ಮತ್ತೆ ಒಂದೆಡೆ ಸೇರಿದ ಬಿಗ್‌ಬಾಸ್ 12 ಸ್ಪರ್ಧಿಗಳು; ಫೋಟೊಗಳು ವೈರಲ್
ಬಿಗ್‌ಬಾಸ್ ಕನ್ನಡ ಸೀಸನ್ 12 ಕಂಪ್ಲೀಟ್ ಆಗಿ 20 ದಿನ ಕಳೆದಿದೆ. ಇವತ್ತಿಗೂ ಗಿಲ್ಲಿ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಈ ಹಿಂದಿನ ಎಲ್ಲಾ ಸೀಸನ್‌ಗಳಿಗಿಂತ ಈ ವಾರ ಬಿಗ್‌ಬಾಸ್ ಶೋ ಬಹಳ ಕ್ರೇಜ್ ಹುಟ್ಟಾಕ್ಕಿತ್ತು. ಅದಕ್ಕೆ ಗಿಲ್ಲಿ ನಟ ಕೂಡ ಮುಖ್ಯ ಕಾರಣ ಎಂದರೆ ತಪ್ಪಾಗಲ್ಲ. ಇದೀಗ ಸೀಸನ್ 12ರ ಸ್ಪರ್ಧಿಗಳೆಲ್ಲಾ ಮತ್ತೆ ಒಂದಾಗಿದ್ದಾರೆ.
ಕಲರ್ಸ್ ಕನ್ನಡ ಹೊಸ ಕಾರ್ಯಕ್ರಮಕ್ಕಾಗಿ ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳನ್ನೆಲ್ಲಾ ಒಂದೆಡೆ ಸೇರಿಸಿದೆ. ಶಿವರಾತ್ರಿ ವಿಶೇಷವಾಗಿ ಕಾರ್ಯಕ್ರಮ ಚಿತ್ರೀಕರಣ ನಡೆದಿದೆ ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ಚಕ್ಕರ್ ಹೊಡೆಯುತ್ತಿದೆ. ಎಲ್ಲರೂ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಕಂಗೊಳಿಸಿದ್ದಾರೆ.

ಬಿಳಿ ಬಣ್ಣದ ಜೋಧ್‌ಪುರಿ ಸೂಟ್ ಶೈಲಿಯ ಜಾಕೆಟ್ ಧಿರಿಸಿ ಗಿಲ್ಲಿ ನಟ ಮಿಂಚಿದ್ದಾರೆ. ಭುಜದ ಮೇಲೆ ಕುದುರೆ ಚಿತ್ರ ಕೂಡ ಇದೆ. ಇದನ್ನು ನೋಡಿ ಅಭಿಮಾನಿಗಳು ಸದ್ಯ ಓಡುವ ಕುದುರೆ ಗಿಲ್ಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಿಷಾ ಗೌಡ, ಕಾವ್ಯಾ ಲೆಹಂಗಾ ತೊಟ್ಟು ಕಂಗೊಳಿಸಿದ್ದಾರೆ. ಬಿಗ್‌ಬಾಸ್ ತಮಿಳು ಸೀಸನ್ 9 ಕೂಡ ಇತ್ತೀಚೆಗೆ ಮುಕ್ತಾಯವಾಗಿತ್ತು. ಅಲ್ಲಿ ಕೂಡ ಸ್ಪರ್ಧಿಗಳನ್ನೆಲ್ಲಾ ಒಟ್ಟಿಗೆ ಸೇರಿಸಿ 'ಬಿಗ್‌ಬಾಸ್ ಕೊಂಡಾಟಂ' ಹೆಸರಿನಲ್ಲಿ ಸ್ಪೆಷಲ್ ಶೋ ಚಿತ್ರೀಕರಣ ಮಾಡುತ್ತಿದ್ದಾರೆ. ಫೆಬ್ರವರಿ 14 ಹಾಗೂ 15ರಂದು ಪ್ರಸಾರ ಮಾಡಲಿದ್ದಾರೆ. ಅದೇ ರೀತಿ ಕನ್ನಡದಲ್ಲಿ ಶೋ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ರಿಷಾ ನಡುವೆ ಕಿರಿಕ್ ಆಗಿತ್ತು. ಬಳಿಕ ಆಕೆ ಕ್ಷಮೆ ಕೇಳಿದ್ದ ಘಟನೆ ಕೂಡ ನಡೆದಿತ್ತು. ಸದ್ಯ ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಇಬ್ಬರೂ ಕೈ ಕೈ ಹಿಡಿದು ಪೋಸ್ ಕೊಟ್ಟಿದ್ದಾರೆ. ಆ ಫೋಟೊ ವೈರಲ್ ಆಗ್ತಿದೆ. ಜಾಹ್ನವಿ, ಧ್ರುವಂತ್, ಸ್ಪಂದನಾ ಸೇರಿ ಸೀಸನ್ 12ರ ಬಹುತೇಕ ಎಲ್ಲಾ ಸ್ಪರ್ಧಿಗಳು ಭಾಗಿ ಆಗಿರುವಂತೆ ಕಾಣ್ತಿದೆ.

