀಶ್ ಅವರು ಕಂಟೆಸ್ಟೆಂಟ್ ಅಂದಾಗಲೇ ಮನೆಯಲ್ಲಿರುವವರ ಬಂಡವಾಳ ಬಯಲು ಮಾಡ್ತಾರೆ ಎಂದೇ ಅಂದುಕೊಂಡಿದ್ದರು. ಮನೆಯೊಳಗೆ ಹೋದ ಒಂದು ವಾರದಲ್ಲೇ ರೌದ್ರವತಾರ ತೋರಿಸಿದ್ದರು ಜಗದೀಶ್. ಇದೆಲ್ಲ ವೀಕ್ಷಕರಿಗೆ ಬಿಗ್ ಬಾಸ್ ಕಥೆ ಮುಗೀತು ಎಂದೇ ಅಂದಾಜಿಸುವಂತೆ ಮಾಡಿತ್ತು. ಆದರೆ ಯಾರೂ ಊಹಿಸದ ಜಗದೀಶ್ ಗುಣ ಅದಾದ ಮೇಲೆ ಹೊರಗೆ ಬಂದಿತ್ತು. ನಕ್ಕು ನಲಿಸುವ ಗುಣವದು.

ಮತ್ತೆ ಮನೆಯೊಳಗೆ ಜಗದೀಶ್?

ಜಗದೀಶ್ ಅವರ ಹಿಡಿತವಿಲ್ಲದ ನಾಲಿಗೆಯಿಂದ, ಮನೆಯ ಹೆಣ್ಣು ಮಕ್ಕಳ ಕೋಪಕ್ಕೆ ಬಲಿಯಾದರು. ಮನೆಯಿಂದ ಹೊರಗೆ ಬಂದರು. ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಇಲ್ಲವಾದರೆ ಶೋ ನೋಡುವುದಕ್ಕೆ ಆಗಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುವುದಕ್ಕೆ ಶುರುವಾಯ್ತು. ಇದರ ನಡುವೆ ಮತ್ತೆ ಬಿಗ್ ಬಾಸ್ ಮನೆಯೊಳಗೆ ಜಗದೀಶ್ ಹೋಗ್ತಾರೆ ಎಂಬ ಮಾತುಗಳು ಕೇಳಿ ಬಂದವು. ಅದಕ್ಕೆ ತಕ್ಕ ಹಾಗೇ ಜಗದೀಶ್ ಕೂಡ ಎಲ್ಲಿಯೂ ಕಂಡಿರಲಿಲ್ಲ.

ಬಿಗ್ ಬಾಸ್ ಬಳಿ ಮನವಿ

'ಸಂಡೇ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ಮನವಿ ಮಾಡಿರುವ ಪ್ರೋಮೋವೊಂದು ಹರಿದಾಡುತ್ತಿದೆ. ನಾನು ಮತ್ತೆ ಮನೆಯೊಳಗೆ ಬರುವುದಕ್ಕೆ ಅವಕಾಶವಿದೆಯಾ ಎಂದು ಕೇಳಿರುವ ಪ್ರೋಮೋ. ಅದಕ್ಕೆ ಮಹಿಳಾ ಮಣಿಗಳು ಕೂಡ ಒಪ್ಪಿದ್ದಾರೆ. ಆದರೆ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯೊಳಗೆ ಹೋಗುವುದು ಅಸಾಧ್ಯವೇನೋ ಅನ್ನಿಸಿದೆ. ಇಂದಿನ ಕೆಲ ಬೆಳವಣಿಗೆಯಿಂದ ಇದು ಅರ್ಥವಾದಂತಿದೆ. ಜಗದೀಶ್ ಮನೆಯೊಳಗೆ ಹೋಗುವ ಅವಕಾಶ ಇದ್ದಿದ್ದರೆ ಇಷ್ಟೊತ್ತಿಗೆ ಹೋಗಬೇಕಿತ್ತು. ಆದರೆ ಹೊರಗಡೆಯೇ ಕಾಣಿಸಿಕೊಂಡಿದ್ದಾರೆ.

ಮನೆಯಿಂದ ಹೊರಗೆ ಜಗದೀಶ್

ಲಾಯರ್ ಜಗದೀಶ್ ಅವರು ನಿನ್ನೆ ಮಧ್ಯರಾತ್ರಿಯಲ್ಲಿ ಲೈವ್ ಬಂದು ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದರು. ಆದರೆ ಬೆಳಗ್ಗೆಯೇ ಸುದೀಪ್ ಅವರ ತಾಯಿ ನಿಧನದ ಸುದ್ದಿ ಕೇಳಿ ಸುದ್ದಿಗೋಷ್ಠಿ ರದ್ದು ಮಾಡಿಕೊಂಡಿದ್ದರು. ಸುದೀಪ್ ಅವರ ತಾಯಿಯ ಅಂತಿಮ ದರ್ಶನವನ್ನು ಪಡೆದರು. ಇದನ್ನೆಲ್ಲಾ ನೋಡಿದಾಗ ಲಾಯರ್ ಜಗದೀಶ್ ಬಿಗ್ ಬಾಸ್ ಹೋಗುವುದು ಅನುಮಾನ ಎನ್ನಲಾಗಿದೆ. ಯಾಕಂದ್ರೆ ಭಾನುವಾರದ ಪ್ರೋಮೋ ಮೊದಲೇ ಶೂಟ್ ಆಗಿದೆ. ಭಾನುವಾರದ ಪ್ರೋಮೋದಲ್ಲಿ ಜಗದೀಶ್ ಮನೆ ಒಳಗೆ ಹೋಗಿದ್ದರು ಇಂದು ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಎಲ್ಲಾ ಕಡೆ ಓಡಾಟ ಹಾಗೇ ಸುದ್ದಿಗೋಷ್ಠಿ ಕರಿತೀನಿ ಅಂದಿದ್ದೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

More from Filmibeat

English summary
Here is the details about lawyer Jagdish will never come back to Bigg Boss house again..?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X