BBK 12: ಈಗಲ್‌ಟನ್ ರೆಸಾರ್ಟ್‌ಗೆ ಸ್ಪರ್ಧಿಗಳು ಶಿಫ್ಟ್; ಹೊಸ ಪ್ರೋಮೊ ಬಿಟ್ಟ ಬಿಗ್ ಬಾಸ್
ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಹೊಸ ತಲೆನೋವು ಶುರುವಾಗಿದೆ. ಶೋ ಶುರುವಾದ 12 ದಿನಕ್ಕೆ ಬಿಗ್‌ಬಾಸ್ ಮನೆಗೆ ಬೀಗ ಬಿದ್ದಿದೆ. ಸದ್ಯ ಸ್ಪರ್ಧಿಗಳನ್ನು ಈಗಲ್‌ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ತಂತ್ರಜ್ಞರು, ಸಿಬ್ಬಂದಿ ಕೂಡ ದೊಡ್ಮನೆ ಬಳಿ ಸುಳಿಯುತ್ತಿಲ್ಲ. ಇದೆಲ್ಲದರ ನಡುವೆ ಬಿಗ್‌ಬಾಸ್ ಹೊಸ ಎಪಿಸೋಡ್ ಪ್ರೋಮೊ ಬಂದಿದೆ.
ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಮನೆ ಸೆಟ್ ಹಾಕಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. 17 ಮಂದಿ ಸ್ಪರ್ಧಿಗಳು ಮನೆಯೊಳಗೆ ಇದ್ದರೆ ನೂರಾರು ತಂತ್ರಜ್ಞರು, ಸಿಬ್ಬಂದಿ ಕಾರ್ಯಕ್ರಮಕ್ಕಾಗಿ ಕೆಲಸ ಮಾಡುತ್ತಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಲಿಲ್ಲ ಎನ್ನುವ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಸ್ಟುಡಿಯೋ ಒಳಗೆ ಇದ್ದ ಎಲ್ಲರನ್ನು ಹೊರಗೆ ಕಳುಹಿಸಿದ್ದಾರೆ. ಬಿಗ್‌ಬಾಸ್ ಶೋ ನಿಲ್ಲಿಸಿ ಎಲ್ಲರೂ ಹೊರ ಬರುವಂತಾಗಿದೆ.

ಬಿಗ್‌ಬಾಸ್ ಮನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ಹೊರಗೆ ಬಿಡಲಾಗುತ್ತಿದ್ದಾರೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಗ್ರೀನ್ ಜೋನ್‌ನಲ್ಲಿದ್ರೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ ಎನ್ನುವ ಆರೋಪಗಳು ಕೇಳಿಬಂದಿದೆ. ಈ ಸಂಬಂಧ ಎರಡು ದಿನಗಳ ಹಿಂದೆ ನೋಟಿಸ್ ನೀಡಿದ್ದರೂ ಜಾಲಿವುಡ್ ಸ್ಟುಡಿಯೋ ಮ್ಯಾನೇಜ್‌ಮೆಂಟ್ ಪ್ರತಿಕ್ರಿಯಿಸಿರಲಿಲ್ಲ. ಹಾಗಾಗಿ ತಹಶೀಲ್ದಾರ್ ನೇತೃತ್ವದಲ್ಲಿ ಸ್ಟುಡಿಯೋ ಗೇಟ್ ಬಂದ್ ಮಾಡಲಾಗಿದೆ. ಸ್ಟುಡಿಯೋ ಒಳಗೆ ನಡೆಯುತ್ತಿದ್ದ ಬಿಗ್‌ಬಾಸ್ ಶೋಗೂ ವಿಘ್ನ ಎದುರಾಗಿದೆ.
ಸದ್ಯ ಸ್ಪರ್ಧಿಗಳು, ತಂತ್ರಜ್ಞರಿಗೆ ರಾಮನಗರದ ಈಗಲ್‌ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಶೋ ಮುಂದೆ ಪ್ರಸಾರ ಆಗಲ್ಲ ಎಂದುಕೊಂಡಿದ್ದವರಿಗೆ ಅಚ್ಚರಿ ಎದುರಾಗಿದೆ. ನಿನ್ನೆ(ಅಕ್ಟೋಬರ್ 7) ಎಂದಿನಂತೆ ಎಪಿಸೋಡ್ ಪ್ರಸಾರವಾಗಿದೆ. ಇಂದು ಶೋ ಇರಲ್ಲ, ಎಂದು ಕೆಲವರು ಭಾವಿಸಿದ್ದರು. ಆದರೆ ಅಚ್ಚರಿ ಎನ್ನುವಂತೆ ಹೊಸ ಪ್ರೋಮೊ ಬಿಡುಗಡೆಯಾಗಿದೆ.
