ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ.. ಕೊನೆಗೂ ಮೌನ ಮುರಿದ ಮೇಘಾ ಶೆಟ್ಟಿ

ಕನ್ನಡ ಬಿಗ್‌ಬಾಸ್ ಸೀಸನ್ 12 ಶುಭಾರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಯಾರೆಲ್ಲಾ ದೊಡ್ಮನೆ ಒಳಗೆ ಹೋಗ್ತಾರೆ? ಎನ್ನುವ ಬಗ್ಗೆ ಭಾರೀ ಕುತೂಹಲ ಇದೆ. ನಟಿ ನಿಖಿತಾ ಸ್ವಾಮಿ ಸೇರಿ ಕೆಲವರು ಬಿಗ್‌ಬಾಸ್ ಗೃಹಪ್ರವೇಶ ಮಾಡುವುದು ಖಚಿತ ಎನ್ನಲಾಗ್ತಿದೆ. ನಟಿ ಮೇಘಾ ಶೆಟ್ಟಿ ಕೂಡ ದೊಡ್ಮನೆ ಆಟಕ್ಕೆ ಹೋಗ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ಪ್ರತಿ ಬಾರಿ ಬಿಗ್‌ಬಾಸ್ ಶೋ ಆರಂಭಕ್ಕೂ ಮುನ್ನ ಸಂಭಾವ್ಯ ಅಭ್ಯರ್ಥಿಯ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ನೆಟ್ಟಿಗರು ತಮ್ಮ ಕಲ್ಪನೆಯಲ್ಲಿ ಯಾರೆಲ್ಲಾ ಬಿಗ್‌ಬಾಸ್ ಸ್ಪರ್ಧಿಗಳಾಗುತ್ತಾರೆ ಎಂದು ಅಂದಾಜಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾ ನಟ- ನಟಿ, ಕಿರುತೆರೆ ನಟ-ನಟಿ, ಪತ್ರಕರ್ತರು, ಆರ್‌ಜೆ, ಸೀನಿಯರ್ ಸಿಟಿಜನ್, ಸೋಶಿಯಲ್ ಮೀಡಿಯಾ ಇನ್‌ಫ್ಲುರೆನ್ಸರ್, ಸ್ವಾಮೀಜಿ ಹೀಗೆ ವಿವಿಧ ಕ್ಷೇತ್ರಗಳ ವಿಭಿನ್ನ ಮನಸ್ಥಿತಿಯ ವ್ಯಕ್ತಿಗಳನ್ನು ದೊಡ್ಮನೆ ಒಳಗೆ ಸ್ಪರ್ಧಿಗಳಾಗಿ ಕಳುಹಿಸುತ್ತಾರೆ.

Bigg Boss Kannada Season 12 Megha Shetty Confirms She Won t Enter the House

ವಿವಾದಾತ್ಮಕ ವ್ಯಕ್ತಿಗಳನ್ನು ಕೂಡ ಬಿಗ್‌ಬಾಸ್ ಮನೆಗೆ ಕಳುಹಿಸುವ ಸಾಹಸ ಮಾಡುತ್ತಾರೆ. ಖಾಸಗಿ ವಾಹಿನಿ ಮಾಜಿ ಸುದ್ದಿ ನಿರೂಪಕಿ ದಿವ್ಯಾ ವಸಂತಾ, ಯೂಟ್ಯೂಬರ್ ಸಮೀರ್ ಎಂಡಿ, ಕಿರುತೆರೆ ನಟಿಯರಾದ ಸ್ವಾತಿ, ಸಂಜನಾ ಬರ್ಲಿ, ಶ್ವೇತಾ ಪ್ರಸಾದ್, ಪಾಯಲ್ ಚಂಗಪ್ಪ, ನಟರಾದ ಸಾಗರ್ ಬಿಳಿಗೌಡ, ಗಾಯಕ ಬಾಳು ಬೆಳಗುಂದಿ ಸೇರಿದಂತೆ ಸಾಕಷ್ಟು ಜನರ ಹೆಸರುಗಳು ಈ ಬಾರಿ ಕೇಳಿಬರ್ತಿದೆ.

ನಟಿ ಮೇಘನಾ ರಾಜ್ ಕೂಡ ಹೋಗ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿತ್ತು. ಆದರೆ ಆಕೆ ಆ ಬಗ್ಗೆ ಸ್ಪಷ್ಟನೆ ನೀಡಿದ್ದು ನಾನು ಬಿಗ್‌ಬಾಸ್ ಮನೆಗೆ ಹೋಗಲ್ಲ ಎಂದಿದ್ದಾರೆ. ಇದೇ ರೀತಿ ಇದೀಗ ನಟಿ ಮೇಘಾ ಶೆಟ್ಟಿ ಕೂಡ ಪ್ರತಿಕ್ರಿಯಿಸಿದ್ದಾರೆ. "ನಾನು ಬಿಗ್‌ಬಾಸ್ ಮನೆಗೆ ಹೋಗುತ್ತಿಲ್ಲ. ದಯವಿಟ್ಟು ಸುಳ್ಳುಸುದ್ದಿ ಹಬ್ಬಿಸಬೇಡಿ" ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮೇಘಾ ಬರೆದುಕೊಂಡಿದ್ದಾರೆ.

Bigg Boss Kannada Season 12 Megha Shetty Confirms She Won t Enter the House

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಮೇಘಾ ಶೆಟ್ಟಿ ಮನೆ ಮಾತಾಗಿದ್ದರು. ಅನು ಸಿರಿಮನೆ ಪಾತ್ರ ಆಕೆಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಬಳಿಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ನಟ ಗಣೇಶ್ ಜೋಡಿಯಾಗಿ ಮಿಂಚಿದ್ದರು. ಬಳಿಕ 'ದಿಲ್ ಪಸಂದ್', 'ಕೈವ' ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಸದ್ಯ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ', 'ಚೀತಾ' ಹಾಗೂ 'ಗ್ರಾಮಾಯಣ' ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಕಿರುತೆರೆ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಮುದ್ದು ಸೊಸೆ' ಧಾರಾವಾಹಿಯನ್ನು ಮೇಘಾ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕೆ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ಆಗಾಗ್ಗೆ ಹೊಸ ಹೊಸ ಫೋಟೊಶೂಟ್ ಮಾಡಿ ಹಂಚಿಕೊಳ್ಳುತ್ತಾರೆ. ಜಿಮ್, ಡ್ಯಾನ್ಸ್ ಅಂತೆಲ್ಲಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ಪೋಸ್ಟ್ ಮಾಡುತ್ತಾರೆ.

ಮೇಘಾ ಶೆಟ್ಟಿ ಅವರನ್ನು ಬಿಗ್‌ಬಾಸ್ ಸ್ಪರ್ಧಿಯಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅದು ಸಾಧ್ಯವಾಗುತ್ತಿಲ್ಲ. ಇನ್ನು ಈ ಬಾರಿ ಕೂಡ ಸುದೀಪ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಈಗಾಗಲೇ ಪ್ರೋಮೊಗಳು ರಿಲೀಸ್ ಆಗಿ ಸದ್ದು ಮಾಡ್ತಿವೆ. ಮುಂದಿನ ಭಾನುವಾರ(ಸೆಪ್ಟೆಂಬರ್ 28) ಶೋ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳಲಿದೆ.

More from Filmibeat

English summary
Megha Shetty Denies Bigg Boss Kannada Season 12 Entry
Read more about: megha shetty sandalwood bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X