112 ದಿನ ಬಿಗ್‌ಬಾಸ್ ಮನೆಯಲ್ಲಿ 6 ಜನ ಸ್ಪರ್ಧಿಗಳು ಉಳಿದುಕೊಂಡಿದ್ದರು. ಗಿಲ್ಲಿ, ರಕ್ಷಿತಾ, ಅಶ್ವಿನಿ, ಕಾವ್ಯಾ, ರಘು, ಧನುಷ್ ಫಿನಾಲೆವರೆಗೂ ಬಂದಿದ್ದರು. ದಾಖಲೆ ಮಟ್ಟದಲ್ಲಿ ವೋಟ್ ಪಡೆದು ಗಿಲ್ಲಿ ಟ್ರೋಫಿ ಗೆದ್ದಿದ್ದರು. ರಕ್ಷಿತಾ ರನ್ನರ್ ಅಪ್ ಆಗಿದ್ದರು. ಟ್ರೋಫಿ ಗೆದ್ದ ಗಿಲ್ಲಿಗೆ 50 ಲಕ್ಷ ನಗದು ಬಹುಮಾನದ ಜೊತೆಗೆ ಒಂದು ಕಾರ್ ಉಡುಗೊರೆಯಾಗಿ ಸಿಕ್ಕಿತ್ತು. ಕಿಚ್ಚ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ರೂ. ಹಣ ಕೊಟ್ಟಿದ್ದರು.
ಬಿಗ್‌ಬಾಸ್ ಶೋ ಮುಗಿದ ಕ್ಷಣದಿಂದ ಗಿಲ್ಲಿ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಸಭೆ ಸಮಾರಂಭಗಳಲ್ಲಿ ಭಾಗಿ ಆಗುತ್ತಿದ್ದಾರೆ. ದೊಡ್ಡ ದೊಡ್ಡ ವೇದಿಕೆಗಳಿಗೆ ಅತಿಥಿಯಾಗಿ ಹೋಗುತ್ತಿದ್ದಾರೆ. ಸಾಕಷ್ಟು ವಾಹಿನಿಗಳ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ.
ಬಿಗ್‌ಬಾಸ್ ಶೋ ಮುಗಿದ್ರು ಗಿಲ್ಲಿ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ರನ್ನರ್ ಅಪ್ ರಕ್ಷಿತಾಗೆ 25 ಲಕ್ಷ ರೂ. ಬಹುಮಾನದ ಹಣ ಸಿಕ್ಕಿತ್ತು. ಸೆಕೆಂಡ್ ರನ್ನರ್ ಅಪ್ ಅಶ್ವಿನಿ ಗೌಡಗೆ 14 ಲಕ್ಷ ರೂ. ನಗದು ಬಹುಮಾನ ಲಭಿಸಿತ್ತು. ಕಾವ್ಯಾ 3ನೇ ರನ್ನರ್ ಅಪ್ ಎನಿಸಿಕೊಂಡಿದ್ದರು. ಈ ಬಾರಿ ಬಿಗ್‌ಬಾಸ್ ಶೋ ವೀಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿತ್ತು.


Click it and Unblock the Notifications