2 ದಿನಕ್ಕೆ ಬೇಕಾದ ಬಿಗ್‌ಬಾಸ್ ಎಪಿಸೋಡ್ ಚಿತ್ರೀಕರಣವಾಗಿದೆ. ಹಾಗಾಗಿ ಇವತ್ತು ಕೂಡ ಯಾವುದೇ ಸಮಸ್ಯೆ ಇಲ್ಲದೇ ಎಪಿಸೋಡ್ ಪ್ರಸಾರವಾಗಲಿದೆ. ಸೋಮವಾರ ಹಾಗೂ ಮಂಗಳವಾರ ಮನೆಯಲ್ಲಿ ನಡೆದ ಟಾಸ್ಕ್, ಡ್ರಾಮಾ ಎಲ್ಲವರನ್ನು ಎಡಿಟ್ ಮಾಡಿ ಇಂದು ಎಪಿಸೋಡ್ ಪ್ರಸಾರ ಮಾಡುತ್ತಿದ್ದಾರೆ. ಇನ್ನೆರಡು ದಿನಕ್ಕೆ ಬೇಕಾದ ಕಂಟೆಂಟ್ ಕೂಡ ಇದೆ ಎನ್ನಲಾಗ್ತಿದೆ. ಸ್ಟುಡಿಯೋಗೆ ಬೀಗ ಹಾಕಿರುವ ಬಗ್ಗೆ ಜಾಲಿವುಡ್ ಮ್ಯಾಜೇನ್‌ಮೆಂಟ್ ಹಾಗೂ ಬಿಗ್‌ಬಾಸ್ ಆಯೋಜಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ವಿಚಾರಣೆ ನಡೆದು ಆದೇಶ ಹೊರಬೀಳಲಿದೆ. ಆ ಬಳಿಕ ಬಿಗ್‌ಬಾಸ್-12 ಭವಿಷ್ಯ ನಿರ್ಧಾರವಾಗಲಿದೆ.
ಮನೆಯ ಮೊಟ್ಟ ಮೊದಲ ಫೈನಲಿಸ್ಟ್ ಆಗಿರುವ ಸುಧಿಗೆ ಈಗ ಅಸುರಾಧಿಪತಿ ಪಟ್ಟ ಸಿಕ್ಕಿದೆ. ಸುಧಿ ಮಾಡಿದ್ದ ರೂಲ್ಸ್, ಆಡಿದ್ದೇ ಆಟ ಎನ್ನುವಂತಾಗಿದೆ. ಇನ್ನು ಬಿಗ್‌ಬಾಸ್ 12ರ ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದರು. ಬಳಿಕ ಶನಿವಾರ ಮನೆಗೆ ವಾಪಸ್ ಬಂದಿದ್ದರು. ಮುಲಾಜೇ ಇಲ್ಲ, ಎಲ್ಲರನ್ನು ಮನೆಯಿಂದ ಹಾಕುತ್ತೇನೆ ಎಂದು ಸವಾಲು ಹಾಕಿದ್ದರು. ಸದ್ಯ ಬಿಗ್‌ಬಾಸ್ ಶೋ ಬಂದ್ ಆಗಿ ಸ್ಪರ್ಧಿಗಳೆಲ್ಲಾ ಹೊರಬಂದಿದ್ದಾರೆ. ರಕ್ಷಿತಾ ಹೇಳಿದ್ದೇ ನಿಜವಾಯ್ತು ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಎಲ್ಲರಿಗೂ ಸೆಡ್ಡು ಹೊಡೆಯುತ್ತಿದ್ದಾರೆ. ತಮ್ಮ ಜೋರು ಮಾತಿನಿಂದ ಎಲ್ಲರ ಬಾಯಿ ಬಂದ್ ಮಾಡುತ್ತಿದ್ದಾರೆ. ಹೊಸ ಪ್ರೋಮೊದಲ್ಲೂ ಅದು ಎದ್ದು ಕಾಣ್ತಿದೆ. ಸುಧಿ ಹಾಗೂ ಮಂಜುಭಾಷಿಣಿ ಮೇಲೆ ಆಕೆ ಕೆಂಡಾಮಂಡಲವಾಗಿದ್ದಾರೆ. ಮಂಜುಭಾಷಿಣಿ ಕೂಡ ತಾಳ್ಮೆ ಕಳೆದುಕೊಂಡಿರುವುದನ್ನು ನೋಡಬಹುದು. ಜಿಯೋ ಹಾಟ್‌ಸ್ಟರ್‌ನಲ್ಲಿ ನಿನ್ನೆ ಬಿಗ್‌ಬಾಸ್-12 ಎಪಿಸೋಡ್ ಪ್ರಸಾರ ತಡವಾಗಿತ್ತು. ಕಲರ್ಸ್ ಕನ್ನಡ ಈ ಬಗ್ಗೆ ಪ್ರತಿಕ್ರಿಯಿಸಿ, "ಅನಿರೀಕ್ಷಿತ ಕಾರಣಗಳಿಂದಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ 'ಬಿಗ್‌ಬಾಸ್'ನ ಇಂದಿನ ಸಂಚಿಕೆಯ ಪ್ರಸಾರದ ಸಮಯದಲ್ಲಿ ವ್ಯತ್ಯಯ ಸಂಭವಿಸಿದೆ. ಈ ಅಡಚಣೆಗಾಗಿ ಕ್ಷಮೆ ಕೋರುತ್ತೇವೆ. ಇಂದಿನ ಸಂಚಿಕೆ ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ' ಎಂದು ಮಾಹಿತಿ ನೀಡಿತ್ತು.


Click it and Unblock the Notifications











